6. ಅನುಮಾನ ಪ್ರಶ್ನೆಗಳು
ಬುದ್ಧ ವಗ್ಗ
1. ದಿನ್ನಂ ಬುದ್ಧಾನಂ ಅನುಪ್ಪಜ್ಜಮಾನ ಪನ್ಹೊ (ಎರಡು ಬುದ್ಧರ ಪ್ರಶ್ನೆ)
ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಇದು ಅಸಾಧ್ಯವಾಗಿದೆ ಭಿಕ್ಷುಗಳೇ, ಇಬ್ಬರು ಅರಹಂತ ತಥಾಗತರು ಆದ ಸಮ್ಮಾಸಂಬುದ್ಧರು ಒಂದೇಕಾಲದಲ್ಲಿ ಯಾವ ಕಾರಣಕ್ಕೂ ಉದಯಿಸಲಾರರು, ಅಂತಹ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ.
ಆದರೆ ಭಂತೆ ನಾಗಸೇನ, ತಥಾಗತರೆಲ್ಲಾ ಬೋಧಿಸಿದ್ದು, 37 ಬೋಧಿಪಕ್ಖೀಯ ಗಳನ್ನೇ, ಅವರು ಮಾತನಾಡುವಾಗ ಬಳಸಿದ್ದು ನಾಲ್ಕು ಆರ್ಯಸತ್ಯಗಳನ್ನೇ, ಅವರು ಶಿಕ್ಷಣ ನೀಡಿದ್ದು ಮೂರು ವಿಧದ ಶಿಕ್ಷಣವಾದ ಶೀಲ, ಸಮಾಧಿ ಮತ್ತು ಪ್ರಜ್ಞಾವೇ ಆಗಿತ್ತು. ಅವರು ಬುದ್ಧಿವಾದ ಅಪ್ರಮಾದದಿಂದಿರುವಿಕೆಯೇ ಆಗಿತ್ತು. ಹೀಗೆ ಭಂತೆ ನಾಗಸೇನ, ತಥಾಗತರೆಲ್ಲ ಮಾಡಿದ ಬೋಧನೆ ಒಂದೇ ಆಗಿತ್ತು. ಅವರ ಮಾತುಗಳೆಲ್ಲ ಒಂದೇ ಆಗಿತ್ತು, ಅವರ ಶಿಕ್ಷಣ ಒಂದೇ ಆಗಿತ್ತು, ಅವರ ಬುದ್ಧಿವಾದ ಒಂದೇ ಆಗಿತ್ತು. ಹೀಗಿರುವಾಗ ಇಬ್ಬರು ತಥಾಗತರು ಏಕಕಾಲಕ್ಕೆ ಏಕೆ ಉದಯಿಸಬಾರದು? ಒಬ್ಬ ಬುದ್ಧರ ಉದಯಿಸುವಿಕೆಯಿಂದಲೇ ಈ ಲೋಕವು ಬೆಳಿಕಿನಿಂದ ಪ್ರವಾಹಿತವಾಗಿದೆ. ಒಂದುವೇಳೆ ಇಬ್ಬರು ಬುದ್ಧರ ಉದಯಿಸಬಹುದಾದರೆ ಆಗ ಇಡೀ ಲೋಕಗಳು ಅವರ ಭವ್ಯ ವೈಭೋಗದಿಂದ ಪ್ರಕಾಶಿತವಾಗುತ್ತಿತ್ತು. ಆಗ ಇಬ್ಬರು ತಥಾಗತರು ಸುಲಭವಾಗಿ ಸುಶಿಕ್ಷಣ ನೀಡಬಹುದಿತ್ತು. ಹೀಗೆಕೆ ಆಗಲಿಲ್ಲ. ನನಗೆ ಕಾರಣಗಳನ್ನು ವಿವರಿಸಿ ನನ್ನ ಸಂದೇಹಗಳನ್ನು ದೂರೀಕರಿಸಿ. (145)
ಓ ಮಹಾರಾಜ, ಈ ದಶಸಹಸ್ರ ಲೋಕವ್ಯವಸ್ಥೆಗೆ ಬುದ್ಧರು ಆಧಾರವಾಗಿದ್ದಾರೆ. ಈ ಲೋಕವ್ಯವಸ್ಥೆಯು ಸಹಾ ಒಬ್ಬ ತಥಾಗತರನ್ನು ತಾಳಬಲ್ಲದು, ಹಾಗಲ್ಲದೆ ಎರಡನೆಯ ತಥಾಗತರು ಈ ಲೋಕದಲ್ಲಿ ಉದಯಿಸಿದರೆ ಆಗ ಈ ಲೋಕವ್ಯವಸ್ಥೆಗಳು ತಾಳಲಾರವು, ಆಗ ಅವು ಕಂಪಿಸುತ್ತವೆ, ಅಲುಗಾಡುತ್ತವೆ. ಚೂರಾಗಿ ಪುಡಿಯಾಗುತ್ತವೆ, ಕರಗಿಹೋಗುತ್ತವೆ ಮತ್ತು ಪೂರ್ಣವಾಗಿ ನಾಶವಾಗಿ ಹೋಗುತ್ತವೆ. ಓ ಮಹಾರಾಜ, ಇದು ದೋಣಿಯಂತೆ ಆ ದಡಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ, ಅದರಲ್ಲಿ ಒಬ್ಬನು ಹತ್ತಿದರೆ ಅವನ ತೂಕ ತಾಳಬಲ್ಲದ್ದು, ಆದರೆ ಎರಡನೆಯವನು ಹತ್ತಿದಾಗ, ಆತನು ಸಹಾ ವಯಸ್ಸಿನಲ್ಲಿ, ಶಕ್ತಿಯಲ್ಲಿ ಆಕಾರದಲ್ಲಿ, ದೇಹಾಕಾರದಲ್ಲಿ ಸಮವಿದ್ದಾಗ ಆ ಪುಟ್ಟ ದೋಣಿಯು ತಾಳಬಲ್ಲದೇ?
ಖಂಡಿತ ಇಲ್ಲ ಭಂತೆ, ಅದು ಅಲುಗಾಡುತ್ತದೆ ಮತ್ತು ಕಂಪಿಸುತ್ತದೆ. ಅದು ಆ ಕಡೆ, ಈ ಕಡೆ ಬಾಗುತ್ತದೆ. ಆಗ ಅದು ಮುರಿಯಬಹುದು, ಚೂರಾಗಬಹುದು, ಪೂರ್ಣವಾಗಿ ನಾಶವಾಗಬಹುದು, ಅಲೆಗಳಲ್ಲಿ ಮುಳುಗಬಹುದು.
ಅದೇರೀತಿಯಲ್ಲಿ ಮಹಾರಾಜ, ಈ ದಶಸಹಸ್ರ ಲೋಕ ವ್ಯವಸ್ಥೆಗೆ ಇನ್ನೊಬ್ಬ ತಥಾಗತರು ಆಗಮಿಸಿದರೆ ಊಹಿಸಿ ಮಹಾರಾಜ, ಒಬ್ಬನು ತನಗೆ ಬೇಕಾದಷ್ಟು ಕತ್ತಿನವರೆಗೆ ತಿಂದಿರುವನು, ಹೀಗೆ ತುಂಬಿದ ಹೊಟ್ಟೆಯವ ಕಟ್ಟಿಗೆಯಂತೆ ಬಾಗಲಾರ, ಮಂಪರಿನಿಂದಿರುತ್ತಾನೆ, ಈಗೇನಾದರೂ ಆತನು ಅಷ್ಟೇ ಆಹಾರವನ್ನು ಸೇವಿಸಿದರೆ ಆತನು ಸುಖಿಯಾಗಿರುವನೇ?
ಖಂಡಿತವಾಗಿ ಇಲ್ಲ ಭಂತೆ. ಆತನೇನಾದರೂ ಮತ್ತೆ ತಿಂದರೆ ಆತನು ಸಾಯಬಹುದು.
ಹೇಗೆ ಎರಡನೆಯ ಬಾರಿ ತಿಂದರೆ ದೇಹ ತಾಳಲಾರದೋ ಹಾಗೆಯೇ ಎರಡನೆಯ ತಥಾಗತರಿಗೆ ಈ ಲೋಕ ತಾಳಲಾರದು.
ಆದರೆ ಭಂತೆ ನಾಗಸೇನ, ಶ್ರೇಷ್ಠ ಒಳಿತಿನ ಮಹಾ ತೂಕವನ್ನು ಭೂಮಿಯು ತಾಳಲಾರದೆ ಕಂಪಿಸುವುದೇ?
ಊಹಿಸಿ ಮಹಾರಾಜ, ಎರಡು ಬಂಡಿಗಳಲ್ಲಿ ಅಮೂಲ್ಯ ವಸ್ತುಗಳನ್ನು ತುಂಬಕ್ಕೂ ತುಂಬಿದ್ದಾರೆ. ಈ ಜನರು ಒಂದು ಬಂಡಿಯ ಸಾಮಗ್ರಿಗಳನ್ನೆಲ್ಲಾ ಇನ್ನೊಂದು ಬಂಡಿಗೆ ತುಂಬಿದರೆ ಆ ಬಂಡಿಯು ಆ ತೂಕವೆಲ್ಲಾ ತಾಳುವುದೇ?
ಖಂಡಿತವಾಗಿ ಇಲ್ಲ ಭಂತೆ, ಆ ಚಕ್ರಗಳ ನಾಭಿಯು ಬಿರುಕಾಗಬಹುದು, ಕಡ್ಡಿಗಳು ಮುರಿಯಬಹುದು, ಚಕ್ರಪರಿಧಿಯು ಚೂರು ಚೂರಾಗಬಹುದು ಮತ್ತು ಆ ಮರದ ಆಕಾರವು ಮುರಿದುಹೋಗಬಹುದು.
ಆದರೆ ಓ ಮಹಾರಾಜ, ಬಂಡಿಯಲ್ಲಿರುವುದು ಅಮೂಲ್ಯ ವಸ್ತುಗಳಾಗಿವೆ. ಆದರೂ ಸಹಾ ಅತಿಯಾದ ಬಾರದಿಂದ ಅದು ಮುರಿಯುತ್ತದೆ ಅಲ್ಲವೇ?
ಹೌದು ಭಂತೆ.
ಅದೇರೀತಿಯಲ್ಲಿ ಓ ಮಹಾರಾಜ, ಈ ಭೂಮಿಯು ಸಹಾ ಅತಿಯಾದ ಒಳ್ಳೆಯತನದ ಮಹಾಭಾರವನ್ನು ತಡೆಯಲಾರದು. ಚಚರ್ೆಯು ಮಾತ್ರ ತಥಾಗತಬಲವನ್ನು ಅರಿವು ಮಾಡಬಲ್ಲದು. ಇದರ ಬಗ್ಗೆ ಇನ್ನೊಂದು ಉದಾಹರಣೆ ಆಲಿಸಿ ಮಹಾರಾಜ, ಒಂದುವೇಳೆ ಇಬ್ಬರು ಬುದ್ಧರು ಉದಯಿಸಿದರೆ, ಆಗ ಅವರವರ ಶಿಷ್ಯರಲ್ಲೇ ವಾದವಿವಾದಗಳು ಹುಟ್ಟಿಕೊಳ್ಳುತ್ತದೆ. ನಿಮ್ಮ ಬುದ್ಧ, ನಮ್ಮ ಬುದ್ಧ ಎಂದು ಎರಡು ಗುಂಪಾಗಿಬಿಡುತ್ತದೆ. ಹೇಗೆ ರಾಜ್ಯದ ಮಂತ್ರಿಗಳಲ್ಲಿ ಸ್ಪಧರ್ೆಯಿರುವುದೋ ಹಾಗೆ ಆಗಿಬಿಡುತ್ತದೆ. ಈ ಕಾರಣದಿಂದಲೂ ಇಬ್ಬರು ತಥಾಗತರು ಏಕಕಾಲದಲ್ಲಿ ಉದಯಿಸಲಾರರು.
ಓ ಮಹಾರಾಜ, ಇದರ ಬಗ್ಗೆ ಇನ್ನೊಂದು ಕಾರಣವಿದೆ ಆಲಿಸಿ. ಇಬ್ಬರು ಬುದ್ಧರು ಏಕಕಾಲದಲ್ಲಿ ಉದಯಿಸಿದರೆ, ತಿಪಿಟಿಕಗಳಲ್ಲಿ ಕಾಣಬರುವಂತಹ ಬುದ್ಧರೇ ಶ್ರೇಷ್ಠರು ಎನ್ನುವುದು ಸುಳ್ಳಾಗುತ್ತದೆ. ಬುದ್ಧರೇ ಎಲ್ಲದಕ್ಕೂ ಅಗ್ರಪ್ರಾಧಾನ್ಯರು ಎಂಬುದು ಸುಳ್ಳಾಗುತ್ತದೆ, ಬುದ್ಧರೇ ಎಲ್ಲದಕ್ಕೂ ಅತ್ಯುತ್ತಮರು ಎನ್ನುವುದು ಸುಳ್ಳಾಗುತ್ತದೆ ಮತ್ತು ಬುದ್ಧರ ಬೋಧನೆಯು ಪರಮ ಉತ್ಕೃಷ್ಟ, ಪರಮಶ್ರೇಷ್ಠ, ಎಲ್ಲಕ್ಕಿಂತ ಅತ್ಯುತ್ತಮ, ಅದ್ವಿತೀಯ, ಅಸಮಾನ, ಅನುಪಮೇಯ, ಅನುತ್ತರವಾದುದು, ಸ್ಪಧರ್ಾತೀತ, ಎನ್ನುವುದೆಲ್ಲಾ ಸುಳ್ಳಾಗುತ್ತದೆ. ಈ ಕಾರಣದಿಂದಲೂ ಇಬ್ಬರು ತಥಾಗತರು ಏಕಕಾಲದಲ್ಲಿ ಉದಯಿಸಲಾರರು.
ಜೊತೆಗೆ ಓ ಮಹಾರಾಜ, ಬುದ್ಧರಿಗೆ ಸ್ವಭಾವ ಅದ್ವೀತಿಯ ಲಕ್ಷಣಗಳಿರುತ್ತದೆ, ಅಂದರೆ ಲೋಕಕ್ಕೆ ಬುದ್ಧರೊಬ್ಬರೆ ಉದಯಿಸಬೇಕು, ಏಕೆ? ಸರ್ವಜ್ಞ ಬುದ್ಧರ ಶೀಲ ಶ್ರೇಷ್ಠತೆ, ಬೇರೆ ವಿಷಯಗಳಲ್ಲೂ ಸಹ ಏಕಮೇವತೆಯಿದೆ, ಯಾವುದದು? ಈ ವಿಶಾಲ ಪೃಥ್ವಿಯು ಒಂದೇ ಆಗಿದೆ. ಹಾಗೆಯೇ ಈ ವಿಶಾಲ ಸಾಗರವು ಒಂದೇ ಆಗಿದೆ. ಸಿನೆರೂ ಮಹಾಪರ್ವತವೂ ಪರ್ವತಗಳಲ್ಲಿ ಅತ್ಯುತ್ತಮ ಒಂದೇ ಆಗಿದೆ. ವಿಶಾಲ ಆಕಾಶವು ಒಂದೇ ಆಗಿದೆ. ದೇವತೆಗಳ ಒಡೆಯ ಸಕ್ಕ ಸಹಾ ಒಬ್ಬನೆ, ಮಾರನು ಒಬ್ಬನೆ, ಮಹಾಬ್ರಹ್ಮ ಸಹಾ ಒಬ್ಬನೇ ಆಗಿದ್ದಾನೆ. ಅದೇರೀತಿಯಲ್ಲಿ ತಥಾಗತರು, ಅರಹಂತರು ಆಗಿರುವ ಸಮ್ಮಾಸಂಬುದ್ಧರು ಸಹಾ ಏಕಮೇವ ಆಗಿರುತ್ತಾರೆ. ಏಕ ಮೇವರಾಗಿಯೇ ಲೋಕದಲ್ಲಿ ಉದಯಿಸುತ್ತಾರೆ.
ಭಂತೆ ನಾಗಸೇನ, ಜಟಿಲವಾಗಿರುವ ಸಮಸ್ಯೆಯನ್ನು ಅತಿ ಸುಲಭವಾಗಿ, ಸರಳವಾಗಿ, ಉಪಮೆಗಳ ಸಹಿತ, ಕಾರಣಸಹಿತ ವಿವರಿಸಿದಿರಿ. ಬುದ್ಧಿವಂತನಲ್ಲದವನು ಸಹಾ ಕೇಳಿ ಸಂತೃಪ್ತನಾಗುತ್ತಾನೆ. ಇನ್ನು ನನ್ನಂಥಹ ಮಹಾಪ್ರಾಜ್ಞನ ಬಗ್ಗೆ ಹೇಳುವುದೇನಿದೆ. ಬಹುಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನೀವು ಹೇಳಿದ್ದನ್ನು ನಾನು ಒಪ್ಪುವೆನು.
2. ಗೋತಮಿ ವಸ್ತ್ರದಾನ ಪ್ರಶ್ನೆ
ಭಂತೆ ನಾಗಸೇನ, ಭಗವಾನರು ತಮ್ಮ ಚಿಕ್ಕಮ್ಮ (ತಾಯಿಯ ತಂಗಿ)ನವರಿಗೆ ಆಕೆ ವಸ್ತ್ರದಾನ ಮಾಡಲು ಬಂದಿದ್ದಾಗ ಹೀಗೆ ಹೇಳಿದ್ದರು: ಓ ಪ್ರಜಾಪತಿ ಗೋತಮಿ, ಅದನ್ನು ಸಂಘಕ್ಕೆ ದಾನಮಾಡಿಬಿಡಿ, ಸಂಘವು ಅದನ್ನು ನಿಮ್ಮಿಂದ ಪಡೆದರೆ, ನೀವು ನನ್ನನ್ನೇ ಪೂಜಿಸಿದಂತೆ ಹಾಗೆಯೇ ಸಂಘವನ್ನು ಪೂಜಿಸಿದಂತೆ ಆಗುತ್ತದೆ.
ಈಗ ಹೇಳಿ ನಾಗಸೇನ, ತಥಾಗತರು ಘನವಾದವರಲ್ಲವೆ, ಅತ್ಯಂತ ಪ್ರಾಧಾನ್ಯತೆವುಳ್ಳವರಲ್ಲವೆ? ಮತ್ತು ಸಂಘಕ್ಕಿಂತಲೂ ದಾನಕ್ಕೆ ಅರ್ಹರಾದವರಲ್ಲವೆ? ವರ್ಷವಾಸಕ್ಕೆಂದು ಪ್ರಜಾಪತಿ ಗೋತಮಿಯು ತಾನೇ ನೇಯ್ದು, ಕತ್ತರಿಸಿ, ಇಸ್ತ್ರಿಮಾಡಿ ಸಿದ್ಧಪಡಿಸಿ ತಥಾಗತರಿಗೆ ಅಪರ್ಿಸಲು ಹೋದರೆ ಅದನ್ನು ಸಂಘಕ್ಕೆ ಅಪರ್ಿಸಿ ಎಂದು ಏಕೆ ಹೇಳಿದರು? ಭಂತೆ ನಾಗಸೇನರವರೇ, ತಥಾಗತರು ನಿಜಕ್ಕೂ ಸಂಘಕ್ಕಿಂತಲೂ ಶ್ರೇಷ್ಠವಾಗಿದ್ದರೆ, ಉತ್ಕೃಷ್ಟರಾಗಿದ್ದರೆ ಅವರು ಸಂಘಕ್ಕೆ ದಾನ ಅಪರ್ಿಸಿ ಎಂದು ಹೇಳುತ್ತಿರಲಿಲ್ಲ. ಆದರೆ ಇಲ್ಲಿ ತಥಾಗತರು ತಮಗಾಗಿ ಬಂದ ದಾನವನ್ನು ಸ್ವೀಕರಿಸಲಿಲ್ಲ, ದಾನಕ್ಕೆ ಅವಕಾಶ ನೀಡಲಿಲ್ಲ. ನೀವೇ ಅರಿತಿರುವಂತೆ ಅವರು ತಮ್ಮ ಚಿಕ್ಕಮ್ಮನವರಿಗೆ ಸಂಘಕ್ಕೆ ದಾನ ನೀಡಿ ಎಂದಿದ್ದಾರೆ. (146)
ಓ ಮಹಾರಾಜ, ನಿಮ್ಮ ಹೇಳಿಕೆಗಳು ಸರಿಯಾಗಿಯೇ ಇವೆ. ಭಗವಾನರು ಹಾಗೆಯೇ ತಮ್ಮ ಚಿಕ್ಕಮ್ಮನಿಗೆ ನೀಡಲು ನಿದರ್ೆಶಿಸಿದ್ದರು. ಆದರೆ ಹಾಗೆ ಅವರು ನಿದರ್ೆಶಿಸಿದ್ದು, ತಮಗೆ ದಾನ ಮಾಡಿದರೆ ಫಲವಿಲ್ಲ ಎಂದಲ್ಲ, ಅಥವಾ ತಾವು ದಾನಕ್ಕೆ ಅರ್ಹರೆಂದಲ್ಲ, ಬದಲಾಗಿ ಕರುಣೆಯಿಂದ ಮತ್ತು ಅನುಕಂಪದಿಂದ ಭವಿಷ್ಯದ ದೂರದೃಷ್ಟಿಯಿಂದ ಹೀಗೆ ಯೋಚಿಸಿ ಹೇಳಿದ್ದರು.
ನಾನು ಹೋದಮೇಲೆ, ಹೀಗೆಯೇ ಸಂಘವು ಭವಿಷ್ಯದಲ್ಲಿಯೂ ಉತ್ಕೃಷ್ಟವಾಗಿ ಭಾವಿಸುವಂತಾಗಬೇಕು. ಹಾಗೆಯೇ ಸಂಘಕ್ಕೆ ನಿಜಕ್ಕೂ ಮಹಾ ಉತ್ಕೃಷ್ಟತೆಯಿದೆ. ಆದ್ದರಿಂದಲೇ ಅವರು ಪ್ರಜಾಪತಿ ಗೋತಮಿಗೆ ಹೀಗೆ ಹೇಳಿದ್ದರು: ಓ ಗೋತಮಿ, ಅದನ್ನು ಸಂಘಕ್ಕೆ ದಾನ ಮಾಡು, ಸಂಘಕ್ಕೆ ದಾನ ಮಾಡಿದರೆ ನನಗೆ ಮಾಡಿದಂತೆಯೇ ಸರಿ.
ಓ ಮಹಾರಾಜ, ಹೇಗೆ ತಂದೆಯು ತಾನು ಜೀವಂತವಿರುವಾಗಲೇ ತನ್ನ ಮಗನನ್ನು ಸಭೆಯ ಮಧ್ಯೆ, ಮಂತ್ರಿಗಳ, ಸೈನಿಕರ, ರಾಜದೂತರ, ಕಾವಲುಗಾರರ, ಅಂಗರಕ್ಷಕರ ಮತ್ತು ಆಸ್ಥಾನಿಕರ ಮುಂದೆಯೇ ಹೊಗಳುತ್ತಾನೆ, ಘನತೆಯೇರಿಸುತ್ತಾನೆ. ಏಕೆಂದರೆ ತನ್ನ ಮಗನ ಸದ್ಗುಣಗಳ ಬಗ್ಗೆ ಯೋಚಿಸುತ್ತ ಈಗ ಹೀಗೆ ಸ್ಥಾಪಿತನಾದರೆ ಮುಂದೆ ಜನರಿಂದಲೇ ಆತನು ಗೌರವಿಸಲ್ಟಡುತ್ತಾನೆ. ಅದೇರೀತಿಯಲ್ಲಿ ತಥಾಗತರು ಸಹ ಈಗಿರುವಂತೆಯೇ ಸಂಘವು, ಕಾಲನಂತರವೂ, ನಾನು ಹೋದ ಬಳಿಕವೂ ಆರಾಧಿಸಲ್ಟಡುತ್ತದೆ. ನಿಜಕ್ಕೂ ಸಂಘಕ್ಕೆ ಆ ಉತ್ಕೃಷ್ಟತೆಯಿದೆ. ಆದ್ದರಿಂದಲೇ ಅವರು ಗೋತಮಿಗೆ ಓ ಗೋತಮಿಯೇ ಅದನ್ನು ಸಂಘಕ್ಕೆ ದಾನವಾಗಿ ಅಪರ್ಿಸು, ಸಂಘಕ್ಕೆ ಪೂಜಿಸಿದರೆ, ದಾನ ಮಾಡಿದರೆ ನನಗೆ ಮಾಡಿದಂತೆಯೇ ಸರಿ ಎಂದಿದ್ದರು
ಮತ್ತೆ ಓ ಮಹಾರಾಜ, ಕೇವಲ ವಷರ್ಾವಾಸಕ್ಕೆಂದು ವಸ್ತ್ರದಾನ ಮಾಡಿದ ಮಾತ್ರಕ್ಕೆ ಅದು ತಥಾಗತರಿಗಿಂತಲೂ ಶ್ರೇಷ್ಠವಾಗಲಾರದು. ಹೇಗೆಂದರೆ ಓ ಮಹಾರಾಜ, ತಾಯ್ತಂದೆಯರು ತಮ್ಮ ಮಕ್ಕಳಿಗೆ ಸ್ನಾನ ಮಾಡಿಸುವರು, ಸುಗಂಧ ದ್ರವ್ಯಗಳನ್ನು ಪೂಸಿಸುವರು, ಹೀಗೆಲ್ಲಾ ಮಾಡುವುದರಿಂದ ಅವರು ತಾಯ್ತಂದೆಗಳಿಂದ ಹೆಚ್ಚಾಗಿ ಆಗಿಬಿಟ್ಟರೇ?
ಖಂಡಿತ ಇಲ್ಲ ಭಂತೆ, ತಾಯ್ತಂದೆಯರು ತಮ್ಮ ಮಕ್ಕಳೊಂದಿಗೆ ತಮಗಿಷ್ಟಬಂದಂತೆ ವ್ಯವಹರಿಸಲಿ, ಅದನ್ನು ಆ ಮಕ್ಕಳು ಇಷ್ಟಪಡಲಿ ಅಥವಾ ಇಲ್ಲದಿರಲಿ ಮತ್ತು ಆ ಸುಗಂಧ ದ್ರವ್ಯಗಳಿಂದ, ಕೂದಲು ತೊಳೆಯುವ ದ್ರವದಿಂದಾಗಲಿ ಸೇವೆಮಾಡಲಿ ಅದರಿಂದಾಗಿ ಆ ಮಕ್ಕಳು ಹೆಚ್ಚಾಗಿ ಆಗುವುದಿಲ್ಲ.
ಅದೇರೀತಿಯಲ್ಲಿ ಓ ಮಹಾರಾಜ, ಸಂಘವು ದಾನ ಸ್ವೀಕರಿಸಿದ ಮಾತ್ರಕ್ಕೆ ತಥಾಗತರಿಗಿಂತ ಶ್ರೇಷ್ಠವಾಗಲಾರದು, ಹಾಗೆಯೇ ಸಂಘವು ಇಷ್ಟಪಡಲಿ ಅಥವಾ ಇಷ್ಟಪಡದಿರಲಿ ಹೀಗೆಯೇ ಮಾಡಿ ಎಂದು ಅವರು ತಮ್ಮ ಚಿಕ್ಕಮ್ಮನವರಿಗೆ ಹೇಳಿದರು.
ಓ ಮಹಾರಾಜ ಊಹಿಸಿ, ಒಬ್ಬನು ರಾಜನಿಗೆ ಉಡುಗೊರೆಯನ್ನು ನೀಡುವನು ಮತ್ತು ರಾಜನು ಆ ಉಡುಗೊರೆಯನ್ನು ಬೇರೆಯವರಿಗೆ ಅಂದರೆ ಸೈನಿಕರಿಗೆ ಅಥವಾ ದೂತನಿಗೆ ಅಥವಾ ಸೇನಾಪತಿ ಅಥವಾ ಕುಲಗುರುವಿಗೆ ನೀಡುವನು, ಆಗ ಅದನ್ನು ಸ್ವೀಕರಿಸಿದವರು ರಾಜನಿಗಿಂತ ಶ್ರೇಷ್ಠರಾಗುವರೇ?
ಖಂಡಿತ ಇಲ್ಲ ಭಂತೆ, ಯಾವ ಮನುಷ್ಯನು ರಾಜನಿಂದ ಸಂಬಳ ಪಡೆಯುತ್ತಾನೋ, ರಾಜನಿಂದಲೇ ಜೀವನೋಪಾಯ ನಡೆಸುತ್ತಿರುವನೋ, ಆತನಾಗಲು ಸಾಧ್ಯವಿಲ್ಲ, ರಾಜನೇ ಆತನಿಗೆ ಆ ಸ್ಥಾನದಲ್ಲಿ ಕುಳ್ಳಿರಿಸಿರುವನು, ಹಾಗೆಯೇ ಉಡುಗೊರೆ ಸಹಾ ನೀಡಿರುವನು.
ಮತ್ತೆ ಓ ಮಹಾರಾಜ, ತಥಾಗತರು ಹೀಗೆ ಯೋಚಿಸಿರುವರು: ಸಂಘವು ಸ್ವಭಾವಿಕವಾಗಿಯೇ ದಾನಕ್ಕೆ ಅರ್ಹವಾದದ್ದು. ಆದ್ದರಿಂದ ನಾನು ಈ ವಸ್ತುವನ್ನು ಹೊಂದಿರುತ್ತೇನೆ, ನನ್ನ ಆಸ್ತಿಯಾದರೂ ನೀಡುತ್ತೇನೆ. ಆದ್ದರಿಂದಲೇ ಅವರು ಸಂಘಕ್ಕೆ ದಾನ ನೀಡಿಸಿದರು. ಓ ಮಹಾರಾಜ, ತಥಾಗತರು ತಮಗಾಗಿ ನೀಡಲ್ಪಟ್ಟ ದಾನದಿಂದ ಉಬ್ಬಿಹೋಗುವದಿಲ್ಲ, ಬದಲಾಗಿ ಯಾರಾದರೂ ಅರ್ಹರು ಈ ಜಗತ್ತಿನಲ್ಲಿ ಇದ್ದರೆ ಅವರಿಗೂ ಅಪರ್ಿಸುವರು. ಆದ್ದರಿಂದಲೇ ಈ ರೀತಿ ಹೇಳಲಾಗಿದೆ ಮಹಾರಾಜ, ಏನೆಂದರೆ ಭಗವಾನರು ದೇವಾತಿದೇವರಾಗಿದ್ದಾರೆ, ಮಜ್ಜೀಮನಿಘಾಯದ ಧಮ್ಮದಾಯದ ಸುತ್ತದಲ್ಲಿ ಹೀಗಿದೆ: ಯಾರು ದಾನಕ್ಕೆ ಹಾಗು ಪ್ರಶಂಸೆಗೆ ಅತ್ಯಂತ ಅರ್ಹನಾಗಿರುತ್ತಾನೋ ಆತನು ಮಾತ್ರ ನನ್ನ ಮೊದಲ ಭಿಕ್ಷುವಾಗುತ್ತಾನೆ.
ಓ ಮಹಾರಾಜ, ಇಡೀ ಲೋಕಗಳಲ್ಲಿ ತಥಾಗತರಿಗಿಂತ, ಶ್ರೇಷ್ಠರಾಗಲಿ, ಉತ್ಕೃಷ್ಟರಾಗಲಿ, ಹೆಚ್ಚಿನವರಾಗಲಿ ಯಾರೂ ಇಲ್ಲ. ತಥಾಗತರೇ ಪರಮಶ್ರೇಷ್ಠರು, ಅತ್ಯುತ್ತಮರು ಮತ್ತು ಅತ್ಯುನ್ನತರು ಆಗಿದ್ದಾರೆ. ಆದ್ದರಿಂದಾಗಿ ದಾನಕ್ಕೆ ಅತ್ಯಂತ ಅರ್ಹರು ಅವರೇ ಆಗಿದ್ದಾರೆ. ಓ ಮಹಾರಾಜ, ಸಂಯುಕ್ತ ನಿಕಾಯದಲ್ಲಿ ಒಂದು ಸುತ್ತದಲ್ಲಿ ಈ ಪ್ರಸ್ತಾವವಿದೆ, ಮಾಣವ ಗಾಮಿಕ ಎಂಬ ದೇವಪುತ್ತನು ದೇವಮಾನವರ ಸಭಾ ಮಧ್ಯೆ ಹೀಗೆ ಹೇಳುತ್ತಾನೆ:
ರಾಜಗೃಹದ ಬೆಟ್ಟಗಳಲ್ಲಿ ವಿಪುಲ ಗಿರಿಯೇ ಶ್ರೇಷ್ಠವಾಗಿದೆ. ಹಿಮಾಲಯಗಳಲ್ಲಿ ಶ್ವೇತಪರ್ವತ ಶ್ರೇಷ್ಠವಾಗಿದೆ. ಗ್ರಹಗಳಲ್ಲಿ ಸೂರ್ಯ ಶ್ರೇಷ್ಠ, ನೀರುಗಳಲ್ಲಿ ಸಮುದ್ರ ಶ್ರೇಷ್ಠ, ನಕ್ಷತ್ರಗಳಲ್ಲಿ ಚಂದಿರನು ಸುಂದರ. ಹಾಗೆಯೇ ಇದೇ ದೇವತೆಗಳ ಸಹಿತ ಲೋಕದಲ್ಲಿ ಬುದ್ಧರು ಅಗ್ರರಾಗಿದ್ದಾರೆ.
ಓ ಮಹಾರಾಜ, ಮಾಣವ ದೇವಪುತ್ರನಿಂದ ಸರಿಯಾಗಿಯೇ ಹಾಡಲ್ಪಟ್ಟಿದೆ, ತಪ್ಪಾಗಿ ಹಾಡಲ್ಪಟ್ಟಿಲ್ಲ, ಚೆನ್ನಾಗಿ ಹೇಳಲ್ಪಟ್ಟಿದೆ, ತಪ್ಪಾಗಿ ಹೇಳಲ್ಪಟ್ಟಿಲ್ಲ. ಅದಕ್ಕೆ ಭಗವಾನರ ಅಂಗೀಕಾರವು ಇದೆ. ಧಮ್ಮಸೇನಾನಿ ಸಾರಿಪುತ್ತರು ಶ್ರದ್ಧೆಯಿಂದ ಹೀಗೆ ಹೇಳಿದ್ದರು: ಯಾರು ಮಾರನ ಬಲಗಳನ್ನು ಪಲಾಯನವಾಗುವಂತೆ ಮಾಡಿದ್ದರೋ ಮತ್ತು ನಮಗೆ ದುಃಖಸಾಗರದಿಂದ ದಾಟಲು ಸಹಾಯ ಮಾಡುವರೋ ಅವರಿಗೆ ಒಂದೇ ಮನಸ್ಸಿನಿಂದ, ಒಂದೇ ಶ್ರದ್ಧೆಯಿಂದ, ಕೈಜೋಡಿಸುತ್ತ ಪ್ರಾಯಶ್ಚಿತ್ತಪಟ್ಟು, ಆರಾಧಿಸೋಣ.
ಭಗವಾನದಿಂದಲೂ ದೇವಾತಿದೇವ ಎಂದು ಹೇಳಲ್ಪಟ್ಟಿದೆ: ಓ ಭಿಕ್ಷುಗಳೇ, ಒಬ್ಬ ಅದ್ವಿತೀಯ ಜೀವಿಯಿದ್ದಾರೆ, ಅವರು ಹುಟ್ಟಿರುವುದೇ ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ. ಲೋಕಾನುಕಂಪೆಯಿಂದ, ದೇವತೆಗಳ ಮತ್ತು ಮನುಷ್ಯರ ಸುಖ-ಕ್ಷೇಮಕ್ಕಾಗಿ ಜನಿಸಿದ್ದಾರೆ. ಯಾರು ಆ ಜೀವಿ? ಅವರೇ ತಥಾಗತರು, ಅರಹಂತರು ಆದ ಸಮ್ಮಾಸಂಬುದ್ಧರಾಗಿದ್ದಾರೆ.
ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ, ನೀವು ಹೇಳಿದ ಈ ಎಲ್ಲಕ್ಕೂ ನನಗೆ ಒಪ್ಪಿಗೆಯಿದೆ.
3. ಗಿಹಿಪಬ್ಬಜಿತ ಸಮ್ಮಾಪಟಿಪತ್ತಿ ಪನ್ಹೋ (ಗೃಹಸ್ಥ ಪಬ್ಬಜಿತ ವ್ಯತ್ಯಾಸ ಪ್ರಶ್ನೆ)
ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಓ ಭಿಕ್ಷುಗಳೇ, ಗೃಹಸ್ಥರಾಗಲಿ ಅಥವಾ ಭಿಕ್ಷುಗಳಾಗಲಿ, ಪಬ್ಬಿಜಿತರೇ ಆಗಲಿ, ಯಾರು ಯೋಗ್ಯವಾದ ವಿಧಾನದಿಂದ ಅರಹತ್ವ ಸಾಧಿಸಿ ಸಿದ್ಧಿಸಿರುವನೋ ಆತನಿಗೆ ನಾನು ವಣರ್ಿಸುವೆನು. ಓ ಭಿಕ್ಷುಗಳೇ, ಆತನು ಗೃಹಸ್ಥನಾಗಿಯೇ ಇರಲಿ ಅಥವಾ ಪಬ್ಬಿಜಿತನಾಗಿಯೇ ಇರಲಿ, ಯಾರು ಪರಮಶ್ರೇಷ್ಠ ಧಮ್ಮವನ್ನು ಪಾಲಿಸುತ್ತಿರುವನೋ, ಗಳಿಸಿರುವನೋ, ಎಲ್ಲಾ ಸಂಕಷ್ಟಗಳನ್ನು ದಾಟುವನೋ ಆತನು ಜ್ಞಾನವು ಧಮ್ಮವು ಕುಶಲವು ಆದ ಅರಹತ್ವವನ್ನು ಗಳಿಸುವನು.
ಈಗ ಹೇಳಿ ಭಂತೆ ನಾಗಸೇನ, ಶ್ವೇತವಸ್ತ್ರಧಾರಿಯಾದ, ಇಂದ್ರೀಯ ಭೋಗಿಯಾದ, ಪತ್ನಿಪುತ್ರರೊಂದಿಗೆ ವಾಸಿಸುತ್ತಿರುವ, ಕಾಶಿ ಚಂದನವನ್ನು ಬಳಸುವ, ಹೂಮಾಲೆಗಳನ್ನು ಸುಗಂಧ ದ್ರವ್ಯಗಳನ್ನು, ತೈಲಗಳನ್ನು ಲೇಪಿಸುವ, ಚಿನ್ನ, ಬೆಳ್ಳಿಯನ್ನು ಸ್ವೀಕರಿಸುವ, ಮಣಿಕುಂಡಲಾದಿ ರತ್ನಚಿನ್ನಸಹಿತ ಪೇಟ ಧರಿಸುವವನು, ಶ್ರೇಷ್ಠವಾದ ಅರಹತ್ವವನ್ನು ಪ್ರಾಪ್ತಿಮಾಡಬಹುದಾದರೆ, ಪಬ್ಬಜಿತನಾಗಿ, ತಲೆ ಬೋಳಿಸಿ, ಕಾಷಾಯ ವಸ್ತ್ರಧಾರಿಯಾಗಿ, ಪರಜನರಿಂದ ಆಹಾರಕ್ಕೆ ಅವಲಂಬಿತನಾಗಿ ನಾಲ್ಕು ಶೀಲಸ್ಕಂಧಗಳನ್ನು ಪಾಲಿಸುತ್ತ, ಸ್ವ-ಇಚ್ಛೆಯಿಂದ ನೂರೈವತ್ತು (227) ವಿನಯ ಶೀಲಗಳನ್ನು ಪಾಲಿಸುತ್ತ, ಹದಿಮೂರು ಧುತಾಂಗಗಳನ್ನು ಪಾಲಿಸುತ್ತ, ಯಾವುದನ್ನು ಭಂಗಮಾಡದೆ ಅರಹತ್ವವನ್ನು ಪ್ರಾಪ್ತಿಗೊಳಿಸುವಿರಿ, ಹೀಗಿರುವಾಗ ನಿಮಗೂ ಗೃಹಸ್ಥರಿಗೂ ವ್ಯತ್ಯಾಸವೇನಿದೆ? ನಿಮ್ಮ ತಪವು ಪರಿಣಾಮರಹಿತವೇ? ಆಯಿತು, ನಿಮ್ಮ ಅಭಿನಿಷ್ಕ್ರಮಣವು ವ್ಯರ್ಥವಾಯಿತು, ನಿಮ್ಮ ನಿಯಮಪಾಲನೆ ಬಡವಾಯಿತು, ನಿಮ್ಮ ಧುತಂಗಗಳ ಪಾಲನೆ ಅಪ್ರಯೋಜನಕಾರಿ ಯಾಯಿತು, ಏತಕ್ಕಾಗಿ ನೀವು ಈ ನಿಯಮಗಳ ಹೊರೆಯನ್ನು ಹೊತ್ತುಕೊಳ್ಳುವಿರಿ? ಅಲ್ಲಿ ಗೃಹಸ್ಥರು ಸುಖವಾಗಿ ಇರುತ್ತಲೇ ಸಾಧಿಸುವಾಗ, ಅರಹತ್ವವು ಹೀಗೂ ಸಿಗುವುದಾದರೆ ನಿಮ್ಮ ಕಷ್ಟಗಳೇಕೆ? (147)
ಓ ಮಹಾರಾಜ, ನೀವು ಹೇಳಿದ ಗಾಥೆಯು ಭಗವಾನರಿಂದ ಬಂದಿದುದಾಗಿದೆ. ಅದು ಸರಿಯಾಗಿಯೇ ಇದೆ. ಯೋಗ್ಯ ಮಾರ್ಗದಲ್ಲಿ ಯೋಗ್ಯ ಆಚರಣೆಯಿಂದಾಗಿಯೇ ಶ್ರೇಷ್ಠ ಪ್ರಾಪ್ತಿಯಾಗಬಲ್ಲದು. ಓ ಮಹಾರಾಜ, ಪಬ್ಬಜಿತನಿಗೆ ತಾನು ಪಬ್ಬಜಿತನೆಂದು ತಿಳಿದಿರುತ್ತದೆ. ಆದರೂ ಸಹಾ ಶಿಕ್ಷಣ ಹಾಗು ಪ್ರಾಪ್ತಿಗಳನ್ನು ಅಲಕ್ಷಿಸುತ್ತಾನೆ ಹಾಗು ಪಬ್ಬಜಿತತ್ವದಿಂದ ದೂರವೇ ಉಳಿದಿರುತ್ತಾನೆ. ಹೀಗಿರುವಾಗ, ತ್ಯಾಗದಿಂದ ದೂರಾಗಿರುವ, ಅರಹತ್ವದಿಂದ ದೂರಾಗಿರುವ, ಪ್ರಾಪಂಚಿಕತೆಯಲ್ಲಿ ಅದ್ದಿಹೋಗಿ ಶ್ವೇತವಸ್ತ್ರಧಾರಿಯಾದ ಸಾಮಾನ್ಯನು ಏನು ಮಾಡಬಲ್ಲನು? ಆದರೂ ಸಹ ಓ ಮಹಾರಾಜ, ಆತನು ಗೃಹಸ್ಥನೇ ಆಗಿರಲಿ ಅಥವಾ ಪಬ್ಬಜಿತನೇ ಆಗಿರಲಿ, ಆತನು ಯೋಗ್ಯ ಆಚರಣೆಗಳನ್ನು ಪಾಲಿಸುವವನಾಗಿದ್ದರೆ, ಅನುಷ್ಠಾನಬದ್ಧನಾಗಿದ್ದರೆ, ಶೀಲಪ್ರಜ್ಞಾ ಸಂಪನ್ನನಾಗಿದ್ದರೆ ಸಮಾಧಿಯಿಂದ ಅರಹತ್ವ ಪ್ರಾಪ್ತಿಮಾಡಬಲ್ಲನು, ಜ್ಞಾನ, ಧಮ್ಮ ಕುಶಲವನ್ನು ಗಳಿಸುವನು.
ಓ ಮಹಾರಾಜ, ಹೀಗಿರುವಾಗಲು, ಪಬ್ಬಜಿತನೇ ತ್ಯಾಗಫಲಗಳಲ್ಲಿ ಅಧಿಪತಿಯಾಗಿದ್ದಾನೆ, ಒಡೆಯನಾಗಿದ್ದಾನೆ, ಓ ಮಹಾರಾಜ, ಪಬ್ಬಜ್ಜವು (ತ್ಯಾಗ) ಬಹುಗುಣಗಳಿಂದ ಕೂಡಿದೆ, ಅದರ ಲಾಭವನ್ನು ಯಾರೂ ಲೆಕ್ಕಚಾರ ಹಾಕಲಾರರು. ಓ ಮಹಾರಾಜ, ಹೇಗೆ ಶ್ರೇಷ್ಠವಾದ ಮಣಿರತ್ನದ ಮೌಲ್ಯವನ್ನು ಅಗಾಧ ಐಶ್ವರ್ಯದಿಂದಲೂ ಸರಿಗಟ್ಟಲಾರರೋ, ಇದರ ಮೌಲ್ಯವು ಇಷ್ಟು ಎಂದು ಹೇಳಲಾರರೋ ಹಾಗೆಯೇ ಓ ಮಹಾರಾಜ, ಪಬ್ಬಜ್ಜವು (ಭಿಕ್ಷುತನವು) ಅಪಾರ ಲಾಭಗಳಿಂದ ಕೂಡಿದೆ. ಹಲವು ಅಪ್ರಮಾಣಿತ ಲಾಭಗಳನ್ನು ಹೊಂದಿದೆ. ಅದನ್ನು ಸಾಮಾನ್ಯರಾರು ಲೆಕ್ಕಾಚಾರ ಮಾಡಲಾರರು. ಓ ಮಹಾರಾಜ, ಸಮುದ್ರದ ಅಲೆಗಳ ಲೆಕ್ಕ ಮಾಡಲಾಗುವುದೇ, ಇಷ್ಟು ಅಲೆಗಳು ಸಮುದ್ರದಲ್ಲಿ ಇವೆ ಎಂದು ಹೇಳಲಾಗುವುದೇ?
ಓ ಮಹಾರಾಜ, ಪಬ್ಬಜಿತನು ಯಾವಾಗಲಾದರು ಸಿದ್ಧಿಸಬಲ್ಲನು. ನೇರವಾಗಿ, ತಡವಿಲ್ಲದೆ ಪ್ರಾಪ್ತಿಮಾಡಬಲ್ಲನು ಏಕೆ ಹೀಗೆ? ಏಕೆಂದರೆ ಓ ಮಹಾರಾಜ, ಪಬ್ಬಜಿತನು ಅಲ್ಪೆಚ್ಛೆವುಳ್ಳವನಾಗಿರುತ್ತಾನೆ, ಸಂತುಷ್ಟನಾಗಿರುತ್ತಾನೆ, ನಿರಾಲಯನಾಗಿರುತ್ತಾನೆ (ಜಗದಿಂದ ಹೊರತಾಗಿರುತ್ತಾನೆ) ಅನಿಕೇತನ (ಮನೆಯಿಲ್ಲದವ, ಗೃಹಬಂಧನಗಳಿಂದ ಕೂಡಿರದ) ನಾಗಿರುತ್ತಾನೆ, ಪರಿಪೂರ್ಣ ಶೀಲವಂತನಾಗಿರುತ್ತಾನೆ, ದೋಷರಹಿತ ಚಾರಿತ್ರ್ಯದವ ನಾಗಿರುತ್ತಾನೆ, ಸಾಧನೆ ಮಾಡುವುದರಲ್ಲಿ ದೃಢನು, ಕುಶಲನು ಆಗಿರುತ್ತಾನೆ. ಆದ್ದರಿಂದಲೇ ಆತನು ತಡವಿಲ್ಲದೆ, ನೇರವಾಗಿ, ಯಾವಾಗಲಾದರೂ ಅರಹಂತ ಪ್ರಾಪ್ತಿ ಮಾಡಬಹುದು, ಓ ಮಹಾರಾಜ, ಹೇಗೆ ಈಟಿಯು ಶುದ್ಧ ಲೋಹದಿಂದ ನುಣುಪಾಗಿ, ನೇರವಾಗಿ, ಹಗುರವಾಗಿ, ಕಲೆರಹಿತವಾಗಿ ಇರುವುದರಿಂದಲೇ ಗುರಿತಪ್ಪದೆ ವೇಗವಾಗಿ ಗುರಿ ತಲುಪುವುದೋ ಹಾಗೆಯೇ ಪಬ್ಬಜಿತನು ಸಹಾ ಆಗಿದೆ.
ಬಹುಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನೀವು ಹೇಳಿದ್ದಕ್ಕೆ ನನ್ನ ಒಪ್ಪಿಗೆಯಿದೆ.
4. ಪಟಿಪದ ದೋಸ ಪನ್ಹೊ (ಮಾರ್ಗದೋಷ ಪ್ರಶ್ನೆ)
ಭಂತೆ ನಾಗಸೇನ, ಯಾವಾಗ ಬೋಧಿಸತ್ವರು ತಪವನ್ನು ಸಾಧಿಸುತ್ತಿದ್ದರೋ, ಆಗ ಅವರಂತಹ ಪ್ರಯತ್ನಪಟ್ಟವರಿಲ್ಲ, ಅವರಂತಹ ಬಲಪ್ರಯೋಗ ಮಾಡಿದವರಿಲ್ಲ. ಪಾಪದೊಡನೆ ಅವರಂತೆ ಹೋರಾಟ ಮಾಡಿದವರಿಲ್ಲ, ಅವರಂತೆ ಮಾರನ ಸೈನ್ಯವನ್ನು ಪಲಾಯನ ಮಾಡಿದವರಿಲ್ಲ, ಅವರಂತೆ ಅಲ್ಪ ಆಹಾರ ಸೇವಿಸಿದವರೂ ಇಲ್ಲ, ಅವರಂತಹ ತಪಸ್ವಿ ಜೀವಿ ಇನ್ನಿಲ್ಲ. ಆದರೆ ಅಂತಹ ನಿರರ್ಥಕ ನೋವುದಾಯಕ ಹೋರಾಟ ಕಂಡು ಅವರು ಆ ದೇಹದಂಡನೆಯ ಕುಮಾರ್ಗ ತ್ಯಜಿಸಿ ಹೀಗೆ ಹೇಳಿದರು:
ಈ ಕ್ರೂರಯುತ ತಪಸ್ಸಿನಿಂದಲೂ ಸಹಾ ನಾನು ಶ್ರೇಷ್ಠತ್ವ ಪ್ರಾಪ್ತಿಮಾಡಲಿಲ್ಲ. ಮಾನವಾತೀತವಾದ ಪ್ರಜ್ಞಾದಿಂದ ಉದಯಿಸುವ, ಶ್ರೇಷ್ಠರಿಗೆ, ಶೋಭೆ ನೀಡುವ ಪ್ರಾಪ್ತಿಯನ್ನು ಪಡೆಯಲಿಲ್ಲ. ಬೋಧಿ ಪ್ರಾಪ್ತಿಗೆ ಬೇರೆಯದೆ ಮಾರ್ಗವಿದೆ, ಅದು ಇದಲ್ಲ.
ಆದರೆ ಮತ್ತೆ ಅವರು ಆ ಪಥವನ್ನು ಬಿಟ್ಟು ಮಧ್ಯಮ ಮಾರ್ಗದಲ್ಲಿ ಸರ್ವಜ್ಞತೆಯನ್ನು ಪಡೆದರು. ಆದರೆ ಭಿಕ್ಷುಗಳಿಗೆ ಈ ರೀತಿ ಬೋಧಿಸಿದರು:
ಪ್ರಯತ್ನಶೀಲರಾಗಿ, ಬಲಿಷ್ಠರಾಗಿ, ಬುದ್ಧಶಾಸನದಲ್ಲಿ ಶ್ರದ್ಧೆಯಿಟ್ಟು ಮುನ್ನಡೆಯಿರಿ. ಹೇಗೆ ಬಲಿಷ್ಠ ಆನೆಯು ಮರಗಳ ಮನೆಯನ್ನು ಅಲುಗಾಡಿಸಿ ಬೀಳಿಸುತ್ತದೆಯೋ ಹಾಗೆ ಮೃತ್ಯುವಿನ ಸೈನ್ಯಕ್ಕೆ ಧೂಳಿಪಟ ಮಾಡಿ.
ಭಂತೆ ನಾಗಸೇನ, ಯಾವ ಕಾರಣದಿಂದಾಗಿ ತಥಾಗತರು ತಾವು ತ್ಯಜಿಸಿದ ಪಥಕ್ಕೆ ಭಿಕ್ಷುಗಳಿಗೆ ಹುರಿದುಂಬಿಸುತ್ತಿದ್ದಾರೆ? (148)
ಓ ಮಹಾರಾಜ, ಆಗಲೂ ಹಾಗು ಈಗಲೂ ಸಹಾ ಏಕೈಕ ಮಾರ್ಗವು ಮಾತ್ರವೇ ಇದೆ ಮತ್ತು ಇದು ಬೋಧಿಸತ್ವರು ಬುದ್ಧತ್ವ ಗಳಿಸಿದಂತಹ ಮಾರ್ಗವೇ ಆಗಿದೆ. ಓ ಮಹಾರಾಜ, ಬೋಧಿಸತ್ವರು ಅಪಾರವಾಗಿ ಶ್ರಮಿಸಿದ್ದರು, ಅವರು ಅಲ್ಪಆಹಾರದಿಂದ ಪ್ರಾರಂಭಿಸುತ್ತಾ ಏನೂ ಇಲ್ಲ ಎನ್ನುವವರೆಗೆ ಆಹಾರ ಕ್ಷೀಣಿಸಿದರು ಮತ್ತು ಆಹಾರದ ಕೊರತೆಯಿಂದಾಗಿ ಅವರ ಶರೀರ ದುರ್ಬಲವಾಯಿತು. ನಂತರ ಅವರು ಸ್ವಲ್ಪ ಸ್ವಲ್ಪ ಆಹಾರ ಬಳಸಲು ಪ್ರಾರಂಭಿಸಿದರು. ಆನಂತರದ ಹಾದಿಯಲ್ಲೇ ಅವರು ಬುದ್ಧತ್ವ ಪಡೆದರು. ಆ ಮಾರ್ಗದಲ್ಲೆ ತಥಾಗತರು ಸರ್ವಜ್ಞತೆಯನ್ನು ಪ್ರಾಪ್ತಿಮಾಡಿದರು. ಹೇಗೆ ಆಹಾರವು ಎಲ್ಲಾ ಜೀವಿಗಳನ್ನು ಸಲಹುತ್ತದೋ, ಹೇಗೆ ಆಹಾರದಿಂದಲೇ ಜೀವಿಗಳೆಲ್ಲಾ ಸುಖವಾಗಿ ಇರುತ್ತದೋ, ಹಾಗೆಯೇ ಮಾರ್ಗದಿಂದಲೇ ತಥಾಗತರು ಬುದ್ಧತ್ವ ಸರ್ವಜ್ಞತ್ವವನ್ನು ಪ್ರಾಪ್ತಿಮಾಡುವರು. ಓ ಮಹಾರಾಜ, ದೋಷವಿರುವುದು ಪ್ರಯತ್ನಶೀಲತೆಯಲ್ಲಿ ಅಲ್ಲ, ಹಾಗೆಯೇ ಬಲದಲ್ಲಿ ಅಲ್ಲ, ಪಾಪದೊಡನೆ ಹೋರಾಡುವಿಕೆಯಲ್ಲಿ ಅಲ್ಲ, ತಥಾಗತರು ಬುದ್ಧತ್ವ ಪಡೆಯಲಿಲ್ಲವೇ? ಆದರೆ ದೋಷವಿದ್ದುದು ದೇಹದಂಡನೆಯಲ್ಲಿ, ಆಹಾರ ನಿರಾಕರಣೆಯಲ್ಲಿ ಹೊರತು ಪ್ರಯತ್ನವು ಮಾತ್ರ ನಿಷಿದ್ಧವಲ್ಲ.
ಊಹಿಸಿ ಮಹಾರಾಜ, ಒಬ್ಬನು ಆತುರದಿಂದ ಮಾರ್ಗದಲ್ಲಿ ಧಾವಿಸುತ್ತಾನೆ. ಆ ಆತುರತೆಯಿಂದಾಗಿ ಆತನ ಕೈಗಳಿಗೆ ಪೆಟ್ಟಾಗಿ ಅಥವಾ ಅವನು ನೆಲದಲ್ಲಿ ಬೀಳುತ್ತಾನೆ. ಚಲಿಸಲು ಆಗದವನಾಗುತ್ತಾನೆ. ಈಗ ಹೇಳಿ ಮಹಾರಾಜ, ಆತನ ಆ ಪೆಟ್ಟುಗಳಿಗೆ ಈ ಮಾರ್ಗವು ಕಾರಣವಾಯಿತೇ?
ಖಂಡಿತ ಇಲ್ಲ ಭಂತೆ, ಮಹಾಪೃಥ್ವಿಯು ಸದಾ ಸಿದ್ಧವಾಗಿರುತ್ತದೆ, ಇಲ್ಲಿ ಮಾರ್ಗದ ದೋಷವಿಲ್ಲ, ಇಲ್ಲಿ ದೋಷವಿರುವುದು ಆತನ ಆತುರತೆಯಿಂದ. ಅದರಿಂದ ಆತನು ಬಿದ್ದಿದ್ದಾನೆ.
ಅದೇರೀತಿಯಲ್ಲಿ ಓ ಮಹಾರಾಜ, ದೋಷವಿರುವುದು ಪ್ರಯತ್ನದಲ್ಲಲ್ಲ, ಹಾಗೆಯೇ ಬಲದಲ್ಲಿಯೂ ಅಲ್ಲ, ಪಾಪದೊಡನೆ ಹೋರಾಟದಲ್ಲೂ ಅಲ್ಲ. ಹೀಗೆ ಸಾಧಿಸಿಯೇ ತಥಾಗತರು ಬುದ್ಧರಾಗಿರುವರು. ಆದರೆ ದೋಷವಿರುವುದು ಆಹಾರದ ನಿರಾಕರಣೆಯಲ್ಲಿ, ದೇಹದಂಡನೆಯಲ್ಲಿ ಹೊರತು, ಮಾರ್ಗವು ಸದಾ ಸಿದ್ಧ. ಹೇಗೆಂದರೆ ಒಬ್ಬನು ಚೀವರವನ್ನು ಧರಿಸುತ್ತಾನೆ, ಆದರೆ ಅದನ್ನು ಎಂದಿಗೂ ತೊಳೆಯಲಾರನು. ಅಲ್ಲಿ ದೋಷವಿರುವುದು ನೀರಿನದು ಅಲ್ಲ, ನೀರು ಸದಾ ಸಿದ್ಧವಾಗಿಯೇ ಇರುತ್ತದೆ. ಆದರೆ ಆತನದೇ ತಪ್ಪಾಗಿರುತ್ತದೆ. ಆದ್ದರಿಂದಲೇ ತಥಾಗತರು ಆ ಮಾರ್ಗಕ್ಕೆ ಪ್ರೇರಣೆ ನೀಡುತ್ತಾರೆ. ಏಕೆಂದರೆ ಮಾರ್ಗವು ಸದಾ ಸಿದ್ಧವಾಗಿರುತ್ತದೆ. ಸದಾ ಸರಿಯಾಗಿಯೇ ಇರುತ್ತದೆ.
ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ, ನೀವು ಹೇಳಿದ್ದಕ್ಕೆ ನಾನು ಒಪ್ಪುವೆನು.
5. ಹೀನಾಯಾವತ್ತನ ಪನ್ಹೊ (ಗೃಹಸ್ಥರು ಸಂಘ ಸೇರಬಹುದೆಂಬ ಪ್ರಶ್ನೆ)
ಭಂತೆ ನಾಗಸೇನ, ತಥಾಗತರ ಶಾಸನವು ಮಹತ್ತರವಾದುದು, ಸಾರಯುತವಾದುದು, ಅತ್ಯಮೂಲ್ಯವಾದುದು, ಶ್ರೇಷ್ಠವಾದುದು, ಉದಾತ್ತವಾದುದು, ಅನುಪಮವಾದುದು, ಪರಿಶುದ್ಧವಾದುದು, ವಿಮಲವಾದುದು, ಕಲೆರಹಿತವಾದುದು, ಸ್ಪಷ್ಟವಾದುದ್ದು ಮತ್ತು ದೋಷರಹಿತವಾದುದ್ದು. ಹೀಗಿರುವಾಗ ಗೃಹಸ್ಥರಿಗೆ ಸಂಘದೊಳಗೆ ಸೇರಿಸುವುದು ಸರಿಯಲ್ಲ. ಅವರು ಸೋತಪನ್ನರಾಗುವವರೆಗೂ ಅವರು ಗೃಹಸ್ಥರಾಗಿರುವುದೇ ಒಳಿತು. ನಂತರ ಅವರನ್ನು ಸೇರಿಸಿಕೊಳ್ಳಬಹುದು, ನಾನು ಏಕೆ ಹೀಗೆ ಹೇಳುತ್ತಿರುವೆ ಎಂದರೆ ಯಾವಾಗ ಈ ಮನುಷ್ಯರು ಪಾಪದಿಂದಲೇ ಇರುವಾಗ, ಇಷ್ಟೊಂದು ಪರಿಶುದ್ಧವಾದ ಧಮ್ಮಕ್ಕೆ, ಸಂಘಕ್ಕೆ ಹೇಗೆ ಸೇರಿಸಿಕೊಳ್ಳುವುದು, ಅವರು ಸೇರಿದರೂ ಪುನಃ ಗೃಹಸ್ಥರಾಗಿ ಮರಳಿ ಹಿಂದಿನ ಸ್ಥಿತಿಗಳನ್ನೇ ಹೊಂದುವರು. ಆಗ ಜನರು ಸಹಾ ಹೀಗೆ ಯೋಚಿಸಬಹುದು ಸಮಣ ಗೋತಮರ ಧಮ್ಮವು ವ್ಯರ್ಥವಾದುದು, ಅದನ್ನೇ ಈ ಜನರು ಸಹಾ ತೊರೆದಿರುವರು. ಆದ್ದರಿಂದಲೇ ನಾನು ಈ ರೀತಿ ಹೇಳುತ್ತಿದ್ದೇನೆ.(149)
ಊಹಿಸಿ ಓ ಮಹಾರಾಜ, ಒಂದು ಸ್ನಾನದ ತೊಟ್ಟಿಯಿರುತ್ತದೆ. ಅದರ ತುಂಬಾ ಪರಿಶುದ್ಧವಾದ ತಂಪಾದ ನೀರಿರುತ್ತದೆ. ಕೆಲವರು ಕೊಳಕಿನಿಂದ, ಕಲೆಗಳಿಂದ ಆವೃತವಾಗಿ, ಕೆಸರಿನಿಂದ ಕೂಡಿ, ಸ್ನಾನದ ತೊಟ್ಟಿಗೆ ಬರುತ್ತಾರೆ. ಆದರೆ ಸ್ನಾನ ಮಾಡದೆ ಹಾಗೇ ಹಿಂತಿರುಗುತ್ತಾರೆ, ಅವರ ಕೊಳೆಯು ಹಾಗೇ ಇರುತ್ತದೆ. ಈಗ ಜನರು ಆ ಸ್ನಾನದ ಕೊಳವನ್ನು ನಿಂದಿಸುವರೋ ಅಥವಾ ಕೊಳಕು ಮನುಷ್ಯರನ್ನು ನಿಂದಿಸುವರೋ?
ಭಂತೆ, ಕೊಳಕು ಮನುಷ್ಯರನ್ನೇ ಹೀಗೆ ನಿಂದಿಸುವರು: ಈ ಜನರು ಸ್ನಾನ ಮಾಡಲೆಂದೇ ಕೊಳದ ಬಳಿ ಬಂದು ಸಹಾ ಸ್ನಾನ ಮಾಡದೆ ಹಾಗೆಯೇ ಮಲಿನವಾಗಿಯೇ ಹಿಂತಿರುಗಿದ್ದಾರೆ. ಹೇಗೆತಾನೇ ನೀರಿನ ತೊಟ್ಟಿಯೇ ಮನುಷ್ಯರನ್ನು ಶುದ್ಧಿಗೊಳಿಸುತ್ತದೆ? ಜನರು ಸ್ನಾನ ಮಾಡದೆ ನೀರಿನ ತೊಟ್ಟಿಯೇ ಹೇಗೆ ದೋಷಿಯಾಗಬಲ್ಲದು?
ಓ ಮಹಾರಾಜ, ಅದೇರೀತಿಯಾಗಿ ತಥಾಗತರು ಸಹಾ ಸಧಮ್ಮದ ವಿಮುಕ್ತಿಯ ನೀರಿನ ತೊಟ್ಟಿ ನಿಮರ್ಿಸಿದ್ದಾರೆ. ಯಾವೆಲ್ಲಾ ಜೀವಿಗಳ ಚಿತ್ತವು ಪಾಪದಿಂದ ಕಲೆಯಾಗಿದೆಯೋ ಈ ವಿಮುಕ್ತಿ ಜಲದಲ್ಲಿ ಸ್ನಾನ ಮಾಡಿದರೆ ಪಾಪದಿಂದ ಮುಕ್ತರಾಗುತ್ತಾರೆ ಮತ್ತು ಇದರಲ್ಲಿ ಯಾರಾದರೂ ಸ್ನಾನ ಮಾಡಲು ಹೊರಟು, ಸ್ನಾನ ಮಾಡದೆ ಹಾಗೆಯೇ ಹಿಂತಿರುಗಿದರೆ ಆತನನ್ನು ಜನರು ಹೀಗೆ ನಿಂದಿಸುವರು: ಈ ಮನುಷ್ಯ ತಥಾಗತರ ಧಮ್ಮದಲ್ಲಿ ಪ್ರವೇಶಿಸಿಯೂ ಅದರಲ್ಲಿ ವಿಶ್ರಾಂತಿಯ ಸ್ಥಳ ಹುಡುಕಲಿಲ್ಲ, ಆತ ಮತ್ತೆ ಹಿಂದಿನ ಕೆಳಸ್ಥಿತಿಗೆ ಹಿಂತಿರುಗಿದ್ದಾನೆ. ಹೇಗೆತಾನೇ ತಥಾಗತರ ಧಮ್ಮವೇ ಆತನಿಗೆ ಶುದ್ಧೀಕರಿಸಬಹುದು, ಅದರೊಂದಿಗೆ ಜೀವನವನ್ನು ಹೊಂದಿಸಲಾರದದ್ದು ಅತನ ತಪ್ಪು, ಇದರಲ್ಲಿ ಧಮ್ಮದ (ವಿಧಾನದ) ತಪ್ಪೇನಿದೆ?
ಊಹಿಸಿ ಮಹಾರಾಜ, ಒಬ್ಬನು ಭಯಾನಕ ರೋಗಕ್ಕೆ ಗುರಿಯಾಗಿ ವೈದ್ಯನೊಬ್ಬನ ಬಳಿ ಬರುತ್ತಾನೆ. ಆ ಪ್ರವೀಣನಾದ ವೈದ್ಯನು ಆತನಿಗೆ ಫಲಕಾರಿಯಾದ ಗುಣಮುಖನನ್ನಾಗಿಸುವ ಔಷಧಿಗಳನ್ನು ತಿಳಿದಿರುತ್ತಾನೆ. ಆ ವೈದ್ಯನ ಸಲಹೆಯಂತೆ ಆತನು ಪಥಾಪಥ್ಯ ಮಾಡದೆ, ಔಷಧಿಗಳನ್ನು ಸೇವಿಸದೆ, ಹಿಂದಿನಂತೆ ರೋಗಿಷ್ಟನಾಗುತ್ತಾನೆ. ಈಗ ಜನರು ಆ ರೋಗಿಯನ್ನು ನಿಂದಿಸುವರೋ ಅಥವಾ ವೈದ್ಯನನ್ನು ನಿಂದಿಸುವರೋ?
ಭಂತೆ, ಆ ರೋಗಿಯನ್ನೇ ಹೀಗೆ ನಿಂದಿಸುತ್ತಾರೆ: ಹೇಗೆತಾನೇ ಆ ವೈದ್ಯನು ಸ್ವತಃ ಆ ರೋಗಿಯನ್ನು ಗುಣಮುಖನನ್ನಾಗಿಸಲಿಲ್ಲ, ಆ ರೋಗಿಯು ತಾನೇ ಗುಣಮುಖನಾಗಲು ಸಹಾಯ ಮಾಡದಿದ್ದರೆ ಆ ವೈದ್ಯನು ಸಹಾ ಏನುತಾನೇ ಮಾಡಬಲ್ಲನು?
ಅದೇರೀತಿಯಾಗಿ ಓ ಮಹಾರಾಜ, ತಥಾಗತರು ಸಹಾ ಸಂಜೀವಿನಿಯಂತಹ ಅಮೃತದಂತಹ ಔಷಧಿಯನ್ನು ಧಮ್ಮದ ಬಂಡಾರದಲ್ಲಿ ಇರಿಸಿದ್ದಾರೆ. ಅದರಿಂದಾಗಿ ಎಲ್ಲಾ ಪಾಪದ ರೋಗಗಳು ದೂರವಾಗುತ್ತದೆ. ತಥಾಗತರು ಹೀಗೆ ಆಹ್ವಾನಿಸುತ್ತಾರೆ: ಯಾವ ಜೀವಿಗಳು ಪಾಪದ ರೋಗಗಳಿಂದಾಗಿ ಭಾದೆಗೊಳಪಟ್ಟಿದ್ದಾರೋ, ಅವೆಲ್ಲವೂ ಅಮರತ್ವದ ಪಾನಿಯ ಸೇವಿಸಿ ತಮ್ಮ ರೋಗಗಳಿಂದ ಮುಕ್ತರಾಗಲಿ. ಈಗ ಯಾವ ಒಬ್ಬನು ಅಮೃತವನ್ನು ಸೇವಿಸದೆ ಮತ್ತೆ ತನ್ನ ಹಿಂದಿನ ಕೆಳಸ್ಥಿತಿಗಳಿಗೆ ಹೊರಟರೆ ಆತನಿಗೆ ಜನರು ಹೀಗೆ ನಿಂದಿಸುವರು: ಈ ಮನುಷ್ಯ ತಥಾಗತರ ಸಧಮ್ಮದಲ್ಲಿ ಪ್ರವೇಶಿಸಿದನು, ಆದರೂ ಸಹಾ ಅಲ್ಲಿ ಇರಲು ವಿಶ್ರಾಂತಿ ಸ್ಥಳ ಹುಡುಕಲಾರದೆ ಮತ್ತೆ ಕೆಳಸ್ಥಿತಿಗೆ ಹಿಂತಿರುಗಿದ್ದಾನೆ. ಹೇಗೆತಾನೇ ತಥಾಗತರ ಶಾಸನವೇ ಈತನಿಗೆ ಜೀವನ ಅದಕ್ಕೆ ತಕ್ಕಂತೆ ಹೊಂದಿಸಬಲ್ಲದು? ಇದರಲ್ಲಿ ಶಾಸನದ (ವಿಧಾನದ) ತಪ್ಪೇನಿದೆ?
ಅಥವಾ ಊಹಿಸಿ ಓ ಮಹಾರಾಜ, ಹಸಿದವನೊಬ್ಬನು ಮಹಾದಾನ ಮಾಡುತ್ತಿದ್ದಂತಹ, ಆಹಾರ ನೀಡುತ್ತಿದ್ದಂತಹ ಸ್ಥಳಕ್ಕೆ ಹೋಗುತ್ತಾನೆ, ಆತನು ಅಲ್ಲಿಗೆ ಹೋಗಿಯೂ ಸಹಾ ತಿನ್ನಲಾರದೆ ಹಾಗೇ ಹಿಂತಿರುಗಿ ಹಸಿವಿನಿಂದ ಒದ್ದಾಡುತ್ತಿದ್ದರೆ ಜನರು ನಿಂದಿಸುವುದು ಆ ಉಪವಾಸಿಯನ್ನೋ ಅಥವಾ ಆಹಾರ ದಾನಿಯನ್ನೋ?
ಭಂತೆ, ಆ ಉಪವಾಸಿಯನ್ನೇ ಹೀಗೆ ನಿಂದಿಸುವರು: ಈ ಮನುಷ್ಯ ಹಸಿವಿನಿಂದ ಪೀಡಿತನಾಗಿರುವಾಗಲೂ ಆತನಿಗೆ ಆಹಾರ ಬಡಿಸಿರುವಾಗಲು ಸೌಜನ್ಯ ತೋರಿಸಿಯೂ ಸಹಾ, ಏನನ್ನೂ ತಿನ್ನದೆ ಹಸಿವಿನಿಂದ ಹಾಗೆ ಹಿಂತಿರುಗಿದ್ದಾನೆ, ಹೇಗೆ ತಾನೇ ಆಹಾರವೇ ಸ್ವತಃ ಆತನ ಹೊಟ್ಟೆಗೆ ಇಳಿದೀತು? ಇದರಲ್ಲಿ ಆಹಾರದ ದೋಷವೇನಿದೆ ಅಥವಾ ದಾನಿಯ ದೋಷವೇನಿದೆ?
ಓ ಮಹಾರಾಜ, ತಥಾಗತರು ಅತ್ಯಂತ ಶ್ರೇಷ್ಠವಾದ, ಒಳಿತಾದ, ಶುಭಕರವಾದ, ಸ್ವಾದಿಷ್ಟಮಯವಾದ ಅಮರತ್ವದ ಭೋಜನ ಬಡಿಸಿದ್ದಾರೆ, ಅತಿಶಯವಾದ ಅನಿತ್ಯದ ಸಿಹಿಯು ಆ ಧಮ್ಮ ಭೋಜನದಲ್ಲಿದೆ, ಈ ರೀತಿ ಇಚ್ಛಿಸಿಯೇ ಬಡಿಸಲಾಗಿದೆ ಯಾವೆಲ್ಲಾ ಅರಿವುಳ್ಳ ಜೀವಿಗಳು ಪಾಪದಿಂದ ಪೀಡಿತವಾಗಿವೆಯೋ, ಯಾವ ಹೃದಯಗಳು ತೀವ್ರ ಬಯಕೆಗಳಿಂದ ಬಾಯಾರಿದೆಯೋ, ಹಸಿದಿವೆಯೋ, ಅವೆಲ್ಲವೂ ಈ ಆಹಾರದಿಂದ ಸೇವಿಸಿ ತೃಪ್ತರಾಗಿ ಭವಿಷ್ಯದಲ್ಲಿ ಯಾವ ಲೋಕಗಳಲ್ಲಿಯೂ ದುಃಖದಿಂದ ಪಾರಾಗಲಿ ಮತ್ತು ಆಗ ಯಾರಾದರೊಬ್ಬನು, ಆ ಆಹಾರವನ್ನು ಸೇವಿಸದೆಯೇ ತೀವ್ರ ಹಸಿವು, ಬಾಯಾರಿಕೆಗಳಿಂದ ಕೂಡಿಕೊಂಡೇ ಮತ್ತೆ ತನ್ನ ಕೆಳಹಂತಕ್ಕೆ ಹಿಂತಿರುಗಿದರೆ ಆತನಿಗೆ ಜನರು ಹೀಗೆ ನಿಂದಿಸುವರು: ಈ ಮನುಷ್ಯ ತಥಾಗತರ ಧಮ್ಮಕ್ಕೆ ಪ್ರವೇಶಿಸಿಯೂ ಸಹಾ ಅದರಂತೆ ಶುದ್ಧಿಯಾಗದವನು ಆಗಿದ್ದಾನೆ. ಇದರಲ್ಲಿ ಧಮ್ಮದ ದೋಷವೇನಿದೆ? ಎಂದುಕೊಳ್ಳುವುದಿಲ್ಲವೇ?
ಓ ಮಹಾರಾಜ, ಒಂದುವೇಳೆ ತಥಾಗತರು ಸೋತಾಪನ್ನರಿಗೆ ಮಾತ್ರ ಸಂಘಕ್ಕೆ ಸ್ವೀಕರಿಸಲಾರಂಭಿಸಿದರೆ ಆಗ ಇಡೀ ಜಗತ್ತಿಗೆ ಪಾಪದಿಂದ ಮುಕ್ತರಾಗಲು, ಚಿತ್ತಪರಿಶುದ್ಧತೆ ಹೊಂದಲು ಪ್ರಯೋಜನವಾಗುವುದಿಲ್ಲ. ಆಗ ಯಾವುದೇ ಅಭಿನಿಷ್ಕ್ರಮಣ (ತ್ಯಾಗ) ವಾಗುವುದಿಲ್ಲ, ಇದು ಹೇಗಿರುತ್ತದೆಂದರೆ ಒಬ್ಬನು ನೂರಾರು ಕಾಮರ್ಿಕರೊಂದಿಗೆ ಸ್ನಾನದ ಕೊಳವನ್ನು ನಿಮರ್ಿಸುತ್ತಾನೆ ಹಾಗು ಬಹಿರಂಗವಾಗಿ ಈ ಘೋಷಣೆ ಮಾಡುತ್ತಾನೆ: ಗಲೀಜಾಗಿರುವ (ಕೊಳಕಾಗಿರುವ) ಯಾರೂ ಸಹಾ ಇಲ್ಲಿ ಕೊಳದಲ್ಲಿ ಇಳಿಯಬೇಡಿ, ಯಾರ ದೂಳು ಹಾಗು ಕೊಳಕು ತೊಳೆದು ಹೋಗಿದೆಯೋ, ಯಾರು ಶುದ್ಧರೋ, ಶುಚಿಯೋ, ಕಲೆರಹಿತರೋ ಅವರು ಮಾತ್ರ ಕೊಳದಲ್ಲಿ ಇಳಿಯುವಂತಾಗಲಿ. ಈಗ ಹೇಳಿ ಓ ಮಹಾರಾಜ, ಆ ಸ್ನಾನ ಕೊಳವು ಪರಿಶುದ್ಧರಿಗೆ ಹಾಗು ಕಲೆರಹಿತರಿಗೆ ಪ್ರಯೋಜನಕಾರಿಯೇ?
ಖಂಡಿತವಾಗಿ ಇಲ್ಲ ಭಂತೆ, ಯಾವ ಲಾಭವನ್ನು ಅವರು ಸ್ನಾನ ಕೊಳದಿಂದ ಪಡೆಯಲು ಇಚ್ಛಿಸಿದ್ದರೋ ಅದನ್ನು ಈ ಮೊದಲೇ ಬೇರೆಡೆ ಪಡೆದಿದ್ದಾರೆ. ಹೀಗಾಗಿ ಆ ಕೊಳವು ಯಾವ ಪ್ರಯೋಜನಕ್ಕಾಗಿ?
ಅದೇರೀತಿಯಾಗಿ ಓ ಮಹಾರಾಜ, ತಥಾಗತರೇನಾದರೂ ಕೇವಲ ಸೋತಪನ್ನರಿಗೆ ಮಾತ್ರ ಸಂಘಕ್ಕೆ ಸೇರಿಸಿಕೊಳ್ಳುತ್ತಿದ್ದರೆ, ಆಗ ಅವರು ಪಡೆಯಬೇಕಿದ್ದ ಲಾಭವು ಆಗಲೇ ಗಳಿಸಿದ್ದಾಗಿರುತ್ತದೆ. ಹೀಗಾಗಿ ಅಭಿನಿಷ್ಕ್ರಮಣ (ಗೃಹ ತೊರೆದು ಹೋಗುವ)ದ ಲಾಭವಾದರೂ ಏನು?
ಊಹಿಸಿ ಮಹಾರಾಜ, ವೈದ್ಯನೊಬ್ಬನು, ಋಷಿಭಕ್ತನು, ಶ್ರುತಮಂತ್ರದಾರನು, ಪ್ರಾಯೋಗಿಕ ವೈದ್ಯನು, ನಿಷ್ಣಾತನು, ಪರಿಣಿತನು ಕೆಲವು ಮೂಲಿಕೆಗಳನ್ನು ಹಿಡಿದು ಹೀಗೆ ಘೋಷಿಸುತ್ತಾನೆ: ಕೇಳಿರಿ, ಕೇಳಿರಿ, ಯಾರಿಗೆ ರೋಗವಿದೆಯೋ ಅವರು ನನ್ನ ಬಳಿಗೆ ಬಾರದಿರಲಿ, ಯಾರು ಆರೋಗ್ಯವಂತರೋ ಮತ್ತು ಬಲಿಷ್ಠರೋ ಅವರು ಮಾತ್ರ ನನ್ನ ಬಳಿ ಬನ್ನಿರಿ. ನನ್ನಲ್ಲಿ ಸರ್ವರೋಗ ನಿವಾರಕ ಔಷಧಿಯಿದೆ. ಈಗ ಹೇಳಿ ಓ ರಾಜ, ಯಾರು ರೋಗದಿಂದ ಮುಕ್ತರೋ, ಆರೋಗ್ಯಶಾಲಿಗಳೋ ಅವರು ಆ ವೈದ್ಯನನ್ನು ಕಾಣುವರೇ?
ಖಂಡಿತವಾಗಿ ಇಲ್ಲ ಭಂತೆ, ಯಾವುದನ್ನು ಪಡೆಯಲು ಆ ವೈದ್ಯನ ಬಳಿಗೆ ಹೋಗುವರೋ ಅದನ್ನು ಆಗಲೇ ಬೇರೆಡೆ ಪಡೆದಿದ್ದಾರೆ, ರೋಗಿಗಳನ್ನು ಬಯಸದ ಆ ವೈದ್ಯನಿಂದೇನು ಪ್ರಯೋಜನ.
ಅದೇರೀತಿಯಲ್ಲಿ ಓ ರಾಜ, ತಥಾಗತರು ಕೇವಲ ಸೋತಪನ್ನರಿಗೆ ಸಂಘಕ್ಕೆ ಪ್ರವೇಶ ಮಾಡುವ ಆಜ್ಞೆ ನೀಡಿದರೆ, ಯಾವ ಲಾಭಕ್ಕಾಗಿ ಸಂಘಕ್ಕೆ ಸೇರುವರೋ ಅದನ್ನು ಆಗಲೇ ಪಡೆದಿರುತ್ತಾರೆ. ಹೀಗಾಗಿ ಅಭಿನಿಷ್ಕ್ರಮಣ (ಗೃಹತ್ಯಾಗ)ದಿಂದ ಅವರಿಗೆ ಏನು ಲಾಭವಿದೆ?
ಮತ್ತೆ ಓ ಮಹಾರಾಜ, ಸಂಘಕ್ಕೆ ಸೇರಿಯೂ ವಿಮುಖರಾಗಿ, ಯಾರು ಮತ್ತೆ ಗೃಹಸ್ಥರಾಗಿರುವರೋ, ಕೆಳಹಂತಕ್ಕೆ ಪುನರಾಗಮನ ಮಾಡಿದ್ದಾರೋ, ಅವರು ಪಂಚ ಅತುಲನೀಯ ಗುಣಗಳನ್ನು ದಶರ್ಿಸುವಂತಹವರಾಗುತ್ತಾರೆ, ಯಾವುದು ಐದು? ಅವರು ಶ್ರೇಷ್ಠ ಸ್ಥಿತಿಯು ಎಷ್ಟು ಮಹತ್ತರವಾದುದು, ಎಷ್ಟು ಪರಿಶುದ್ಧವಾದುದು, ಎಷ್ಟು ಪಾಪವಿಮುಖವಾದುದು, ಸಾಕ್ಷಾತ್ಕರಿಸಲು ಎಷ್ಟು ಕಷ್ಟಕರವಾದುದು, ಎಷ್ಟೆಲ್ಲಾ ಸಂಯಮ ನಿಯಮಗಳನ್ನು ಗಮನಿಸಬೇಕಿತ್ತು ಎಂದೆಲ್ಲಾ ದಶರ್ಿಸಿರುತ್ತಾರೆ.
ಮತ್ತೆ ಯಾವರೀತಿಯಲ್ಲಿ ಶ್ರೇಷ್ಠ ಸ್ಥಿತಿಯು ಮಹತ್ತರವಾದ ವೈಭವಯುತವಾದುದು? ಇಲ್ಲಿ ಓ ಮಹಾರಾಜ, ಒಬ್ಬನು ಬಡವನಾಗಿರುತ್ತಾನೆ, ಹೀನವರ್ಗದಲ್ಲಿ ಹುಟ್ಟಿರುತ್ತಾನೆ, ವಿಶೇಷತೆಯಿಂದ ಕೂಡಿರುವುದಿಲ್ಲ. ಪ್ರಜ್ಞಾದಲ್ಲೂ ಕೊರತೆಯಿಂದಿರುತ್ತಾನೆ, ಹೀಗಿರುವ ಆತನು, ಸಂಘದ ಬೃಹತ್ ಸಾಮ್ರಾಜ್ಯಕ್ಕೆ ಶ್ರೇಷ್ಠ ಅನುಭವಗಳ ಲೋಕಕ್ಕೆ ಪ್ರವೇಶಿಸುತ್ತಾನೆ. ಆದರೆ ಬಹುಕಾಲ ನಿಲ್ಲಲಾಗದೆ ಹೊರಹಾಕಲ್ಪಡುತ್ತಾನೆ, ತನ್ನ ಕಾಂತಿಯಿಂದ ಕಳೆಗುಂದುತ್ತಾನೆ, ತನ್ನ ಭವ್ಯತೆಗೆ ಆಧಾರ ನೀಡಲು ಅಸಮರ್ಥನಾಗುತ್ತಾನೆ. ಏಕೆ ಹೀಗೆ? ಏಕೆಂದರೆ ಶ್ರೇಷ್ಠತ್ವದಿಂದ. ಹೀಗಾಗಿ ಓ ಮಹಾರಾಜ, ಯಾರೆಲ್ಲರೂ ಸಾಮಾನ್ಯರೋ, ಪುಣ್ಯರಹಿತರೋ, ಪ್ರಾಜ್ಞಾರಹಿರೋ ಅವರು ಗೃಹತ್ಯಾಗ ಮಾಡಿಯೂ ಸಂಘಕ್ಕೆ ಸೇರಿದರೂ ಅವರು ಹೊರಹಾಕಲ್ಟಡುತ್ತಾರೆ, ಬೀಳುತ್ತಾರೆ, ಕಾಂತಿಹೀನರಾಗುತ್ತಾರೆ, ಮತ್ತೆ ತಮ್ಮ ಕೆಳಹಂತಕ್ಕೆ ಹೋಗುತ್ತಾರೆ. ಏಕೆಂದರೆ ಅವರು ಜಿನಶಾಸನವನ್ನು ಪಾಲಿಸಲು ಅಸಮರ್ಥರಾಗಿದ್ದಾರೆ, ಧಮ್ಮಕ್ಕೆ ಅಂತಹ ಮಹತ್ತರವಾದ ಸ್ಥಾನವಿರುವುದರಿಂದಾಗಿ, ಅವರು ಮಹತ್ತರವಾದ ಬೃಹತ್ ವೈಭವ ದಶರ್ಿಸುತ್ತಾರೆ.
ಮತ್ತೆ ಆ ಸ್ಥಿತಿಯು ಪ್ರತಿ ಕಲೆಗಳಿಂದ ಪರಿಶುದ್ಧವಾಗಿದೆ ಎಂದು ಅವರು ಹೇಗೆ ದಶರ್ಿಸುತ್ತಾರೆ? ಓ ಮಹಾರಾಜ, ನೀರು ಕಮಲದ ಮೇಲೆ ಬಿದ್ದು, ಹರಿದುಹೋಗುತ್ತದೆ, ಚದುರಿಹೋಗುತ್ತದೆ, ಮಾಯವಾಗುತ್ತದೆ, ಅದಕ್ಕೆ ಅಂಟಿಸುವುದಿಲ್ಲ ಮತ್ತು ಏಕೆ ಹೀಗೆ? ಏಕೆಂದರೆ ಕಮಲವು ಪ್ರತಿಭಾಗದಿಂದಲೂ ಪರಿಶುದ್ಧವಾಗಿರುತ್ತದೆ. ಓ ಮಹಾರಾಜ, ಯಾರೆಲ್ಲಾ ಮೋಸದಿಂದ, ಕುಟಿಲತೆಯಿಂದ, ವಂಚನೆಯಿಂದ, ಮಿಥ್ಯಾದೃಷ್ಟಿಯಿಂದ ಕೂಡಿಯೂ ಸಹಾ ಜಿನಶಾಸನದಲ್ಲಿ ಸೇರಿರುವರೋ ಅವರೆಲ್ಲರೂ ತಮ್ಮನ್ನು ಬದಲಿಸಿ ಕೊಳ್ಳದಿದ್ದರೆ ಬಹುಕಾಲ ಉಳಿದುಕೊಳ್ಳದೆ ಪರಿಶುದ್ಧತೆಯಿಂದ, ಕಲೆರಹಿತತೆಯಿಂದ ಸ್ವಚ್ಛತೆಯಿಂದ ಮತ್ತು ದೋಷರಹಿತತೆಯಿಂದ ಪರಮೋಚ್ಛ ಉತ್ಕೃಷ್ಟ ಧಮ್ಮದಿಂದ ನಿಲ್ಲಲಾರರು, ಅಂಟಲಾರರು, ಅವರು ತಮ್ಮ ಹಳೆಯ ಕೆಳಸ್ಥಿತಿಗೆ ಹಿಂತಿರುಗುತ್ತಾರೆ. ಏಕೆ ಹೀಗೆ? ಏಕೆಂದರೆ ಜಿನಶಾಸನವು ಪ್ರತಿ ಕಲೆಗಳಿಂದ ಪರಿಶುದ್ಧವಾಗಿದೆ. ಆದ್ದರಿಂದಾಗಿ ಓ ಮಹಾರಾಜ, ಅವರು ಪ್ರತಿ ಕಲೆಗಳಿಂದ ಪರಿಶುದ್ಧವಾದ ಸ್ಥಿತಿಯನ್ನು ದಶರ್ಿಸುತ್ತಾರೆ.
ಮತ್ತೆ ಅವರಿಗೆ ಪಾಪವು ಕುಶಲದೊಂದಿಗೆ ಇರುವದು ಅಸಾಧ್ಯವೆಂಬುದು ಹೇಗೆ ದರ್ಶನವಾಗುತ್ತದೆ? ಓ ಮಹಾರಾಜ, ಮಹಾ ಸಮುದ್ರವು ಹೆಣಗಳೊಂದಿಗೆ ಇರಲು ಸಹಿಸುವುದಿಲ್ಲ. ಮತ್ತೆ ಯಾವಾಗಲೇ ಆಗಲಿ, ಸಮುದ್ರದಲ್ಲಿ ಹೆಣ ಬಿದ್ದರೆ ಅದು ತಕ್ಷಣ ದಡಕ್ಕೆ ಎಸೆದುಬಿಡುವುದು. ಏಕೆ? ಸಮುದ್ರವು ಬೃಹತ್ ಜೀವಿಗಳ ವಾಸಸ್ಥಳವಾಗಿದೆ. ಹಾಗೆಯೇ ಓ ಮಹಾರಾಜ, ಯಾವಾಗಲೇ ಆಗಲಿ, ಪಾಪಿಗಳು, ಮೂರ್ಖರು, ಉತ್ಸಾಹಹೀನರು, ಕ್ಷೊಭೆಗೊಂಡವರು, ಅಪರಿಶುದ್ಧರು ಮತ್ತು ದುಶ್ಶೀಲರು ಜಿನಶಾಸನದಲ್ಲಿ ಸೇರಿದರೂ ಸಹಾ ಅವರು ಅದನ್ನು ತ್ಯಜಿಸುವ ಮುನ್ನವೇ ಅದರಲ್ಲಿ ಬಹಳಕಾಲ ಉಳಿಯಲಾರರು. ಏಕೆಂದರೆ ಅರಹಂತರಂತಹ ಬೃಹತ್ ಆರ್ಯರು ವಾಸಿಸುವುದರಿಂದಾಗಿ ಅವರು ಕೆಳಸ್ಥಿತಿಗೆ ಹಿಂತಿರುಗುವರು ಮತ್ತು ಏಕೆ ಹೀಗೆ? ಏಕೆಂದರೆ ಅಧಮರ್ಿಗಳು ಜಿನಶಾಸನದಲ್ಲಿ ವಾಸಿಸುವುದು ಅಸಾಧ್ಯವಾಗಿದೆ. ಇದು ಹೀಗೆ ಇದೆ ಓ ಮಹಾರಾಜ, ಕುಶಲದೊಂದಿಗೆ ಪಾಪವಿರಲಾರದು ಎಂದು ಅವರು ದಶರ್ಿಸುತ್ತಾರೆ.
ಮತ್ತೆ ಅವರು ಅರಿಯಲು ಹಾಗು ಸಾಕ್ಷಾತ್ಕರಿಸಲು ಎಷ್ಟೊಂದು ಕಷ್ಟಕರವಾದುದೆಂದು ಅವರು ಹೇಗೆ ದಶರ್ಿಸುತ್ತಾರೆ?
ಓ ಮಹಾರಾಜ, ಹೇಗೆ ಒಡ್ಡೊದ್ದಾದ, ಶಿಕ್ಷಣ ಪಡೆಯದ, ದಡ್ಡನಾದ, ಕೌಶಲ್ಯರಹಿತರು ಬಿಲ್ವಿದ್ಯೆಯಲ್ಲಿ ಉನ್ನತ ಸಾಹಸಗಳನ್ನು ತೋರಿಸಲಾರರು, ಹೇಗೆಂದರೆ ತಲೆಕೂದಲನ್ನು ಬಾಣವೊಂದರಲ್ಲಿ ಸೀಳುವಿಕೆಯಂತಹದನ್ನು ಮಾಡಲಾರರು. ಬದಲಾಗಿ ಗುರಿಯನ್ನು ತಪ್ಪುವರು, ಗುರಿಗೆ ದೂರವಾಗಿ ಬಾಣವನ್ನು ಬಿಡುವರು, ಏಕೆ ಹೀಗೆ? ಏಕೆಂದರೆ ಕುದುರೆಯ ಕೂದಲಿನ ಸೂಕ್ಷ್ಮತೆ ಮತ್ತು ಪರಮಸೂಕ್ಷ್ಮತೆಯಿಲ್ಲದಿರುವುದು. ಹಾಗೆಯೇ ಓ ಮಹಾರಾಜ, ಯಾವಾಗ ಮೂರ್ಖರು, ದಡ್ಡರು, ವಿಕಲಾಂಗರು, ಮಂದಮತಿಗಳು ಗೃಹತ್ಯಾಗ ಮಾಡಿ ಜಿನಶಾಸನದಲ್ಲಿ ಬಂದರು ಸಹಾ, ನಾಲ್ಕು ಸತ್ಯಗಳ ಪರಮಸೂಕ್ಷ್ಮತೆಗಳನ್ನು ಹಿಡಿಯುವಲ್ಲಿ, ಗ್ರಹಿಸುವಲ್ಲಿ ಅಸಮರ್ಥರಾಗುತ್ತಾರೆ. ಅದರಿಂದ ಹೊರಗೆ ಇರುತ್ತಾರೆ. ಹೀಗಾಗಿ ಮರಳಿ ತಮ್ಮ ಕೆಳಸ್ಥಿತಿಗೆ ಮರಳುತ್ತಾರೆ. ಏಕೆ ಹೀಗೆ? ಏಕೆಂದರೆ ನಾಲ್ಕು ಆರ್ಯಸತ್ಯಗಳ ಪರಮಸೂಕ್ಷ್ಮತೆ ಅರಿಯಲು ಅವರಿಗೆ ಕಷ್ಟಕರವಾಗಿರು ವುದರಿಂದ. ಹೀಗೆ ಅವರು ಅರಿಯುವಿಕೆಯ ಕಷ್ಟವನ್ನು ದಶರ್ಿಸುತ್ತಾರೆ.
ಮತ್ತೆ ಅವರು ಹೇಗೆ ಎಷ್ಟೆಲ್ಲಾ ನಿಯಮಗಳನ್ನು ಗಮನಿಸಬೇಕಿತ್ತು ಎಂದು ದಶರ್ಿಸುತ್ತಾರೆ? ಹೇಗೆಂದರೆ ಓ ಮಹಾರಾಜ, ಒಬ್ಬನು ಮಹಾಯುದ್ಧವು ನಡೆಯುವಲ್ಲಿ ಹೋಗುತ್ತಾನೆ. ಆಗ ಆತನು ಸುತ್ತಲು ಸುತ್ತುವರೆದಿರುವ ಶತ್ರು ಸೈನ್ಯವನ್ನು ಕಾಣುತ್ತಾನೆ, ತನ್ನೆಡೆ ಮುನ್ನುಗ್ಗುತ್ತಿರುವ ಸೈನ್ಯ ನೋಡುತ್ತಾನೆ, ಅದನ್ನು ಕಂಡು ಭೀತನಾಗಿ ಆತನು ಪಲಾಯನ ಮಾಡುತ್ತಾನೆ, ಏಕೆ ಹೀಗೆ? ಏಕೆಂದರೆ ಅಂತಹ ಭೀಕರ ಮಹಾಯುದ್ಧದಲ್ಲಿ ಭಯದಿಂದ ತನ್ನನ್ನು ಕಾಪಾಡಿಕೊಳ್ಳಲು ಹಾಗೆ ಮಾಡುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರೆಲ್ಲಾ ಕುಟಿಲರೊ, ಅಸಂಯಮಿಗಳೋ, ನಿರ್ಲಜ್ಜರೊ, ಮೂರ್ಖರೊ, ದ್ವೇಷಯುಕ್ತರೋ, ಚಂಚಲರೋ, ಅಸ್ಥಿರರೋ, ಸ್ವಾಥರ್ಿಗಳೋ, ದಡ್ಡರೋ, ಹೀಗಿರುವವರು ಜಿನಶಾಸನದಲ್ಲಿ ಪಬ್ಬಜ್ಜ ಸ್ವೀಕರಿಸುತ್ತಾರೆ. ನಂತರ ಅವರು ಅದನ್ನೆಲ್ಲಾ ಪಾಲಿಸಲು ಅಸಮರ್ಥರಾಗಿ, ಸೋಲೊಪ್ಪಿಕೊಂಡು ಪಲಾಯನ ಮಾಡುತ್ತಾರೆ, ಹಿಂತಿರುಗುತ್ತಾರೆ, ಅಲ್ಪಕಾಲದಲ್ಲಿಯೇ ತಮ್ಮ ಕೆಳಸ್ಥಿತಿಗೆ ಮರಳುತ್ತಾರೆ ಮತ್ತು ಏಕೆ ಹೀಗೆ? ಏಕೆಂದರೆ ಹಲವಾರು ವಿಧದ ಸಂಯಮಗಳನ್ನು, ನಿಯಮಗಳನ್ನು ಜಿನಶಾಸನದಲ್ಲಿ ಪಾಲಿಸಬೇಕಾಗಿರುವುದರಿಂದಾಗಿ, ಹೀಗೆ ಓ ಮಹಾರಾಜ, ಅವರು ಎಷ್ಟೇ ನಿಯಮಗಳನ್ನು ಪಾಲಿಸಬೇಕಿತ್ತು ಎಂದು ದಶರ್ಿಸುತ್ತಾರೆ.
ಓ ಮಹಾರಾಜ, ಹೂಗಿಡಗಳಲ್ಲಿ ದ್ವಿ-ಮಲ್ಲಿಗೆಯು ಶ್ರೇಷ್ಠವಾಗಿರುವಂತೆ, ಕೀಟಗಳಿಂದಾಗಿ, ಅವು ಪುಡಿಯಾಗಿ ಅಪರೂಪಕ್ಕೊಮ್ಮೆ ಬಿದ್ದರೂ ಅದಕ್ಕೆ ಅದರಿಂದ ಅದರ ಗೌರವಕ್ಕೆ ಕುಂದಿಲ್ಲದಂತೆ, ಆಗಲೂ ಸಹಾ ಆ ಗಿಡವು ಸರ್ವದಿಕ್ಕಿನಲ್ಲೂ ತನ್ನ ಪರಿಮಳ ಪ್ರಸರಿಸುವಂತೆ, ಅದೇರೀತಿಯಾಗಿ ಓ ಮಹಾರಾಜ, ಯಾರೆಲ್ಲರೂ ಜಿನಶಾಸನದಲ್ಲಿ ಇರಲಾರದೆ, ಆ ಶಾಸನ ಬಿಟ್ಟು ಮತ್ತೆ ಕೆಳಸ್ಥಿತಿಗೆ ಮರಳಿರುವರೋ, ಆದರೂ ಅದರಿಂದಾಗಿ ಜಿನಶಾಸನಕ್ಕೆ ಅದರಿಂದಾಗಿ ಯಾವುದೇ ಘನತೆಗೆ ಕುಂದಾಗುವುದಿಲ್ಲ. ಜಿನಶಾಸನದಲ್ಲಿರುವ ಎಲ್ಲರೂ ಸಮ್ಮಾಜೀವನದ ಉನ್ನತ ಪರಿಮಳದಿಂದಾಗಿ, ಇಡೀ ಲೋಕಗಳಿಗೆ ಆನಂದ ನೀಡಬಲ್ಲವರಾಗಿದ್ದಾರೆ.
ಗುಲಾಬಿ ವರ್ಣದ ಮತ್ತು ಆರೋಗ್ಯಕರ ಭತ್ತದ ಮಧ್ಯೆ ಕರುಂಭಕ ಎಂಬ ಅಪರೂಪದ ಅಕ್ಕಿ ಗಿಡವು ಉದಯಿಸುತ್ತದೆ. ಆದರೆ ಆಗಾಗ್ಗೆ ಅದು ಕಳೆಗುಂದುತ್ತದೆ. ಆದರೆ ಹೀಗೆ ಕಳೆಗುಂದಿದರೂ ಆ ಗುಲಾಬಿ, ಅಕ್ಕಿ ಗಿಡಕ್ಕೆ ತನ್ನ ಸ್ಥಾನಕ್ಕೆ ಚ್ಯುತಿ ಉಂಟಾಗದು. ಅದು ರಾಜರಿಗೆ ಪ್ರಿಯವಾದ ರಾಜ ಭೋಜ್ಯವಾಗುತ್ತದೆ. ಓ ಮಹಾರಾಜ, ಅದೇರೀತಿಯಲ್ಲಿ ಯಾರೆಲ್ಲರೂ ಜಿನಶಾಸನಕ್ಕೆ ಸೇರಿಯು ಅಲ್ಲಿ ಇರಲಾರದೆ ಪುನಃ ಹಿಂದಿನ ಸ್ಥಿತಿಗೆ ಹೊರಟರೆ ಅದರಿಂದಾಗಿ ಜಿನಶಾಸನದ ಘನತೆಗೆ ಸ್ವಲ್ಪವೂ ಕುಂದುಬರದು.
ಓ ಮಹಾರಾಜ, ಶ್ರೇಷ್ಠವಾದ ಮಣಿರತ್ನವು ಕಾಠಿಣ್ಯದಲ್ಲಿ ಉದಯಿಸುತ್ತದೆ. ಆದರೆ ಕಾಠಿಣ್ಯವಾಗಿ ಗೋಚರಿಸಿದರೂ ಆ ಮಣಿರತ್ನದ ಘನತೆಗೆ ಕುಂದು ಇಲ್ಲ. ಬದಲಾಗಿ ಆ ರತ್ನದ ಪರಿಶುದ್ಧತೆಯಿಂದಾಗಿ ಜನರು ಆನಂದಿತರಾಗುತ್ತಾರೆ. ಅದೇರೀತಿಯಾಗಿ ಓ ಮಹಾರಾಜ, ಯಾರೆಲ್ಲರು ಜಿನಶಾಸನಕ್ಕೆ ಸೇರಿಯೂ ಅಲ್ಲಿರಲಾರದೆ, ಅದನ್ನು ತ್ಯಜಿಸಿ ಪುನಃ ಕೆಳಸ್ಥಿತಿಗೆ ಹೋದರೂ ಸಹಾ ಜಿನಶಾಸನಕ್ಕೆ ಅದರಿಂದೇನೂ ಘನತೆ ಕಡಿಮೆಯಾಗುವುದಿಲ್ಲ. ಬದಲಾಗಿ ಪರಿಶುದ್ಧವಾಗಿಯೇ ಸಂಘವಿದೆಂದು ದೇವಮಾನವರಲ್ಲಿ ಆನಂದಪಡುತ್ತಾರೆ.
ಓ ಮಹಾರಾಜ, ಕೆಂಪು ಶ್ರೀಗಂಧವು ಗಂಧದಲ್ಲೇ ಶ್ರೇಷ್ಠ. ಆದರೂ ಸಹಾ ಅದರ ಕೆಲವು ಭಾಗವು ಕೊಳೆತು ಗಂಧರಹಿತವಾಗಿರುತ್ತದೆ, ಆದರೆ ಅದರಿಂದೇನೂ ಅದರ ಘನತೆಗೆ ಕುಂದುಬಾರದು, ಮಿಕ್ಕ ಭಾಗಗಳಿಂದ ಹೊರಟ ದಿವ್ಯಪರಿಮಳವು ಸರ್ವ ದಿಕ್ಕಿಗೂ ವ್ಯಾಪಿಸಿ ಆನಂದ ಹರಡುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರೆಲ್ಲಾ ಗೃಹತ್ಯಾಗ ಮಾಡಿ ಜಿನಶಾಸನ ಸೇರಿದರೂ ಸಹಾ ಅಲ್ಲಿರಲಾರದೆ, ಪುನಃ ಹಿಂದಿನ ಗೃಹಸ್ಥಿತಿಗೆ ಮರಳಿದರೂ ಅದರಿಂದೇನೂ ಜಿನಶಾಸನದ ಗೌರವಕ್ಕೆ, ಘನತೆಗೆ ಧಕ್ಕೆ ಉಂಟಾಗಲಾರದು. ಹೇಗೆ ಶ್ರೀಗಂಧದ ಉಳಿದ ಭಾಗವು ದಿವ್ಯ ಪರಿಮಳ ಬೀರಿ ಹಬ್ಬಿ ವ್ಯಾಪಿಸುವುದೋ ಹಾಗೆಯೇ ಮಿಕ್ಕ ಉತ್ತಮ ಭಿಕ್ಷುಗಳಿಂದಾಗಿ ದೇವತೆಗಳ ಮತ್ತು ಮಾನವ ಹಿತಸುಖಕ್ಕೆ ಕಾರಣವಾಗುತ್ತದೆ.
ಬಹುಚೆನ್ನಾಗಿದೆ ಭಂತೆ ನಾಗಸೇನ, ಒಂದರ ನಂತರ ಇನ್ನೊಂದು ಉಚಿತವಾದ ಉಪಮೆಗಳನ್ನು ನೀಡುತ್ತ ಜಿನಶಾಸನದ ಮಹೋನ್ನತೆಯನ್ನು ನಿದರ್ೊಷತೆಯನ್ನು ಬಹು ಸುಂದರವಾಗಿ ವಿವರಿಸಿದಿರಿ.
6. ಅರಹಂತ ವೇದನಾ ವೆದಿಯನ ಪನ್ಹೊ (ಅರಹಂತರ ವೇದನೆ ಪ್ರಶ್ನೆ)
ಭಂತೆ ನಾಗಸೇನ, ನೀವೂ (ಭಿಕ್ಷುಗಳು) ಹೇಳುವಿರಿ: ಅರಹಂತರು ಶಾರೀರಿಕ (ಕಾಯಿಕ) ವೇದನೆಗಳನ್ನು ಮಾತ್ರ ಅನುಭವಿಸುತ್ತಾರೆ ಹೊರತು ಚೇತಸಿಕಾ (ಮಾನಸಿಕ) ವೇದನೆಗಳೇನಲ್ಲ. ಇದು ಹೇಗೆ ಭಂತೆ ನಾಗಸೇನ? ಅರಹಂತರು ತಮ್ಮ ಮನಸ್ಸನ್ನು ನೋಡಿಕೊಳ್ಳುತ್ತಿರುವುದು ಶರೀರಕ್ಕಾಗಿಯೇ ಅಲ್ಲವೇ? ಅರಹಂತರಿಗೆ ತಮ್ಮ ದೇಹದ ಮೇಲೆ ಪ್ರಭುತ್ವವಿರುವುದಿಲ್ಲವೆ, ಅಧಿಕಾರವಿರುವುದಿಲ್ಲವೆ, ಹಿಡಿತ, ಪ್ರಾವೀಣ್ಯತೆ ಇರುವುದಿಲ್ಲವೆ? (150)
ಇಲ್ಲ ಮಹಾರಾಜ, ಅವರು ಶರೀರದ ಮೇಲೆ ಸಂಪೂರ್ಣ ಹಿಡಿತ ಹೊಂದಿರಲಾರರು?
ಹಾಗಾದರೆ ಭಂತೆ, ಅವರು ಮನಸ್ಸನ್ನು ನೋಡಿಕೊಂಡರೂ ಸಹಾ, ಅವರು ಶರೀರದ ಮೇಲೆ ಪ್ರಭುತ್ವ ಗಳಿಸದಿದ್ದರೆ, ಅವರಿಗೆ ಯಾವ ಪ್ರಭುತ್ವವಾಗಲಿ, ಅಧಿಕಾರವಾಗಲಿ, ಹಿಡಿತವಾಗಲಿ ಮತ್ತು ಪ್ರಾವೀಣ್ಯತೆಯಾಗಲಿ ಇಲ್ಲ ಎಂದು ನಾನು ಹೇಳುತ್ತೇನೆ. ಭಂತೆ ಒಂದು ಪಕ್ಷಿಯು ಸಹಾ ತಾನು ವಾಸಿಸುತ್ತಿರುವ ಗೂಡಿನ ಪ್ರಭುತ್ವವನ್ನು ಹೊಂದಿರುತ್ತದೆ.
ಓ ಮಹಾರಾಜ, ದೇಹದಲ್ಲಿ ಹತ್ತು ಸ್ಥಿತಿಗಳಿವೆ. ಅವು ಜನ್ಮದಿಂದ ಜನ್ಮಕ್ಕೆ ಜೊತೆಗೂಡಿ ಬರುತ್ತಲೇ ಇರುತ್ತವೆ ಮತ್ತು ಯಾವುದವು ಹತ್ತು ? ಶೀತ ಮತ್ತು ಉಷ್ಣ, ಹಸಿವು ಮತ್ತು ಬಾಯಾರಿಕೆ, ಮಲಮೂತ್ರ ವಿಸರ್ಜನೆ, ದಣಿವು ಮತ್ತು ನಿದ್ರೆ, ರೋಗ, ವೃದ್ಧಾಪ್ಯ ಮತ್ತು ಮರಣ. ಈ ಹತ್ತು ವಿಷಯಗಳೊಂದಿಗೆ ಅರಹಂತರು ಪ್ರಭುತ್ವ ಹೊಂದಿರುವುದಿಲ್ಲ.
ಭಂತೆ ನಾಗಸೇನ, ಯಾವ ಕಾರಣದಿಂದಾಗಿ ಅರಹಂತರು ತಮ್ಮ ಶರೀರದ ಮೇಲೆ ಪ್ರಭುತ್ವ ಹೊಂದಿರುವುದಿಲ್ಲ, ಅಥವಾ ಅವರು ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲವೆ? ದಯವಿಟ್ಟು ವಿವರಿಸಿ. (151)
ಓ ಮಹಾರಾಜ, ಈ ಧರೆಯ ಮೇಲೆ ಯಾವೆಲ್ಲಾ ಜೀವಿಗಳು ಇವೆಯೋ ಅವೆಲ್ಲವೂ ಈ ಭೂಮಿಗೆ ಅವಲಂಬಿತವಾಗಿದೆ, ಅವು ನಡೆಯುವವು, ವಾಸಿಸುವವು, ಅದನ್ನು ಅವಲಂಬಿಸಿಯೇ ವ್ಯವಹಾರ ಮಾಡುವವು. ಆದರೆ ಅವುಗಳಿಗೆಲ್ಲ ಪೃಥ್ವಿಯ ಮೇಲೆ ಅಧಿಕಾರ ಅಥವಾ ಪ್ರಭುತ್ವವಿದೆಯೇ?
ಖಂಡಿತ ಇಲ್ಲ ಭಂತೆ.
ಅದೇರೀತಿಯಾಗಿ ಓ ಮಹಾರಾಜ, ಅರಹಂತರು ಮನಸ್ಸಿನಿಂದ ಶರೀರದಲ್ಲಿ ಬಹಳಷ್ಟು ಕಾರ್ಯ ನಡೆಸುವರು, ಆದರೂ ಸಹಾ ಅವರಿಗೆ ಶರೀರದ ಮೇಲೆ ಸಂಪೂರ್ಣ ಅಧಿಕಾರ (ಪ್ರಭುತ್ವ) ಇರುವುದಿಲ್ಲ.
ಭಂತೆ ನಾಗಸೇನ, ಏತಕ್ಕಾಗಿ ಸಾಮಾನ್ಯ ಮನುಷ್ಯನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಎರಡರಲ್ಲೂ ದುಃಖಿಸುವನು. (152)
ಓ ಮಹಾರಾಜ, ಚಿತ್ತದ ಅಶಿಕ್ಷಣತೆಯಿಂದಾಗಿ ಹಾಗಾಗುವುದು. ಓ ಮಹಾರಾಜ, ಹೇಗೆ ಹಸಿದ ಎತ್ತೊಂದು ದುರ್ಬಲವಾಗಿದ್ದಾಗ ಅದಕ್ಕೆ ಕಟ್ಟಿಹಾಕಿರುತ್ತಾರೆ. ಆದರೆ ಆ ಎತ್ತು ಹುಲ್ಲು ಅಥವಾ ಬಳ್ಳಿಯನ್ನು ಕಂಡಾಗ ಅದು ಉದ್ರೇಕಗೊಂಡು ಬಿಡಿಸಿಕೊಂಡು ಪರಾರಿಯಾಗುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರ ಚಿತ್ತವು ಶಿಕ್ಷಣ ಪಡೆದಿರಲಿಲ್ಲವೋ ಅದು ನೋವಿನ ಸನ್ನಿವೇಶದಲ್ಲಿ ಬಾಧಿಸಲ್ಪಡುತ್ತದೆ ಮತ್ತು ಆಗ ಮನಸ್ಸು ಉದ್ರೇಕಿತವಾಗಿ ಈ ಕಡೆ ಅಥವಾ ಆ ಕಡೆ ಬಾಗುತ್ತದೆ ಮತ್ತು ಹೀಗೆ ಅಶಿಕ್ಷಿತ ಚಿತ್ತವು ಭೀತಿಪಡುವುದು ಮತ್ತು ಪ್ರಲಾಪಿಸುವುದು. ಆದ್ದರಿಂದಾಗಿ ಓ ಮಹಾರಾಜ, ಸಾಧಾರಣ ಮನುಷ್ಯನು ನೋವಿನಲ್ಲಿ ದುಃಖಿಸುತ್ತಾನೆ.
ಮತ್ತೆ ಏಕೆ ಭಂತೆ, ಅರಹಂತರು ಕೇವಲ ಶಾರೀರಿಕ ನೋವು ಅನುಭವಿಸುತ್ತಾರೆ ಮತ್ತು ಮಾನಸಿಕವಾಗಿ ಏಕಿಲ್ಲ?
ಓ ಮಹಾರಾಜ, ಅರಹಂತರ ಚಿತ್ತವು ಶಿಕ್ಷಣ ಪಡೆದಿರುತ್ತದೆ, ಪಳಗಿರುತ್ತದೆ, ಅಭ್ಯಸಿಸಲ್ಪಟ್ಟಿರುತ್ತದೆ, ವಶಗೊಂಡಿರುತ್ತದೆ ಮತ್ತು ವಿಧೇಯವಾಗಿರುತ್ತದೆ ಮತ್ತು ಮಾತನ್ನು ಕೇಳುವಂತಿರುತ್ತದೆ. ಯಾವಾಗ ಅರಹಂತರಿಗೆ ನೋವು ಬಾಧಿಸುವುದೋ ಆಗ ಅವರು ದೃಢವಾಗಿ ಎಲ್ಲಾ ವಸ್ತುಸ್ಥಿತಿಗೆ ಅನಿತ್ಯತೆಯನ್ನು ಅರಿತು ಸ್ಥಿರವಾಗುತ್ತಾರೆ. ಚಿಂತನ ಕಾರ್ಯದಂತೆ ಮನಸ್ಸು ಸ್ಥಿರವಾಗಿಸುತ್ತಾರೆ, ಅಚಲವಾಗಿ, ಅಕಂಪನಮಯವಾಗಿ, ಚಲಿಸದೆ ದೃಢಚಿತ್ತರಾಗುತ್ತಾರೆ. ಅವರ ದೇಹವು ಈ ರೀತಿಯಾಗಿ ಅಥವಾ ಆ ರೀತಿಯಾಗಿ ಬಾಗಬಹುದು, ಶರೀರದಲ್ಲಿ ನೋವಿನ ಕಂಪನಗಳನ್ನು ಎಬ್ಬಿಸಬಹುದು. ಆದರೆ ಅವರು ಅಚಲ ಸ್ಥಿರ ಮನಸ್ಸಿನಿಂದ ಕೂಡಿರುತ್ತಾರೆ. ಈ ರೀತಿಯಾಗಿ ಅರಹಂತರು ಕೇವಲ ಒಂದೇ ವೇದನೆ ಅನುಭವಿಸುತ್ತಾರೆ ಅದೆಂದರೆ ಶಾರೀರಿಕ, ಮಾನಸಿಕವಲ್ಲ.
ಭಂತೆ ನಾಗಸೇನ, ಯಾವಾಗ ದೇಹವು ನಡುಗುವುದೋ, ಆಗ ಚಿತ್ತವು ಅಲುಗಾಡುವುದಿಲ್ಲ ಎಂದಿರಲ್ಲವೆ? ಸರಿಯಾದ ಉಪಮೆಯಿಂದ ಈ ಮಹತ್ತರ ವಿಷಯವನ್ನು ವಿವರಿಸಿ.
ಊಹಿಸಿ ಮಹಾರಾಜ, ಅರಹಂತರ ಮನಸ್ಸು ಆ ಶ್ರೇಷ್ಠ ಮರದ ಕಾಂಡದ ರೀತಿ ವಿಚಲಿತಗೊಳ್ಳುವುದಿಲ್ಲ.
ಬಹು ಅದ್ಭುತ ಭಂತೆ ನಾಗಸೇನ! ಮತ್ತೆ ಆಶ್ಚರ್ಯವು ಭಂತೆ ನಾಗಸೇನ. ಈ ಹಿಂದೆ ನಾನು ಎಂದಿಗೂ ಹೀಗೆ ಸರ್ವಕಾಲದಲ್ಲಿ ಬೆಳಗುವಂತಹ ಧಮ್ಮದೀಪವನ್ನು ನೋಡಿಲ್ಲ.
7. ಅಭಿಸಮಯಂತರಾಯ ಪನ್ಹೊ (ಪಾಪಿಗೆ ಸಾಕ್ಷಾತ್ಕಾರ ಪ್ರಶ್ನೆ)
ಭಂತೆ ನಾಗಸೇನ, ಊಹಿಸಿ, ಗೃಹಸ್ಥನೊಬ್ಬನು ಪಾರಾಜಿಕ ಪಾಪವನ್ನು (ಅತಿ ಹೀನ ಪಾಪಗಳಾದ ಮಾತೃಪಿತೃ ಹತ್ಯೆ, ಅರಹಂತ ಹತ್ಯೆ, ಭಿಕ್ಷುಣಿಯೊಂದಿಗೆ ಅಸಭ್ಯತೆ, ಸಂಘಬೇಧ, ತಥಾಗತರಿಗೆ ಗಾಯ) ಮಾಡಿ ನಂತರ ಕೆಲಕಾಲದ ನಂತರ ಸಂಘವನ್ನು ಸೇರುತ್ತಾನೆ. ಆದರೆ ಆತನಿಗೆ ತಾನು ಗೃಹಸ್ಥನಾಗಿರುವಾಗ ಮಾಡಿದ ಪಾಪದ ಪ್ರಾಯಶ್ಚಿತ್ತದ ಪ್ರಜ್ಞೆ ಇರುವುದಿಲ್ಲ. ಹಾಗೆಯೇ ಆತನಿಗೆ ಬೇರೆಯವರು ಸಹಾ ನೀನು ಗೃಹಸ್ಥನಾಗಿರುವಾಗ ಇಂತಹ ಪಾಪ ಮಾಡಿರುವೆ ಎಂದು ಹೇಳಿರಲಿಲ್ಲ. ಈಗ ಆತನು ಅರಹತ್ವಕ್ಕೆ ಪ್ರಯತ್ನಿಸುವಾಗ, ಆತನಿಗೆ ನಾಲ್ಕು ಅರ್ಯಸತ್ಯಗಳಿಗೆ ಸಾಕ್ಷಾತ್ಕಾರ ಆಗುವುದೇ? (153)
ಇಲ್ಲ ಮಹಾರಾಜ, ಆತನಿಗೆ ಹಾಗೆ ಆಗುವುದಿಲ್ಲ.
ಆದರೆ ಏಕೆ ಭಂತೆ?
ಏಕೆಂದರೆ ಯಾವುದರಿಂದಾಗಿ ಆರ್ಯಸತ್ಯಗಳನ್ನು ಸಾಕ್ಷಾತ್ಕರಿಸಬಹುದೋ ಅದು ಆತನಲ್ಲಿ ನಾಶವಾಗಿರುತ್ತದೆ. ಆತನಲ್ಲಿ ಅರಿಯುವಿಕೆಯು ಉಂಟಾಗುವುದಿಲ್ಲ.
ಭಂತೆ ನಾಗಸೇನ, ನೀವು ಹೇಳುವಿರಿ: ಯಾರಲ್ಲಿ ಪಾಪ ಪಶ್ಚಾತ್ತಾಪ ಉಂಟಾಗುವುದೋ ಆಗ ಆತನಲ್ಲಿ ಸ್ಮೃತಿಗಳು ಆವರಣ ಬೀಳುತ್ತದೆ, ತಡೆ ಉಂಟಾಗುತ್ತದೆ. ಯಾರ ಚಿತ್ತವು ತಡೆಗಳಿಂದ ಕೂಡಿರುತ್ತದೋ ಆತನು ಸತ್ಯವನ್ನು ಅರಿಯಲು ಸಾಧ್ಯವಾಗುವುದಿಲ್ಲ.
ಯಾರಿಗೆ ತನ್ನ ಪಾಪದ ಪಶ್ಚಾತ್ಯಾಪ ಆಗುವುದಿಲ್ಲವೋ, ಆತನಿಗೆ ಏಕೆ ಸಾಕ್ಷಾತ್ಕಾರವಾಗುವುದಿಲ್ಲ, ಯಾರಲ್ಲಿ ಪಶ್ಚಾತ್ತಾಪದ ವೇದನೆ ಇರುವುದಿಲ್ಲವೋ, ಶಾಂತಚಿತ್ತರಿಂದ ಇರುವನೋ ಆತನಿಗೆ ಏಕೆ ಸಾಕ್ಷಾತ್ಕಾರವಾಗದು. ಈ ಜಟಿಲ ಪ್ರಶ್ನೆಯು ಎರಡು ಹೊಂದಿಕೊಳ್ಳಲಾಗದ ಹೇಳಿಕೆಗಳಿಂದ ಕೂಡಿದೆ. ಪರಿಹರಿಸುವ ಮುನ್ನ ಯೋಚಿಸಿ ನಂತರ ಉತ್ತರಿಸಿ.
ಓ ಮಹಾರಾಜ, ಚೆನ್ನಾಗಿ ಆಯ್ಕೆ ಮಾಡಿದ ಬೀಜಗಳನ್ನು ಭಿತ್ತಿ, ಚೆನ್ನಾಗಿ ನೇಗಿಲು ಹೊಡೆದರೆ, ನೀರಾವರಿ ಚೆನ್ನಾಗಿ ಹಾಯಿಸಿದರೆ, ಆ ಭೂಮಿಯಲ್ಲಿ ಬೆಳೆಯು ಬೆಳೆಯುತ್ತದೆಯೇ?
ಖಂಡಿತ ಭಂತೆ.
ಆದರೆ ಅದೇ ಬೀಜವು ಬಂಡೆಯ ಮೇಲ್ಪದರದಲ್ಲಿ ಬೆಳೆಯುವುದೇ?
ಇಲ್ಲ ಭಂತೆ.
ಏತಕ್ಕಾಗಿ ಅದೇ ಬೀಜವು ಹೊಲದಲ್ಲಿ ಬೆಳದು, ಬಂಡೆಯಲ್ಲಿ ಬೆಳೆಯಲಾರದು?
ಏಕೆಂದರೆ ಬಂಡೆಯಲ್ಲಿ ಬೀಜವು ಬೆಳೆಯುವುವಂತಹ ಕಾರಣವು ಇಲ್ಲದಿರುವುದರಿಂದ ಹಾಗು ಬೀಜವು ಕಾರಣವಿಲ್ಲದೆ ಬೆಳೆಯಲಾರದು.
ಅದೇರೀತಿಯಲ್ಲಿ ಓ ಮಹಾರಾಜ, ಸತ್ಯ ಸಾಕ್ಷಾತ್ಕಾರಕ್ಕೆ ಬೇಕಾದ ಕಾರಣವು ಆತನಲ್ಲಿ ಕಿತ್ತುಹೋಗಿರುತ್ತದೆ. ಸೋತಪತ್ತಿ ಫಲವು ಕಾರಣವಿಲ್ಲದೆ ಆಗುವುದಿಲ್ಲ.
ಭಂತೆ, ಇನ್ನೊಂದು ಉಪಮೆಯಿಂದ ಸ್ಪಷ್ಟಪಡಿಸುವಿರಾ?
ಒಳ್ಳೆಯದು ಮಹಾರಾಜ, ಈಗ ದೊಣ್ಣೆಗಳು ಹೆಂಟೆ, ಗಡ್ಡೆಗಳು ನೆಲದಲ್ಲಿ ವಿಶ್ರಾಂತಿ ಪಡೆಯುವಂತೆ ಗಾಳಿಯಲ್ಲಿ ವಿಶ್ರಾಂತಿ ಪಡೆಯುವವೇ?
ಇಲ್ಲ ಭಂತೆ.
ಆದರೆ ಏಕೆ ಅವು ನೆಲದಲ್ಲಿರುವಂತೆ, ಗಾಳಿಯಲ್ಲಿ ನಿಲ್ಲಲಾರವು?
ಗಾಳಿಯಲ್ಲಿ ಸ್ಥಿರವಾಗಿ ನಿಲ್ಲುವಂತೆ ಯಾವ ಕಾರಣವು ಇಲ್ಲವಾಗಿರುವುದರಿಂದಾಗಿ ಮತ್ತು ಕಾರಣವಿಲ್ಲದೆ ಅವು ಗಾಳಿಯಲ್ಲಿ ನಿಲ್ಲಲಾರವು.
ಅದೇರೀತಿಯಲ್ಲಿ ಓ ಮಹಾರಾಜ, ಆತನ ಸೋತಪತ್ತಿಗೆ ಕಾರಣವಾದುದು ಆತನಿಂದ ತೆಗೆದುಹಾಕಲ್ಪಟ್ಟಿದೆ ಮತ್ತು ಕಾರಣವಿಲ್ಲದೆ ಸೋತಪತ್ತಿ ಲಭಿಸಲಾರದು. ಈಗ ಅಗ್ನಿಯು ನೆಲದಮೇಲೆ ಉರಿಯುವಂತೆ, ನೀರಿನಲ್ಲಿ ಉರಿಯುವುದೇ?
ಇಲ್ಲ ಭಂತೆ.
ಆದರೆ ಏಕಿಲ್ಲ?
ಏಕೆಂದರೆ ನೀರಿನಲ್ಲಿ ನೆಲದಮೇಲೆ ಇರುವಂತಹ ಸಹಾಯಕ ಅಂಶಗಳು, ಕಾರಣಗಳು ಇಲ್ಲದಿರುವುದರಿಂದಾಗಿ ಅದು ಉರಿಯಲಾರದು ಮತ್ತು ಕಾರಣಗಳು ಇಲ್ಲದೆಯೇ ಉರಿಯಲಾರದು.
ಅದೇರೀತಿಯಲ್ಲಿ ಓ ಮಹಾರಾಜ, ಸೋತಪತ್ತಿ ಫಲವು ಲಭಿಸಲು ಬೇಕಾದ ಪೂರ್ವ ಕಾರಣಗಳು ಆತನಿಂದ ತೆಗೆದುಹಾಕಲ್ಪಟ್ಟಿವೆ. ಹಾಗಿರುವಾಗ ಸೋತಪತ್ತಿ ಫಲವು ಲಭಿಸದು.
ಭಂತೆ ನಾಗಸೇನ, ಈ ವಿಷಯವನ್ನು ಇನ್ನೊಮ್ಮೆ ಚಿಂತಿಸಿರಿ, ನಾನಿನ್ನೂ ಇದರಲ್ಲಿ ಸಹಮತ ಹೊಂದಿಲ್ಲ. ಹೇಗೆ ಆತನಿಗೆ ಪಾಪದ ಪಶ್ಚಾತ್ತಾಪವಿಲ್ಲದಿದ್ದಾಗ, ಅದು ಹೇಗೆ ಸೋತಪತ್ತಿ ಲಭಿಸಲು ಅಡ್ಡಿಯಗುತ್ತದೆ.
ಓ ಮಹಾರಾಜ, ಹಾಲಾಹಲ ವಿಷವನ್ನು ಅರಿಯದೆ ಒಬ್ಬನು ತಿಂದಾಗ, ಆತನು ಜೀವದಿಂದ ಮರಣಕ್ಕೆ ಹೋಗುವನಲ್ಲವೇ?
ಹೌದು ಭಂತೆ.
ಅದೇರೀತಿಯಲ್ಲಿ ಓ ಮಹಾರಾಜ, ಯಾರಿಗೆ ತನ್ನ ಪಾಪದ ಬಗ್ಗೆ ಅರಿವು, ಪಶ್ಚಾತ್ತಾಪ ಹೊಂದಿರುವುದಿಲ್ಲವೋ ಆತನಿಗೆ ಮಹಾನ್ ಸತ್ಯವನ್ನು ಸಹಾ ಅರಿಯಲಾಗುವುದಿಲ್ಲ, ಅದು ಅಡ್ಡಿಯಾಗುತ್ತದೆ ಮತ್ತು ಓ ರಾಜ, ಒಬ್ಬನು ಅರಿವಿಲ್ಲದೆ ಬೆಂಕಿಯಲ್ಲಿ ನಡೆದಾಗ ಅದು ಅತನನ್ನು ಸುಡುತ್ತದೆಯಲ್ಲವೇ?
ಹೌದು ಭಂತೆ.
ಹಾಗೆಯೇ ಮಹಾರಾಜ, ಒಬ್ಬನಿಗೆ ಅರಿವಿಲ್ಲದಿದ್ದಾಗ ವಿಷಪೂರಿತ ಹಾವು ಕಚ್ಚಿದಾಗ, ಆತನು ಸಾಯುವವನಲ್ಲವೆ?
ಹೌದು ಭಂತೆ.
ಒಳ್ಳೆಯದು ಅದೇರೀತಿಯಲ್ಲಿಯೇ ನಿಮ್ಮ ಸಮಸ್ಯೆಯ ಉತ್ತರವು ಇದೆ. ನಿಮಗೆ ಕಾಳಿಂಗ ರಾಜ ಸಮಣ ಕೋಲಞ್ಞೀನ ವಿಷಯ ತಿಳಿದೆ ಇದೆಯಲ್ಲ, ಆತನು ಚಕ್ರವತರ್ಿಯ ಏಳು ಐಶ್ವರ್ಯದ ಸಮೇತ ಆನೆಯ ಮೇಲೆ ಕುಳಿತು ತನ್ನ ಬಂಧುಗಳ ಬಳಿ ಹೋಗುತ್ತಿರುವಾಗ, ತನಗೆ ಅರಿವಿಲ್ಲದೆಯೇ ಆತನು ಬೋಧಿವೃಕ್ಷವನ್ನು ದಾಟಲು ಅಸಮರ್ಥನಾದನು. ಅದೇರೀತಿಯಲ್ಲೆ ಒಬ್ಬನು ಅರಿವಿಲ್ಲದೆ, ಪಶ್ಚಾತ್ತಾಪವಿಲ್ಲದೆ ಪಾಪ ಮಾಡುವವನಾಗಿದ್ದರೆ ಅವನು ಮಹಾನ್ ಸತ್ಯಗಳನ್ನು ಅರಿಯಲು ಅಸಮರ್ಥನಾಗುತ್ತಾನೆ.
ಖಂಡಿತವಾಗಿಯು ಇದು ಜಿನ ವಚನವಾಗಿದೆ. ಭಂತೆ ನಾಗಸೇನ, ಅದರಲ್ಲಿ ದೋಷ ಹುಡುಕುವುದು ವ್ಯರ್ಥವಾದ ಕೆಲಸವಾಗಿದೆ. ನಿಮ್ಮ ಉಪಮೆ ಹಾಗು ವಿವರಣೆಗಳು ಅರ್ಥಪೂರ್ಣವಾಗಿದೆ. ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.
8. ದುಶ್ಶೀಲ ಪ್ರಶ್ನೆ
ಭಂತೆ ನಾಗಸೇನ, ಒಬ್ಬನು ಗೃಹಸ್ಥನಾಗಿ ದುಶ್ಶೀಲನಾಗಿರುತ್ತಾನೆ ಮತ್ತು ಇನ್ನೊಬ್ಬನ ಸಮಣನಾಗಿ ದುಶ್ಶೀಲನಾಗಿರುತ್ತಾನೆ. ಅವರಿಬ್ಬರಿಗೂ ಒಂದೇಗತಿ ಸಿಗುತ್ತದೆಯೇ? ಒಂದೇರೀತಿಯ ಕಮ್ಮವಿಪಾಕ ಲಭಿಸುವುದೇ? ಅಥವಾ ವಿಭಿನ್ನವೇ? ವಿವರಿಸಿ.(154)
ಓ ಮಹಾರಾಜ, ಹತ್ತು ಗುಣಗಳಿಂದ ಸಮಣನು ದುಶ್ಶೀಲನಾಗುತ್ತಾನೆ. ಇದು ಗೃಹಸ್ಥ ದುಶ್ಶೀಲನಿಂದ ಭಿನ್ನವಾಗಿಸುತ್ತದೆ, ಮತ್ತೆ ಅದು ಅಲ್ಲದೆ ಹತ್ತು ವಿಧಗಳಿಂದಾಗಿ ಸಮಣನು ದಾತನ ದಾನವನ್ನು ಶುದ್ಧೀಕರಿಸುತ್ತಾನೆ.
ಮತ್ತು ಯಾವ ಹತ್ತು ಗುಣಗಳಿಂದ ದುಶ್ಶೀಲ ಸಮಣನು, ದುಶ್ಶೀಲ ಗೃಹಸ್ಥನಿಂದ ಭಿನ್ನವಾಗಿರುತ್ತಾನೆ? ಓ ಮಹಾರಾಜ, ದುಶ್ಶೀಲ ಸಮಣನಲ್ಲೂ ಬುದ್ಧರ ಬಗ್ಗೆ, ಧಮ್ಮದ ಬಗ್ಗೆ, ಸಂಘದ ಬಗ್ಗೆ ಗೌರವ ಭಕ್ತಿಯಿರುತ್ತದೆ. ಆತನು ಪ್ರಶ್ನೆ ಹಾಕುವಿಕೆಯಲ್ಲಿ ತಿಪಿಟಕ ಪಠಣೆಯಲ್ಲಿರುತ್ತಾನೆ. ಕಲಿಯುವಿಕೆಯಲ್ಲಿ ತಲ್ಲೀನನಾಗಿರುತ್ತಾನೆ. ಆತನು ತಾನು ತಪ್ಪು ಮಾಡುತ್ತಿದ್ದರೂ ಸಹಾ ಇವುಗಳಿಂದ ಕೂಡಿರುತ್ತಾನೆ. ನಂತರ ಓ ರಾಜನೇ ದೋಷಿಯು ಸಭೆಗೆ ಪ್ರವೇಶಿಸುವಾಗ ಸ್ವಚ್ಛ ಉಡುಗೆಯಿಂದಿರುತ್ತಾನೆ. ನಿಂದಾಭಯದಿಂದಲಾದರೂ ಶರೀರ ಮತ್ತು ಮನಸ್ಸನ್ನು ಸಂಯಮದಿಂದ ರಕ್ಷಿಸುತ್ತಾನೆ. ಆತನ ಮನಸ್ಸು ಉನ್ನತ (ಅರಹಂತ) ಪ್ರಾಪ್ತಿಗಾಗಿ ಪ್ರಯತ್ನಪಡುತ್ತಿರುತ್ತದೆ. ಆತನು ಭಿಕ್ಷು ಸತ್ಸಂಗದಲ್ಲಿರುತ್ತಾನೆ. ಹೀಗಿದ್ದರೂ ಸಹಾ ಆತನು ದುಶ್ಶೀಲನಾದರೆ ಆತ ವಿಚಾರವಂತನಾಗಿಯಾದರೂ ಜೀವಿಸುತ್ತಾನೆ. ಓ ಮಹಾರಾಜ, ಹೇಗೆ ವಿವಾಹಿತ ಸ್ತ್ರೀಯು ರಹಸ್ಯವಾಗಿ ಮತ್ತು ಏಕಾಂತದಲ್ಲಿ ಪಾಪ ಮಾಡುವಳೋ, ಹಾಗೆಯೇ ದುಶ್ಶೀಲ ಸಮಣನು ಪಾಪ ಮಾಡಿದರೂ ವಿಚಾರಶೀಲನಾಗಿರುವನು. ಓ ರಾಜ, ಇವೇ ಆ 10 ಗುಣಗಳು ದುಶ್ಶೀಲ ಸಮಣನಲ್ಲಿ ಕಾಣುತ್ತೇವೆ. ಅವು ದುಶ್ಶೀಲ ಗೃಹಸ್ಥನಲ್ಲಿ ಕಾಣಲಾಗದೆ ಭಿನ್ನವಾಗಿದೆ.
ಮತ್ತು ಯಾವ ಹತ್ತು ವಿಧದಿಂದ ಆತನು ದಾತನ ದಾನವನ್ನು ಶುದ್ಧೀಕರಿಸುತ್ತಾನೆ. ಆತನು ಅರಹತಧ್ವಜವಾದ ಕಾಷಾಯ ಧರಿಸಿರುವುದರಿಂದ, ಆತನು ಅಸಂಖ್ಯಾ ಭಿಕ್ಷುಗಳಲ್ಲಿ ಒಂದಾಗಿದ್ದಾನೆ. ಆತನು ತ್ರಿಶರಣುಗಳಾದ ಬುದ್ಧ, ಧಮ್ಮ, ಸಂಘದಲ್ಲಿ ಶರಣು ತೆಗೆದುಕೊಂಡಿರುತ್ತಾನೆ. ಆತನು ಏಕಾಂತದಲ್ಲಿ ಅರಹತ್ವಕ್ಕಾಗಿ ಶ್ರಮಪಟ್ಟಿರುತ್ತಾನೆ. ಅದರಲ್ಲಿದ್ದು ಆತನು ಬುದ್ಧರ ಶಾಸನದ ನಿಧಿಗೆ ಹುಡುಕುತ್ತಿರುತ್ತಾನೆ, ಶ್ರೇಷ್ಠವಾದ ಧಮ್ಮವನ್ನು ಬೋಧಿಸುತ್ತಾನೆ. ಧಮ್ಮದೀಪದಲ್ಲಿ (ನಿಬ್ಬಾಣ) ನೆಲೆಸಲು ಪ್ರಯತ್ನಿಸುತ್ತಿದ್ದಾನೆ. ಆತನು ಬುದ್ಧರೇ ಜೀವಿಗಳಲ್ಲೆಲ್ಲಾ ಶ್ರೇಷ್ಠರು ಎಂದು ನಂಬಿರುತ್ತಾನೆ. ಉಪೋಸಥ ವ್ರತವನ್ನು ಕೈಗೊಳ್ಳುತ್ತಾನೆ. ಓ ಮಹಾರಾಜ, ಈ ರೀತಿಯಾಗಿ ಹತ್ತು ವಿಧದಿಂದಾಗಿ ಆತನು ದಾತನನ್ನು ದಾನದಿಂದ ಶುದ್ಧೀಕರಿಸುತ್ತಾನೆ.
ಓ ಮಹಾರಾಜ, ಆತನು ನೈತಿಕತೆಯಿಂದ ಬಿದ್ದರೂ ಸಹಾ ಶ್ರದ್ಧೆಯಿರಿಸಿದ ಸಹಾಯಕರಿಗೆ ಪಾವನಗೊಳಿಸುತ್ತಾನೆ. ಹೇಗೆಂದರೆ ನೀರಿನಂತೆ, ಹೇಗೆ ನೀರು ಎಷ್ಟೇ ಮಂದವಾಗಿದ್ದರೂ ಕಲೆಗಳ್ಳುಳ್ಳ, ಕೆಸರುಗಳು, ಕೊಳೆಗಳನ್ನು ಶುದ್ಧೀಕರಿಸುವುದೋ ಹಾಗೆ ಬಿಸಿಯಾದ ನೀರು ಸಹಾ ಪ್ರಜ್ವಲಿಸುವ ಅಗ್ನಿಯನ್ನು ಆರಿಸುವಂತೆ, ಹೇಗೆ ಕೆಟ್ಟದಾದ ಆಹಾರವು ಸಹಾ ಹಸಿವನ್ನು ದೂರ ಮಾಡುವಂತೆ, ಓ ಮಹಾರಾಜ, ಅಂತಹ ಭಿಕ್ಷುವು ಸಹಾ ಶ್ರದ್ಧೆಯುಳ್ಳವರನ್ನು ಪಾವನಗೊಳಿಸುತ್ತಾನೆ. ಓ ಮಹಾರಾಜ, ಮಜ್ಜೀಮ ನಿಕಾಯದ ದಕ್ಷಿಣ ವಿಭಂಗ ವರ್ಗದಲ್ಲಿ (142) ದೇವೇಂದ್ರ ಸಕ್ಕನು ಈ ರೀತಿ ಹೇಳುತ್ತಾನೆ.
ಯಾವಾಗಲೇ ಆಗಲಿ, ಶೀಲವಂತನು ದುಶ್ಶೀಲನಿಗೆ ದಾನ ಮಾಡಿದರೆ, ತಾನು ಯೋಗ್ಯವಾದ ರೀತಿಯಲ್ಲಿ ಸಂಪಾದಿಸಿದ್ದು ದಾನ ನೀಡಿದರೆ, ದುಶ್ಶೀಲರಿಗೂ ಸಹಾ ಶ್ರದ್ಧೆಯಿಂದ ನೀಡಿದರೆ, ಅಂತಹುದರಲ್ಲಿಯು ಆ ದಾನದಿಂದ ಫಲ ಲಭಿಸಿ ಆತನು ಪಾಮರನಾಗುತ್ತಾನೆ.
ಅತಿ ಅದ್ಭುತ ಭಂತೆ ನಾಗಸೇನ ಮತ್ತು ಪರಮಾಶ್ಚರ್ಯ ಭಂತೆ ನಾಗಸೇನ. ಓ ಭಂತೆ, ನಾನು ನಿಮಗೆ ಅತಿ ಸಾಧಾರಣ ಪ್ರಶ್ನೆ ಕೇಳಿದರೂ ಸಹಾ ನೀವು ಮಾತ್ರ ವಿವರವಾಗಿ, ಉಪಮೆಗಳ ಸಹಿತ, ಕರ್ಣಗಳಿಗೆ ಆನಂದ ನೀಡುತ್ತ ಅಮರತ್ವದ ಮಧುರತೆಯನ್ನು ನೀಡಿದಿರಿ. ಹೇಗೆ ಅಡುಗೆಯವನು ಅಥವಾ ಆತನ ಸಹಾಯಕರು ಸಾಧಾರಣ ಮಾಂಸದ ತುಂಡಿನಿಂದಲೂ ಅಮೃತವಾದ ತಿಂಡಿಯನ್ನು ತಯಾರಿಸಿ ನೀಡುವಂತೆ ಓ ನಾಗಸೇನ, ನಿಮಗೆ ಸಾಧಾರಣ ಪ್ರಶ್ನೆ ಕೇಳಿದರೂ ಸಹಾ ವಿವರವಾದ ವಿಶ್ಲೇಷಣಾಯುತ, ಉಪಮೆಗಳಿಂದ ಕೂಡಿ, ಕರ್ಣಗಳಿಗೆ ಮಾಧುರ್ಯತೆ ತುಂಬಿದಿರಿ, ಅಮರತ್ವದ ಮಾಧುರ್ಯತೆ ನೀಡಿದಿರಿ.
9. ಉದಕಸತ್ತ ಪನ್ಹೊ (ನೀರು ಜೀವಿಯೇ ಎಂಬ ಪ್ರಶ್ನೆ)
ಭಂತೆ ನಾಗಸೇನ, ನೀರನ್ನು ನಾವು ಯಾವಾಗ ಕುದಿಸುತ್ತೇವೆಯೋ ಆಗ ಅದು ಅನೇಕ ಶಬ್ದಗಳನ್ನು ಮಾಡುತ್ತದೆ. ಕಿಟಕಿಟ ಎನ್ನುವ, ಸರ್ ಎನ್ನುವ ಶಬ್ದಗಳನ್ನು ಮಾಡುತ್ತದೆ. ಭಂತೆ ನಾಗಸೇನ, ಜಲವು ಜೀವಂತವಾಗಿರುವುದೇ? ಅದಕ್ಕೆ ಬೆಂಕಿಯಿಂದ ಆಗುತ್ತಿರುವ ಹಿಂಸೆಗಾಗಿ ಬಿಡುಗಡೆ ಹೊಂದಲು ಅದು ಕೂಗಿಕೊಳ್ಳುತ್ತಿದೆಯೇ?(155)
ಓ ಮಹಾರಾಜ, ಜಲವು ಜೀವಂತವಾಗಿಲ್ಲ. ಜಲದಲ್ಲಿ ಯಾವುದೇ ಜೀವಿಯಾಗಲಿ ಅಥವಾ ಆತ್ಮವಾಗಲಿ ಇಲ್ಲ. ಅದು ಅಗ್ನಿಯ ತಾಪದಿಂದಾಗಿ ಪ್ರತಿಕ್ರಿಯೆಯಾಗಿ ಕಿಟಕಿಟನೆ ಶಬ್ದವನ್ನು ಮಾಡುತ್ತದೆ.
ಈಗ ಭಂತೆ ನಾಗಸೇನ, ಕೆಲವು ಮಿಥ್ಯಾಗುರುಗಳಿದ್ದಾರೆ, ಅವರು ಜಲದಲ್ಲಿ ಜೀವವಿದೆ ಎಂದು ಹೇಳಿ ತಂಪು ನೀರನ್ನು ವಜರ್ಿಸಿ, ಬಿಸಿ ನೀರನ್ನು ಮತ್ತು ಕೆಲವು ಆಹಾರಗಳಿಗೆ ಅವಲಂಬಿಸಿದ್ದಾರೆ.
ಈ ಬಗೆಯ ಮನುಷ್ಯರು ನಿಮ್ಮಲ್ಲಿ ಇಲ್ಲದ ತಪ್ಪು ಹುಡುಕಿ ಹೀಗೆ ನಿಂದಿಸುವರು: ಈ ಶಾಕ್ಯಪುತ್ತರು ಏಕೇಂದ್ರಿಯ ಜೀವಿಗಳನ್ನು ಹಿಂಸಿಸುತ್ತಿದ್ದಾರೆ. ಓ ಭಂತೆ, ಈ ನಿಂದೆಯು ಆಧಾರರಹಿತವೆಂದು ರುಜುವಾತುಪಡಿಸಿ, ನಿಂದೆಯನ್ನು ದೂರೀಕರಿಸಿ.
ಓ ಮಹಾರಾಜ, ಜಲಕ್ಕೆ ಜೀವವಿಲ್ಲ, ಜಲದಲ್ಲಿ ಯಾವುದೇ ಆತ್ಮವಾಗಲಿ ಅಥವಾ ಜಲವೇ ಜೀವವಲ್ಲ ಮತ್ತು ಮಹಾಗ್ನಿಯ ತಾಪದಿಂದಾಗಿ ನೀರಿನಲ್ಲಿ ಶಬ್ದಗಳು ಉಂಟಾಗುತ್ತದೆ. ಓ ಮಹಾರಾಜ, ಜಲವು ಭೂಮಿಯ ರಂಧ್ರಗಳಲ್ಲಿ, ಸರೋವರಗಳಲ್ಲಿ, ತೊಟ್ಟಿಗಳಲ್ಲಿ, ಕೆರೆಗಳಲ್ಲಿ, ಬಾವಿಗಳಲ್ಲಿ ಇನ್ನಿತರ ಕಡೆಯಲ್ಲಿರುತ್ತದೆ. ಆದರೆ ಬಿಸಿಗಾಳಿಗೆ, ಸೂರ್ಯತಾಪಕ್ಕೆ ಅವು ಮಾಯವಾಗುತ್ತದೆ. ಆಗ ಜಲವು ಯಾವುದೇ ಶಬ್ದವನ್ನು ಮಾಡುವುದೇ?
ಖಂಡಿತವಾಗಿ ಇಲ್ಲ ಭಂತೆ.
ಆದರೆ ಅದಕ್ಕೆ ಜೀವವಿದ್ದುದೇ ಆಗಿದ್ದರೆ, ಆ ಸ್ಥಳಗಳಲ್ಲೆಲ್ಲಾ ಅದು ಶಬ್ದ ಮಾಡುತ್ತಿತ್ತು. ಆದ್ದರಿಂದ ಓ ಮಹಾರಾಜ ಅರಿಯಿರಿ, ಜಲದಲ್ಲಿ ಯಾವುದೇ ಆತ್ಮವಾಗಲಿ, ಜೀವವಾಗಲಿ ಇಲ್ಲ. ಅದು ಕೇವಲ ಅಗ್ನಿಯ ಮಹತ್ ಆಘಾತದಿಂದಾದ ಪ್ರತಿಕ್ರಿಯೆಯಿಂದ ಆ ಶಬ್ದಗಳು ಹೊರಡುತ್ತವೆ.
ಓ ಮಹಾರಾಜ, ಮತ್ತೊಂದು ಕಾರಣವಿದೆ. ಓ ರಾಜ, ಪಾತ್ರೆಯಲ್ಲಿ ಅಕ್ಕಿಯನ್ನು, ಜಲವನ್ನು ಹಾಕಿ, ಕಾಯಿಸಿದಾಗ, ಅದು ಶಬ್ದ ಮಾಡುವುದೇ?
ಇಲ್ಲ ಭಂತೆ, ಅದು ಶಾಂತವಾಗಿ ಅಚಲವಾಗಿರುವುದು.
ಆದರೆ ಅದೇ ನೀರನ್ನು ಪಾತ್ರೆಗೆ ಹಾಕಿ, ಕಾಯಿಸಿದಾಗ ನೀರು ಶಾಂತವಾಗಿದ್ದು ಅಚಲವಾಗಿರುವುದೇ?
ಇಲ್ಲ ಭಂತೆ, ಅದು ಚಲಿಸುವುದು ಮತ್ತು ಕ್ಷೊಭೆಗೊಳ್ಳುವುದು. ತೀವ್ರವಾಗಿ ಚಾಲನೆಗೊಳಗಾಗಿ ಅಲೆಗಳು ಎದ್ದು, ಮೇಲೆ ಕೆಳಗೆ ಎಲ್ಲ ದಿಕ್ಕಿನೆಡೆ ಚಲಿಸುವುದು, ತಿರುಗಿ ಅದು ಚೆನ್ನಾಗಿ ಕುದಿಯುವುದು ಮತ್ತು ನೊರೆಯು ಬರುವುದು.
ಮತ್ತೆ ಏಕೆ ಓ ರಾಜ, ಸಾಧಾರಣ ಸ್ಥಿತಿಯಲ್ಲಿ ಜಲವು ಅಚಲವಾಗಿ ಶಾಂತವಾಗಿರುವುದು.
ಅದು ಏಕೆಂದರೆ ಅಗ್ನಿಯ ಪ್ರಬಲ ಶಾಖದಿಂದ ಚಲನೆಯುಂಟಾಗಿ ಶಬ್ದಗಳನ್ನು ಉಂಟುಮಾಡುತ್ತದೆ.
ಓ ಮಹಾರಾಜ, ಹಾಗಿದ್ದರೆ ನಿಮಗೂ ಈಗ ಮನವರಿಕೆ ಆಗಿದೆ. ಜಲದಲ್ಲಿ ಜೀವವಿಲ್ಲ, ಆತ್ಮವಿಲ್ಲ ಎಂದು ಮತ್ತು ಅದು ಶಾಖದಿಂದ ಚಲನೆಯಾಗಿ ಪ್ರತಿಕ್ರಿಯೆಗಳಾಗಿ ಶಬ್ದಗಳು ಹೊರಬರುತ್ತದೆ.
ಓ ಮಹಾರಾಜ, ಇದನ್ನು ಮತ್ತೊಂದು ರೀತಿಯಲ್ಲಿ ಅರಿಯೋಣ. ಪ್ರತಿ ಮನೆಯಲ್ಲೂ ನೀರಿನ ಪಾತ್ರೆಗಳನ್ನು ಅವರು ಮುಚ್ಚಿರುತ್ತಾರೆಯೇ?
ಇಲ್ಲ ಭಂತೆ.
ಒಳ್ಳೆಯದು, ಜಲವು ತಾನಾಗಿಯೇ ಜಲಿಸಿ, ಕ್ಷೊಭೆಗೆ ಒಳಗಾಗಿ, ಎಲ್ಲಾ ದಿಕ್ಕುಗಳಿಗೂ ಹರಿಯಲಾರಂಭಿಸಿ ನೊರೆಯನ್ನು ಕಕ್ಕುವುದೇ?
ಇಲ್ಲ ಭಂತೆ, ಜಲವು ಸಾಮಾನ್ಯ ಸ್ಥಿತಿಯಲ್ಲಿ ಶಾಂತವಾಗಿ ಸ್ತಬ್ಧವಾಗಿಯೇ ಇರುವುದು.
ಆದರೆ ನೀವು ಮಹಾ ಸಮುದ್ರದ ಬಗ್ಗೆ ಏನು ಹೇಳುವಿರಿ. ಅಲ್ಲಂತೂ ಜಲವು ಭೀಕರವಾಗಿ ಶಬ್ದ ಮಾಡುತ್ತ, ಬೃಹತ್ ಅಲೆಗಳನ್ನು ತಳ್ಳುತ್ತ ದಡಕ್ಕೆ ಅಪ್ಪಳಿಸುವುದಿಲ್ಲವೆ?
ಹೌದು ಭಂತೆ, ನಾನು ಸಹಾ ಅದನ್ನು ಕಂಡಿರುವೆನು, ಕೇಳಿಯೂ ಸಹಾ ಇರುವೆನು. ಬೃಹತ್ ಸಾಗರವು ನೂರು, ಇನ್ನೂರು ಗಜದಷ್ಟು ಅದಕ್ಕಿಂತ ಹೆಚ್ಚು ಎತ್ತರಕ್ಕೆ ಅಕಾಶದ ಎತ್ತರ ಅಲೆಗಳು ಎದ್ದೇಳುವವು.
ಆದರೆ ಏಕೆ ನೀರು ಸಾಮಾನ್ಯವಾಗಿ ಅಚಲವಾಗಿ ಶಾಂತವಾಗಿರುವುದು. ಆದರೆ ಅದೇ ಜಲವು ಸಮುದ್ರದಲ್ಲಿದ್ದಾಗ ಅದು ಸದಾ ಚಲನಮಯ ಮತ್ತು ಭೋರ್ಗರೆಯುತ್ತಿರುತ್ತದೆ.
ಅದು ಏಕೆಂದರೆ ಬೃಹತ್ ವಾಯುವಿನ ಶಕ್ತಿಯಿಂದಾಗಿ ಹೊರತು, ಪಾತ್ರೆಯಲ್ಲಿರುವ ಜಲವು ಮಾತ್ರ ಯಾವುದೇ ಶಬ್ದ ಮಾಡುವುದಿಲ್ಲ.
ಒಳ್ಳೆಯದು. ಹೀಗೆಯೇ ಕುದಿಯುವ ನೀರಿನ ಶಬ್ದವು ಸಹಾ ಅದೇರೀತಿಯಲ್ಲಿ ಅಗ್ನಿಯಿಂದ ಪ್ರಾರಂಭವಾಗುತ್ತದೆ.
ಜನರು ನಗಾರಿಗಳ ಬಾಯನ್ನು ಹಸುವಿನ ಒಣಗಿದ ಚರ್ಮದಿಂದ ಮುಚ್ಚಿರುತ್ತಾರೆ ಅಲ್ಲವೆ?
ಹೌದು, ಅವರು ಹಾಗೆ ಮಾಡಿರುತ್ತಾರೆ.
ಒಳ್ಳೆಯದು, ಓ ಮಹಾರಾಜ, ಆ ನಗಾರಿಯಲ್ಲಿ ಯಾವುದಾದರೂ ಆತ್ಮವಾಗಲಿ ಅಥವಾ ಜೀವಿಯಾಗಲಿ ಇದೆಯೇ?
ಖಂಡಿತವಾಗಿ ಇಲ್ಲ ಭಂತೆ.
ಹಾಗಿದ್ದರೆ ಆ ನಗಾರಿಯಿಂದ ಶಬ್ದ ಹೇಗೆ ಹೊರಹೊಮ್ಮುತ್ತದೆ.
ಅದು ಸ್ತ್ರೀ ಅಥವಾ ಪುರುಷನ ಪ್ರಯತ್ನದಿಂದ ಆಗುತ್ತದೆ.
ಸರಿ, ಹಾಗೆಯೇ ಆ ನಗಾರಿಯು ಶಬ್ದ ಮಾಡುತ್ತದೆ. ಅದರಂತೆಯೇ ಅಗ್ನಿಯಿಂದ ಚಾಲನೆಗೊಳಪಟ್ಟು ಜಲವು ಶಬ್ದ ಮಾಡುತ್ತದೆ ಎಂದು ಅರಿಯಬಹುದು ಮತ್ತು ಅಗ್ನಿಯ ತಾಪದಿಂದಾಗಿ ಚಾಲನೆಗೊಳಪಟ್ಟು ಶಬ್ದವು ಹೊರಹೊಮ್ಮುತ್ತದೆ.
ಮತ್ತೆ ಓ ಮಹಾರಾಜ, ಎಲ್ಲಾರೀತಿಯ ಪಾತ್ರೆಗಳು ಶಬ್ದ ಮಾಡುತ್ತಿವೆಯೋ ಅಥವಾ ಕೆಲವು ಬಗೆಯ ಪಾತ್ರೆಗಳು ಮಾತ್ರ ಶಬ್ದಮಾಡುವುದೋ?
ಎಲ್ಲವೂ ಶಬ್ದ ಮಾಡುವುದಿಲ್ಲ ಭಂತೆ, ಕೆಲವು ಮಾತ್ರ ಶಬ್ದ ಮಾಡುತ್ತವೆ.
ಈ ರೀತಿ ಹೇಳುವುದಾದರೆ ಓ ಮಹಾರಾಜ, ನಿಮ್ಮಿಂದ ನೀವೇ ನಿಮ್ಮ ಆ ಸ್ಥಿತಿಯನ್ನು ತ್ಯಜಿಸಿ, ನನ್ನ ಕಡೆಗೆ ತೀಪರ್ು ಕೊಟ್ಟಂತೆ ಆಯಿತು. ಏನೆಂದರೆ ಜಲದಲ್ಲಿ ಜೀವವಿಲ್ಲ, ಆತ್ಮವಿಲ್ಲ ಎಂದಂತೆ ಆಯಿತು. ಎಲ್ಲಾ ಪಾತ್ರೆಗಳಲ್ಲೂ ಶಬ್ದ ಮಾಡುವುದಾದರೆ ಅದರಲ್ಲಿ ಆತ್ಮವಿರಬಹುದೇನೋ ಎಂದು ಹೇಳಬಹುದಿತ್ತು ಎರಡು ರೀತಿಯ ಜಲವಂತು ಇಲ್ಲ, ಯಾವುದೆಂದರೆ ಜೀವಂತವಿದ್ದು ಮಾತನಾಡುವಂತಹದ್ದು ಮತ್ತು ಜೀವಿವಿಲ್ಲದೆ ಮಾತನಾಡಲಾರದ್ದು. ಒಂದುವೇಳೆ ಜಲಕ್ಕೆ ಜೀವವಿದ್ದುದೇ ಆದರೆ, ಆಗ ಮಹಾ ಆನೆಗಳು ಸೊಂಡಿಲಿನಿಂದ ನೀರು ತೆಗೆದುಕೊಂಡು ನೀರು ಎರಚುವಾಗ ಅಥವಾ ಹೊಟ್ಟೆಯೊಳಕ್ಕೆ ತೆಗೆದುಕೊಂಡಾಗ ಅವುಗಳ ಹಲ್ಲಿನ ಮಧ್ಯೆ ಸಿಲುಕಿದ ಜಲವು ಶಬ್ದ ಮಾಡಬೇಕಿತ್ತು. ಅಥವಾ ಮಹಾ ಹಡಗುಗಳು 100 ಯೋಜನೆಗಳಷ್ಟು ಉದ್ದದ, ನೂರಾರು ಕಂತೆಗಳ ಸಾಮಗ್ರಿಗಳನ್ನು ಒಳಗೊಂಡು ನೀರನ್ನು ಸೀಳಿಕೊಂಡು ಹೋಗುವಾಗ ಜಲವು ಶಬ್ದವನ್ನು ಮಾಡಬೇಕಿತ್ತು ಮತ್ತು ಬೃಹತ್ ಮೀನುಗಳು, ಬೃಹತ್ ಪೆಡಂಭೂತ (ತಿಮಿಂಗಲ/ಡೈನಾಸೊರಸ್)ಗಳು ಸಮುದ್ರದೊಳಗೆ ಇರುತ್ತವೆ. ಅವು ಬೃಹತ್ ಗಾತ್ರದಿಂದ ಇರುತ್ತವೆ. ಅವು ನೀರನ್ನು ಸೇವಿಸುವಾಗ ಹಾಗು ನೀರನ್ನು ಉಗಿಯುವಾಗ ಆ ನೀರು ಅವುಗಳ ಹೊಟ್ಟೆಯಲ್ಲಿನ ಶ್ವಾಸಂಗದೊಳಗೆ ಅಥವಾ ಹೊಟ್ಟೆಯೊಳಗೆ ನೀರು ಹೋದಾಗ ಆ ಜಲವು ನೋವಿನಿಂದ ಶಬ್ದ ಮಾಡಬೇಕಿತ್ತು. ಹಾಗೆಯೇ ಅಂತಹ ಬೃಹತ್ ವಸ್ತುಗಳಲ್ಲಿ ಚಿತ್ರಹಿಂಸೆಗೆ, ಘರ್ಷಣೆಗೆ ಒಳಪಟ್ಟು ಹಾಗೆಯೇ ಪುಡಿಮಾಡಲ್ಪಟ್ಟಾಗ ಆ ಜಲವು ಯಾವುದೇ ಶಬ್ದ ಮಾಡಲಿಲ್ಲ. ಆದ್ದರಿಂದಾಗಿ ಓ ಮಹಾರಾಜನೇ, ಜಲದಲ್ಲಿ ಯಾವುದೇ ಆತ್ಮವಾಗಲಿ, ಜೀವವಾಗಲಿ ಇಲ್ಲ.
ಒಳ್ಳೆಯದು ಭಂತೆ ನಾಗಸೇನ, ಪರಿಣಾಮಕಾರಿ ವಿಶ್ಲೇಷಣೆಯಿಂದ, ವಿಮೋಚನೆಯಿಂದ ಜಟಿಲ ಸಮಸ್ಯೆಯನ್ನು ಪರಿಹರಿಸಿದಿರಿ, ಹೇಗೆಂದರೆ ಭಂತೆ ನಾಗಸೇನ ರತ್ನವೊಂದು ಉತ್ತಮ ಅಕ್ಕಸಾಲಿಗನ ಬಳಿಗೆ ಬಂದಾಗ ಹೇಗೋ ಅಥವಾ ಅನುರೂಪವಾದ ಮುತ್ತೊಂದು ಚಾಣಾಕ್ಷ, ಶಿಕ್ಷಿತ, ವ್ಯಾಪಾರಿಯ ಕೈಗೆ ಬಂದಾಗ ಹೇಗೋ ಅಥವಾ ಅತ್ಯುನ್ನತಮಟ್ಟದ ವಸ್ತ್ರವು ಬಟ್ಟೆ ವ್ಯಾಪಾರಿಯ ಕೈಗೆ ಸಿಕ್ಕಾಗ ಅಥವಾ ಕೆಂಪು ಶ್ರೀಗಂಧವು ಸುಗಂಧ ದ್ರವ್ಯವು ಕೈಗೆ ಸಿಕ್ಕರೆ ಹೇಗೋ ಅದೇರೀತಿಯಲ್ಲಿ
ಅತ್ಯಂತ ವಿವೇಚನಾಯುತವಾಗಿ ನೀವು ಜಟಿಲ ಸಮಸ್ಯೆಯನ್ನು ಪರಿಹರಿಸಿದಿರಿ.
ಪ್ರಥಮ ಬುದ್ಧವಗ್ಗ ಮುಗಿಯಿತು (ಇದರಲ್ಲಿ 9 ಪ್ರಶ್ನೆಗಳಿವೆ )

No comments:
Post a Comment