2. ಸಮುದ್ರ ವರ್ಗ (ಸಮುದ್ರೊ ವಗ್ಗೋ)
1. ಲಾಬುಲತಾಂಗ ಪನ್ಹೊ (ಕುಂಬಳ ಬಳ್ಳಿಯ ಪ್ರಶ್ನೆ)ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ, ಕುಂಬಳ ಬಳ್ಳಿಯ ಒಂದು ಗುಣ ಯಾವುದು? (226)
ಓ ಮಹಾರಾಜ, ಹೇಗೆ ಕುಂಬಳ ಬಳ್ಳಿಯು ಮೇಲಕ್ಕೆಯೇ ಸುತ್ತುತ್ತಾ ಪರವೃಕ್ಷಕ್ಕೆ ಅಥವಾ ಹುಲ್ಲಿಗೆ ಅಥವಾ ಮುಳ್ಳಿಗೆ ಅಥವಾ ಬಳ್ಳಿಗೆಯೇ ಹೊಂದುತ್ತಾ ಬೆಳೆಯುವುದೋ ಹಾಗೆಯೇ ಓ ಮಹಾರಾಜ, ಭಿಕ್ಷುವು, ಧ್ಯಾನಿಯು, ಪ್ರಯತ್ನಶಾಲಿಯು ಆದ ಅತನು ಅರಹತ್ವದ ಎತ್ತರಕ್ಕೆ ಬೆಳೆಯಲು ಇಚ್ಛಿಸುತ್ತಾನೆ. ಅದಕ್ಕಾಗಿ ಧ್ಯಾನ ವಿಷಯಗಳಲ್ಲಿ ತಲ್ಲೀನನಾಗಿ ಸಮಾಧಿಯ ಹಂತಗಳನ್ನು ದಾಟುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಕುಂಬಳ ಬಳ್ಳಿಯ ಒಂದು ಗುಣವಾಗಿದೆ. ಇದರ ಬಗ್ಗೆ ಧಮ್ಮ ಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಹೇಗೆ ಕುಂಬಳ ಗಿಡವು ತನ್ನ ಬಳ್ಳಿಗಳಿಂದಾಗಿ ಬೆಳೆಯುವುದೋ ಹುಲ್ಲಿಗಾಗಲಿ, ಮುಳ್ಳಿಗಾಗಲಿ, ಬಳ್ಳಿಗಾಗಲಿ, ಆಸರೆ ಪಡೆದು ವಿಶಾಲವಾಗಿ ಹಬ್ಬುವುದೋ ಹಾಗೆಯೇ ಬುದ್ಧಪುತ್ರರು ಅರಹಂತತ್ವಕ್ಕೆ ಬಾಗಿ ಧ್ಯಾನಹಂತಗಳನ್ನು ಹತ್ತಿ ಪೂರ್ಣತೆ ಮತ್ತು ಶಾಂತಿಯೆಡೆಗೆ ಧಾವಿಸುತ್ತಾರೆ.
2. ಪದ್ಮಾಂಗ ಪನ್ಹೊ (ಪದ್ಮದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಪದ್ಮದ 3 ಗುಣಗಳಾವುವು? (227)ಓ ಮಹಾರಾಜ, ಹೇಗೆ ಕಮಲವು ಜಲದಲ್ಲೇ ಜನಿಸಿದರೂ ಜಲದಲ್ಲೇ ಬೆಳೆದರೂ, ಜಲದಿಂದ ಅದು ಅಂಟುವುದಿಲ್ಲ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಖುವು, ಜಾಗರೂಕನಾಗಿ, ತನಗೆ ಏನೇ ಸಿಗಲಿ ಅದಕ್ಕೆ ಅಂಟುವುದಿಲ್ಲ. ಅಥವಾ ಪರರಿಗೆ ಏನೇ ಸಿಗಲಿ, ಸಹಭಿಕ್ಷುಗಳು ಏನೇ ನೀಡಲಿ, ಅದಕ್ಕೆ ಅಂಟುವುದಿಲ್ಲ. ಹಾಗೆಯೇ ಕೀತರ್ಿಗಾಗಲಿ, ಗೌರವಕ್ಕಾಗಲಿ, ಪೂಜೆ ಅಥವಾ ಪರಿಕರಗಳಿಗೆ ಅಂಟುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಪದ್ಮದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪದ್ಮವು ನೀರಿನಿಂದ ಎತ್ತರಕ್ಕೆ ಎತ್ತಿ ನಿಂತಿರುವುದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಾಪಂಚಿಕತೆ ಮತ್ತು ಪ್ರಾಪಂಚಿಕ ವಸ್ತುಗಳಿಂದ ಅತಿ ಎತ್ತರಕ್ಕೆ ಅಂಟದೆ ಜೀವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪದ್ಮದ ಎರಡನೆಯ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ಪದ್ಮವು ಅತಿಸೂಕ್ಷ್ಮ ತಂಗಾಳಿಗೂ ಸಹಾ ಕಂಪಿಸುವುದೋ ಹಾಗೆಯೇ ಮಹಾರಾಜ, ಭಿಕ್ಷುವು ಸಹಾ ಧ್ಯಾನಶೀಲನಾಗಿ ಯತ್ನಶೀಲನಾಗಿ, ಸಂಯಮ ಪಾಲಿಸುತ್ತಾನೆ. ಆತನು ಅಣುವಿನಷ್ಟು ತಪ್ಪಿಗೂ ಹೆದರಿ ಜೀವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪದ್ಮದ ಮೂರನೆಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ದೇವಾದಿದೇವರಾಗಿರುವ ಭಗವಾನರು ಹೀಗೆ ಹೇಳಿದ್ದಾರೆ:
ಅಣುವಿನಷ್ಟು ಅಲ್ಪ ತಪ್ಪಿಗೂ ಅಪಾಯ ಕಂಡು ಭೀತನಾಗಿ ಕಂಡು, ಆತನು ಶೀಲ, ಸಂಯಮಗಳನ್ನು ನಿಷ್ಠೆಯಿಂದ ಪಾಲಿಸಿ ಸುಶಿಕ್ಷಿತನಾಗುತ್ತಾನೆ.
3. ಬೀಜಂಗ ಪನ್ಹೊ (ಬೀಜದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಬೀಜದ ಯಾವ 2 ಗುಣಗಳನ್ನು ಹೊಂದಿರ ಬೇಕು? (228)ಓ ಮಹಾರಾಜ, ಹೇಗೆ ಬೀಜವು ಚಿಕ್ಕದಾಗಿದ್ದರೂ ಅದನ್ನು ಮಣ್ಣಿನಲ್ಲಿ ಬಿತ್ತಿದಾಗ, ಮಳೆಬಿದ್ದು, ನಂತರ ಅದು ಹೇರಳವಾದ ಫಲವು ನೀಡುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಖುವು ಪ್ರಯತ್ನಶೀಲನಾಗಿ, ಯೋಗ್ಯರೀತಿಯಲ್ಲಿ ತನ್ನನ್ನು ನಡೆಸಿಕೊಂಡರೆ ಸಮಣತ್ವದ ಫಲಗಳನ್ನು ಹೇರಳವಾಗಿ ಪಡೆಯುತ್ತಾನೆ. ಓ ಮಹಾರಾಜ, ಬೀಜದಲ್ಲಿನ ಪ್ರಥಮ ಗುಣವು ಇದೇ ಆಗಿದೆ.
ಮತ್ತೆ ಓ ಮಹಾರಾಜ, ಬೀಜವನ್ನು ಉತ್ತಮ ಫಲವತ್ತಾದ ಮಣ್ಣಿನಲ್ಲಿ ಬಿತ್ತಿದರೆ ಅದು ಬೇಗ ಪಕ್ವತೆಗೆ ಬರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಇಚ್ಛಾಶಕ್ತಿಯಿಂದ ಮನಸ್ಸನ್ನು ಚೆನ್ನಾಗಿ ಪಳಗಿಸಿದಾಗ, ಏಕಾಂತತೆಯಲ್ಲಿ ನೆಲೆಸಿ ಪರಿಶುದ್ಧಗೊಳಿಸಿದಾಗ ಪಕ್ವತೆಯು ಬೇಗನೆ ಲಭಿಸುವುದು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬೀಜದ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ಥೇರ ಅನುರುದ್ಧರು ಹೀಗೆ ಹೇಳಿದ್ದಾರೆ:
ಫಲವತ್ತಾದ ನೆಲದಲ್ಲಿ ಬೀಜ ಬಿತ್ತಿದಾಗ ಹೇರಳವಾದ ಫಲಗಳು ದೊರೆಯುತ್ತದೆ. ಆಗ ರೈತನಿಗೆ ಆನಂದವಾಗುತ್ತದೆ. ಹಾಗೆಯೇ ಭಿಕ್ಷುವು ಏಕಾಂತತೆಯಲ್ಲಿ ನೆಲೆಸಿ, ಸತಿಪಟ್ಠಾನಗಳನ್ನು ವೃದ್ಧಿಸಿದಾಗ, ಫಲ ಲಭಿಸಿ ಭಿಕ್ಖುವು ಆನಂದಿಸುತ್ತಾನೆ.
4. ಸಾಲಕಲ್ಯಾಣಿರಂಗ ಪನ್ಹೊ
ಭಂತೆ ನಾಗಸೇನ, ಭಿಕ್ಖುವು ಸಾಲವೃಕ್ಷದ ಯಾವ ಒಂದು ಗುಣವನ್ನು ಹೊಂದಿರುತ್ತಾನೆ? (229)ಓ ಮಹಾರಾಜ ಹೇಗೆ ಸಾಲವೃಕ್ಷವು ಭೂಮಿಯ ಒಳಕ್ಕೆ ನೂರು ಗಜಕ್ಕೂ ಹೆಚ್ಚಿನ ಆಳದಲ್ಲಿರುತ್ತದೆಯೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ನಿಷ್ಠನಾಗಿ, ಏಕಾಂತತೆಯಲ್ಲಿ ತಲ್ಲೀನನಾಗಿ, ಸಮಣತ್ವದ ನಾಲ್ಕು ಫಲಗಳನ್ನು ಪಡೆಯುತ್ತಾನೆ. ಆರು ಅಭಿಜ್ಞಾಗಳನ್ನು ನಾಲ್ಕು ಪಟಿಸಂಬಿದಾ ಜ್ಞಾನಗಳನ್ನು ಮತ್ತು ಭಿಕ್ಖುಗಳ ಎಲ್ಲಾ ಗುಣಗಳನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಸಾಲವೃಕ್ಷದ ಒಂದು ಗುಣವನ್ನು ಭಿಕ್ಖುವು ಹೊಂದಿರುತ್ತಾ. ಓ ಮಹಾರಾಜ, ಇದರ ಬಗ್ಗೆ ರಾಹುಲ ಥೇರರು ಹೀಗೆ ಹೇಳಿದ್ದಾರೆ:
ಯಾವ ಮರವು ಭೂಮಿಯ ಮೇಲೆ ಮತ್ತು ಭೂಮಿಯ ಅಂತರದಲ್ಲೂ ನೂರು ಗಜಕ್ಕೂ ಹೆಚ್ಚಿನ ಆಳವಿರುವುದೋ ಅದಕ್ಕೆ ಸಾಲವೃಕ್ಷ ಎನ್ನುತ್ತಾರೆ. ಆ ಮರದ ಮೇಲ್ಭಾಗವು ದಿನಕ್ಕೆ ನೂರುಗಜ ಬೆಳೆಯುತ್ತದೆ, ಅದೇರೀತಿಯಾಗಿ ಏಕಾಂತತೆಯಲ್ಲಿ ನೆಲೆಸಿ ಚಿತ್ತ ಅಭಿವೃದ್ಧಿಯನ್ನು ನಾನು ಸಹಾ ಸಾಲವೃಕ್ಷದಂತೆ ಬೆಳೆಸಿರುವೆ ಓ ಮಹಾವೀರರೇ.
5. ನಾವಂಗ ಪನ್ಹೊ (ನಾವೆಯ ಪ್ರಶ್ನೆ)
ಭಂತೆ ನಾಗಸೇನ, ನಾವೆಯ ಯಾವ 3 ಗುಣಗಳನ್ನು ಭಿಕ್ಷು ಹೊಂದಿರ
ಬೇಕು? (230)ಓ ಮಹಾರಾಜ, ಹೇಗೆ ನಾವೆಯು ವಿವಿಧರೀತಿಯ ಮರದ ತುಂಡುಗಳಿಂದ ರಚಿತವಾಗಿರುತ್ತದೋ, ಹಾಗು ಹಲವಾರು ಜನರನ್ನು ದಡ ಮುಟ್ಟಿಸಿದೆಯೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಅಪಾರ ಪ್ರಯತ್ನದಿಂದ ಆತನು ಸುಗತಿಯಲ್ಲೇ ಇರಲಿ ಅಥವಾ ಭೂಮಿಯಲ್ಲೇ ಇರಲಿ, ಸರ್ವಲೋಕಗಳಲ್ಲಿ ಇರುವಿಕೆಯನ್ನೇ ದಾಟಿದ್ದಾನೆ. ಹಾಗೆಯೇ ನಾನಾವಿಧವಾದ ಗುಣಗಳ ವೈವಿಧ್ಯತೆಯಿಂದ ಆತನ ಶೀಲವು ರಚಿತವಾಗಿರುತ್ತದೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ನಾವೆಯು ನಾನಾರೀತಿಯ ಅಲೆಗಳ ಹೊಡೆತಗಳನ್ನು, ಸುಳಿಗಳ ಪೆಟ್ಟುಗಳನ್ನು ಸಹಿಸುತ್ತದೋ ಅದೇರೀತಿಯಾಗಿ ಓ ಮಹಾರಾಜ, ದಾನಶೀಲ ಭಿಕ್ಷುವು ಸಹಾ ಪಾಪಗಳ ಪ್ರವೃತ್ತಿಯನ್ನು, ಪ್ರಚೋದಕಗಳನ್ನು ಲಾಭ ಸತ್ಕಾರಗಳನ್ನು, ಸ್ತುತಿಯನ್ನು, ಪೂಜೆ ವಂದನೆಗಳನ್ನು ಹಾಗೆಯೇ ನಿಂದೆ, ಪ್ರಶಂಸೆ, ಸುಖದುಃಖಗಳಿಂದ ಆತನು ಪ್ರಚೋದಿತನಾಗುವುದಿಲ್ಲ. ಶಾಂತವಾಗಿದ್ದು ಸಹಿಸಿಕೊಳ್ಳುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವೆಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಭಿಕ್ಷು ಹೊಂದಬೇಕಾದ ನಾವೆಯ ತೃತೀಯ ಗುಣವು ಯಾವುದು? ಮತ್ತೆ ಇಲ್ಲಿ ಓ ಮಹಾರಾಜ, ನಾವೆಯು ಅಳೆಯಲಾಗದ ಅನಂತವಾದ ಸಾಗರಗಳನ್ನು ದಾಟಿಸುತ್ತದೆ. ಮಧ್ಯದಲ್ಲೂ ಕಂಪನವಾಗುವುದಿಲ್ಲ, ಘಜರ್ಿಸುತ್ತ ಶಬ್ದವನ್ನುಂಟು ಮಾಡುತ್ತ ಸಾಗುತ್ತದೆ. ಸಾಗರವು ಎಲ್ಲಾ ವಿಧವಾದ ಮೀನುಗಳಿಂದ ರಾಕ್ಷಸಕಾರದ ಜೀವಿಗಳಿಂದ, ತಿಮಿಂಗಿಲ, ಮೊಸಳೆ ಇತ್ಯಾದಿಗಳಿಂದ ತುಂಬಿರುವ ಜೀವಿಗಳಿಂದ ತುಂಬಿರುವ ಸಾಗರವನ್ನು ದಾಟುತ್ತದೆಯೋ, ಅದೇರೀತಿಯಲ್ಲಿ ಓ ಮಹಾರಾಜ, ದ್ಯಾನಶೀಲ ಭಿಕ್ಷುವು ನಾಲ್ಕು ಆರ್ಯಸತ್ಯಗಳ, ತ್ರಿವಿಧ ವಗರ್ಿಕರಣ, ಅವುಗಳ 12 ವಿಧದ ರಚನೆಯನ್ನು ಒಳಗೊಂಡ ಪ್ರಜ್ಞಾಲೋಕದಲ್ಲಿ ಪ್ರಯಾಣವನ್ನು ಮಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವೆಯ ತೃತೀಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಸಂಯುಕ್ತ ನಿಕಾಯದಲ್ಲಿ ಸಚ್ಚ ಸಂಯುಕ್ತದಲ್ಲಿ ಹೀಗೆ ಹೇಳಿದ್ದಾರೆ:
ಓ ಭಿಕ್ಷುಗಳೇ, ನೀವು ಯಾವಾಗಲಾದರು ಯೋಚಿಸುವಾಗ ಹೀಗೆಯೇ ಯೋಚಿಸಿ: ದುಃಖವು ಹೀಗಿರುತ್ತದೆ, ದುಃಖದ ಉದಯವು ಹೀಗೆ ಆಗುತ್ತದೆ, ದುಃಖದ ಅಂತ್ಯವು ಹೀಗೆ ಆಗುತ್ತದೆ, ದುಃಖದ ನಿರೋಧ ಮಾರ್ಗವು ಹೀಗಿರುತ್ತದೆ.
6. ನಾವಲಿಗ್ಗ ಏಕಂಗ ಪನ್ಹೊ (ನಾವೆಯ ಲಂಗರಿನ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಲಂಗರಿನ 2 ಗುಣಗಳಾವುವು?(231)ಓ ಮಹಾರಾಜ, ಹೇಗೆ ಲಂಗರು ಅಲೆಗಳಿಂದ ಕೂಡಿದ ದಟ್ಟ ವಾತಾವರಣದಲ್ಲೂ, ಅಪಾರ ನೀರಿನಲ್ಲೂ ನಾವೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಸ್ಥಿರವಾಗಿ ನಿಲ್ಲುವಂತೆ ಮಾಡುತ್ತದೆ. ಸಮುದ್ರವು ನಾನಾ ದಿಕ್ಕುಗಳಲ್ಲಿ ಎಳೆಯುವಂತೆ ಲಂಗರು ಮಾಡುತ್ತದೆ. ಸಮತೋಲನ ಕಾಪಾಡಿ, ಸ್ಥಿರತೆಯುತ ಚಲನೆಗೆ ಸಹಾಯ ಮಾಡುತ್ತದೆ. ಓ ಮಹಾರಾಜ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಪರಿಶ್ರಮಯುತನಾಗುತ್ತಾನೆ. ಯೋಚನೆಗಳ ಮಹಾ ಸಂಗ್ರಾಮದಲ್ಲಿ ಚಿತ್ತವನ್ನು ಸ್ಥಿರವಾಗಿಡುತ್ತಾನೆ. ಮಾನಸ ಸಮುದ್ರದಲ್ಲಿ ರಾಗದ, ದ್ವೇಷದ, ಮೋಹದ ಅಲೆಗಳಿಂದಾಗಿ ಹಾದಿ ತಪ್ಪುವುದಿಲ್ಲ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಲಂಗರಿನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಲಂಗರು ತೇಲುವುದಿಲ್ಲವೋ ಆದರೆ ಮುಳುಗುವುದೋ ಮತ್ತು ಜಲವು ನೂರು ಗಜಗಳಷ್ಟು ಆಳದಲ್ಲಿದ್ದರೂ ನಾವೆಯನ್ನು ಹಿಡಿತದಲ್ಲಿಟ್ಟು ವೇಗ ಹೆಚ್ಚಿಸುತ್ತದೆ, ವಿಶ್ರಾಂತಿಗೆ ತರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲದಿಂದ ಕೂಡಿರುತ್ತಾನೆ. ಆತನು ಲಾಭ, ಯಶಸ್ಸು, ಸತ್ಕಾರ, ಮಾನ್ಯತೆ, ವಂದನೆ, ಪೂಜೆ ಇವುಗಳೆಲ್ಲವೂ ಲಭಿಸಿದರೂ ಸಹಾ ಆತನ ಚಿತ್ತವೂ ಉದ್ವೇಗವಾಗಿ ಉಬ್ಬಿಹೋಗುವುದಿಲ್ಲ. ಆದರೆ ಚಿತ್ತವನ್ನು ಸ್ಥಿರವಾಗಿಟ್ಟು, ಶರೀರವನ್ನು ಜೀವಂತವಾಗಿರುಸುವಿಕೆಯ ಹೊರತು ಬೇರ್ಯಾವ ಸಾಧಾರಣ ಬಯಕೆಯಿರುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಲಂಗರಿನ ದ್ವಿತೀಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಸಾರಿಪುತ್ತರು ಹೀಗೆ ಹೇಳಿದ್ದಾರೆ:
ಹೇಗೆ ಲಂಗರು ತೇಲುವುದಿಲ್ಲವೋ, ಆದರೆ ಅಲೆಗಳ ಕೆಳಗೆ ಮುಳುಗುವುದೋ, ಹಾಗೆಯೇ ಸ್ತುತಿ ಅಥವಾ ದಾನಗಳಲ್ಲಿ ಉಬ್ಬಿಹೋಗದೆ ವಿನಮ್ರನಾಗಲಿ.
7. ಕುಪಂಗ ಪನ್ಹೊ (ಧ್ವಜಸ್ತಂಭದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಧ್ವಜಸ್ತಂಭದ ಒಂದು ಗುಣ ಯಾವುದು? (232)ಓ ಮಹಾರಾಜ, ಹೇಗೆ ಆಧಾರಸ್ತಂಭವು ಹಗ್ಗಗಳನ್ನು, ಕಟ್ಟುಗಳನ್ನು, ನೌಕಪಟಗಳನ್ನು ಕರೆದೊಯ್ಯುತ್ತದೋ ಹಾಗೆಯೇ ಧ್ಯಾನಶೀಲಭಿಕ್ಷುವು ಸದಾ ಜಾಗರೂಕನಾಗಿ, ಸ್ಪಷ್ಟವಾದ ಅರಿವಿನಿಂದ ಕೂಡಿ, ಆ ಜಾಗೃತಭಾವವನ್ನು ತನ್ನೆಲ್ಲಾ ಚಟುವಟಿಕೆಯಲ್ಲಿ ಭಂಗಿಗಳಲ್ಲಿ ಸ್ಥಾಪನೆ ಮಾಡುತ್ತಾನೆ. ಹೇಗೆಂದರೆ ತಿರುಗಾಡುವುದಾಗಲಿ, ನೋಡುವಾಗಲಾಗಲಿ, ಕೈಗಳನ್ನು ಮಡಚುವಾಗ ಆಗಲಿ, ಅಥವಾ ತೆರೆಯುವಾಗ ಆಗಲಿ, ಚೀವರವನ್ನು ಧರಿಸುವಾಗ ಆಗಲಿ, ಪಿಂಡಪಾತ್ರೆ ಹಿಡಿಯುವಾಗ ಆಗಲಿ, ತಿನ್ನುವಾಗ, ನೀರು ಕುಡಿಯುವಾಗ, ಅಗಿಯುವಾಗ, ರುಚಿ ನೋಡುವಾಗ, ನಡೆಯುವಾಗ, ನಿಂತಿರುವಾಗ, ಕುಳಿತಿರುವಾಗ )ಅಥವಾ ಮಲಗಿರುವಾಗ, ಮಾತನಾಡುವಾಗ, ಮೌನವಾಗಿರುವಾಗ, ಹೀಗೆ ಎಂದಿಗೂ ತನ್ನ ಸ್ಮೃತಿ ಸ್ಪಷ್ಟ ಅರಿವನ್ನು ಸಡಿಲ ಮಾಡುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಧ್ವಜಸ್ತಂಭದ ಒಂದು ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಭಗವಾನರು ದೇವಾದಿದೇವರು ಆಗಿರುವಂತಹ ಬುದ್ಧರು ಸಹಾ ಹೀಗೆ ಹೇಳಿರುವರು:
ಜಾಗೃತಭಾವದಿಂದಿರಿ ಓ ಭಿಕ್ಷುಗಳೇ, ಸ್ಮೃತಿ ಸ್ಪಷ್ಟ ಅರಿವಿನಿಂದ ಕೂಡಿರಿ. ಇದೇ ನಿಮಗೆ ನೀಡುವ ಉಪದೇಶವಾಗಿದೆ.
8. ನಿಯಾಮಕಂಗ ಪನ್ಹೋ (ನಾವಿಕ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ನಾವಿಕನ 3 ಗುಣಗಳು
ಯಾವುದು? (233)ಓ ಮಹಾರಾಜ, ಹೇಗೆ ನಾವಿಕನು ಹಗಲು-ರಾತ್ರಿ ತನ್ನ ನಿರಂತರ, ಸತತ ಉತ್ಸಾಹಯುತವಾದ ಪರಿಶ್ರಮದಿಂದ ನಾವೆಯನ್ನು ಓಡಿಸುತ್ತಾನೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ರಾತ್ರಿ-ಹಗಲು ಉತ್ಸಾಹಿತನಾಗಿ ನಿರಂತರ ಸತತ ಧ್ಯಾನಾಭ್ಯಾಸ ಮಾಡುತ್ತಾನೆ. ಯೋಗ್ಯವಾದ ಜ್ಞಾನಯುತ ಗಮನಹರಿಸುವಿಕೆಯಿಂದ, ಚಿತ್ತವನ್ನು ಇಟ್ಟು, ಚಿತ್ತಾಭಿವೃದ್ಧಿ ಮಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಲೇಬೇಕಾಗಿರುವಂತಹ ನಾವಿಕನ ಗುಣವಾಗಿದೆ. ಓ ಮಹಾರಾಜ, ದೇವಾದಿದೇವರಾದ ಭಗವಾನರು ಧಮ್ಮಪಥದಲ್ಲಿ ಹೀಗೆ ಹೇಳಿದ್ದಾರೆ:
ಹೇಗೆ ಕೆಸರಿನಲ್ಲಿ ಸಿಲುಕಿರುವ ಆನೆಯು ತನ್ನ ಪರಾಕ್ರಮದಿಂದ ಹೇಗೆ ಹೊರಬರುವುದೋ, ಅದೇರೀತಿಯಲ್ಲಿ ಉತ್ಸಾಹಿತನಾಗಿ, ಚಿತ್ತವನ್ನು ಜಾಗೃತ ಭಾವದಲ್ಲಿರಿಸು. ಚೆನ್ನಾಗಿ ಚಿತ್ತವನ್ನು ಪಹರೆ ಮಾಡುತ್ತ, ಪಾಪಗಳ ಕೆಸರಿನಿಂದ ಹೊರಬಾ.
ಮತ್ತೆ ಓ ಮಹಾರಾಜ, ಹೇಗೆ ನಾವಿಕನಿಗೆ ಸಾಗರದಲ್ಲಿ ಇರುವಂತಹ ಪ್ರತಿಯೊಂದು ತಿಳಿದಿರುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದು ಸಹಾ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಲ್ಲಿ ದೃಢನಾಗಿ, ಪಾಪದಿಂದ ಪುಣ್ಯವನ್ನು ತಿಳಿಯುವಂತೆ ಯಾವುದು ತಪ್ಪು ಮತ್ತು ಯಾವುದು ಸರಿ, ಯಾವುದು ಉಚ್ಚ ಮತ್ತು ಯಾವುದು ಶ್ರೇಷ್ಠ, ಯಾವುದು ಕತ್ತಲು ಮತ್ತು ಯಾವುದು ಬೆಳಕು ಎಂದೆಲ್ಲಾ ಅರಿತಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವಿಕನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ನಾವಿಕನು ಯಂತ್ರಗಳ ಮೇಲೆ ಮುದ್ರೆ ಹಾಕುವಂತೆ, ಯಾರು ಆ ಯಂತ್ರಗಳನ್ನು ಮುಟ್ಟದಿರುವಂತೆ ಮಾಡಿರುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸ್ವ-ನಿಯಂತ್ರಣದ ಮುದ್ರೆ ಹಾಕಿಕೊಂಡಿರುತ್ತಾನೆ. ಆತನು ಯಾವುದೇ ಅಕುಶಲ ಯೋಚನೆಗಳು ಉಂಟಾಗದಿರುವಂತೆ ನೋಡಿಕೊಳ್ಳುತ್ತಾನೆ. ಇದೇ ಮಹಾರಾಜ ಇದರ ಬಗ್ಗೆ ದೇವಾದಿದೇವರಾದ ಭಗವಾನರು ಸಂಯುಕ್ತ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ಓ ಭಿಕ್ಷುಗಳೇ, ಅಕುಶಲ ವಿತರ್ಕ (ಯೋಚನೆಗಳು) ಉಂಟಾಗದಂತೆ ನೋಡಿಕೊಳ್ಳಿ. ಅದೆಂದರೆ ಕಾಮವಿತರ್ಕ, ದ್ವೇಷವಿತರ್ಕ, ಹಿಂಸಾವಿತರ್ಕಗಳು.
9. ಕಮ್ಮಕಾರಂಗ ಪನ್ಹೋ (ಕುಶಲಕಮರ್ಿ ನಾವಿಕ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಕುಶಲಕಮರ್ಿ ನಾವಿಕನ ಒಂದು ಗುಣವು ಯಾವುದು? (234)ಓ ಮಹಾರಾಜ, ಹೇಗೆ ಕುಶಲಕಮರ್ಿ ನಾವಿಕನು ಹಡಗಿನಲ್ಲಿದ್ದಾಗ ಹೀಗೆ ಯೋಚಿಸುತ್ತಾನೆ: ನಾನು ಕೆಲಸದವನಾಗಿದ್ದೇನೆ, ನಾನು ಈ ಹಡಗಿನಲ್ಲಿ ಕೆಲಸಕ್ಕಿದ್ದೇನೆ. ಈ ಹಡಗಿನಂತೆ ನಾನು ಆಹಾರ ವಸ್ತ್ರಗಳನ್ನು ಪಡೆಯುತ್ತಿದ್ದೇನೆ. ನಾನು ಸೋಮಾರಿಯಾಗಿರಬಾರದು. ಆದರೆ ಪರಿಶ್ರಮದಿಂದ ಹಡಗನ್ನು ಓಡಿಸಬೇಕು. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಈ ರೀತಿ ಯೋಚಿಸುತ್ತಾನೆ. ನನ್ನಲ್ಲಿ ನಾಲ್ಕು ಮಹಾಭೂತಗಳಿಂದ ಕೂಡಿರುವ, ದೇಹವಿದೆ. ನಾನು ಸದಾ ಸ್ಮೃತಿವಂತನಾಗಿ, ಅಪ್ರಮತ್ತನಾಗಿ, ಜಾಗ್ರತೆಯಿಂದ, ಸ್ಪಷ್ಟ ಅರಿವಿನಿಂದ, ಧ್ಯಾನ ಸಮಾಪತ್ತಿಯಿಂದ ಪರಿಶ್ರಮಬದ್ಧನಾಗಿ, ಈ ಜನ್ಮ ಜರಾ, ವ್ಯಾಧಿ, ಮರಣ, ಶೋಕ ಇತ್ಯಾದಿಗಳ ದುಃಖ ರಾಶಿಯಿಂದ ಮುಕ್ತನಾಗಬೇಕು. ಇದೇ ಮಹಾರಾಜ, ಕುಶಲಕಮರ್ಿಯ ಒಂದು ಅಂಗವಾಗಿದೆ. ಮಹಾರಾಜ ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಪುನಃ ಪುನಃ ಕಾಯವನ್ನು ಯಥಾಭೂತವಾಗಿ ಅಥರ್ೈಸಿಕೊಂಡು, ಅದರ ನಿಜಸ್ವರೂಪ ಕಂಡು ದುಃಖರಾಶಿಯನ್ನು ಅಂತ್ಯಗೊಳಿಸಲಿ.
10. ಸಮುದ್ದಂಗ ಪನ್ಹೊ (ಸಮುದ್ರದ ಪ್ರಶ್ನೆ)
ಭಂತೆ ನಾಗಸೇನ, ಭಿಕ್ಷುವು ಸಮುದ್ರದ ಯಾವ 5 ಅಂಗಗಳನ್ನು ಹೊಂದಿರ ಬೇಕು? (235)ಓ ಮಹಾರಾಜ, ಹೇಗೆ ಸಮುದ್ರವು ಶವಗಳನ್ನು ತನ್ನಲ್ಲಿ ಇಟ್ಟುಕೊಳ್ಳುವುದಿಲ್ಲವೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಿಂದಾಗಿ ಕ್ಲೇಷಗಳಾದ ರಾಗ, ದ್ವೇಷ, ಮೋಹ, ಅಹಂಕಾರ, ದೃಷ್ಟಿಕೋನಗಳು, ದೋಷಗಳನ್ನು ಅಡಗಿಸುವುದು, ಇಲ್ಲದ ಸದ್ಗುಣಗಳನ್ನು ಇದೇ ಎಂದು ಪ್ರಶಂಸಿಸಿಕೊಳ್ಳುವುದು, ಈಷರ್ೆ, ಮಾಯಾ, ಮಿಥ್ಯಾ, ಕುಟಿಲತೆ, ವಿಷಮ ದುಷ್ಚರಿತೆಗಳೆಲ್ಲವನ್ನು ಇಟ್ಟುಕೊಳ್ಳುವುದಿಲ್ಲ, ತ್ಯಜಿಸುತ್ತಾನೆ. ಇದೇ ಓ ಮಹಾರಾಜ, ಸಮುದ್ರವು ಹೊಂದಿರುವ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ತನ್ನಲ್ಲಿ ಎಲ್ಲಾ ವಿಧವಾದ ರತ್ನಗಳಾದ ಮುತ್ತು, ವಜ್ರ, ಮಣಿ, ವೈಡೂರಿಯ, ಶಂಖ, ಸಿಲಾ, ಹವಳ, ಇತ್ಯಾದಿ ರತ್ನಗಳನ್ನು ಹೊಂದಿರುತ್ತಾರೆಯೋ ಆದರೆ ಅವನ್ನೆಲ್ಲಾ ಅಡಗಿಸಿಕೊಂಡಿರುತ್ತದೆಯೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ತನ್ನ ಪರಾಕ್ರಮದಿಂದಾಗಿ ಹಲವಾರು ರತ್ನಗಳನ್ನು ಹೊಂದಿರುತ್ತಾನೆ. ಮಾರ್ಗ, ಫಲ ಮತ್ತು ನಾಲ್ಕು ಧ್ಯಾನಗಳು, ಅಷ್ಟ ವಿಮೋಕ್ಷಗಳು ಮತ್ತು ಸಮಾದಿ ಮತ್ತು ಸಮಾಪತ್ತಿ, ವಿಪಸ್ಸನ ಅಭಿಜ್ಞಾ ಮತ್ತು ಇತ್ಯಾದಿ ವಿವಿಧ ಗುಣರತ್ನಗಳನ್ನು ಹೊಂದಿರುತ್ತಾನೆ. ಆದರೂ ವಿವಿಧ ಗುಣರತ್ನಗಳನ್ನು ಹೊಂದಿರುತ್ತಾನೆ. ಆದರೂ ಅದನ್ನು ತೋರ್ಪಡಿಸಿದೆ ಅಡಗಿಸಿಕೊಂಡಿರುತ್ತಾನೆ. ಇದೇ ಓ ಮಹಾರಾಜ, ಸಮುದ್ರ ಹೊಂದಿರುವ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ಬೃಹತ್ ಜೀವಿಗಳನ್ನು ಹೊಂದಿರುತ್ತದೆಯೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಅಲ್ಪೆಚ್ಛೆಯುಳ್ಳ ಸಂತೃಪ್ತಿ ಹೊಂದಿರುವ, ಧೂತಂಗ ಪಾಲನೆಯುಳ್ಳ, ವಾಚಾದಲ್ಲಿ ಶುದ್ಧನಾಗಿರುವ, ಕ್ಲೇಷಮುಕ್ತತೆಗೆ ಮಾರ್ಗದಶರ್ಿಯಾಗಿರುವ ಚಾರಿತ್ರ್ಯ ಹೊಂದಿರುವ, ಸತ್ಯಕ್ಕೆ ಅನುಗುಣವಾದ, ವಿನೀತವಾದ ಸೌಜನ್ಯಯುತ, ಗಾಂಭೀರ್ಯವುಳ್ಳ, ಪೂಜ್ಯರ, ಹಿತಕಾರಿ ಭಾಷಣ ನೀಡುವ, ತಪ್ಪು ತಿಳಿಸುವ, ಸೌಮ್ಯ, ತಪ್ಪು ಮಾಡುವಾಗ ಖಂಡಿಸಿ ತಿದ್ದುವ, ಬೋಧನೆಯಲ್ಲಿ ಚಾತುರ್ಯನಾಗಿರುವ, ವಿದ್ವಾಂಸನಾಗಿರುವ, ಸ್ಫೂತರ್ಿ ನೀಡುವ ಹುರಿದುಂಬಿಸಲು ಸಮರ್ಥನಾದ ಮತ್ತು ಆನಂದ ನೀಡುವಂತಹ ಮಿತ್ರರನ್ನು ಹೊಂದಿರುತ್ತಾನೆ ಮತ್ತು ಅವರೊಂದಿಗೆ ವಾಸಿಸುತ್ತಾನೆ. ಇದೇ ಓ ಮಹಾರಾಜ, ಸಮುದ್ರ ಹೊಂದಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ಗಂಗೆಯಿಂದ ಯಮುನದಿಂದ, ಅಚಿರಾವತಿಯಿಂದ, ಸರಭೂವಿನಿಂದ, ಮಾಹಿ ಮತ್ತು ಇತ್ಯಾದಿ ಸಹಸ್ರಾರು ನದಿಗಳಿಂದ ಮತ್ತು ಅಂತರಿಕ್ಷದಿಂದ ಹರಿದುಬರುವ ಮಳೆಯಿಂದಲೂ ಸಹಾ ಸಮುದ್ರವು ತುಂಬುವುದಿಲ್ಲ. ದಡದಿಂದ ನೀರು ಉಕ್ಕಿ ಹರಿಯುವುದಿಲ್ಲ. ಅದೇರೀತಿ ಮತ್ತು ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಉತ್ಸಾಹಿತವಾಗಿ, ಪರಿಕರಕ್ಕಾಗಿ ಆಗಲಿ, ಕೀತರ್ಿ ಸ್ತುತಿಗಾಗಲಿ, ಗೌರವ ಆದರಗಳಿಗೆ ಆಗಲಿ ಎಂದಿಗೂ ನಿಯಮ ಉಲ್ಲಂಘನೆ ಮಾಡುವುದಿಲ್ಲ. ಆತನು ತನ್ನ ಪ್ರಾಣರಕ್ಷಣೆಗೂ ಸಹಾ ನಿಯಮ ತಪ್ಪುವುದಿಲ್ಲ. ಇದೇ ಮಹಾರಾಜ, ಸಮುದ್ರವು ಹೊಂದಿರುವ ಹಾಗು ಭಿಕ್ಷುವು ಹೊಂದಬೇಕಾದ ನಾಲ್ಕನೆಯ ಗುಣವಾಗಿದೆ ಮತ್ತು ಓ ಮಹಾರಾಜ, ಇದರ ಬಗ್ಗೆ ದೇವಾದಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ:
ಓ ಮಹಾರಾಜ, ಹೇಗೆ ಮಹಾ ಸಮುದ್ರವು ಸ್ಥಿರವಾಗಿ ನೆಲೆಗೊಳ್ಳುವಿಕೆಯ ಲಕ್ಷಣ ಹೊಂದಿದೆಯೋ ಮತ್ತು ಎಂದಿಗೂ ಅತಿಯಾಗಿ ಉಕ್ಕಿ ಹರಿಯುವುದಿಲ್ಲವೋ, ಅದೇರೀತಿಯಾಗಿ ಓ ಮಹಾರಾಜ, ನನ್ನ ಶಿಷ್ಯರು ಸಹಾ ಎಂದಿಗೂ ನಾನು ಹಾಕಿರುವ ನಿಯಮಗಳ ಉಲ್ಲಂಘನೆ ಮಾಡುವುದಿಲ್ಲ. ಅವರು ತಮ್ಮ ಜೀವ ರಕ್ಷಣೆಗಾಗಿಯು, ನಿಯಮ ತಪ್ಪುವುದಿಲ್ಲ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ಗಂಗಾ, ಯಮುನ, ಅಚಿರಾವತಿ, ಸರಭೂ, ಮಾಹಿ ಮತ್ತು ಅಂತರಿಕ್ಷದ ಮಳೆಯಿಂದಲೂ ತುಂಬುವುದಿಲ್ಲವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಎಂದಿಗೂ ಉಪದೇಶ ಪಡೆಯುವಿಕೆಯಲ್ಲಿ ತೃಪ್ತನಾಗಲಾರ. ಹಾಗೆಯೇ ಪ್ರಶ್ನೆ ಕೇಳುವಿಕೆಯಲ್ಲಿ, ಉತ್ತರ ಆಲಿಸುವಿಕೆಯಲ್ಲಿ ಮತ್ತು ಕಂಠಪಾಠ ಮಾಡುವಿಕೆಯಲ್ಲಿ ಮತ್ತು ಪರೀಕ್ಷೆ ಮಾಡುವಿಕೆಯಲ್ಲಿ, ಧಮ್ಮ ವಿನಯ ಆಲಿಸುವಿಕೆಯಲ್ಲಿ, ಸುತ್ತಾಂತ, ಉಗ್ರಹ, ಪದನಿಕ್ಷೇಪ, ಪದಸಂಧಿ, ಪದವಿಭಕ್ತಿ, ಜೀನಶಾಸನದಲ್ಲಿ ಆತನು ತೃಪ್ತಿಹೊಂದುವುದಿಲ್ಲ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ, ಸಮುದ್ರದ 5ನೇ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಸುತಸೋಮ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಹೇಗೆ ಅಗ್ನಿಯು ಉರಿಯುತ್ತಿರುವ ಹುಲ್ಲಿನಿಂದ, ಕಡ್ಡಿಗಳಿಂದ ಎಂದಿಗೂ ತೃಪ್ತವಾಗದೋ ಅಥವಾ ಸಮುದ್ರವು ತನ್ನಲ್ಲಿ ಸೇರುವ ನದಿಗಳಿಂದ ತೃಪ್ತಿಯಾಗದೋ ಹಾಗೆಯೇ ಓ ರಾಜಶ್ರೇಷ್ಠ ಪಂಡಿತರು ಸುಭಾಷಿತಗಳಲ್ಲಿ ಎಂದಿಗೂ ತೃಪ್ತಿ ಹೊಂದಲಾರರು.
ಎರಡನೆಯ ಸಮುದ್ರ ವರ್ಗ ಮುಗಿಯಿತು
(ಈ ವರ್ಗದಲ್ಲಿ ಹತ್ತು ಪ್ರಶ್ನೆಗಳಿವೆ )
No comments:
Post a Comment