Saturday, 7 April 2018

milinda panha 9.ಅನುಮಾನ ವಗ್ಗೋ

9.ಅನುಮಾನ ವಗ್ಗೋ1. ಅನುಮಾನ ಪನ್ಹೋ


ಈಗ ಮಿಲಿಂದ ಮಹಾರಾಜನು, ನಾಗಸೇನ ಭಂತೆಯವರು ಇರುವಲ್ಲಿಗೆ ಹೋಗಿ ಅವರ ಮುಂದೆ ವಂದಿಸಿದನು ಮತ್ತು ಒಂದು ಪಕ್ಕದಲ್ಲಿ ಕುಳಿತುಕೊಂಡನು ಮತ್ತು ಯಾವಾಗ ಹೀಗೆ ಕುಳಿತನೋ, ಅರಿಯಲು ಹಂಬಲಿಸಿದನು. ಕೇಳಲು ಕೌತುಕನಾದನು ಮತ್ತು ನೆನಪಿಸಿಕೊಂಡು ತನ್ನ ಅಜ್ಞಾನವನ್ನು ತುಂಡು ತುಂಡು ಮಾಡಿ ಜ್ಞಾನದ ಹೊಂಬೆಳಕನ್ನು ಪಡೆಯಲು ಬಯಸುವನು. ತನ್ನಲ್ಲೇ ಧೈರ್ಯ ಮತ್ತು ಉತ್ಸಾಹ ತೆಗೆದುಕೊಂಡು ಮತ್ತು ಪೂರ್ಣ ಸ್ವಾಧೀನ ಪಡೆದುಕೊಂಡು ಮತ್ತು ಆಳವಾಗಿ ಯೋಚಿಸಿ ಹೀಗೆ ನಾಗಸೇನರೊಂದಿಗೆ ಹೇಳಿದನು:

ಭಂತೆ ನಾಗಸೇನ, ಹೇಳಿ ನೀವು ಎಂದಾದರೂ ಬುದ್ಧರನ್ನು ಕಂಡಿರುವಿರಾ?(197)

ಇಲ್ಲ ಓ ಮಹಾರಾಜ.

ಹಾಗಾದರೆ ನಿಮ್ಮ ಆಚಾರ್ಯರು ಬುದ್ಧರನ್ನು ಎಂದಾದರೂ ನೋಡಿರುವರೇ?

ಇಲ್ಲ ಮಹಾರಾಜ.

ಭಂತೆ ನಾಗಸೇನ, ನೀವು ಹೀಗೆ ಹೇಳುವಂತೆ ನೀವು ಎಂದಿಗೂ ಬುದ್ಧರನ್ನು ಕಂಡಿಲ್ಲ ಮತ್ತು ನಿಮ್ಮ ಆಚಾರ್ಯರು ಸಹಾ ಎಂದಿಗೂ ಬುದ್ಧರನ್ನು ಕಂಡಿಲ್ಲ ಮತ್ತು ನಿಮ್ಮ ಆಚಾರ್ಯರು ಸಹಾ ಎಂದಿಗೂ ಬುದ್ಧರನ್ನು ಕಂಡಿಲ್ಲ. ಆದ್ದರಿಂದ ಭಂತೆ ನಾಗಸೇನ, ಬುದ್ಧರು ಇರಲಿಲ್ಲ. ಬುದ್ಧರ ವಿಷಯದಲ್ಲಿ ಹೇಳುವುದಾದರೇ ಸ್ಪಷ್ಟವಾದ ಸಾಕ್ಷಿ ಇಲ್ಲ.

ಮಹಾರಾಜ, ಯಾವ ರಾಜ ಪರಂಪರೆಗೆ ಮೂಲ ಕಾರಣರಾದ ಸಂಸ್ಥಾಪಕ ಪುರಾತನ ಕ್ಷತ್ರಿಯರು ಇದ್ದರೆ?

ಖಂಡಿತ ಭಂತೆ, ಅದರ ಬಗ್ಗೆ ಯಾವುದೇ ಸಂಶಯ ಏತಕ್ಕೆ?

ಸರಿ ಮಹಾರಾಜ, ನೀವು ಎಂದಾದರೂ ಅವರನ್ನು ಕಂಡಿದ್ದೀರಾ?

ಇಲ್ಲ ಭಂತೆ.

ಮತ್ತೆ ನಿಮಗೆ ಬೋಧಿಸಿದ ರಾಜ ಪುರೋಹಿತರು ಮತ್ತು ಅಧಿಕಾರಿಗಳು ಮತ್ತು ಶಾಸನ ವಿಧಿಸಿದವರು, ಮಂತ್ರಿಗಳು ಎಂದಾದರೂ ಆ ಪುರಾತನ ಕ್ಷತ್ರಿಯರನ್ನು ಕಂಡಿದ್ದರೆ?

ಇಲ್ಲ ಭಂತೆ.

ನೀವು ಕಂಡಿಲ್ಲ, ಹಾಗೆಯೇ ನಿಮ್ಮ ಆಚಾರ್ಯರು ಕಂಡಿಲ್ಲ. ಹೀಗಿರುವಾಗ ಆ ಪುರಾತನ ಕ್ಷತ್ರಿಯರು ಇರಲೇ ಇಲ್ಲ! ಎಲ್ಲಿ ಅವರು? ಅದರ ಬಗ್ಗೆ ಸ್ಪಷ್ಟ ಸಾಕ್ಷಿಯೇ ಇಲ್ಲ.

ಆದರೆ ಭಂತೆ ನಾಗಸೇನ, ಅವರು ಬಳಸುತ್ತಿದ್ದ ರಾಜ ಲಾಂಛನಗಳು ಈಗಲೂ ಕಾಣಬಹುದು. ಅವೆಂದರೆ ಶ್ವೇತಛತ್ರಿ, ಕಿರೀಟ, ಪಾದುಕೆಗಳು, ಯಾಕ್ ಬಾಲದ ಬೀಸಣಿಕೆ, ಖಡ್ಗರತ್ನ, ಅಮೂಲ್ಯವಾದ ಸಿಂಹಾಸನ ಮತ್ತು ಶಯನ ಇವೆಲ್ಲದರಿಂದ ನಾವು ಪುರಾತನ ಕ್ಷತ್ರಿಯರು ಜೀವಿಸಿದ್ದರು ಎಂದು ತಿಳಿಯಬಹುದು ಮತ್ತು ನಂಬಬಹುದು.

ಅದೇರೀತಿಯಲ್ಲಿ ಓ ಮಹಾರಾಜ, ನಾವು ಭಗವಾನರನ್ನು ತಿಳಿಯಬಹುದು ಮತ್ತು ನಂಬಬಹುದು. ಅದಕ್ಕೂ ಕಾರಣಗಳಿವೆ, ಆಧಾರಗಳಿವೆ ಮತ್ತು ಏನದು? ಭಗವಾನರು ಬಳಸುತ್ತಿದ್ದ ಬುದ್ಧ ಲಾಂಛನಗಳು. ಅದರಿಂದಾಗಿ ಬುದ್ಧರು ಅರಹಂತರು, ಸಮ್ಮಾಸಂಬುದ್ಧರು ಆಗಿದ್ದರು, ಹಾಗು ಇದ್ದರು ಎಂದೂ ಮತ್ತು ಅವರ ಜ್ಞಾನ, ಪ್ರಜ್ಞಾ ಹೀಗಿತ್ತೆಂದು ತಿಳಿಯಬಹುದು. ಅವ್ಯಾವುವು ಎಂದರೆ ನಾಲ್ಕು ಸತಿಪಟ್ಠಾನ (ಜಾಗರೂಕತೆಯ ನಾಲ್ಕು ಪ್ರತಿಷ್ಠಾನಗಳು), ನಾಲ್ಕು ಸಮ್ಮಾಪದ್ಧಾನ (ನಾಲ್ಕು ಮಹಾ ಪ್ರಯತ್ನಶೀಲತೆ). ನಾಲ್ಕು ಇದ್ದಿಪಾದ (ನಾಲ್ಕು ಅತೀಂದ್ರಿಯ ಶಕ್ತಿಯ ಆಧಾರಗಳು). ಪಂಚ ಇಂದ್ರೀಯಗಳು (ಐದು ಅಧಿಪತ್ಯಗಳು), ಪಂಚಬಲಗಳು, ಏಳು ಬೋಧಿ ಅಂಗಗಳು ಮತ್ತು ಅಷ್ಟಾಂಗ ಮಾರ್ಗ. ಇವುಗಳಿಂದಾಗಿ ಸರ್ವಲೋಕಗಳ ದೇವತೆಗಳು ಮತ್ತು ಮಾನವರು ಭಗವಾನರು ಇದ್ದರು ಎಂದು ತಿಳಿಯುತ್ತಾರೆ ಮತ್ತು ನಂಬುತ್ತಾರೆ. ಈ ಕಾರಣದಿಂದ,  ಹೇತುವಿನಿಂದ, ಈ ತರ್ಕದಿಂದ, ಈ ತೀಮರ್ಾನದಿಂದಾಗಿ ಭಗವಾನರು ಇದ್ದರೂ ಎಂದು ಸ್ಪಷ್ಟವಾಗುತ್ತದೆ.

ಯಾರು ಉಪಾದಿಗಳನ್ನು ಕ್ಷಯಿಸಿ, ನಿಬ್ಬುತವನ್ನು ಸಾಧಿಸಿದರೋ, ಸುರಕ್ಷಿತವಾದ ದಡ ತಲುಪಿ ದುಃಖಸಾಗರದಿಂದ ಕಾಪಾಡುವರೋ ಅಂತಹವರನ್ನು ಬಹುಜನರು ತಮ್ಮ ತರ್ಕ ತೀಮರ್ಾನಗಳಿಂದಾಗಿ ಹೀಗೆ ಸವರ್ೊತ್ತಮರು ಇದ್ದರು ಎಂದು ತಿಳಿಯುತ್ತಾರೆ.

ಭಂತೆ ನಾಗಸೇನ, ಉಪಮೆಯಿಂದ ಸ್ಪಷ್ಟಪಡಿಸಿ.

ಓ ಮಹಾರಾಜ, ಇದು ಹೇಗೆಂದರೆ ನಗರ ನಿಮರ್ಾಣಕರ್ತನು (ವಾಸ್ತುಶಿಲ್ಪಿ) ಆತನು ನಿಮರ್ಾಣ ಮಾಡುವ ಮೊದಲು ಸುಂದರವಾದ ನೆಲೆಯನ್ನು ಹುಡುಕುತ್ತಾನೆ ಮತ್ತು ಅದರಲ್ಲಿ ಯಾವ ದೋಷವನ್ನು ಕಾಣದೆ, ಸಮವಾಗಿರುವ, ಬೆಟ್ಟ, ತಗ್ಗುಗಳು ಇಲ್ಲದಿರುವ, ಒರಟುನೆಲೆ ಮತ್ತು ಬಂಡೆಗಳಿಂದ ಕೂಡಿಲ್ಲದ, ಅಪಾರ ಆಕ್ರಮಣಕ್ಕೆ ಅವಕಾಶವಿಲ್ಲದ ಮತ್ತು ನಂತರ ಆತನು ಒರಟಾಗಿರುವವನ್ನೆಲ್ಲಾ ಸಮಮಾಡುತ್ತಾನೆ ಮತ್ತು ನಂತರ ಉಬ್ಬು-ತಗ್ಗುಗಳನ್ನೆಲ್ಲಾ ಸಮಗೊಳಿಸುತ್ತಾನೆ ಮತ್ತು ನಂತರ ಅಲ್ಲಿ ಸುಂದರವಾದ ನಗರವನ್ನು ಕಟ್ಟಲು ಮುಂದಾಗುತ್ತಾನೆ. ಯೋಗ್ಯವಾದ ಭಾಗಗಳನ್ನಾಗಿ ಅಳತೆ ಮಾಡುತ್ತಾನೆ ಮತ್ತು ಸುರಂಗಗಳನ್ನು ಮತ್ತು ಕೋಟೆಗಳನ್ನು ಸುತ್ತಲು ಕಟ್ಟುತ್ತಾನೆ. ಹಾಗೆಯೇ ಬಲಿಷ್ಠವಾದ ಹೆಬ್ಬಾಗಿಲನ್ನು, ಗಮನಿಸುವ ಸ್ತಂಭಗಳನ್ನು ಮತ್ತು ಕೋಟೆಯ ತೆನೆಗಳನ್ನು, ಹಾಗೆಯೇ ಅಗಲವಾದ ಚೌಕಗಳನ್ನು ಮತ್ತು ತೆರೆದ ಸ್ಥಳಗಳನ್ನು ಮತ್ತು ಕೂಡುವ ಸ್ಥಳಗಳನ್ನು ಅಡ್ಡದಾರಿಗಳು ಕೂಡುವ ಸ್ಥಳಗಳನ್ನು, ಸ್ಪಷ್ಟವಾಗಿರುವ ಮತ್ತು ಸಮ ಹೆದ್ದಾರಿಗಳು, ನಿಯಮಿತ ರೇಖೆಯಲ್ಲಿರುವ ತೆರೆದ ಅಂಗಡಿಗಳು, ಚೆನ್ನಾಗಿರುವ ಉದ್ಯಾನವನಗಳು, ಸರೋವರಗಳು, ಕಮಲದ ಕೆರೆಗಳು, ಬಾವಿಗಳು, ದೇಗುಲಗಳು, ಪ್ರತಿಯೊಂದು ದೋಷರಹಿತವಾಗಿ ನಿಮರ್ಿಸುವರು. ಆಗ ನಗರವು ಎಲ್ಲಾ ಭವ್ಯತೆಗಳಿಂದಾಗಿ ನಿಲ್ಲುವುದು. ಅವರು ಸ್ವಲ್ಪಕಾಲ ಬೇರೆ ಭೂಮಿಗೆ ಹೊರಟಾಗ, ಆ ಮಧ್ಯದಲ್ಲಿ ನಗರವು ಬೃಹತ್ತಾಗಿ ಮತ್ತು ಸಂಪದ್ಭರಿತವಾಗಿ ಆಹಾರ ಅಂಗಡಿಗಳಿಂದ ತುಂಬುತ್ತದೆ. ಶಾಂತವಾಗಿ, ಭವ್ಯವಾಗಿ, ಸುಖವಾಗಿ, ದುರ್ಘಟನೆ ಮತ್ತು ವಿಪತ್ತುಗಳಿಂದ ಮುಕ್ತವಾಗಿ, ಅಲ್ಲಿ ಎಲ್ಲಾರೀತಿಯ ಜನರು ಸೇರುವರು. ಅವರೆಂದರೆ ಕ್ಷತ್ರಿಯರು, ಬ್ರಾಹ್ಮಣರು, ವ್ಯಾಪಾರಿಗಳು, ಕಾಮರ್ಿಕರು, ಗಜಸೈನಿಕರು, ಅಶ್ವಾರೋಹಿಗಳು, ಮಹಾರಥಿಗಳು, ಸೈನಿಕರು, ಬಿಲ್ಗಾರರು, ಖಡ್ಗವೀರರು, ಧ್ವಜಧಾರಿಗಳು, ಅಧಿಕಾರಿಗಳು, ಪಿಂಡದಾವಿಕರು, ರಣಪ್ರಿಯ ಶ್ರೇಷ್ಠ ಕ್ಷತ್ರಿಯರು ವೀರಾಗ್ರಣಿಗಳು, ಬೃಹತ್ ದೇಹದಾರಿಗಳು, ವೀರರು, ಪ್ರಾಣಿಚರ್ಮ ಯೋಧರು, ಗುಲಾಮವೀರರು, ಗೂಡಾಚಾರರು, ವೃತ್ತಿಪರ ಪೈಲ್ವಾನರು, ಅಡುಗೆಭಟ್ಟರು, ಸಾರು ಮಾಡುವವರು, ಕ್ಷೌರಿಕರು, ಸ್ನಾನ ಮಾಡಿಸುವವರು, ಕಮ್ಮಾರರು, ಹೂಗಾರರು, ಅಕ್ಕಸಾಲಿಗರು, ಲೋಹಕಾರರು, ದೂತರು, ಕುಂಬಾರರು, ಲವಣಕಾರರು, ಚರ್ಮಕಾರರು, ಬಂಡಿ ನಿಮರ್ಾಣಕಾರರು, ದಂತಶಿಲ್ಪಗಳು, ಹಗ್ಗಕಾರರು, ಚಾವಣಿಕೆಗಾರರು, ನೆಯ್ಗೆಯವರು, ಬುಟ್ಟಿಗಾರರು, ಬಿಲ್ಲು ನಿಮರ್ಾಣಗಾರರು, ಬಾಣಕಾರರು, ಬಣ್ಣ ಬಳಿಯುವವರು, ಬಣ್ಣ ನಿಮರ್ಾತರು, ಸಿಂಪಿಗರು, ಹಿರಣ್ಯಿಕರು, ಬಟ್ಟೆ ವ್ಯಾಪಾರಿಗಳು, ಸೌಗಂಧಿಕ ವ್ಯಾಪಾರಿಗಳು, ಹುಲ್ಲು ಕಟುಕರು, ಮರಕುಟುಕರು, ದಾಸರು, ಹೂಫಲ-ಗೆಣಸು ಆಯ್ದು ಜೀವಿಸುವವರು, ತಿರುಗಿ ಅನ್ನ ಮಾರುವವರು, ರೊಟ್ಟಿ ಮಾರುವವರು, ಮೀನುಗಾರರು, ಕಟುಕರು, ಮದ್ಯ ವ್ಯಾಪಾರಿಗಳು, ನಟರು, ನಾಟ್ಯಕಾರರು, ದೊಂಬರಾಟದವರು, ವಿದೂಷಕರು, ಹಾಡುಗಾರರು, ಮುಷ್ಠಿಮಲ್ಲರು, ಶವ ಸುಡುವವರು, ಪುಷ್ಪಖದಕರು, ಅನಾಗರಿಕರು, ಕಾಡುಜನರು, ವೇಶ್ಯೆಯರು, ಜಗ್ಗುತ್ತಾ ಧುಮುಕುವವರು, ಗುಲಾಮ ಹೆಣ್ಣುಗಳು, ಹಾಗೆಯೇ ವಿವಿಧ ಜನರು, ಸಿಥಿಯಾ, ಬ್ಯಾಕ್ಟ್ರಿಯಾ, ಚೀನಾ, ವಿಲಾತ, ಉಚ್ಚೇನಿ, ಬಾರುಕಖ್ಖ, ಕಾಶಿ, ಕೋಸಲ, ಗಡಿ ಭೂಮಿಯವರು, ಮಗಧ ದೇಶದವರು, ಸಾಕೇತದವರು, ಸೂರತ್ನವರು, ಪಶ್ಚಿಮದವರು, ಕೊತಂಬರ, ಮಧುರ, ಅಲೆಗ್ಸಾಂಡ್ರಿಯ (ಅಲಸಂದ), ಕಾಶ್ಮೀರ ಮತ್ತು ಗಂಧಾರ ಈ ಎಲ್ಲಾ ದೇಶದವರು ಇಲ್ಲಿ ನಿವಾಸಿಗಳಾಗಿದ್ದಾರೆ. ಹೊಸನಗರವನ್ನು ನಿರಂತರವಾಗಿ ಹುಡುಕುತ್ತ, ದೋಷರಹಿತ, ಪೂರ್ಣ ಮತ್ತು ರಮ್ಯವಾದ ನಗರದ ಬಗ್ಗೆ ಹೀಗೆ ಹೇಳುತ್ತಾರೆ: ಈ ನಗರವನ್ನು ರಚಿಸಿದ ವಾಸ್ತುಶಿಲ್ಪ ನಿಜಕ್ಕೂ ಅತ್ಯಂತ ಸಮರ್ಥನಾಗಿದ್ದಾನೆ.

ಅದೇರೀತಿಯಲ್ಲಿ ಓ ರಾಜ, ಭಗವಾನರು ಅತುಲರು, ಅಸಮಾನರು, ಅನುಪಮಸಂಪನ್ನರು, ಅನನ್ಯರು, ಸರಿಸಾಟಿಯಿಲ್ಲದವರು, ಹೋಲಿಕೆಗೆ, ಅಳತೆಗೆ ಮೀರಿದವರು, ಮೆಚ್ಚುಗೆ ಪಡೆಯುವವರು, ಅಮಿತ, ಅನಂತ ಗುಣಶಾಲಿಗಳು, ಶೀಲಸಂಪನ್ನರು, ಅಪರಿಮಿತ ಪ್ರಾಜ್ಞರು, ಅನಂತತೇಜರು, ಭವ್ಯರಾದರವರು, ಅನಂತ ವೀರ್ಯಸಂಪನ್ನರು, ಅನಂತಬಲರು ಯಾವಾಗ ಅವರು ಪಾರಾಮಿತಗಳನ್ನು ಪರಿಪೂರ್ಣಗೊಳಿಸಿದರೋ ಆಗಲೇ ಅವರು ಮಾರ ಮತ್ತು ಅವರ ಗಣಗಳನ್ನು ದೂರೀಕರಿಸಿದರು. ಅವರು ಪಾಖಂಡವಾದದ ಬಲೆಯನ್ನು ನುಚ್ಚುನೂರು ಮಾಡಿದರು ಮತ್ತು ಅಜ್ಞಾನವನ್ನು ಕಿತ್ತೆಸೆದರು ಮತ್ತು ವಿದ್ಯೆಯು ಉದಯಿಸಲು ಕಾರಣರಾದವರು, ಧಮ್ಮುಖರು ಎಲ್ಲಕ್ಕಿಂತ ಉನ್ನತವಾದುದಕ್ಕೆ ತಲುಪಿದವರು ಆಗಿದ್ದು ಅಜೇಯರಾಗಿ ಧಮ್ಮನಗರವನ್ನು ಕಟ್ಟಿದವರು.

ಮತ್ತು ಓ ಮಹಾರಾಜ, ಭಗವಾನರ ಧಮ್ಮನಗರಿಯಲ್ಲಿ ಶೀಲವೇ ಅದರ ಕೋಟೆ, ಪಾಪಲಜ್ಜೆ ಮತ್ತು ಪಾಪಭೀತಿಯೇ ಅದರ ಕೋಟೆಯ ಪಕ್ಕದಲ್ಲಿರುವ ಕಂದಕ, ಜ್ಞಾನಧಾರವೇ ಕೊಟ್ಟಕವಾಗಿದೆ. (ಕೋಟೆಯ ಮೇಲೆ ಗೋಡೆ). ಪ್ರಯತ್ನಶೀಲತೆಯೇ ಅದರ ಕಾವಲುಗೋಪುರ ಮತ್ತು ಶ್ರದ್ಧೆಯೇ ಅದರ ಆಧಾರಸ್ತಂಭಗಳು ಮತ್ತು ಜಾಗರೂಕತೆಯೇ ಅದರ ಪಹರೆದಾರ. ಪ್ರಜ್ಞಾವೇ ಅದರ ಪ್ರಸಾದ, ಸುತ್ತಂತವೇ ಅದರ ಮಾರುಕಟ್ಟೆ, ಅಭಿಧಮ್ಮವೇ ಅದರ ಅಡ್ಡ ಹೆದ್ದಾರಿಗಳು, ವಿನಯವೇ ಅದರ ನ್ಯಾಯಾಲಯ, ಮತ್ತು ಸತಿಪಟ್ಠಾನವೇ ಅದರ ಮುಖ್ಯಬೀದಿಯು. ಆ ಬೀದಿಯಲ್ಲಿ ಓ ಮಹಾರಾಜ, ಈ ಮಾರುಕಟ್ಟೆಗಳು ತೆರೆದಿರುತ್ತದೆ. ಅವುಗಳಲ್ಲಿ ಹೂವಿನ ಮಾರುಕಟ್ಟೆ, ಹಣ್ಣಿನ ಮಾರುಕಟ್ಟೆ, ಪ್ರತ್ಯೌಷಧಗಳ ಮಾರುಕಟ್ಟೆ ಮತ್ತು ಔಷಧದ ಮಾರುಕಟ್ಟೆ ಮತ್ತು ಅಮೃತದ ಮಾರುಕಟ್ಟೆ, ರತ್ಮಗಳ ಮಾರುಕಟ್ಟೆ ಎಲ್ಲಾರೀತಿಯ ಮಾರುಕಟ್ಟೆ.

ಭಂತೆ ನಾಗಸೇನ, ಯಾವುದು ಬುದ್ಧಭಗವಾನರು ಪುಷ್ಪ ಮಾರುಕಟ್ಟೆ? (198)

ಓ ಮಹಾರಾಜ, ಕೆಲವು ಧ್ಯಾನದ ವಿಷಯಗಳಾಗಿವೆ. ಅವುಗಳೆಲ್ಲಾ ಬುದ್ಧ ಭಗವಾನರಿಂದಲೇ ಬಂದಿವೆ. ಅರಹಂತ ಸಮ್ಮಾಸಂಬುದ್ಧರಿಂದಲೇ ಪ್ರಕಾಶಿಸಲ್ಪಟ್ಟಿವೆ. ಮತ್ತು ಅವೆಲ್ಲಾ ಹೀಗಿವೆ: ಅನಿತ್ಯ ಸಞ್ಞಾ (ಅನಿತ್ಯದ ಗ್ರಹಿಕೆ), ದುಃಖಸಞ್ಞಾ, ಅನತ್ತಸಞ್ಞಾ ಅಶುಭಾಸಞ್ಞಾ, ಅಪಾಯದಸನ್ಯಾ, ಪಹಾನಸಞ್ಞಾ (ತ್ಯಜಿಸುವಿಕೆಯ ಗ್ರಹಿಕೆ), ವಿರಾಗಸಞ್ಞಾ, ನಿರೋಧಸಞ್ಞಾ, ಸರ್ವಲೋಕಗಳ ವಿಕರ್ಷಣಾಸಞ್ಞಾ, ಸರ್ವಸಂಖಾರಗಳ ಅನಿತ್ಯಸಞ್ಞಾ, ಅನಾಪಾನಸತಿ. ಊದಿರುವ ಶವದ ಅಶುಭಾಸಞ್ಞಾ, ನೀಲಿಗಟ್ಟಿದ ಶವದ ಅಶುಭಾಸಞ್ಞಾ, ಕೀವುಗಟ್ಟಿ ಕೊಳೆತ ಶವದ ಅಶುಭಾಸಞ್ಞಾ, ವಿಚ್ಚೇಧ (ತುಂಡಾದ)ಗೊಂಡಿರುವ ಶವದ ಅಶುಭಾಸಞ್ಞಾ, ಪ್ರಾಣಿಗಳು ಕಚ್ಚಿತಿಂದಿರುವ ಶವದ ಅಶುಭಾಸಞ್ಞಾ, ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾಸಞ್ಞಾ, ಕತ್ತರಿಸಿ ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾಸಞ್ಞಾ, ರಕ್ತಸಿಕ್ತ ಶವದ ಅಶುಭಾಸಞ್ಞಾ, ಕ್ರಿಮಿಗಳಿಂದ ಆವೃತವಾಗಿರುವ ಶವದ ಅಶುಭಾಸಞ್ಞಾ, ಅಸ್ತಿಪಂಜರದ ಅಶುಭಾಸಞ್ಞಾ, ಮೈತ್ರಿಯ ಸಞ್ಞಾ, ಕರುಣೆಯ ಸಞ್ಞಾ, ಉಪೇಕ್ಷೆಯ ಗ್ರಹಿಕೆ, ಮರಣಾನುಸ್ಮೃತಿ, ಕಾಯಾಗತಾಸ್ಮೃತಿ, ಇವಿಷ್ಟು ಮಹಾರಾಜ ಬುದ್ಧಭಗವಾನರಿಂದ ನುಡಿಯಲ್ಪಟ್ಟಿರುವ ಧ್ಯಾನ ವಿಷಯಗಳಾಗಿವೆ ಮತ್ತು ಯಾರ್ಯಾರು ಜರಾಮರಣದಿಂದ ಪಾರಾಗಲು ಬಯಸುವನೋ ಆತನು ಇದರಲ್ಲಿ ಒಂದನ್ನು ಆಯ್ಕೆಮಾಡಿ, ಆತನು ಸಾಧನೆ ಮಾಡಿ ರಾಗದಿಂದ, ದ್ವೇಷದಿಂದ, ಮೋಹದಿಂದ, ಅಹಂನಿಂದ, ದೃಷ್ಟಿಕೋನಗಳಿಂದ ವಿಮುಕ್ತನಾಗುತ್ತಾನೆ. ಹೀಗೆ ಆತನು ಸಂಸಾರವನ್ನು ದಾಟುತ್ತಾನೆ. ತೃಷ್ಣೆಯ ಪ್ರವಾಹದಿಂದ ಪಾರಾಗುತ್ತಾನೆ. ಮತ್ತು ತನ್ನನ್ನು ತ್ರಿವಿಧದ ಕಲೆಗಳಿಂದ ಶುದ್ಧೀಕರಿಸಿಕೊಳ್ಳುತ್ತಾನೆ ಮತ್ತು ಕ್ಲೇಷಗಳನ್ನು ನಾಶಗೊಳಿಸುತ್ತಾನೆ ಮತ್ತು ತನ್ನಲ್ಲಿರುವ ಎಲ್ಲಾ ಅಕುಶಲಗಳನ್ನು ನಾಶಗೊಳಿಸಿ, ಆತನು ಭವ್ಯವಾದ ನಿಬ್ಬಾಣನಗರಿಯನ್ನು ಪ್ರವೇಶಿಸುತ್ತಾನೆ. ಅದು ಅಮಲವು, ವಿರಜವು, ಶುದ್ಧವು, ಶ್ವೇತವು, ವಯಸ್ಸಿನ ಅತೀತವೂ, ಅಮರವು, ಸುಖವು, ಅಭಯವು ಆಗಿರುವ ನಿಬ್ಬಾಣನಗರಿಯಾಗಿದೆ. ಆತನು ಅರಹತ್ವದಲ್ಲಿ ತನ್ನ ಚಿತ್ತವನ್ನು ಮುಕ್ತವಾಗಿಸುತ್ತಾನೆ ಮತ್ತು ಇದೇ ಓ ಮಹಾರಾಜ, ಬುದ್ಧಭಗವಾನರ ಪುಷ್ಪ ಮಾರುಕಟ್ಟೆಯಾಗಿದೆ.

ಕರ್ಮದ ಬೆಲೆಯಂತೆ, ನಿನ್ನೊಂದಿಗೆ ತೆಗೆದುಕೋ ಮತ್ತು ಆ ಮಾರುಕಟ್ಟೆಗೆ ಹೋಗು. ನಿನ್ನ ಚಿತ್ತಕ್ಕೆ ಹೊಂದುವಂತಹ (ಧ್ಯಾನ) ವಿಷಯ ಕೊಂಡುಕೋ ನಿನ್ನನ್ನು ವಿಮುಕ್ತಿಗೊಳಿಸಿ, ಸ್ವತಂತ್ರನಾಗು.

ಭಂತೆ ನಾಗಸೇನ, ಯಾವುದು ಬುದ್ಧರ ಗಂಧ ಮಾರುಕಟ್ಟೆಯು? (199)

ಓ ಮಹಾರಾಜ, ಶೀಲಗಳಲ್ಲಿ ಹಲವಾರು ವಿಭಾಗಗಳಿವೆ ಮತ್ತು ಅದೆಲ್ಲಾ ಭಗವಾನರಿಂದ ಪ್ರಕಾಶಿಸಲ್ಪಟ್ಟಿವೆ. ಶೀಲಗಂಧದಿಂದ ಅನುಲಿಪ್ತವಾಗಿರುವ ಭಗವಾನರ ಪುತ್ತರಾದ ಸಂಘವು ದೇವಲೋಕ ಸಹಿತ ಶೀಲಗಂಧದಿಂದ ಧೂಪಿಸಿರುವರು, ಪ್ರತಿ ದಿಕ್ಕಿನಲ್ಲೂ, ಎಲ್ಲಾ ದಿಕ್ಕಿನಲ್ಲೂ ಶೀಲ ಸುಮಗಂಧವನ್ನು ವ್ಯಾಪಿಸಿರುವರು, ಗಾಳಿ ಚಲಿಸುವ ದಿಕ್ಕಿನಲ್ಲಿ, ಗಾಳಿಗೆ ವಿರುದ್ಧ ದಿಕ್ಕಿನಲ್ಲೂ ಶೀಲ ಸುಗಂಧವನ್ನು ವ್ಯಾಪಿಸಿರುವರು ಮತ್ತು ಯಾವುದದು ಶೀಲಗಳ ಸುಗಂಧವು? ಅವೆಂದರೆ ಶರಣಶೀಲ, ಪಂಚಶೀಲ, ಅಷ್ಠಾಂಗಶೀಲ, ದಶಾಂಗಶೀಲ, ಐದು ಪಠಣೆಗಳಲ್ಲಿ ಅಡಕವಾಗಿರುವ ಸಂಯಮಶೀಲ, ಪಾತಿಮೋಕ್ಖ, ಸಂಯಮಶೀಲ ಮತ್ತು ಇದೇ ಓ ಮಹಾರಾಜ, ಬುದ್ಧಭಗವಾನರ ಗಂಧದ ಮಾರುಕಟ್ಟೆಯಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾಧಿದೇವ ಭಗವಾನರು ಹೀಗೆ ಹೇಳಿದ್ದಾರೆ: ಪುಷ್ಪಗಳ ಗಂಧವೂ ವಾಯುವಿನ ಎದುರು ದಿಕ್ಕಿನಲ್ಲಿ ಹರಡಲಾರದು. ಹಾಗೆಯೇ ಚಂದನ (ಶ್ರೀಗಂಧ), ತಗರ, ಮಲ್ಲಿಗೆಯ ಪರಿಮಳವು ಸಹಾ. ಆದರೆ ಸಂತರ ಯಶೋಗಂಧವು ವಾಯುವಿಗೆ ಎದುರಾಗಿಯು ಹಬ್ಬುತ್ತದೆ. ಸತ್ಪುರುಷರ ಶೀಲ ಸುಗಂಧವು ಸರ್ವದಿಕ್ಕುಗಳಿಗೂ ಪ್ರಸರಿಸುತ್ತದೆ.

ಚಂದನದ, ತಗರದ, ಉತ್ಪಲದ, ಮಲ್ಲಿಗೆಗಳ ಸುಗಂಧಕ್ಕಿಂತ ಶೀಲ ಸುಗಂಧವು ಅನುತ್ತರವಾಗಿದೆ.
ತಿಳಿಯಾಗಿದೆ ಈ ಸುಗಂಧಗಳಾದ ತಗರ, ಚಂದನಗಳು. ಆದರೆ ಶೀಲವಂತನ ಸುಗಂಧವಂತು ಗಾಢವಾಗಿ, ಉತ್ತಮೋತ್ತಮತೆಯಿಂದ ಕೂಡಿ ದೇವತೆಗಳ ನಡುವೆ ಸಹಾ ಪ್ರಸರಿಸುತ್ತದೆ.

ಭಂತೆ ನಾಗಸೇನ, ಯಾವುದು ಬುದ್ಧಭಗವಾನರ ಫಲಮಾರುಕಟ್ಟೆಯು? (200)

ಓ ಮಹಾರಾಜ, ಹಲವು ಫಲಗಳು ಬುದ್ಧಭಗವಾನರಿಂದ ತಿಳಿಸಲ್ಪಟ್ಟಿವೆ. ಅವೆಂದರೆ ಸೋತಪತ್ತಿಫಲ, ಸಕದಾಗಾಮಿಫಲ, ಅನಾಗಾಮಿ ಫಲ, ಅರಹತ್ವಫಲ, ಹಾಗೆಯೇ ಶೂನ್ಯತಾ ಫಲಸಮಾಪತ್ತಿ, ಅನಿಮಿತ್ತ ಫಲಸಮಾಪತ್ತಿ ಮತ್ತು ಅಪ್ಪಣಿಹಿತ ಫಲಸಮಾಪತ್ತಿ ಮತ್ತು ಯಾರೆಲ್ಲರೂ ಇವುಗಳಿಗಾಗಿ ಹಾತೊರೆದರೊ ಅವರು ಅದಕ್ಕೆ ಕರ್ಮಮೂಲವನ್ನು ಬೆಲೆಕಟ್ಟಿ, ತಾವಿಷ್ಟಪಟ್ಟ ಫಲವನ್ನು ಪಡೆಯಬಹುದು. ಅದು ಸೋತಪತ್ತಿ ಫಲವಾಗಿರಬಹುದು... ಅಥವಾ ಅಪ್ಪಣಿಹಿತಫಲ ಸಮಾಪತ್ತಿಯಾಗಿರಬಹುದು.
ಓ ಮಹಾರಾಜ, ಹೇಗೆ ಮಾವಿನ ಮರದ ಬೆಳೆಗಾರನು ವರ್ಷವೆಲ್ಲಾ ಹಣ್ಣು ಸಿಕ್ಕರೂ ಆತನು ಗ್ರಾಹಕರು ಬರುವವರೆಗೆ ಹಣ್ಣುಗಳನ್ನು ಕೆಳಗೆ ಬೀಳಿಸುವುದಿಲ್ಲ, ಆದರೆ ಗ್ರಾಹಕ ಬಂದಾಗ ಬೆಳೆಸಿರುವವನು ಬೆಲೆ ನಿಗದಿಪಡಿಸಿ, ಹಣ ಪಡೆದುಕೊಂಡು ಹೀಗೆ ಹೇಳುವನು ಬಾ ಒಳ್ಳೆಯ ಮನುಷ್ಯನೇ, ಈ ಮರವು ಸದಾ ಹಣ್ಣು ಬಿಡುವುದು, ನಿನಗೆ ಬೇಕಾದ ಹಣ್ಣನ್ನು ನೀನು ಪಡೆದುಕೋ. ಅಂದರೆ ಕಾಯಾಗಿಯೂ ಹಣ್ಣಲ್ಲದ, ಅಥವಾ ಕೊಳೆತ, ಕೇಶಿಕ, ಹುಳಿ ಅಥವಾ ಹಣ್ಣಾಗಿರುವ ಪಕ್ವ. ಮತ್ತು ಗ್ರಾಹಕನು ಬೆಲೆನೀಡಿ ತನಗೆ ಇಷ್ಟವಾದ ಕಾಯಿ ಅಥವಾ ಕೊಳೆತ ಅಥವಾ ಕೇಶಿಕ ಅಥವಾ ಹುಳಿ ಅಥವಾ ಪಕ್ವ ಹಣ್ಣುಗಳನ್ನು ತೆಗೆದುಕೊಳ್ಳುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರ್ಯಾರು ಯಾವ ಫಲವನ್ನು ಇಚ್ಛಿಸುತ್ತಾರೋ ಅವರು ಅದಕ್ಕೆ ಬೇಕಾದ ಕರ್ಮದ ಮೂಲವನ್ನು ತೆತ್ತು ಪಡೆಯುತ್ತಾರೆ. ಹೀಗೆ ಓ ಮಹಾರಾಜ, ಇದೇ ಭಗವಾನರ ಹಣ್ಣಿನ ಮಾರುಕಟ್ಟೆಯಾಗಿದೆ.
ಕರ್ಮಮೂಲವನ್ನು ಜನರು ನೀಡಿ ಅಮರತ್ವದ ಫಲವನ್ನು ಪಡೆಯುವರು. ಯಾರೆಲ್ಲಾ ಅಮರತ್ವದ ಫಲವನ್ನು ಪಡೆದಿರುವವರೋ ಅವರೆಲ್ಲಾ ಪರಮಸುಖವನ್ನು ಹೊಂದುವರು.

ಮತ್ತೆ ಭಂತೆ ನಾಗಸೇನ, ಯಾವುದು ಬುದ್ಧಭಗವಾನರ ಮಾರುಕಟ್ಟೆಯಲ್ಲಿ ಪ್ರತ್ಯೌಷಧವಾಗಿದೆ? (201)

ಓ ಮಹಾರಾಜ, ಕೆಲವು ಪ್ರತ್ಯೌಷಧಿಗಳು ಭಗವಾನರಿಂದ ತಿಳಿಸಲ್ಪಟ್ಟಿವೆ. ಕ್ಲೇಶ ವಿಷದಿಂದ ಪಾರಾಗಲು ದೇವತೆಗಳು ಮತ್ತು ಮಾನವರಿಗೆ ಭಗವಾನರು ಪ್ರತ್ಯೌಷಧಗಳನ್ನು ನೀಡಿದ್ದಾರೆ ಮತ್ತು ಯಾವುವವು ಆ ಪ್ರತ್ಯೌಷಧಗಳು? ಅವೆಂದರೆ ನಾಲ್ಕು ಆರ್ಯಸತ್ಯಗಳು ಭಗವಾನರಿಂದ ನುಡಿಯಲ್ಪಟ್ಟಿವೆ. ದುಃಖ ಆರ್ಯಸತ್ಯ, ದುಃಖ ಸಮುದಾಯ ಆರ್ಯಸತ್ಯ, ದುಃಖ ನಿರೋಧ ಆರ್ಯಸತ್ಯ ಮತ್ತು ದುಃಖ ನಿರೋಧಗಾಮಿನಿ ಪಟಿಪದ ಆರ್ಯಸತ್ಯ. ಯಾರೆಲ್ಲರೂ ಉನ್ನತವಾದ ಜ್ಞಾನವನ್ನು ಪಡೆಯಲು ಇಚ್ಛುಕರೋ ಅವರು ನಾಲ್ಕು ಸತ್ಯಗಳನ್ನು ಕೇಳಿ, ಅದರಂತೆ ಸಾಧಿಸಿ, ಪುನರ್ಜನ್ಮದಿಂದ ಪಾರಾಗುವರು. ಹಾಗೆಯೇ ಜರೆ, ಜರಾ, ಮರಣ, ಶೋಕ, ಪ್ರಲಾಪ, ನೋವು, ನಿರಾಶೆ ಎಲ್ಲಾ ದುಃಖಗಳಿಂದ ಪಾರಾಗುವರು. ಇದೇ ಓ ಮಹಾರಾಜ, ಬುದ್ಧಭಗವಾನರ ಮಾರುಕಟ್ಟೆಯ ಪ್ರತ್ಯೌಷಧವಾಗಿದೆ.

ಯಾವೆಲ್ಲಾ ಪ್ರತ್ಯೌಷಧಿಗಳು ಲೋಕದಲ್ಲಿ ಇರುವವೋ, ವಿಷವನ್ನು ನಾಶಗೊಳಿಸುವ ಪ್ರತ್ಯೌಷಧಿಗಳೋ, ಅವ್ಯಾವುವು ಧಮ್ಮಾ ಪ್ರತ್ಯೌಷಧಿಗೆ ಸಮವಲ್ಲ. ಓ ಭಿಕ್ಖುಗಳೇ ಇವನ್ನು ಸೇವಿಸಿ.

ಮತ್ತೆ ಭಂತೆ ನಾಗಸೇನ, ಯಾವುದು ಬುದ್ಧ ಭಗವಾನರ ಔಷಧಿಯ
ಮಾರುಕಟ್ಟೆ? (202)

ಓ ಮಹಾರಾಜ, ಕೆಲವು ಔಷಧಿಗಳಿವೆ, ಅದನ್ನು ಭಗವಾನರು ಪ್ರಕಟಿಸಿದ್ದಾರೆ. ಆ ಔಷಧಿಗಳಿಂದ ಇಡೀ ದೇವಲೋಕಸಹಿತ ಮತ್ತು ಮಾನವರಿಗೆ ಅವರು ಗುಣಪಡಿಸಿದ್ದಾರೆ ಮತ್ತು ಆ ಔಷಧಿಗಳು ಯಾವುವು ಎಂದರೆ ನಾಲ್ಕು ಸತಿಪಟ್ಠಾಣಗಳು, ನಾಲ್ಕು ಸಮ್ಮಪ್ಪಧಾನಗಳು, ನಾಲ್ಕು ಇದ್ದಿಪಾದಗಳು, ಪಂಚೇಂದ್ರಿಯಗಳು, ಪಂಚಬಲಗಳು, ಸಪ್ತಬೋಧಿ ಅಂಗಗಳು ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ. ಈ ಔಷಧಿಗಳಿಮದ ಭಗವಾನರು ಮಿಥ್ಯಾದೃಷ್ಟಿಯನ್ನು ವಿಸಜರ್ಿಸಿದ್ದರು, ಮಿಥ್ಯಾ ಸಂಕಲ್ಪವನ್ನು ವಿಸಜರ್ಿಸಿದ್ದರು ಹಾಗೆಯೇ ಮಿಥ್ಯಾವಾಚಾ, ಮಿಥ್ಯಾಕರ್ಮ, ಮಿಥ್ಯಾಜೀವನವನ್ನು ವಿಸಜರ್ಿಸಿದ್ದರು. ಹಾಗೆಯೇ ಮಿಥ್ಯಾ ವ್ಯಾಯಾಮವನ್ನು ಮಿಥ್ಯಾಸತಿ ಮತ್ತು ಮಿಥ್ಯಾ ಸಮಾಧಿಯನ್ನು ವಿಸಜರ್ಿಸಿದ್ದರು. ಹಾಗೆಯೇ ಅವರಲ್ಲಿ ಲೋಭ, ದ್ವೇಷ, ಅಹಂಕಾರ, ಮಿಥ್ಯಾದೃಷ್ಟಿ, ಸಂಶಯ, ಚದುರುವಿಕೆ, ಜಡತ್ವ, ಆಲಸಿಕೆ, ಪಾಪಲಜ್ಜೆ ಇಲ್ಲದಿರುವಿಕೆ, ಪಾಪಭಯವಿಲ್ಲದಿರುವಿಕೆ ಮತ್ತು ಸರ್ವಕ್ಲೇಷಗಳು ವಾಂತಿಯಾಗುವಂತೆ ಮಾಡುವಂತಹ ಔಷಧಿಗಳಿವೆ. ಇವೇ ಮಹಾರಾಜ, ಭಗವಾನರ ಔಷಧಿಯ ಮಾರುಕಟ್ಟೆಯಾಗಿದೆ.

ಯಾವೆಲ್ಲಾ ಔಷಧಿಗಳು ಲೋಕದಲ್ಲಿ ಇವೆಯೋ, ವಿವಿಧರೀತಿಯಲ್ಲಿ ಬಹುವಿಧವಾಗಿವೆಯೋ ಅವ್ಯಾವುದು ಧಮ್ಮ ಔಷಧಿಗೆ ಸಮವಲ್ಲ, ಇವನ್ನು ಸೇವಿಸಿ ಭಿಕ್ಷುಗಳೇ.

ಧಮ್ಮ ಔಷಧವನ್ನು ಸೇವಿಸಿರುವ ಅವರು ಜರಾಮರಣದಿಂದ ಪಾರಾಗಿ ಇದನ್ನು ದಶರ್ಿಸಿ, ವೃದ್ಧಿಗೊಳಿಸಿದಾಗ ಉಪಾದಿಗಳು ಕ್ಷಯವಾಗಿ ವಿಕರ್ಷಣ ಸ್ಥಿತಿಯನ್ನು ತಲುಪುವರು.

ಮತ್ತೆ ಭಂತೆ ನಾಗಸೇನ, ಬುದ್ಧ ಭಗವಾನರ ಮಾರುಕಟ್ಟೆಯಲ್ಲಿರುವ ಅಮೃತ ಯಾವುದು? (203)


ಓ ಮಹಾರಾಜ, ಬುದ್ಧಭಗವಾನರಿಂದ ಅಮರತ್ವವು ವಿವರಿಸಲ್ಪಟ್ಟಿದೆ, ಆ ಅಮೃತವನ್ನು ಸಕಲ ದೇವ ಮತ್ತು ಮಾನವರ ಮೇಲೆ, ರಾಜನ ಸಿಂಹಾಸನದ ಮೇಲೆ ಸಿಂಪಡಿಸುವಂತೆ, ಸಿಂಚನ ಮಾಡಿದಾಗ, ಅವರೆಲ್ಲರೂ ಪುನರ್ಜನ್ಮಗಳಿಂದ, ಮುಪ್ಪು, ರೋಗಗಳಿಂದ, ಮರಣಗಳಿಂದ, ದುಃಖಗಳಿಂದ, ಪ್ರಲಾಪ, ನೋವು, ಶೋಕಗಳಿಂದ ಮುಕ್ತರಾಗುವರು ಮತ್ತು ಯಾವುದು ಆ ಅಮೃತ? ಅದೇ ಕಾಯಾಗತ ಸ್ಮೃತಿಯಾಗಿದೆ. ಓ ಮಹಾರಾಜ, ದೇವಾದಿದೇವ ಭಗವಾನರು ಇದರ ಬಗ್ಗೆ ಹೀಗೆ ಹೇಳಿದ್ದಾರೆ.

ಓ ಭಿಕ್ಷುಗಳೇ, ಯಾರು ಕಾಯಗತಾಸತಿಯಲ್ಲಿ ಅನಂದಿತರಾಗಿ ಧ್ಯಾನಿಸುವರೋ, ಅವರು ಅಮರತ್ವದ ಅಮೃತವನ್ನು ಸವಿಯುವರು.

ಇದೇ ಓ ಮಹಾರಾಜ, ಭಗವಾನರ ಅಮೃತದ ಮಾರುಕಟ್ಟೆಯಾಗಿದೆ.
ಮಾನವಕುಲವು ರೋಗದಿಂದ ಪೀಡಿತವಾಗಿರುವುದನ್ನು ಕಂಡು ಅವರು ಮುಕ್ತವಾಗಿ ಅಮೃತದ ಅಂಗಡಿಯನ್ನು ತೆರೆದಿಹರು, ಮತ್ತೆ ಹೋಗಿ ಭಿಕ್ಷುಗಳೇ, ನಿಮ್ಮ ಕಮ್ಮವನ್ನು ನೀಡಿ, ಕೊಂಡು ಅಮರತ್ವದ ಆಹಾರವನ್ನು ಸೇವಿಸಿ.

ಮತ್ತೆ ಭಂತೆ ನಾಗಸೇನ, ಬುದ್ಧಭಗವಾನರ ರತ್ನದ ಮಾರುಕಟ್ಟೆ ಯಾವುದು?(204)

ಕೆಲವು ರತ್ನಗಳಿವೆ ಓ ಮಹಾರಾಜ, ಅವು ಭಗವಾನರಿಂದ ತಿಳಿಯಲ್ಪಟ್ಟಿವೆ. ಅವುಗಳನ್ನು ಭಗವಾನರ ಪುತ್ರರು (ಭಿಕ್ಷುಗಳು) ಧರಿಸಿದವರಾಗಿ, ಇಡೀ ದೇವತೆಗಳು ಮತ್ತು ಮಾನವರ ಲೋಕದಲ್ಲಿ ಪ್ರಕಾಶಿತರಾಗುವರು, ಹೊಳೆಯುವರು, ಕ್ಷಿತಿಜದಿಂದ ಕ್ಷಿತಿಜಕ್ಕೆ ಭವ್ಯವಾದ ಕಾಂತಿಯನ್ನು ನೀಡುವರು ಮತ್ತು ಆ ರತ್ನಗಳೆಂದರೆ ಶೀಲರತ್ನ, ಸಮಾಧಿರತ್ನ, ಪ್ರಜ್ಞಾರತ್ನ, ವಿಮುಕ್ತಿರತ್ನ, ವಿಮುಕ್ತಿಜ್ಞಾನ ದರ್ಶನರತ್ನ, ಪಟಿಸಂಭಿದಾರತ್ನ ಮತ್ತು ಭೋಜ್ಹಾಂಗರತ್ನ.

ಓ ಮಹಾರಾಜ, ಯಾವುದು ಶೀಲರತ್ನ? (205)

ಶೀಲರತ್ನವೆಂದರೆ ಪಾತಿಮೋಕ್ಖ ಸಂವರಶೀಲ (ಭಿಕ್ಷುಗಳ ನಿಯಮ ಶೀಲ) ಹಾಗೆಯೇ ಚಿಕ್ಕ ಶೀಲ, ಮಧ್ಯಮ ಶೀಲ, ಮಹಾಶೀಲ, ಮಾರ್ಗಶೀಲ, ಫಲಶೀಲ, ಮತ್ತು ಲೋಕದಲ್ಲಿರುವ ಎಲ್ಲಾ ಜೀವಿಗಳಲ್ಲಿ ಓ ಮಹಾರಾಜ, ದೇವತೆಗಳಾಗಲಿ, ಮಾನವರಾಗಲಿ, ಮಾರ, ಬ್ರಹ್ಮರಾಗಲಿ, ಸಮಣ ಬ್ರಾಹ್ಮಣರಾಗಲಿ ಅವರೆಲ್ಲರೂ ಇಚ್ಛೆಪಡುವ ರತ್ನವೆಂದರೆ ಶೀಲವೇ ಆಗಿದೆ. ಮತ್ತೆ ಓ ಮಹಾರಾಜ, ಭಿಕ್ಷುವು ಇದನ್ನು ಧರಿಸಿದಾಗ ಎಲ್ಲಾದಿಶೆಗಳಲ್ಲೂ ಪ್ರಕಾಶ ನೀಡುವವನಾಗುತ್ತಾನೆ. ಅವೀಚಿ ನರಕದಿಂದ ಹಿಡಿದು, ಸುಗತಿಯ ದೇವಲೋಕಗಳವರೆಗೂ ಆತನು ಪ್ರಕಾಶಿಸುತ್ತಾನೆ. ಅಂತಹ ರತ್ನಗಳು ಬುದ್ಧ ಭಗವಾನರ ಮಾರುಕಟ್ಟೆಯಲ್ಲಿ ಸಿಗುತ್ತವೆ, ಅದನ್ನೇ ಭಗವಾನರ ಶೀಲರತ್ನ ಎನ್ನುವರು.

ಇವೆಲ್ಲಾ ವಿಧವಿಧವಾದ ಶೀಲಗಳನ್ನು ಬುದ್ಧಭಗವಾನರ ಅಂಗಡಿಯಲ್ಲಿ ಮಾರಲಾಗುತ್ತದೆ. ಕರ್ಮವನ್ನೇ ಬೆಲೆಯಾಗಿ ನೀಡಿ, ಈ ರತ್ನಗಳನ್ನು ಕೊಂಡುಕೊಳ್ಳಿ ಮತ್ತು ಧರಿಸಿಕೊಳ್ಳಿರಿ.

ಮತ್ತೆ ಓ ಮಹಾರಾಜ, ಭಗವಾನರ ಸಮಾಧಿರತ್ನ ಎಂದರೇನು? (206)

ಸವಿತರ್ಕ ಮತ್ತು ಸವಿಚಾರಗಳಿಂದ ಕೂಡಿದ ಸಮಾಧಿ, ಅವಿತರ್ಕವಿಚಾರಗಳಿಲ್ಲದ ಸಮಾಧಿ, ಅವಿತರ್ಕ ಅವಿಚಾರಗಳಿಂದ ಕೂಡಿದ ಸಮಾಧಿ (ವಿತರ್ಕವಿಚಾರಗಳೆರಡು ಇಲ್ಲದ) ಶೂನ್ಯತೆಯ ಸಮಾಧಿ, ಅನಿಮಿತ್ತ ಸಮಾಧಿ (ಚಿಹ್ನೆಗಳಿಲ್ಲ). ಅಪ್ಪಣಿಹಿತೊ (ಅಸೆರಹಿತತೆಯ) ಸಮಾಧಿ ಮತ್ತು ಯಾವಾಗ ಭಿಕ್ಖು ಓ ಮಹಾರಾಜ, ಈ ಸಮಾಧಿ ರತ್ನವನ್ನು ಧರಿಸುವನೋ, ಆಗ ಆತನಲ್ಲಿ ಕಾಮವಿತರ್ಕ, ವಿರೋಧದ ವಿತರ್ಕ, ಹಿಂಸೆಯ ವಿತರ್ಕ, ಅಹಂಕಾರದ, ದಿಟ್ಟಿಯ, ಸಂಶಯದ ಇತ್ಯಾದಿ ಕ್ಲೇಷದ ವಿತರ್ಕಗಳು ಸ್ಪಶರ್ಿಸುತ್ತದೆ. ಆದರೆ ಆತನಿಂದ ದೂರ ಹರಿಯುತ್ತವೆ, ಚದುರುತ್ತದೆ, ಮರೆಯಾಗುತ್ತದೆ. ಆತನೊಂದಿಗೆ ಇರುವುದಿಲ್ಲ, ಅಂಟಿರುವುದಿಲ್ಲ. ಹೇಗೆ ಓ ಮಹಾರಾಜ, ಕಮಲದ ಎಲೆಯಿಂದ ನೀರು ನಿಲ್ಲದೆ ಹೋಗುವುದೋ, ಚದುರುವುದೋ, ಅಂಟದೆ ಹೋಗುವುದೋ ಹಾಗೆಯೇ ಭಿಕ್ಷುವು ಧ್ಯಾನರತ್ನವನ್ನು ಧರಿಸಿದಾಗ ಆತನಲ್ಲಿರುವ ನಾನಾ ವಿತರ್ಕಗಳು ಕ್ಲೇಷಗಳು ಅವರಿಗೆ ಸ್ಪಶರ್ಿಸುವಾಗಲೇ ಬೇರೆಡೆ ಹರಿದುಹೋಗುತ್ತದೆ, ಚದುರಿ ಹೋಗುತ್ತದೆ, ಮರೆಯಾಗಿ ಹೋಗುತ್ತದೆ. ಆತನಲ್ಲಿ ನಿಲ್ಲದೆ, ಅಂಟದೆ ಹೋಗುತ್ತದೆ ಮತ್ತು ಏಕೆ ಹೀಗೆ? ಏಕೆಂದರೆ ಸಮಾಧಿಯ ಪರಮ ಪವಿತ್ರತೆಯಿಂದಾಗಿ (ಶುದ್ಧತೆಯಿಂದಾಗಿ), ಇದೇ ಓ ಮಹಾರಾಜ, ಭಗವಾನರ ಸಮಾಧಿ ರತ್ನವಾಗಿದೆ. ಇಂತಹ ರತ್ನಗಳು ಭಗವಾನರ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ಸಮಾಧಿರತ್ನದ ಮಾಲೆಯಲ್ಲಿ, ಕುವಿತರ್ಕವು ಉದಯಿಸುವುದಿಲ್ಲ. ಹಾಗೆಯೇ ವಿಚಿಕಿತ್ಸ (ಸಂಶಯವು) ಅಡ್ಡಾಡುವಂತಹ ಮನಸ್ಸಿನ ಸ್ಥಿತಿಗಳು ಇರುವುದಿಲ್ಲ, ಇದನ್ನು ನಿಮ್ಮದಾಗಿಸಿಕೊಳ್ಳಿ, ಕೊಳ್ಳಿ, ಮುಕುಟದಲ್ಲಿ ಧರಿಸಿ.

ಯಾವುದು ಮಹಾರಾಜ, ಭಗವಾನರ ಪಞ್ಞರತ್ನ? (207)
ಯಾವ ಜ್ಞಾನದಿಂದ ಆರ್ಯಶ್ರಾವಕನು ಇದೇ ಕುಶಲ ಎಂದು ಯಥಾಭೂತವಾಗಿ ಅರಿಯುವನೋ, ಇದೇ ಅಕುಶಲ ಎಂದು ಯಥಾಭೂತವಾಗಿ ಅರಿಯುವನೋ ಇದೇ ನಿಂದನೀಯ ಎಂದು ಇದೇ ಅನಿಂದನೀಯ, ಇದೇ ಸೇವಿಸುವಂತಹುದು (ಹವ್ಯಾಸ).

ಇದು ಸೇವಿಸಬಾರದಂತಹುದು (ಚಟ), ಇದು ಹೀನವಾದುದು, ಇದು ಶ್ರೇಷ್ಠವಾದದು, ಇದು ಕೆಟ್ಟ (ಕಪ್ಪು)ದಾದುದು, ಇದು ಶುಕ್ರ (ಒಳಿತು), ಇದು ಕಪ್ಪು ಶುಕ್ರವೂ, ಇದೇ ದುಃಖ, ಇದೇ ದುಃಖ ಸಮುದಾಯ, ಇದೇ ದುಃಖ ನಿರೋಧ, ಇದೇ ದುಃಖ ನಿರೋಧಕ್ಕೆ ಮಾರ್ಗ ಎಂದು ಯಥಾಭೂತವಾಗಿ ಅರಿಯುತ್ತಾರೆ. ಇದೇ ಮಹಾರಾಜ ಪ್ರಜ್ಞಾ ರತ್ನವಾಗಿದೆ.

ಪ್ರಞ್ಞರತ್ನದ ಮಾಲೆ ಧರಿಸಿದವರು ಚಿರಕಾಲ ಭವದಲ್ಲಿ ಉಳಿಯಲಾರರು, ಶೀಘ್ರವಾಗಿ ಅಮರತ್ವವನ್ನು ಹೊಂದುವರು, ಅವರು ಭವದಲ್ಲಿ ರಮಿಸುವುದಿಲ್ಲ.

ಮತ್ತೆ ಓ ಮಹಾರಾಜ, ಯಾವುದು ಜೀವನದ ವಿಮುಕ್ತಿ ರತ್ನ? (208)

ಅರಹಂತರೇ ವಿಮುಕ್ತಿಯ ರತ್ನವಾಗಿದ್ದಾರೆ ಮತ್ತು ಯಾವ ಭಿಕ್ಷುವು ಅರಹತ್ವಕ್ಕೆ ತಲುಪುವರೋ ಅವರೇ ವಿಮುಕ್ತಿರತ್ನವನ್ನು ಧರಿಸುತ್ತಾರೆ. ಓ ಮಹಾರಾಜ, ಇದು ಹೇಗೆಂದರೆ ಯಾರು ಆಭರಣಗಳಿಂದ ಕೂಡಿರುವರೋ ಅವರು ಚಿನ್ನದ ತಂತಿಗಳಿಂದ, ಮುತ್ತು, ವಜ್ರ, ಸುವರ್ಣ ಮತ್ತು ಹವಳಗಳಿಂದಾದ ಆಭರಣವನ್ನು ಧರಿಸುತ್ತಾರೆ. ಅವರ ಅಂಗಗಳು ಅಕಲು, ತಾರಿಸಕ ಮತ್ತು ಲೋಹಿತ ಚಂದನದಿಂದ ಲೇಪಿತವಾಗಿರುತ್ತದೆ. ಹಾಗೆಯೇ ನಾನಾಬಗೆಯ ಹೂಗಳಾದ ನಿಗ, ಪುನ್ನಾಗ, ಸಾಲ, ಸಲಳ, ಚಂಪಾ, ಕಯಾತಿಕ, ಅತ್ತಿಮುತ್ತಕ, ತುತ್ತೂರಿಹೂ, ಕಮಲ, ಶ್ವೇತ ಮತ್ತು ಮಲ್ಲಿಗೆಗಳ ಹೂಹಾರಗಳಿಂದ ಕೂಡಿರುತ್ತಾರೆ. ಹಾಗೆಯೇ ಸುಗಂಧ ದ್ರವ್ಯಗಳಿಂದಲೂ ಮತ್ತು ಆಭರಣಗಳಿಂದಲೂ ಆತನು ಬೇರೆಯವರಿಂದ ಚೆನ್ನಾಗಿ ಪ್ರಕಾಶಿಸುತ್ತಾನೆ. ತನ್ನ ಭವ್ಯವಾದ ಕಾಂತ ಮತ್ತು ವೈಭೋಗದಿಂದ ಪರರಿಗಿಂತ ಚೆನ್ನಾಗಿ ಕಂಗೊಳಿಸುತ್ತಾನೆ. ಅದೇರೀತಿ ಓ ಮಹಾರಾಜ, ಯಾರು ಅರಹತ್ವವನ್ನು ಪ್ರಾಪ್ತಿಮಾಡಿರುವನೋ, ಅವನಲ್ಲಿರುವ ರಾಗ, ಭವ, ಮೋಹ ಮತ್ತು ಅವಿದ್ಯೆಗಳಂತಹ ಮಹಾಪಾಪಗಳು ಬುಡಮೇಲಾಗಿರುತ್ತದೆ. ಆತ ಚಿತ್ತಮುಕ್ತನಾಗುತ್ತಾನೆ. ಹಾಗೆಯೇ ಆತನು ಪರಭಿಕ್ಷುಗಳಿಂದ ತನ್ನ ಅರಹಂತ ಕಾಂತಿಯಿಂದಾಗಿ ಪ್ರಜ್ವಲಿಸುತ್ತಾನೆ. ಅವರನ್ನೆಲ್ಲಾ ತನ್ನ ಭವ್ಯ ಹೊಳಪಿನಿಂದ ಮತ್ತು ತ್ಯಾಗ ವೈಭೋಗದಿಂದ ಮೀರಿಸುತ್ತಾನೆ. ಏಕೆ ಹೀಗೆ? ಏಕೆಂದರೆ ಓ ರಾಜ, ಒಂದೇ ಕಿರೀಟವು ಎಲ್ಲಕ್ಕಿಂತ ಪ್ರಧಾನವಾದುದು, ಅದೇ ಚಿತ್ತ ವಿಮುಕ್ತತೆಯ ಕಿರೀಟ ಮತ್ತು ಓ ರಾಜ, ಭಗವಾನರ ವಿಮುಕ್ತಿಯ ರತ್ನವಾಗಿದೆ.

ಮಣಿರತ್ನದ ಮಾಲೆ ಧರಿಸಿರುವವರನ್ನು, ಗೃಹಸ್ಥರು (ಕಣ್ಣು ಬಿಟ್ಟು) ನೋಡುತ್ತಾರೆ. ಆದರೆ ವಿಮುಕ್ತಿರತ್ನ ಮಾಲಾಧಾರರಾದ ಅರಹಂತರನ್ನು ಎಲ್ಲಾ ದೇವತೆಗಳು (ಅಚ್ಚರಿಯಿಂದ) ನೋಡುತ್ತಾರೆ.

ಯಾವುದು ಮಹಾರಾಜ, ಭಗವಾನರ ವಿಮುಕ್ತಿ ಞ್ಞಾನ ದರ್ಶನ ರತ್ನ? (209)
ಪಚ್ಚವೆಖ್ಖಣ ಞ್ಞಾನವೇ (ಪುನರ್ ಅವಲೋಕನದ ಜ್ಞಾನ) ವಿಮುಕ್ತಿ ಞ್ಞಾನದರ್ಶನದ ರತ್ನವಾಗಿದೆ. ಈ ಞ್ಞಾನದಿಂದಾಗಿ ಆರ್ಯಶ್ರಾವಕನು ಮಾಗ್ಗ, ಫಲ, ನಿಬ್ಬಾಣವನ್ನು, ಹಾಗೆಯೇ ಯಾವ ಕ್ಲೇಷ, ಅಸವಗಳು ಪರಿತ್ಯಜಿಸಲ್ಪಟ್ಟಿದೆ. ಯಾವುದು ಉಳಿದಿದೆ ಎಂದು ಪುನರ್ ಅವಲೋಕನ ಮಾಡುತ್ತಾರೆ. ಇದೇ ಭಗವಾನರ ವಿಮುಕ್ತಿ ಜ್ಞಾನ ದರ್ಶನದ ರತ್ನವಾಗಿದೆ.

ಯಾವ ಜ್ಞಾನದಿಂದ ಬೋಧಿ ಪಡೆಯುವರೋ ಆರ್ಯರು ಯಾವ ಹಂತಗಳನ್ನು ದಾಟಿರುವರೋ ಮತ್ತು ಇನ್ನೂ ದಾಟಬೇಕಾಗಿದೆಯೋ, ಶ್ರಮಿಸಿ ಓ ಜಿನಪುತ್ರರೇ ಪರಿಶ್ರಮಿಸಿ, ಆ ರತ್ನವು ನಿಮ್ಮದಾಗುವುದು.

ಯಾವುದು ಮಹಾರಾಜ, ಭಗವಾನರ ಪಟಿಸಂಬಿದಾ ರತ್ನ ? (210)

ನಾಲ್ಕುರೀತಿ ಪಟಿಸಂಬಿದಾ (ವಿವೇಚನಾ) ಞ್ಞಾನಗಳಿವೆ. ಅವೆಂದರೆ ಅರ್ಥಪಟಿಸಂಬಿದಾ (ಅರ್ಥ/ಫಲ/ನಿಬ್ಬಾಣ) ಧಮ್ಮ ಪಟಿಸಂಭಿದಾ (ಕಾರಣ, ಬೋಧನೆ), ನಿರುತ್ತಿ ಪಟಿಸಂಬಿದಾ ಜ್ಞಾನ (ಭಾಷೆಯ ವಿಶ್ಲೇಷಣ ಜ್ಞಾನ) ಮತ್ತು ಪಟಿಭಾನ ಪಟಿಸಂಬಿದಾ ಜ್ಞಾನ (ಈ ಮೇಲಿನ ಮೂರರ ಮಿಶ್ರಿತ ವಿಶ್ಲೇಷಣಾತ್ಮಕ ಜ್ಞಾನ).

ಇದೇ ಮಹಾರಾಜ, ನಾಲ್ಕು ಪಟಿಸಂಭಿದಾ ಜ್ಞಾನಗಳ ರತ್ನ, ಯಾರು ಇದನ್ನು ಧರಿಸುವನೋ, ಆತನು ಯಾವುದೇ ಸಭೆಗಳಲ್ಲಿ ಪ್ರವೇಶಿಸಲಿ, ಅದು ಕ್ಷತ್ರಿಯ ಸಭೆಯಾಗಿರಲಿ ಅಥವಾ ಬ್ರಾಹ್ಮಣರ ಸಭೆಯಾಗಿರಲಿ, ಅಥವಾ ವ್ಯಾಪಾರಿಗಳ ಸಭೆಯಾಗಿರಲಿ, ಅಥವಾ ಕಾಮರ್ಿಕರ ಸಭೆಯಾಗಿರಲಿ, ಆತನು ಶ್ರದ್ಧೆಯಿಂದ, ಧೈರ್ಯದಿಂದ ಕೂಡಿರುತ್ತಾನೆ. ಆತನು ಆರಿಹೋಗುವುದಿಲ್ಲ, ರೇಗುವುದಿಲ್ಲ, ಹಾಗೆಯೇ ನಾಚಿಕೆ ಪಡುವುದಿಲ್ಲ. ಭಯವಿಲ್ಲದೆ, ಗಾಬರಿಯಿಲ್ಲದೆ ಹಾಗೆಯೇ ಉದ್ವೇಗವೂ ಇಲ್ಲದೆ ಆತನು ಸಭೆಗಳನ್ನು ಪ್ರವೇಶಿಸುತ್ತಾನೆ. ಹೇಗೆ ಓ ಮಹಾರಾಜ, ಕ್ಷತ್ರಿಯನು, ವೀರನು ರಕ್ಷಾಕವಚಗಳನ್ನು ಧರಿಸಿ, ಭಯವಿಲ್ಲದೆ ಯುದ್ಧಕ್ಕೆ ಹೋಗುವನೋ ಹಾಗೇ ಸಭೆಗಳನ್ನು ಪ್ರವೇಶಿಸುತ್ತಾನೆ. ಯುದ್ಧ ಸಿದ್ಧವಾಗಿರುವ ವೀರನು ಹೀಗೆ ಚಿಂತಿಸುತ್ತಾನೆ ಶತ್ರು ತುಂಬಾ ದೂರದಲ್ಲಿದ್ದರೆ ಆತನಿಗೆ ನನ್ನ ಬಾಣಗಳಿಂದಲೇ ಸದೆಬಡಿಯುವೆನು, ಆದರೂ ಆತನು ತಪ್ಪಿಸಿಕೊಂಡು ನುಗ್ಗಿಬಂದರೆ ನನ್ನ ಈಟಿಗಳಿಂದ ಬೀಸಿ ಹೊಡೆದು ಉರುಳಿಸುವೆನು, ಅದರಿಂದಲೂ ತಪ್ಪಿಸಿಕೊಂಡು ಮುಂದೆ ಬಂದರೆ, ಭಜರ್ಿಗಳಿಂದ ಎಸೆದು ಬೀಳಿಸುವೆನು, ಆದರೂ ತಪ್ಪಿಸಿಕೊಂಡು ಮುಂದೆ ಬಂದರೆ ಖಡ್ಗದಿಂದ ಎರಡು ತುಂಡು ಮಾಡುವೆ. ಅದರಲ್ಲೂ ತಪ್ಪಿಸಿ ಅತ್ಯಂತ ಹತ್ತಿರದಲ್ಲಿ ಇದ್ದರೆ ಕಠಾರಿಯಿಂದ ಚುಚ್ಚಿ ಹತಮಾಡುವೆ. ಅದೇರೀತಿಯಾಗಿ ಯಾವ ಭಿಕ್ಷುವು ನಾಲ್ಕು ಪಟಿಸಂಬಿದಾ ಜ್ಞಾನದ ರತ್ನವನ್ನು ಧರಿಸುವನೋ ಆತನು ಸಹಾ ಯಾವರೀತಿಯ ಭಯವಿಲ್ಲದೆ, ಶ್ರದ್ಧೆಯಿಂದ ಈ ರೀತಿ ಚಿಂತಿಸುತ್ತಾನೆ: ಯಾರೆ ಆಗಲಿ ನನಗೆ ಅರ್ಥ ಪಟಿಸಂಬಿದದ ಪ್ರಶ್ನೆ ಕೇಳಿದರೆ ಅದರ ಅರ್ಥವನ್ನು ವಿವರಿಸುವೆ. ನ್ಯಾಯದ ಬಗ್ಗೆ ಕೇಳಿದರೆ ನ್ಯಾಯವನ್ನು ಹೇಳಿ, ಸಂಶಯಗಳನ್ನು ನಿವಾರಿಸುವೆ. ದ್ವಂದ್ವವನ್ನು ದೂರೀಕರಿಸುವೆ, ಆನಂದವನ್ನುಂಟು ಮಾಡುವೆ.

ಹಾಗೆಯೇ ಯಾರೆಲ್ಲಾ ನನಗೆ ಧಮ್ಮಾಪಟಿಸಂಭಿದ ಜ್ಞಾನದ ಪ್ರಶ್ನೆ ಕೇಳಿದರೆ, ಅದಕ್ಕೆ ಧಮ್ಮಾನುಸಾರವಾಗಿ ಉತ್ತರಿಸುವೆ. ಅಮರತ್ವದ ಬಗ್ಗೆ ಕೇಳಿದರೆ, ಅಮರತ್ವದ ಬಗ್ಗೆ ವಿವರಿಸುವೆ. ಅಸಂಖತ ಧಮ್ಮದ ಬಗ್ಗೆ ಕೇಳಿದರೆ, ಅಸಂಖತ (ಅಕಾರಣೀಯ) ಬಗ್ಗೆ ವಿವರಿಸುವೆ. ನಿಬ್ಬಾಣದ ಬಗ್ಗೆ ಕೇಳಿದರೆ ಅದನ್ನು ವಿವರಿಸುವೆ, ಶೂನ್ಯತೆಯ ಬಗ್ಗೆ ಅನಿಮಿತ್ತದ ಬಗ್ಗೆ ಅಪ್ಪಣಿಹಿತದ ಬಗ್ಗೆ ಅದರ ಕಾರಣ, ಪರಿಣಾಮ ಸಹಿತವಾಗಿ ವಿವರಣೆ ನೀಡುವೆ. ತುಲನಾತ್ಮಕವಾಗಿ ವಿವರಿಸುವೆ. ವಿವೇಚನಾತ್ಮಕವಾಗಿ ಉತ್ತರಿಸುವೆ. ಸಂಶಯಗಳನ್ನು ನಿವಾರಿಸಿ ನಿಸ್ಸಂಶಯವನ್ನಾಗಿ ಮಾಡುವೆ, ದ್ವಂದ್ವವನ್ನು ದೂರೀಕರಿಸುವೆ, ಆನಂದವನ್ನು ನೀಡುವೆ.

ಹಾಗೆಯೇ ಯಾರಾದರೂ ನಿರುತ್ತಿ ಪರಿಸಂಬಿದಾ ಜ್ಞಾನದ ಬಗ್ಗೆ ಪ್ರಶ್ನೆ ಕೇಳಿದರೆ ಭಾಷಾ ಪ್ರೌಢಿಮೆಯಿಂದ ಉತ್ತರಿಸುವೆ, ಪದಮೂಲ ಪ್ರಶ್ನಿಸಿದರೆ, ಪದಮೂಲ ವಿವರಿಸುವೆ, ಪದದ ಬಗ್ಗೆ ಕೇಳಿದರೆ ಪದದ ಬಗ್ಗೆ ಉತ್ತರಿಸುವೆ. ಅನುಪದದ ಬಗ್ಗೆ ಕೇಳಿದರೆ ಅನುಪದದ ಬಗ್ಗೆ ವಿವರಿಸುವೆ, ಅಕ್ಷರಕ್ಕೆ ಅಕ್ಷರಸಹಿತ ಅರ್ಥ ವಿವರಣೆ ನೀಡುತ್ತೇನೆ. ಸಂಧಿ, ವ್ಯಂಜನ...ಅನುವ್ಯಂಜನ...ವರ್ಣನೆ, ಪರಿಮಾಣ...ನಿಯಮ...ನುಡಿಗಟ್ಟು ಇತ್ಯಾದಿಗಳನ್ನು ವಿವರಿಸುತ್ತೇನೆ. ಹೀಗೆ ಆತನ ಸಂಶಯಗಳನ್ನು ನಿವಾರಿಸುವೆ. ಆತನ ದ್ವಂದ್ವವನ್ನು ನಿವಾರಿಸುವೆ, ಆನಂದವನ್ನು ನೀಡುವೆ.

ಹಾಗೆಯೇ ಯಾರಾದರೂ ಪಟಿಭಾನಸಂಭಿದ ಜ್ಞಾನದ ಪ್ರಶ್ನೆ ಕೇಳಿದರೆ ಅವರಿಗೆ ಅದರ ಬಗ್ಗೆ ವಿವರಿಸುವೆ. ಉಪಮೆಗೆ ಉಪಮೆಯನ್ನು, ಲಕ್ಷಣಗಳಿಗೆ ಲಕ್ಷಣವನ್ನು, ರಸಕ್ಕೆ ರಸವನ್ನು, ನೀಡಿ ನಿಸ್ಸಂಶಯರನ್ನಾಗಿ ಮಾಡುವೆ. ಮತಿಹೀನರಿಗೆ ವಿವೇಚನೆಯನ್ನು ನೀಡುತ್ತೇನೆ, ವ್ಯಾಕರಣಸಹಿತ, ಉತ್ತರಿಸುತ್ತೇನೆ ಮತ್ತು ಇದೇ ಓ ಮಹಾರಾಜ ಭಗವಾನರ ಪಟಿಸಂಭಿದಾ ರತ್ನವಾಗಿದೆ.

ಮೊದಲು ಪಟಿಸಂಭಿದಾ ರತ್ನವನ್ನು ಕೊಂಡುಕೊ, ನಂತರ ನಿನ್ನ ವಿಶ್ಲೇಷಣ ಜ್ಞಾನ ಮತ್ತು ವಿವೇಚಾತ್ಮಕ ಕೌಶಲ್ಯದಿಂದ ಕತ್ತರಿಸು. ಹೀಗಾಗಿ ನೀನು ಚಿಂತೆ, ಭಯಗಳಿಂದ ಮುಕ್ತನಾಗುವೆ. ಆಗ ನೀನು ಸದೇವಲೋಕಸಹಿತ ಎಲ್ಲವನ್ನು ಅತಿರೋಚಿಸುವೆ, ಪ್ರಕಾಶ ನೀಡುವೆ.


ಯಾವುದು ಭಂತೆ ನಾಗಸೇನ, ಭಗವಾನರ ಭೋಜ್ಹಂಗ ರತ್ನ? (211)

ಮಹಾರಾಜ, ಬೋಜ್ಹಾಂಗಗಳು ಏಳು ಇವೆ. ಅವೆಂದರೆ: ಸ್ಮೃತಿ ಸಂಬೋಜ್ಹಾಂಗ, ಧಮ್ಮವಿಚಯ (ಸತ್ಯಾನ್ವೇಷಣೆ) ಸಂಬೋಜ್ಹಾಂಗ, ವೀರ್ಯ (ಪ್ರಯತ್ನಶೀಲತೆ) ಸಂಬೋಜ್ಹಾಂಗ, ಪೀತಿ (ಆನಂದ) ಸಂಬೋಜ್ಹಾಂಗ, ಪಸ್ಸದ್ಧಿ ಸಂಬೋಜ್ಹಾಂಗ (ಪ್ರಶಾಂತತೆ), ಸಮಾಧಿ ಸಂಬೋಜ್ಹಾಂಗ, ಉಪೇಕ್ಖಾ (ಸಮಚಿತ್ತತೆ) ಸಂಬೋಜ್ಹಾಂಗ, ಇವು ಮಹಾರಾಜ, ಏಳು ಸಂಬೋಧಿ ಅಂಗಗಳ ರತ್ನಗಳು. ಓ ಮಹಾರಾಜ, ಯಾರು ಸಪ್ತಾಂಗದ ರತ್ನವನ್ನು ಧರಿಸಿರುವನೋ, ಆತನು ತನ್ನ ಬೋಧಿಯಿಂದ ಪ್ರಕಾಶಿತನಾಗಿ, ದೇವಲೋಕ ಮತ್ತು ಮಾನವಲೋಕವನ್ನೆಲ್ಲಾ ಪ್ರಕಾಶಗೊಳಿಸುತ್ತಾನೆ, ಹೊಳಪಾಗಿಸುತ್ತಾನೆ. ಕತ್ತಲೆಯೆಲ್ಲಾ ದೂರೀಕರಿಸಿ ಬೆಳಕನ್ನುಂಟು ಮಾಡುತ್ತಾನೆ. ಇದೇ ಓ ರಾಜ, ಭಗವಾನರ ಸಪ್ತಬೋಜ್ಹಾಂಗ ರತ್ನವಾಗಿದೆ.

ಯಾರು ಬೋಜ್ಹಾಂಗ ಮಾಲೆಯನ್ನು ಧರಿಸಿರುವನೋ ಆತನಿಗೆ ದೇವತೆಗಳು ಮತ್ತು ಮಾನವರು ನಿಂತು ವಂದಿಸುತ್ತಾರೆ. ಶುಭಕರ್ಮಗಳಿಂದಾಗಿ ಅದಕ್ಕೆ ಬೆಲೆತೆತ್ತು ಕೊಂಡುಕೋ ಮತ್ತು ಧರಿಸಿಕೋ ಈ ಸಪ್ತಬೋಧಿ ಅಂಗಗಳನ್ನು.

ಭಂತೆ ನಾಗಸೇನ, ಯಾವುದು ಭಗವಾನರ ಎಲ್ಲಾರೀತಿಯ ಮಾರುಕಟ್ಟೆಗಳು?(212)
ಎಲ್ಲಾರೀತಿಯ ಮಾರುಕಟ್ಟೆಗಳೆಂದರೆ ಮಹಾರಾಜ, ಭಗವಾನರ ನವಾಂಗ ಬುದ್ಧವಚನ, ಶರೀರದ ಅಸ್ತಿ ಅವಶೇಷ ಮತ್ತು ಅವರು ಬಳಸಿದ ವಸ್ತುಗಳ ಚೇತಿಯಾನಿ (ಚೈತ್ಯ) ಮತ್ತು ಸಂಘರತ್ನ ಮತ್ತು ಭಗವಾನರ ಮಾರುಕಟ್ಟೆಯಲ್ಲಿ ಇನ್ನೂ ಕೆಲವಸ್ತುಗಳು ಸಿಗುವುದು ಅವೆಂದರೆ: ಜಾತಿಸಂಪತ್ತು (ಶ್ರೇಷ್ಠ ಕುಲದಲ್ಲಿ ಮುಂದೆ ಹುಟ್ಟುವುದು), ಭೋಗಸಂಪತ್ತು, ಆಯುಸಂಪತ್ತು, ಆರೋಗ್ಯ ಸಂಪತ್ತು, ವರ್ಣಸಂಪತ್ತು, ಪಞ್ಞಸಂಪತ್ತು, ಮಾನಸಿಕಾ ಸಂಪತ್ತು, ದಿವ್ಯಸಂಪತ್ತು ಮತ್ತು ನಿಬ್ಬಾಣ ಸಂಪತ್ತು ಇವಿಷ್ಟಿದೆ. ಮತ್ತು ಯಾರು ಇದರಲ್ಲಿ ಯಾವುದನ್ನು ಬಯಸುವರೋ, ಅದಕ್ಕಾಗಿ ಸುಕರ್ಮ ಮಾಡಿ ಆ ಬೆಲೆಯನ್ನು ತೆತ್ತು ಯಾವ ವೈಭೋಗವನ್ನಾದರೂ ಪಡೆಯಬಹುದು. ಮತ್ತೆ ಕೆಲವರು ಅದನ್ನು ಸಮ್ಮಾಕರ್ಮದ ಸಂಕಲ್ಪದಿಂದ ಕೊಳ್ಳುವರು ಮತ್ತು ಕೆಲವರು ಉಪೋಸಥ ದಿನಾಚರಣೆ ಆಚರಿಸಿ ಮತ್ತು ಹೀಗೆ ಅಲ್ಪ ಕರ್ಮದಿಂದಲೂ ಅವರು ಅನೇಕ ಭವ್ಯವಾದುವುಗಳನ್ನು ಪಡೆಯುತ್ತಾರೆ. ಇದು ಹೇಗೆಂದರೆ ಓ ಮಹಾರಾಜ, ವ್ಯಾಪಾರಿಯ ಅಂಗಡಿಯಲ್ಲಿ ಎಣ್ಣೆ, ಬೀಜಗಳು, ಬಟಾಣಿಗಳು ಇತ್ಯಾದಿ ಇರುತ್ತವೆ ಮತ್ತು ಅಲ್ಲಿ ಬಟಾಣಿಗೆ ಬದಲಾಗಿ ಅಕ್ಕಿಯನ್ನು ಅಥವಾ ಕಾಳುಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅವರ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಅದೇರೀತಿ ಓ ಮಹಾರಾಜ ಭಗವಾನರ ಮಾರುಕಟ್ಟೆಯಲ್ಲಿ ಎಲ್ಲಾರೀತಿಯ ಲಾಭಗಳು ಕರ್ಮದಿಂದಾಗಿ ಮತ್ತು ಅಗತ್ಯತೆಗೆ ತಕ್ಕಂತೆ ದೊರೆಯುತ್ತದೆ. ಓ ಮಹಾರಾಜ, ಇದೇ ಭಗವಾನರ ಎಲ್ಲಾರೀತಿಯ ಮಾರುಕಟ್ಟೆಯಾಗಿದೆ.

ದೀಘರ್ಾಯು, ಆರೋಗ್ಯ, ಸೌಂದರ್ಯ, ಸುಗತಿ, ಉತ್ತಮಕುಲ, ನಿಬ್ಬಾಣ ಇವೆಲ್ಲವೂ ಮಾರಾಟಕ್ಕಿವೆ. ಅವೆಲ್ಲಾ ಕರ್ಮದಿಂದಾಗಿ ಕೊಳ್ಳಬಹುದು, ಚಿಕ್ಕದಾಗಿರಬಹುದು ಅಥವಾ ಶ್ರೇಷ್ಠವಾಗಿರಬಹುದು. ಮಹಾವೀರರ ಮಾರುಕಟ್ಟೆಗೆ ಬನ್ನಿ, ನಿಮ್ಮ ಶ್ರದ್ಧೆ ತೋರಿಸಿ, ಓ ಭಿಕ್ಷುಗಳೇ, ನಿಮ್ಮ ಆಯ್ಕೆಯಂತೆ ಅಥವಾ ನಿಮ್ಮ ಬೆಲೆಗೆ ತಕ್ಕಂತೆ ವಸ್ತುಗಳು ಕೊಂಡು ಆನಂದಿತರಾಗಿ.

ಭಗವಾನರ ಧಮ್ಮನಗರಿಯಲ್ಲಿ ವಾಸಿಸುವಂತಹ ನೆಲಸಿಗರು ಯಾರೆಂದರೆ ಸುತ್ತಾಂತಿಕರು, ವಿನಯಿಕರು, ಅಭಿಧಮ್ಮ ಆಚಾರ್ಯರು, ಧಮ್ಮಕಥಿಕಾ (ಧಮ್ಮದಲ್ಲಿ ಶ್ರದ್ಧೆಯುಳ್ಳವರು), ಜಾತಕ ಪುನರಾವತರ್ಿಸುವವರು, ದೀಘನಿಕಾಯ ಪಠಿಸುವವರು, ಮಜ್ಜೀಮನಿಕಾಯ ಪಠಿಸುವವರು, ಶೀಲಸಂಪನ್ನರು, ಸಮಾಧಿಸಂಪನ್ನರು, ಪನ್ಯಾಸಂಪನ್ನರು, ಬೋಧಿಯ ಅಂಗಗಳ ವೃದ್ಧಿಯಲ್ಲಿ ಆನಂದಿಸುವವರು, ವಿಪಸ್ಸಾಕರು (ವಿಪಸ್ಸನ ಧ್ಯಾನಿ), ಅರಣ್ಯವಾಸಿಯಾಗಿ ಧ್ಯಾನಿಯಾಗಿರುವವರು, ವೃಕ್ಷಮೂಲದಲ್ಲಿ ಧ್ಯಾನಿಸುವವರು, ತೆರೆದ ಆಕಾಶದ ಅಡಿಯಲ್ಲಿ ವಾಸಿಸುವವರು, ಹುಲ್ಲಿನ ಮೇಲೆ ಮಲಗುವವರು, ಸ್ಮಶಾನವಾಸಿ, ಮಲಗಿ ನಿದ್ರಿಸದವರು, ಅತ್ಯುತ್ತಮ ಮಾರ್ಗದಲ್ಲಿ ಪ್ರವೇಶಿಸಿದವರು. ಲೋಕೋತ್ತರ ಫಲವನ್ನು ಪಡೆದವರು. ಅರಹಂತರಾಗದೆ ಇನ್ನೂ ಕಲ್ಲಿಯುತ್ತಿರುವವರು, ಸೋತಪನ್ನರು, ಸಕದಾಗಾಮಿಯು, ಅನಾಗಾಮಿ, ಅರಹಂತ ತೇವಿಜ್ಜರು (3 ವಿದ್ಯೆಗಳನ್ನು ಪಡೆದವರು) ಆರು ಅಭಿಜ್ಞಾಗಳನ್ನು ಪಡೆದವರು, ಇದ್ಧಿಸಂಪನ್ನರು, ಪ್ರಜ್ಞಾದಲ್ಲಿ ಪರಿಪೂರ್ಣತೆ ಪಡೆದವರು, ಸತಿಪಟ್ಠಾನದಲ್ಲಿ ನಿರತರು, ಸಮ್ಮಾಪದ್ದಾನದಲ್ಲಿ ಪರಿಶ್ರಮಿಗಳು, ಇದ್ದಿಪಾದದಲ್ಲಿ ಸಿದ್ಧಿಪಡೆದವರು, ಐದು ಇಂದ್ರೀಯಗಳಲ್ಲಿ ವಿಶಾರದರು, ಪಂಚಬಲ ಸಂಪನ್ನರು, ಬೋಜ್ಹಾಂಗಗಳಲ್ಲಿ ಕೌಶಲ್ಯ ಪಡೆದವರು, ಮಾಗ್ಗದಲ್ಲಿ ನಡೆಯುತ್ತಿರುವವರು, ಧ್ಯಾನಸಂಪನ್ನರು, ವಿಮೋಕ್ಖ ಪಡೆದವರು, ರೂಪ, ಅರೂಪ ಝಾನ ಸಮಾಪತ್ತಿಯಲ್ಲಿ ಕುಶಲರು ಇರುತ್ತಾರೆ. ಹೇಗೆ ಅರಣ್ಯವು ಬಿದಿರುಗಳಿಂದ ಮತ್ತು ಜೊಂಡುಗಳಿಂದ ತುಂಬಿರುತ್ತದೆಯೋ ಹಾಗೆಯೇ ಇಂತಹ ಅರಹಂತರಿಂದ ಧಮ್ಮನಗರಿಯು ಸದಾ ತುಂಬಿರುತ್ತದೆ. ಆದ್ದರಿಂದ ಹೀಗೆ ಹೇಳಲಾಗಿದೆ:

ರಾಗರಹಿತರು, ದ್ವೇಷರಹಿತರು, ಮೋಹರಹಿತರು, ಅಸವಗಳಿಲ್ಲದವರು, ತನ್ಹಾರಹಿತರು, ಅಂಟುವಿಕೆ ಇಲ್ಲದವರು ಧಮ್ಮಾನಗರಿಯಲ್ಲಿ ವಾಸಿಸುವರು.

ಅರಣ್ಯದಲ್ಲಿ ನೆಲೆಸಿ ಸಾಧನೆ ಮಾಡುತ್ತಿರುವವರು, ಧೂತಾಂಗಗಳ ವ್ರತಧಾರಿಯು, ಆನಂದಭರಿತನು, ಒರಟು ವಸ್ತ್ರಧಾರಿಯು, ಏಕಾಂತತೆಯಲ್ಲಿ ನೆಲೆಸಿರುವ ಧೀರರು ಧಮ್ಮಾನಗರಿಯಲ್ಲಿ ವಾಸಿಸುವರು.

ಕುಳಿತೇ ನಿದ್ರಿಸುವವರು, ಎಲ್ಲೆಂದರಲ್ಲಿ ನಿದ್ರಿಸುವವನು ನಡಿಗೆಯ ಧ್ಯಾನ ಮಾಡುವವನು, ಹರಿದ ಬಟ್ಟೆಗಳನ್ನು ಹೊಲಿದು ಹಾಕಿಕೊಂಡಿರುವವರೇ ಧಮ್ಮಾನಗರಿಯಲ್ಲಿ ನೆಲೆಸುವರು.

ಮೂರು ಚೀವರಧಾರಿಯು, ಪ್ರಶಾಂತನು, ನಾಲ್ಕನೆಯ ಚೀವರವೇ ಆತನ ಚರ್ಮವಾಗಿದೆಯೋ ಏಕಾಸನದಲ್ಲಿ ಸ್ಥಿರವಾಗಿರುವ ಇವರೇ ಧಮ್ಮಾನಗರಿಯಲ್ಲಿ ನೆಲೆಸುವರು.

ಮನಃಪೂರ್ವಕವಾಗಿ ಸಾಧನೆಯಲ್ಲಿರುವ ಧೀರನು, ಅಲ್ಪಹಾರದಿಂದಲೇ ತೃಪ್ತನಾಗಿ ಲೋಲುಪನಲ್ಲದವನು, ಲಾಭ-ಅಲಾಭದಲ್ಲಿ ಸಂತುಷ್ಟನು, ಧಮ್ಮಾನಗರಿಯಲ್ಲಿ ನೆಲೆಸುವನು.

ಧ್ಯಾನಿಯು, ಧ್ಯಾನದಲ್ಲಿ ಆನಂದಿಸುವ ಧೀರನು, ಶಾಂತಚಿತ್ತನು, ಝಾನ ಸಮಾಹಿತದಲ್ಲಿ ನೆಲೆಸಿರುವನು ಅಕಿಂಚಾಧ್ಯಾನ ತೃಪ್ತಿಪಡೆದವನು ಧಮ್ಮನಗರದಲ್ಲಿ ವಾಸಿಸುವನು.

ಮಾರ್ಗದಲ್ಲಿ ನಡೆಯುತ್ತಿರುವವನು ಮತ್ತು ಫಲಗಳಲ್ಲಿ ನಿಂತಿರುವವನು ಫಲಪ್ರಾಪ್ತಿ ಪಡೆದವನು, ಕಲಿಯುವವನಾದರೂ ಆತನ ಶ್ರದ್ಧೆ ಹಾಗು ಗುರಿಯು ನಿಬ್ಬಾಣದಲ್ಲಿದೆಯೋ ಅವರು ಧಮ್ಮನಗರಿಯಲ್ಲಿ ವಾಸಿಸುವರು.

ಸೋತಪನ್ನರು, ವಿಮುಖರು, ಸಕದಾಗಾಮಿಯು, ಅನಾಗಾಮಿಯು ಮತ್ತು ಅರಹಂತರು ಧಮ್ಮನಗರಿಯಲ್ಲಿ ವಾಸಿಸುವರು.
ಸತಿಪಟ್ಠಾನದಲ್ಲಿ ಕುಶಲನು, ಬೋಧಿ ಅಂಗಗಳ ವೃದ್ಧಿಯಲ್ಲಿ ಆನಂದಿಸುವವನು, ವಿಪಸ್ಸನ ಧ್ಯಾನದ ಧಮ್ಮಧರನು, ಧಮ್ಮನಗರದಲ್ಲಿ ವಾಸಿಸುವರು.

ಇದ್ದಿಪಾದಗಳಲ್ಲಿ ಕುಶಲನು, ಸಮಾಧಿ ವೃದ್ಧಿಯಲ್ಲಿ ಆನಂದಿಸುವವನು, ಯೋಗ್ಯವಾದ ಚಿತ್ತವ್ಯಾಯಾಮದಲ್ಲಿ ಯುಕ್ತನು, ಧಮ್ಮನಗರಿಯಲ್ಲಿ ವಾಸಿಸುವರು.

ಅಭಿಜ್ಞಾಪ್ರಾಪ್ತಿ ಮಾಡಿ ಪರಿಪೂರ್ಣವಾಗಿರುವವನು, ತಮ್ಮ ಲೋಕೋತ್ತರ ಕ್ಷೇತ್ರದಲ್ಲಿರುವವರು, ಅಂತರಿಕ್ಷದಲ್ಲಿ ಚಲಿಸುವವನು, ಧಮ್ಮನಗರದಲ್ಲಿ ವಾಸಿಸುವನು.

ನೆಲದಲ್ಲಿ ದೃಷ್ಟಿಯಿಟ್ಟು ನಡೆಯುವವನು, ಮಿತಭಾಷಿಯು, ಇಂದ್ರೀಯದ್ವಾರಗಳಲ್ಲಿ ಸಂಯಮಿಯು, ಧಮಿಸಿರುವವನು, ಧಮಿಸಿರುವವರಲ್ಲಿ ಉತ್ತಮನು (ಉತ್ತಮಧಮ್ಮದಲ್ಲಿ ಸುಶಿಕ್ಷಿತನು) ಧಮ್ಮನಗರಿಯಲ್ಲಿ ವಾಸಿಸುವನು.

ಮೂರು ವಿದ್ಯೆಗಳಲ್ಲಿ ಪ್ರಾಜ್ಞರು, ಆರು ಅಭಿಜ್ಞಾ ಸಂಪನ್ನರು, ಇದ್ದಿಗಳನ್ನು ಪರಿಪೂರ್ಣಗೊಳಿಸಿದವನು, ಹಾಗೆಯೇ ಪ್ರಜ್ಞೆಯ ಪಾರಾಮಿತವನ್ನು ಪೂರ್ಣಗೊಳಿಸಿ ರುವವನು, ಧಮ್ಮನಗರಿಯಲ್ಲಿ ವಾಸಿಸುವನು.

ಮತ್ತೆ ಓ ಮಹಾರಾಜ, ಯಾವ ಭಿಕ್ಷುಗಳು ಅಪರಿಮಿತ ಜ್ಞಾನವನ್ನು ಧರಿಸಿರುವರೋ, ಬಂಧಮುಕ್ತರೋ, ಅತುಲಗುಣ ಸಂಪನ್ನರೋ, ಅತುಲ ಯಶಸ್ವಿಗಳೋ, ಅತುಲ ತೇಜಸ್ವಿಗಳು, ಧಮ್ಮಚಕ್ರಪ್ರವರ್ತಕರೋ, ಪ್ರಾಜ್ಞಾಪಾರಂಗತರೊ, ಅಂತಹ ಭಿಕ್ಷುಗಳೇ ಓ ಮಹಾರಾಜ, ಭಗವಾನರ ಧಮ್ಮನಗರಿಯಲ್ಲಿ ಧಮ್ಮಾ ಸೇನಾಪತಿ ಎಂದು ಕರೆಯಲ್ಪಡುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುವು ಇದ್ದಿಸಂಪನ್ನನೋ, ಪಟಿಸಂಬಿಧಾ ವಿವೇಚನಾ ಜ್ಞಾನದಲ್ಲಿ ಸಿದ್ಧರೋ, ಶ್ರದ್ಧಾಪೂರ್ಣರೋ, ಗಗನ ಸಂಚಾರಿಯೋ, ಯಾರನ್ನು ವಿರೋಧಿಸಲು ಕಷ್ಟಕರವೋ, ಯಾರನ್ನು ದಾಟಲು ಕಷ್ಟಕರವೋ, ಯಾರು ಆಧಾರವಿಲ್ಲದೆಯೇ ಚಲಿಸಬಲ್ಲರೋ, ಯಾರು ಸಾಗರ ಮತ್ತು ಪೃಥ್ವಿಯನ್ನು ಕಂಪನಮಾಡಬಲ್ಲವರೋ, ಯಾರು ಸೂರ್ಯಚಂದರರನ್ನು ಸ್ಪಶರ್ಿಸಬಲ್ಲರೊ, ಯಾರು ತಮ್ಮನ್ನು ಮಾಪರ್ಾಡು ಮಾಡುವಲ್ಲಿ (ರೂಪ ಬದಲಾಯಿಸುವಲ್ಲಿ) ಸಿದ್ಧರೊ, ದೃಢನಿಧರ್ಾರದಲ್ಲಿ ಹಾಗು ಉನ್ನತ ಆಕಾಂಕ್ಷೆಯಲ್ಲಿ ಇಚ್ಛಾಶಕ್ತಿಯುಳ್ಳವರಾಗಿರುವರೋ, ಇದ್ದಿಯಲ್ಲಿ ಪಾರಂಗತರು, ಅಂತಹ ಭಿಕ್ಖುಗಳನ್ನು ಮಹಾರಾಜ, ಭಗವಾನರ ಧಮ್ಮನಗರಿಗೆ ಪುರೋಹಿತರು ಎನ್ನುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಖುಗಳು, ಧೂತಂಗ ವ್ರತಗಳಲ್ಲಿ ಬದ್ಧರೋ, ಅಲ್ಪಚ್ಛೆವುಳ್ಳವರೋ, ಸಂತುಷ್ಟರಾಗಿರುವರೋ, ಆಹಾರದಲ್ಲಿ ಜಿಗುಪ್ಸೆ ತಾಳಿ ಅಲ್ಪ ಮಾತ್ರ ಸೇವಿಸುವನೋ, ಹೇಗೆ ಭ್ರಮರವು ಹೂವಿನಿಂದ ಹೀವಿಗೆ ಹಾರಿ ರಸ ಹೀರುವಂತೆ ಆತನು ಮನೆಯಿಂದ ಮನೆಗೆ ಭಿಕ್ಷಾಟನೆ ಮಾಡುತ್ತಾನೆ. ನಂತರ ಕಾನನದಲ್ಲಿ ಏಕಾಂತವಾಗಿ ಧ್ಯಾನಿಸುವನೋ, ಯಾರು ದೇಹಕ್ಕೆ ಅಂಟಿಲ್ಲವೋ, ಅರಹಂತರೋ, ಧುತಾಂಗ ಗುಣಶೀಲರೋ ಅಂತಹ ಭಿಕ್ಷುಗಳೇ ಓ ಮಹಾರಾಜ, ಭಗವಾನರ ಧಮ್ಮನಗರಿಯಲ್ಲಿ ನ್ಯಾಯಾಧೀಶರು ಎನ್ನುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುಗಳು ಪರಿಶುದ್ಧರೋ, ವಿಮಲರೋ, ನಿಃಕ್ಲೇಶರೋ, (ಚತೂಪಪಾತ ಕುಸಲ್ಹೋ) ಏಳು-ಬೀಳುಗಳ ಜ್ಞಾನದಲ್ಲಿ ಕುಶಲರೋ, ದಿವ್ಯ ಚಕ್ಷುವಿನ ದರ್ಶನದಲ್ಲಿ ಪರಿಪೂರ್ಣರೊ, ಅಂತಹ ಭಿಕ್ಷುಗಳಿಗೆ ಓ ಮಹಾರಾಜ, ಭಗವಾನರ ಧಮ್ಮನಗರಿಯಲ್ಲಿ ನಗರಜ್ಯೋತಿಕಾ ಎನ್ನುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುಗಳು ಬಹುಶ್ರುತರೋ, ಯಾರು ಯಾವುದನ್ನು ಮುಂದುವರಿಸಿಕೊಂಡು ಹೋಗಬೇಕೋ ಅದನ್ನು ಪಾಲಿಸುತ್ತಿರುವರೋ, ಧಮ್ಮಾಧರರೋ (ಸುತ್ತ ಪಠಿಸುವವರು) ವಿನಯಧರರೋ (ವಿನಯ ಪಠಿಸುವವರು), ಮಾತಿಕಾಧರರು (ಅಭಿಧಮ್ಮ ಪಠಿಸುವವರು), ಯಾರು ಅಕ್ಷರ, ವ್ಯಂಜನ, ಉಚ್ಚಾರಣೆಯ ಏರಿಳಿತಗಳು, ಭಾಷಾ ಪರಿಚ್ಛೇದ್ರದಲ್ಲಿ ಕುಶಲರೋ, ನವಾಂಗ ಬುದ್ಧಶಾಸನಧರರೋ, ಅಂತಹವರನ್ನು ಭಗವಾನರ ಧಮ್ಮನಗರಿಯಲ್ಲಿ ಧಮ್ಮರಕ್ಷಕ ಎನ್ನುವರು.

ಮತ್ತೆ ಓ ಮಹಾರಾಜ, ಯಾವ ಭಿಕ್ಷುವು ವಿನಯ (ಶಿಸ್ತು-ಸಂಯಮ)ದಲ್ಲಿ ಜ್ಞಾನಿಯೋ, ವಿನಯಕೋವಿದನೋ, ಸ್ಥಾನಗಳ ಬಗ್ಗೆ ಕುಶಲನೋ, ತಪ್ಪು ಮೂಲಗಳ ಬಗ್ಗೆ ಕುಶಲನೋ ಹಾಗೆಯೇ ಯಾವುದು ಆಪತ್ತು, ಯಾವುದು ಆಪತ್ತಲ್ಲ (ತಪ್ಪಲ್ಲ), ಯಾವುದು ದೊಡ್ಡ ತಪ್ಪು, ಚಿಕ್ಕ, ತಪ್ಪು, ಯವುದು ಪ್ರಾಯಚಿತಃಕರ ಯಾವುದಲ್ಲ, ಉದಯಿಸಬಹುದಾದಂತಹ ಪ್ರಶ್ನೆಗಳನ್ನು ನಿರ್ಧರಿಸುವಲ್ಲಿ ಕುಶಲನೋ, ಹಾಗೆಯೇ ಯಾವುದು ಒಪ್ಪಬಹುದು, ಕ್ಷಮಿಸಬಹುದು, ತಡೆಹಿಡಿಯಬಹುದೋ, ಪುನಃಸ್ಥಾಪಿಸ ಬಹುದೋ, ಸಮಥರ್ಿಸಬಹುದೋ, ಇವುಗಳನ್ನು ಕುಶಲನೋ, ವಿನಯ ಪಾರಂಗತನೋ, ಇಂತಹ ಭಿಕ್ಷುವನ್ನು ಮಹಾರಾಜ ಭಗವಾನರ ಧಮ್ಮನಗರಿಯಲ್ಲಿ ರೂಪದಕ್ಷ ಎನ್ನುವರು.

ಮತ್ತೆ ಓ ಮಹಾರಾಜ, ಯಾವ ಭಿಕ್ಷುವು ವಿಮುಕ್ತಿಯ ಕುಸುಮ ಮಾಲಾಧರನೋ, ಯಾರು ಉನ್ನತವಾದ, ಉತ್ಕೃಷ್ಟವಾದ, ಸರ್ವಸ್ಥಿತಿಗಳಿಂದ ಅತ್ಯುತ್ತಮನಾದುದನ್ನು ಪ್ರಾಪ್ತಿ ಮಾಡಿರುವವನೊ, ಯಾರು ಬಹುಜನರಿಂದ ಪ್ರೀತಿಸಲ್ಪಟ್ಟು, ಗೌರವಿಸಲ್ಪಡುವನೋ, ಅಂತಹ ಭಿಕ್ಷುಗಳೇ ಓ ಮಹಾರಾಜ, ಭಗವಾನರ ಧಮ್ಮನಗರಿಯಲ್ಲಿ ಪುಷ್ಪ ಮಾರುವವರಾಗಿರುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುಗಳು ನಾಲ್ಕು ಆರ್ಯಸತ್ಯಗಳನ್ನು ಆಳವಾಗಿ ಅರಿತಿರುವರೋ, ದಶರ್ಿಸಿದ್ದಾರೋ, ಶಾಸನದಲ್ಲಿ ಜ್ಞಾನಿಗಳೋ, ನಾಲ್ಕು ಸಮಣ ಫಲಗಳಲ್ಲಿ ಸಂಶಯವಿಲ್ಲದವರೋ, ಅದರ ಫಲಸುಖವನ್ನು ಪಡೆದವರೋ ಮತ್ತು ಯಾರು ಮಾರ್ಗಗಳಲ್ಲಿ ಪ್ರವೇಶಿಸುವರೋ ಅವರಲ್ಲಿ ಫಲಗಳನ್ನು ಹಂಚಿಕೊಂಡಿರುವರೋ ಅಂತಹ ಭಿಕ್ಷುಗಳನ್ನು ಭಗವಾನರ ಧಮ್ಮನಗರಿಯಲ್ಲಿ ಫಲ ಮಾರುವವರು ಎನ್ನುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುವು ಶೀಲವಂತಿಕೆಯ ಸುಗಂಧವನ್ನು ಲೇಪಿಸಿಕೊಂಡಿರುವನೋ, ಅನೇಕ ವಿಧದ ಸದ್ಗುಣಗಳಿಂದ ಕೂಡಿರುವವನೋ, ಕ್ಲೇಷಮಲಗಳ ದುರ್ಗಂಧವನ್ನು ದೂರೀಕರಿಸಬಲ್ಲ ಸಮರ್ಥನೋ, ಅಂತಹ ಭಿಕ್ಷುವೇ ಭಗವಾನರ ಧಮ್ಮನಗರಿಯಲ್ಲಿ ಸೌಗಂಧ ದ್ರವ್ಯಗಳನ್ನು ಮಾರುವವನಾಗಿದ್ದಾನೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುವು ಧಮ್ಮಾಕಾಮಿಯೋ, ಯಾರು ಪ್ರಿಯವಾಗಿ ಮಾತನಾಡುವನೋ, ಅಭಿಧಮ್ಮ ಮತ್ತು ಅಭಿವಿನಯದಲ್ಲಿ ಅಪಾರ ಆನಂದಪಡುವನೋ ಮತ್ತು ಯಾರು ಅರಣ್ಯದಲ್ಲಿ ಅಥವಾ ವೃಕ್ಷಮೂಲದಲ್ಲಿ ಅಥವಾ ಶೂನ್ಯಗೃಹದಲ್ಲಿ ಧ್ಯಾನಿಸುತ್ತ ಧಮ್ಮರಸವನ್ನು ಸೇವಿಸುತ್ತಿರುವನೋ, ಯಾರು ಕಾಯದಿಂದ, ವಾಚಾದಿಂದ ಮತ್ತು ಮನಸ್ಸಿನಿಂದ ಧಮ್ಮಸವಿಅಮೃತವನ್ನು ಸೇವಿಸುತ್ತಿರುವವರೋ, ಅದನ್ನು ಪ್ರಕಟಿಸುವಲ್ಲಿ ಉತ್ಕೃಷ್ಟರೋ, ಧಮ್ಮಗಳಲ್ಲಿ ಆಳವಾದ ಸತ್ಯಗಳನ್ನು ಹುಡುಕಿ, ಶೋಧಿಸುತ್ತಿರುವರೋ ಮತ್ತು ಯಾವಾಗಲೇ ಆಗಲಿ, ಯಾರಿಗೆ ಆಗಲಿ, ಅಲ್ಪೇಚ್ಛೆಯ, ಸಂತೃಪ್ತಿಯ, ಉತ್ಸಾಹದ, ನಿವೃತ್ತಿಯ, ವೀರ್ಯದ, ಶೀಲದ, ಸಮಾಧಿಯ, ಪ್ರಜ್ಞಾದ, ವಿಮುಕ್ತಿಯ, ವಿಮುಕ್ತಿಯ ಜ್ಞಾನದರ್ಶನದ ಬಗ್ಗೆ ವಿವರಣೆ ಬೋಧನೆ ನೀಡುವರೋ ಹೇಗೆ ಹೇಗೆ ಹೀಗೆ ಬೋಧಿಸುವರೋ ಹಾಗೆಯೇ ಸೇವಿಸಿ ಧನ್ಯರಾಗುವರು. ಅಂತಹ ಭಿಕ್ಷುಗಳನ್ನು ಭಗವಾನರ ಧಮ್ಮನಗರಿಯಲ್ಲಿ ದಾಹಿ (ಕುಡಿಯುವವರು) ಎನ್ನುತ್ತಾರೆ.

ಮತ್ತೆ ಮಹಾರಾಜ, ಯಾವ ಭಿಕ್ಷುವು ಜಾಗೃತಿಯ ಹವ್ಯಾಸ ಹೊಂದಿರುವರೋ, ರಾತ್ರಿಯ ಮೊದಲ ಜಾವದಿಂದ ಕೊನೆಯ ಜಾವದವರೆಗೂ ಜಾಗೃತನೋ, ಯಾರು ಇಡೀ ರಾತ್ರಿ ಹಾಗು ಹಗಲನ್ನು ಕುಳಿತು ಧ್ಯಾನಿಸುತ್ತ, ನಡಿಗೆಯಲ್ಲಿ ಧ್ಯಾನಿಸುತ್ತಾ, ನಿಂತು ಧ್ಯಾನಿಸುತ್ತಾ ಕಾಲಕಳೆಯುವನೋ, ಯಾರು ಧ್ಯಾನದ ಚಟಹೊಂದಿ, ಕ್ಲೇಷಗಳ ಧಮನ ಮಾಡುತ್ತಿರುವವನೋ ಅಂತಹ ಭಿಕ್ಷುವೇ ಭಗವಾನರ ಧಮ್ಮಾನಗರಿಯಲ್ಲಿ ನಗರ ಗುತ್ತಿಕಾ (ನಗರ ಪಹರೆದಾರ) ಎನ್ನುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುಗಳು, ನವಾಂಗ ಬುದ್ಧವಚನವನ್ನು ಅಕ್ಷರ ಮತ್ತು ಅರ್ಥದಿಂದ (ವ್ಯಂಜನ) ವಿವರಿಸುವನೋ, ಚಚರ್ೆಯಿಂದ ಮತ್ತು ವಿವರಣೆಗಳಿಂದ, ಕಾರಣಗಳಿಂದ ಉಪಮೆಗಳಿಂದ, ಉದಾಹರಣೆಗಳಿಂದ ಹೇಳುತ್ತಾ ಮತ್ತು ಪುನರಾವತರ್ಿಸುತ್ತಾ, ವಿಸ್ತಾರವಾಗಿ ಮತ್ತು ಸಂಕ್ಷಿಪ್ತವಾಗಿ ಬೋಧಿಸುವರೋ ಅಂತಹ ಭಿಕ್ಷುಗಳಿಗೆ ಭಗವಾನರ ಧಮ್ಮನಗರಿಯಲ್ಲಿ ಧಮ್ಮ ಮಾರುವವರು (ಧಮ್ಮ ಪಣಿಕಾ) ಅಥವಾ ವಕೀಲರು (ಧಮರ್ಿಕಾಪನಿಕಾಯೋ) ಎನ್ನುತ್ತಾರೆ.

ಮತ್ತೆ ಮಹಾರಾಜ, ಯಾವ ಭಿಕ್ಷುಗಳು, ಧಮ್ಮರತ್ನವನ್ನು ಹೊಂದಿರುವರೋ ಧಮ್ಮ ನಿಧಿಯನ್ನು, ಧಮ್ಮ ಐಶ್ವರ್ಯವನ್ನು ಹೊಂದಿರುವರೋ, ಧಮ್ಮಾ ಸಂಪ್ರದಾಯವನ್ನು ಪಾಲಿಸುತ್ತಿರುವರೋ, ಧಮ್ಮವನ್ನು ಕಲಿಯುತ್ತಿರುವರೋ ಯಾರು ಅದರ ಲಕ್ಷಣಗಳನ್ನು ವ್ಯಂಜನಗಳನ್ನು, ಸ್ವರಗಳನ್ನು, ಎಲ್ಲಾ ವಿವರಗಳನ್ನು, ತಮ್ಮ ಜ್ಞಾನದ ಮೂಲಕ ಎಲ್ಲರಿಗೂ, ಎಲ್ಲಾ ದಿಕ್ಕುಗಳಿಗೂ ಹಬ್ಬಿಸುವರೋ ಅಂತಹ ಭಿಕ್ಷುಗಳನ್ನು ಭಗವಾನರ ಧಮ್ಮನಗರಿಯಲ್ಲಿ ಧಮ್ಮಾಶ್ರೇಷ್ಠಿಗಳು ಎನ್ನುತ್ತಾರೆ.

ಮತ್ತೆ ಓ ಮಹಾರಾಜ, ಯಾವ ಭಿಕ್ಷುಗಳು ಉದಾತ್ತವಾದ ಧಮ್ಮವನ್ನು ಆಳವಾಗಿ ಗ್ರಹಿಸಿರುವರೋ ಮತ್ತು ಯಾರು ಧ್ಯಾನದ ವಿಷಯಗಳ ವಗರ್ಿಕರಣವನ್ನು, ವಿವರಣೆ ನೀಡುವರು ಮತ್ತು ಸಾಧನೆ ಮಾಡುವರೋ ಮತ್ತು ಯಾರು ಪರಮಸೂಕ್ಷ್ಮ ವಿಷಯಗಳ ಕಲಿಕೆಯಲ್ಲಿ ಪೂರ್ಣರೋ ಅಂತಹ ಭಿಕ್ಷುಗಳಿಗೆ ಭಗವಾನರ ಧಮ್ಮನಗರಿಯಲ್ಲಿ ವಿಸೃತ ಧಮ್ಮಿಕ ಎನ್ನುತ್ತಾರೆ.

ಹೀಗೆ ಓ ಮಹಾರಾಜ, ಬಹುಚೆನ್ನಾಗಿ ಪೂರ್ವರಚನೆ (ನಕ್ಷೆ) ಮಾಡಿ ಧಮ್ಮಾನಗರಿ ರಚಿಸಲಾಗಿದೆ. ಹೀಗೆ ಚೆನ್ನಾಗಿ ಕಟ್ಟಿ, ಚೆನ್ನಾಗಿ ನಿಯೋಜಿಸಿ, ಚೆನ್ನಾಗಿ ಪೂರ್ವಸಿದ್ಧತೆ ಮಾಡಿ, ಹೀಗೆ ಚೆನ್ನಾಗಿ ಸ್ಥಾಪಿಸಿ, ಚೆನ್ನಾಗಿ ಕಾವಲಿರಿಸಿ, ಚೆನ್ನಾಗಿ ರಕ್ಷಿಸಿ, ಶತ್ರುಗಳಿಂದ ಅಬೇದ್ಯವಾಗುವಂತೆ ಕಟ್ಟಿರುವರು ಮತ್ತು ಈ ವಿಧದ ವಿವರಣೆಯಿಂದಾಗಿ ಓ ಮಹಾರಾಜ, ಈ ಕಾರಣಗಳಿಂದ, ಈ ಆಧಾರಗಳಿಂದ ಭಗವಾನರು ಇದ್ದರು ಎಂದು ರುಜುವಾತು ಆಗುತ್ತದೆ.

ಯಾವಾಗ ಅವರು ಈ ರೀತಿ ಪೂರ್ವ ಸಿದ್ಧತೆಯಿಂದ ರಚಿಸಲ್ಪಟ್ಟ ಆನಂದಕರ ನಗರವನ್ನು ಕಾಣುವರೋ, ಆಗ ಜನರು ಖಚಿತವಾಗಿ ಅರಿಯುವರು ಇವರು ಸ್ಥಾಪಕ ಎಷ್ಟು ಶ್ರೇಷ್ಠನೆಂದು, ಹೀಗೆ ಅವರು ಭಗವಾನರ ಧಮ್ಮಾನಗರಿಯನ್ನು ಕಂಡಾಗ ಅವರು ಭಗವಾನರು ಖಂಡಿತವಾಗಿ ಇದ್ದರು ಎಂದು ಖಚಿತವಾಗಿ ತಿಳಿಯುತ್ತಾರೆ.

ಯಾವಾಗ ಜನರು ಅಲೆಗಳನ್ನು ಕಾಣುತ್ತಾರೋ ಆಗ ಅವರು ತರ್ಕದಿಂದ, ಮೌಲ್ಯ ಮಾಡುವುದು ಏನೆಂದರೆ ಈ ಮಹಾಸಮುದ್ರವು ಅತ್ಯಂತ ಶ್ರೇಷ್ಠವಾದುದು ಮತ್ತು ಶಕ್ತಿಶಾಲಿಯಾದುದು.

ಹಾಗೆಯೇ ಬುದ್ಧರನ್ನು ಸಹಾ ಬುದ್ಧ ಅಲೆಗಳಿಂದ ಅವರು ಮೌಲ್ಯ ಮಾಡುವರು, ಹೇಗೆಂದರೆ ಬುದ್ಧರು ಶೋಕಮುಕ್ತರು, ಯಾವುದರಿಂದಲೂ ಪರಾಜಿತರಾಗದವರು, ಮನಸ್ಸನ್ನು ಎಲ್ಲಾರೀತಿಯ ತೃಷ್ಣೆಗಳಿಂದ ಕ್ಷಯ ಮಾಡಿರುವರು, ಭವಸಾಗರವನ್ನು ದಾಟಿದವರು, ಖಂಡಿತವಾಗಿ ಇವರು ದೇವ ಮನುಷ್ಯರಲ್ಲಿ ಶ್ರೇಷ್ಠರು, ಪೂಜಿತರು, ಮಾರ್ಗದರ್ಶಕರು ಆಗಿದ್ದಾರೆ. ತಮ್ಮ ಹಿಂಬಾಲಕರಿಗೆ ಪುನರ್ಜನ್ಮದ ಸುಳಿಗಳಿಂದ ಪಾರುಮಾಡಿದ್ದಾರೆ. ಹೇಗೆ ಸಮುದ್ರದಲ್ಲಿ ಅಲೆಗಳು ಉರುಳುತ್ತದೋ ಹಾಗೇ ಸಧಮ್ಮವನ್ನು ಚಾಲನೆ ಮಾಡಿದ್ದಾರೆ. ಹೀಗೆ ಬುದ್ಧಭಗವಾನರು ಶ್ರೇಷ್ಠರಾಗಿದ್ದಾರೆ, ಅತ್ಯಂತ ಬೃಹತ್ ಆಗಿದ್ದಾರೆ ಎಂದು ದೃಢವಾಗಿ, ಖಚಿತವಾಗಿ, ರುಜುವಾತು ಮಾಡಿಕೊಳ್ಳುತ್ತಾರೆ.

ಮಾನವರು ಹಿಮಾಲಯದ ಅದ್ಭುತ ಎತ್ತರ ಕಂಡು, ಅದರ ಬೃಹತ್ ಶಿಖರಗಳನ್ನು ಕಂಡು ಅದರ ಮಹತ್ತತೆ ಅಂದಾಜು ಮಾಡುತ್ತಾರೆ. ಹಾಗೆಯೇ ಅವರು ಭಗವಾನರ ಧಮ್ಮಾಗಿರಿಯನ್ನು ಕಂಡು ಹೇಗೆ ಅದು ಭಾವೋದ್ರೇಕಗಳ ಪ್ರಬಲ ಬಯಕೆಗಳಿಗೆ ವಿಚಲಿತವಾಗುವುದಿಲ್ಲವೋ, ಉನ್ನತವಾಗಿ, ಪ್ರಶಾಂತವಾಗಿದೆಯೋ, ಎಲ್ಲ ರಾಗ, ಪಾಪ ಮತ್ತು ಕರ್ಮಗಳು ಜೀವಿಸಲಾರವೋ ಅಂತಹ ಮಹೋನ್ನತವಾದುದು ಧಮ್ಮಗಿರಿಯು, ಅಂತಹ ಮಹೋನ್ನತ ವೀರರಾದ ಅಗ್ರರಾಗಿದ್ದಾರೆಂದು ಖಚಿತವಾಗಿ ಅಂದಾಜು ಮಾಡುತ್ತಾರೆ.

ಯಾವಾಗ ಮನುಷ್ಯರು ಗಜರಾಜನ ಪಾದಚಿಹ್ನೆಯನ್ನು ಕಂಡು ಈ ಪಾದವೇ ಹೀಗಿರುವಲ್ಲಿ ಆ ಮಹಾಗಜವು ಹೇಗಿರುತ್ತದೆ ಎಂದು ಅದನ್ನು ಅಂದಾಜು ಮಾಡುತ್ತಾರೆ.
ಹಾಗೆಯೇ ಮಾನವರಲ್ಲಿ ಮಹಾ ಆನೆಯಂತಿರುವ ಬುದ್ಧರ ಪಾದದ ಚಿಹ್ನೆ ಕಂಡು, ಹಾಗೆಯೇ ಬುದ್ಧಪಥವನ್ನು, ಅದನ್ನು ಅವರ ಹಿಂಬಾಲಕರು ಪಾಲಿಸುತ್ತಿರುವುದನ್ನು ಕಂಡು ಬುದ್ಧ ಭಗವಾನರು ಅದೆಷ್ಟು ಘನಭವ್ಯತೆಯುಳ್ಳವರು ಎಂದು ಅಂದಾಜು ಮಾಡುವರು.

ಹೇಗೆ ಯಾವಾಗ ಎಲ್ಲಾ ಪ್ರಾಣಿ ಭಯಭೀತರಾಗಿರುವಾಗ ಮಾನವನಿಗೆ ತಿಳಿಯುವುದು ಏನೆಂದರೆ ಇದು ಮೃಗರಾಜ ಸಿಂಹದ ಘರ್ಜನೆಯಿಂದಾಗಿ ಇವೆಲ್ಲಾ ಭಯಭೀತವಾಗಿದೆ ಅದೇರೀತಿಯಲ್ಲಿ ಯಾವಾಗ ಪರ ಗುರುಗಳು ಭೀತಿಯಿಂದ ಕಂಪಿಸುತ್ತ ಕುಸಿದರೆ, ಆಗ ಜ್ಞಾನಿಗಳಿಗೆ ಖಚಿತವಾಗಿ ತಿಳಿಯುವುದು ಏನೆಂದರೆ ಇದು ಖಂಡಿತವಾಗಿ ಧಮ್ಮಾರಾಜ ಬುದ್ಧರ ಘರ್ಜನೆ.

ಯಾವಾಗ ಭೂಮಿಯು ಹಸನ್ಮುಖಿಯಾಗಿ, ನೀರಿನಿಂದ, ಹಸಿರಿನಿಂದ, ಹುಲ್ಲುಗಳಿಂದ ಕೂಡಿದ್ದರೆ, ಮಾನವರು ಹೇಳುವುದು ಏನೆಂದರೆ ಒಂದು ದೊಡ್ಡ ಮತ್ತು ಚೆನ್ನಾದ ಮಳೆಯು ಶೀಘ್ರದಲ್ಲೇ ಬಿದ್ದಿದೆ. ಅದೇರೀತಿಯಲ್ಲಿ ಜನರು ಪ್ರಮೋದಿತರಾಗಿ ಅನುಮೋದನೆ ಮಾಡಿದಾಗ ಆನಂದಿತರಾದಾಗ, ಶಾಂತಿ ಪಡೆದಾಗ, ಜನರು ಖಚಿತವಾಗಿ ತೀಮರ್ಾನಿಸುವುದು ಏನೆಂದರೆ ಧಮ್ಮಾ ಮೇಘವು ಸುರಿಯುತ್ತಿದೆ.

ಯಾವಾಗ ವಿಶಾಲಧರೆಯು ಒದ್ದೆಯಾಗಿ, ಜೌಗಿನ ನೆಲವಾಗಿ, ಕೆಸರಿನ ತಾಣವಾದರೆ ಜನರು ತಿಳಿಯುವುದು ಏನೆಂದರೆ, ಹೇರಳವಾದ ನೀರು ಹರಿದು ಹೀಗಾಗಿದೆ. ಅದೇರೀತಿಯಲ್ಲಿ ಬೃಹತ್ ಸಮೂಹವನ್ನು ಕಂಡು ಯಾವಾಗ ವಿಸ್ಮಯಪಡುವೆವೋ ಹೇಗೆ ಧಮ್ಮಪ್ರವಾಹದಿಂದಾಗಿ ಪಾಪದ ಕೆಸರು ಕೊಚ್ಚಿ ಹೋಗುವುದೋ, ವಿಶಾಲ ಧಮ್ಮಸಾಗರದಲ್ಲಿ ಇಲ್ಲಿ ಹಲವರು, ಅಲ್ಲಿ ಹಲವರು ಇದ್ದಾರೆ. ಎಲ್ಲಾ ದೇವತೆಗಳು ಮತ್ತು ಮಾನವರು ಅಮರತ್ವದ ಅಲೆಗಳಲ್ಲಿ ಮುನ್ನುಗ್ಗುತ್ತಿರುವುದನ್ನು ಕಂಡವರು ಖಂಡಿತವಾಗಿ ಹೇಳುವುದು ಏನೆಂದರೆ ಧಮ್ಮವು ಪರಮಶ್ರೇಷ್ಠ.

ಯಾವಾಗ ಮನುಷ್ಯರು ಪ್ರಯಾಣಿಸುವಾಗ, ದಿವ್ಯವಾದ ಸೌಗಂಧಿಕವನ್ನು ಅನುಭವಿಸುತ್ತಾರೆ. ಹಾಗೆಯೇ ಇಡೀ ನಗರವನ್ನೇ ಸುಗಂಧದಿಂದ ಒಮ್ಮೆಗೆ ಆನಂದ ತರಿಸಿದರೆ, ಆಗ ಜನರು ತಿಳಿಯುವುದು ಏನೆಂದರೆ ಖಂಡಿತವಾಗಿ ಕಾಡಿನ ಬೃಹತ್ ಮರಗಳು ಈಗ ಹೂಬಿಟ್ಟಿವೆ. ಅದೇರೀತಿಯಲ್ಲಿ ಎಲ್ಲೆಡೆ ಶೀಲಗಂಧವು ಹಬ್ಬಿ ಅದು ಭೂಮಿ ಹಾಗು ಸುಗತಿಗಳಲೆಲ್ಲಾ ಹಬ್ಬಿದ್ದರೆ ಎಲ್ಲರೂ ಖಚಿತವಾಗಿ ತಿಳಿಯುವುದು ಏನೆಂದರೆ ಅನುತ್ತರವಾದ ಭಗವಾನ್ ಬುದ್ಧರು ಇದ್ದರು.

ಮತ್ತೆ ಓ ಮಹಾರಾಜ, ಭಗವಾನರ ಮಹೋನ್ನತೆಯನ್ನು ತೋರಿಸಲು ನೂರು ರೀತಿಯಲ್ಲಿ, ಸಾವಿರ ರೀತಿಯಲ್ಲಿ ಸಾಧ್ಯವಿದೆ. ತರ್ಕದಿಂದ, ಆಧಾರದಿಂದ, ಚಚರ್ೆಯಿಂದ, ಉಪಮೆಗಳಿಂದ ಸಾವಿರರೀತಿ ತೋರಿಸಲು ಸಾಧ್ಯವಿದೆ. ಓ ಮಹಾರಾಜ, ಹೇಗೆ ಚಾಣಾಕ್ಷ ಹೂಹಾರ ನಿಮರ್ಿಸುವವನು, ತನ್ನ ಗುರುವಿನ ಸಲಹೆ ಮತ್ತು ತನ್ನ ಸೃಜನಶೀಲತೆಯಿಂದಾಗಿ, ಹೂರಾಶಿಯಿಂದ ನಾನಾಬಗೆಯ ಹೂಗಳಿಂದ, ನಾನಾರೀತಿಯ ಸುಂದರವಾದ, ಹಾರಗಳನ್ನು ಪುಷ್ಪಗುಚ್ಛಗಳನ್ನು ನಿಮರ್ಿಸುತ್ತಾನೋ, ಹಾಗೆಯೇ ಓ ಮಹಾರಾಜ, ಬುದ್ಧ ಭಗವಾನರ ಬಗ್ಗೆ, ಅವರ ಅನಂತ ಸದ್ಗುಣ ರಾಶಿಗಳಿಂದ, ಅಳೆಯಲಾರದ ಅವರ ಶೀಲಗಳನ್ನು ನಾನು ಹೂಹಾರಗಾರನಂತೆ ಹಳೆಯ ಆಚಾರ್ಯರ ಶೈಲಿ ಮತ್ತು ನನ್ನ ಸೃಜನಶೀಲತೆಯಿಂದ ಬುದ್ಧ ಮಹಿಮೆಯನ್ನು ಅಸಂಖ್ಯಾ ಉಪಮೆಗಳಿಂದ, ನಿದರ್ಶನಗಳಿಂದ ಖಚಿತಪಡಿಸುತ್ತೇನೆ. ಆದರೆ ನೀವು ಕೇಳಲು ಇಚ್ಛಿಕರಾಗಬೇಕಷ್ಟೇ.

ಭಂತೆ ನಾಗಸೇನ, ನಿಮ್ಮಂತೆ ಈ ರೀತಿಯಾಗಿ ಬುದ್ಧ ಬಲವನ್ನು ಅಂದಾಜು ಮಾಡಿ ಖಚಿತಪಡಿಸುವವರು ದುರ್ಲಭವಾಗಿದ್ದಾರೆ, ನಾನು ತೃಪ್ತನಾಗಿದ್ದೇನೆ ಭಂತೆ ನಾಗಸೇನ, ಸಮಸ್ಯೆಯನ್ನು ಇಷ್ಟು ವಿಧವಾಗಿ ಪೂರ್ಣವಾಗಿ ಪರಿಹರಿಸುವ ಶೈಲಿ ಅಮೋಘವಾಗಿದೆ. 

No comments:

Post a Comment