Saturday, 7 April 2018

Milinda panha 11.ಒಪಮ್ಮ-ಕಥಾ ಪನ್ಹೊ (ಉಪಮೆಗಳು)

11. ಒಪಮ್ಮ-ಕಥಾ ಪನ್ಹೊ (ಉಪಮೆಗಳು)


ಮಾತಿಕಾ

ಭಂತೆ ನಾಗಸೇನ, ಭಿಕ್ಖುವು ಅರಹಂತತ್ವ ಸಾಕ್ಷಾತ್ಕರಿಸಲು ಎಷ್ಟು ಅಂಗಗಳಿಂದ (ಗುಣಗಳಿಂದ) ಯುಕ್ತಸಂಪನ್ನನಾಗಬೇಕು? (215)

ಓ ಮಹಾರಾಜ, ಯಾರು ಅರಹತ್ವವನ್ನು ಸಾಕ್ಷಾತ್ಕರಿಸಲು ಇಚ್ಛಿಸುವರೋ ಅವರು:
1) ಕತ್ತೆಯ ಒಂದು ಗುಣವನ್ನು
2) ಕೋಳಿಯ 5 ಗುಣಗಳನ್ನು
3) ಅಳಿಲಿನ 1 ಗುಣವನ್ನು
4) ಹೆಣ್ಣು ಚಿರತೆಯ 1 ಗುಣವನ್ನು
5) ಗಂಡು ಚಿರತೆಯ 2 ಗುಣಗಳನ್ನು
6) ಆಮೆಯ 5 ಗುಣಗಳನ್ನು
7) ಬಿದಿರಿನ 1 ಗುಣವನ್ನು
8) ಬಿಲ್ಲಿನ 1 ಗುಣವನ್ನು
9) ಕಾಗೆಯ 2 ಗುಣಗಳನ್ನು
10) ಕೋತಿಯ 2 ಗುಣಗಳನ್ನು
11) ಕುಂಬಳಬಳ್ಳಿಯ 1 ಗುಣವನ್ನು
12) ಕಮಲದ 3 ಗುಣಗಳನ್ನು
13) ಬೀಜದ 2 ಗುಣಗಳನ್ನು
14) ಸಾಲು ಮರದ 1 ಗುಣವನ್ನು
15) ದೋಣಿಯ 3 ಗುಣಗಳನ್ನು
16) ಲಂಗರಿನ 1 ಗುಣವನ್ನು
17) ಧ್ವಜಸ್ತಂಭದ 1 ಗುಣವನ್ನು
18) ನಾವಿಕನ 3 ಗುಣಗಳನ್ನು
19) ಕುಶಲಕಮರ್ಿ ನಾವಿಕನ 1 ಗುಣವನ್ನು
20) ಸಾಗರದ 5 ಗುಣಗಳನ್ನು
21) ಭೂಮಿಯ 5 ಗುಣಗಳನ್ನು
22) ನೀರಿನ 5 ಗುಣಗಳನ್ನು
23) ಬೆಂಕಿಯ 5 ಗುಣಗಳನ್ನು
24) ಗಾಳಿಯ 5 ಗುಣಗಳನ್ನು
25) ಪರ್ವತದ 5 ಗುಣಗಳನ್ನು
26) ಆಕಾಶದ 5 ಗುಣಗಳನ್ನು
27) ಚಂದಿರನ 1 ಗುಣವನ್ನು
28) ಸೂರ್ಯನ 7 ಗುಣಗಳನ್ನು
29) ಸಕ್ಕನ 3 ಗುಣಗಳನ್ನು
30) ಚಕ್ರವತರ್ಿಯ 4 ಗುಣಗಳನ್ನು
31) ಬಿಳಿ ಇರುವೆಯ 1 ಗುಣವನ್ನು
32) ಬೆಕ್ಕಿನ 2 ಗುಣಗಳನ್ನು
33) ಹೆಗ್ಗಣದ 1 ಗುಣವನ್ನು
34) ಚೇಳಿನ 1 ಗುಣವನ್ನು
35) ಮುಂಗುಸಿಯ 1 ಗುಣವನ್ನು
36) ಹಳೆಯ ನರಿಯ 2 ಗುಣಗಳನ್ನು
37) ಜಿಂಕೆಯ 3 ಗುಣಗಳನ್ನು
38) ಗೂಳಿಯ 4 ಗುಣಗಳನ್ನು
39) ಕರಡಿಯ 2 ಗುಣಗಳನ್ನು
40) ಆನೆಯ 5 ಗುಣಗಳನ್ನು
41) ಸಿಂಹದ 7 ಗುಣಗಳನ್ನು
42) ಚಕ್ರವಾಕ ಪಕ್ಷಿಯ 3 ಗುಣಗಳನ್ನು
43) ಪೆಣಾಹಿಕಾ ಪಕ್ಷಿಯ 2 ಗುಣಗಳನ್ನು
44) ಪಾರಿವಾಳದ 1 ಗುಣವನ್ನು
45) ಗೂಬೆಯ 2 ಗುಣಗಳನ್ನು
46) ಕೊಕ್ಕರೆಯ 1 ಗುಣವನ್ನು
47) ಬಾವಲಿಯ 2 ಗುಣಗಳನ್ನು
48) ಜಿಗಣೆಯ 1 ಗುಣವನ್ನು
49) ಹಾವಿನ 3 ಗುಣಗಳನ್ನು
50) ಹೆಬ್ಬಾವಿನ 1 ಗುಣವನ್ನು
51) ಜೇಡದ 1 ಗುಣವನ್ನು
52) ಪ್ರಾಣಿಯ ಬಳಿಯಿರುವ ಮಗುವಿನ 1 ಗುಣವನ್ನು
53) ಭೂಮಿಯ ಆಮೆಯ 1 ಗುಣವನ್ನು
54) ಎತ್ತರದ ಪರ್ವತದ 5 ಗುಣಗಳನ್ನು
55) ಮರದ 3 ಗುಣಗಳನ್ನು
56) ಕಾಮರ್ೊಡದ 5 ಗುಣಗಳನ್ನು
57) ಆಭರಣದ 3 ಗುಣಗಳನ್ನು
58) ಬೇಟೆಗಾರನ 4 ಗುಣಗಳನ್ನು
59) ಮೀನುಗಾರನ 2 ಗುಣಗಳನ್ನು
60) ಬಡಗಿಯ 2 ಗುಣಗಳನ್ನು
61) ನೀರು ಮಡಿಕೆಯ 1 ಗುಣವನ್ನು
62) ಕಬ್ಬಿಣದ 1 ಗುಣವನ್ನು
63) ನೆರಳಿನ 3 ಗುಣಗಳನ್ನು
64) ಭತ್ತದ ಹೊಲದ 3 ಗುಣಗಳನ್ನು
65) ಔಷಧದ 2 ಗುಣಗಳನ್ನು
66) ಆಹಾರದ 3 ಗುಣಗಳನ್ನು
67) ಬಿಲ್ಗಾರನ 4 ಗುಣಗಳನ್ನು
- * - * - * -
68) ರಾಜನ 4 ಗುಣಗಳನ್ನು
69) ಪಹರೆದಾರನ 2 ಗುಣಗಳನ್ನು
70) ಬೀಸುಕಲ್ಲಿನ 1 ಗುಣವನ್ನು
71) ದೀಪದ 2 ಗುಣಗಳನ್ನು
72) ನವಿಲಿನ 2 ಗುಣಗಳನ್ನು
73) ಕುದುರೆಯ 2 ಗುಣಗಳನ್ನು
74) ಸುಂಕಗಾರನ 2 ಗುಣಗಳನ್ನು
75) ಹೊಸ್ತಿಲಿನ 2 ಗುಣಗಳನ್ನು
76) ತಕ್ಕಡಿಯ 1 ಗುಣವನ್ನು
77) ಕತ್ತಿಯ 2 ಗುಣಗಳನ್ನು
78) ಮೀನಿನ 2 ಗುಣಗಳನ್ನು
79) ಸಾಲಗಾರನ 1 ಗುಣವನ್ನು
80) ರೋಗಿಯ 2 ಗುಣಗಳನ್ನು
81) ಶವದ 2 ಗುಣಗಳನ್ನು
82) ನದಿಯ 2 ಗುಣಗಳನ್ನು
83) ಎಮ್ಮೆಯ 1 ಗುಣವನ್ನು
84) ದಾರಿಯ 2 ಗುಣಗಳನ್ನು
85) ಶುಲ್ಕಸಂಗ್ರಹಕಾರನ 1 ಗುಣವನ್ನು
86) ಕಳ್ಳನ 3 ಗುಣಗಳನ್ನು
87) ಗಿಡುಗದ 1 ಗುಣವನ್ನು
88) ನಾಯಿಯ 1 ಗುಣವನ್ನು
89) ವೈದ್ಯನ 3 ಗುಣಗಳನ್ನು
90) ತಾಯಿ-ಮಗುವಿನ 2 ಗುಣಗಳನ್ನು
91) ಚಮರಿ ಮೃಗದ 1 ಗುಣವನ್ನು
92) ಹುಂಜದ 2 ಗುಣಗಳನ್ನು
93) ಪಾರಿವಾಳದ 3 ಗುಣಗಳನ್ನು
94) ಒಕ್ಕಣ್ಣಿನವನ 2 ಗುಣಗಳನ್ನು
95) ರೈತನ 3 ಗುಣಗಳನ್ನು
96) ಹೆಣ್ಣು ನರಿಯ 1 ಗುಣವನ್ನು
97) ಬಣ್ಣಗಾರರ 2 ಗುಣಗಳನ್ನು
98) ಚಮಚೆಯ 1 ಗುಣವನ್ನು
99) ಚೌಕಾಸಿ ಮಾಡುವವರ 1 ಗುಣವನ್ನು
100) ಜಿಲ್ಲಾಧಿಕಾರಿಯ 1 ಗುಣವನ್ನು
101) ರಥಿಯ 2 ಗುಣಗಳನ್ನು
102) ಹಳ್ಳಿ ಮುಖಂಡನ 2 ಗುಣಗಳನ್ನು
103) ಸಿಂಪಿಗನ 1 ಗುಣವನ್ನು
104) ಚುಕ್ಕಾಣಿಗಾರನ 1 ಗುಣವನ್ನು
105) ಜೇನಿನ 3 ಗುಣವನ್ನು
ಹೊಂದಿರಬೇಕಾಗುತ್ತದೆ.

1. ಗದ್ರಭ ವಗ್ಗೋ (ಕತ್ತೆಯ ವರ್ಗ)

1. ಕತ್ತೆಯ ಪ್ರಶ್ನೆ

ಭಂತೆ ನಾಗಸೇನ, ಕರ್ಕಶಧ್ವನಿಯ ಕತ್ತೆಯ ಯಾವ ಒಂದು ಗುಣವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದಿರಿ, ಅದು ಯಾವುದು? (216)

ಓ ಮಹಾರಾಜ, ಕತ್ತೆಯು ಎಲ್ಲೇ ಮಲಗಲಿ ಅದು ಕಸದರಾಶಿಯಾಗಿರಬಹುದು ಅಥವಾ ತೆರೆದ ಆಕಾಶವಾಗಿರಬಹುದು ಅಥವಾ ರಸ್ತೆಗಳು ಸೇರುವ ಚೌಕವಾಗಿರಬಹುದು ಅಥವಾ 3 ರಸ್ತೆಗಳು ಸೇರುವ ಕಡೆಯಾಗಿರಬಹುದು ಅಥವಾ ಹಳ್ಳಿಯ ಹೆಬ್ಬಾಗಿಲು ಆಗಿರಬಹುದು, ಅಥವಾ ಹುಲ್ಲಿನ ರಾಶಿಯಾಗಿರಬಹುದು. ಅದು ಎಲ್ಲೇ ಮಲಗಲಿ, ಅದು ದೀರ್ಘಕಾಲ ವಿಶ್ರಾಂತಿ ಪಡೆಯುವುದಿಲ್ಲ. ಅದೇರೀತಿಯಾಗಿ ಓ ಮಹಾರಾಜ, ಶ್ರಮಶೀಲ ಭಿಕ್ಖುವು ಧ್ಯಾನದಲ್ಲಿ ತಲ್ಲೀನನಾಗುವನು, ಎಲ್ಲೇ ಮಲಗಲಿ, ಅದು ಹುಲ್ಲನ್ನು ಚೆಲ್ಲಿದ ಅಥವಾ ಎಲೆಗಳನ್ನು ಹರಡಿದ ಮತ್ತು ಮುಳ್ಳಿನ ಹಾಸಿಗೆ ಅಥವಾ ಬರಿನೆಲ ಎಲ್ಲೇ ಆಗಲಿ ಆತನು ಆಲಸ್ಯಕ್ಕೆ ಹಾದಿ ಮಾಡಿಕೊಡುವುದಿಲ್ಲ. ಈ ಒಂದು ಗುಣವು ಕತ್ತೆಯಲ್ಲಿದೆ. ಅದನ್ನು ಭಿಕ್ಷು ಹೊಂದಬೇಕು. ಇದರ ಬಗ್ಗೆಯೇ ಓ ಮಹಾರಾಜ, ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ.
ಕಸದ ದಿಂಬಿನಲ್ಲಿ ಮಲಗಿ ಓ ಭಿಕ್ಷುಗಳೇ, ಸದಾ ಜಾಗರೂಕರಾಗಿ, ಉತ್ಸಾಹದಿಂದ ಪ್ರಯತ್ನಶೀಲರಾಗಿ ಹೋರಾಡಿ. ಮತ್ತು ಓ ಮಹಾರಾಜ ಧಮ್ಮ ಸೇನಾನಿ ಸಾರಿಪುತ್ರರು ಹೀಗೆ ಹೇಳಿದ್ದಾರೆ: ಮಳೆಯ ನೀರು ಮೊಣಕಾಲುವರೆಗೂ ಬರುವವರೆಗೂ ಆತ ಧ್ಯಾನದಲ್ಲೇ ತಲ್ಲೀನನಾಗಲಿ, ಅರಹತ್ವಕ್ಕಾಗಿ ಹಂಬಲಿಸುವವನಿಗೆ ಹಿತಸುಖವು ಲೆಕ್ಕಕ್ಕಿಲ್ಲ.

2. ಕೋಳಿ (ಅಥವಾ ಸಣ್ಣ ಹುಂಜ)ಯ ಪ್ರಶ್ನೆ

ಭಂತೆ ನಾಗಸೇನ, ಕೋಳಿಯ ಯಾವ 5 ಗುಣಗಳನ್ನು ಭಿಕ್ಷು ಹೊಂದಬೇಕು ತಿಳಿಸಿ. (217)
ಓ ಮಹಾರಾಜ, ಕೋಳಿಯು ಮುಂಜಾನೆ ಬೇಗ ಎದ್ದು, ಸಕಾಲದಲ್ಲಿ ವಿಶ್ರಾಂತಿ ಪಡೆಯುತ್ತದೆ. ಅದೇರೀತಿಯಲ್ಲಿ ಶ್ರಮಶೀಲ ಭಿಕ್ಖು ಯತ್ನಶೀಲತೆಯಲ್ಲಿ ನಿಷ್ಟನಾಗಿ, ಬೆಳಿಗ್ಗೆ ಬೇಗ ಎದ್ದು, ಚೇತಿಯವನ್ನು ಸ್ವಚ್ಛಗೊಳಿಸಿ, ಸಿದ್ಧನಾಗುತ್ತಾನೆ. ನೀರನ್ನು ಸಂಗ್ರಹಿಸಿ, ಸ್ನಾನಮಾಡಿ, ಚೀವರವನ್ನು ಧರಿಸಿ, ಚೇತಿಯಗೆ ಪೂಜಿಸಿ, ಹಿರಿಯ ಭಿಕ್ಷುಗಳಿಗೆ ಬೇಟಿಮಾಡಿ, ನಂತರ ಏಕಾಂತದಲ್ಲಿ ಸಾಧನೆ ಮಾಡುತ್ತಾನೆ. ಇದು ಕೋಳಿಯಲ್ಲಿರುವಂತೆ ಭಿಕ್ಷುವಿನ ಮೊದಲ ಗುಣ.
ಮತ್ತೆ ಓ ಮಹಾರಾಜ, ಕೋಳಿಯು ಮುಂಜಾನೆ ಎದ್ದು, ಸಕಾಲದಲ್ಲೇ ತೊಡಗುವಂತೆ, ಭಿಕ್ಷುವು ಸಹಾ ಶ್ರಮಕ್ಕೆ ಬದ್ಧನಾಗಿ, ಬೇಗನೆ ಎದ್ದು, ಕಸಗುಡಿಸಿ, ಚೇತಿಯವನ್ನು ಸ್ವಚ್ಛಗೊಳಿಸಿ, ನೀರನ್ನು ಸಂಗ್ರಹಿಸಿ, ಚೀವರ ಧರಿಸಿ, ಚೇತಿಯಾಗೆ ವಂದಿಸುತ್ತಾನೆ, ನಂತರ ಏಕಾಂತದಲ್ಲಿ ತೆರಳುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಕೋಳಿಯ ಎರಡನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಕೋಳಿಯು ಅವಿರತವಾಗಿ ಭೂಮಿಯನ್ನು ಆಹಾರ ಸಿಗುವವರೆಗೆ ಕೆರೆಯುತ್ತಿರುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಶ್ರಮಶೀಲ ಭಿಕ್ಷುವು ಜಾಗರೂಕನಾಗಿ ನಿರಂತರ ಸ್ವ-ಪರೀಕ್ಷೆ ಮಾಡುತ್ತ, ಆಹಾರ ಸೇವಿಸುವಾಗಲು ಹೀಗೆ ಯೋಚಿಸುತ್ತಾನೆ: ನಾನು ಇದನ್ನು ತಿನ್ನುತ್ತಿರುವುದು ಸುಖಕ್ಕಾಗಿ ಅಲ್ಲ, ಮೋಹಕ್ಕಾಗಿಯೂ ಅಲ್ಲ, ಶಾರೀರಿಕ ಸುಂದರತೆಗೂ ಅಲ್ಲ, ಶರೀರ ಪುಷ್ಠಿಗೂ ಅಲ್ಲ, ಕೇವಲ ಶರೀರ ರಕ್ಷಣೆಗಾಗಿ ಮಾತ್ರ, ಜೀವಂತವಾಗಿರಲು ಮಾತ್ರ, ಹಸಿವಿನ ವೇದನೆ ದೂರಮಾಡಲು ಮಾತ್ರ, ಶ್ರೇಷ್ಠ ಜೀವನಕ್ಕೆ ಸಹಾಯಕನಾಗಿರಲು ಮಾತ್ರ, ಹೀಗೆ ನಾನು ಹಿಂದಿನ ದುಃಖಗಳೆಲ್ಲವನ್ನು ಅಂತ್ಯಮಾಡುತ್ತೇನೆ. ಮುಂದಿನ ದುಃಖ ಉದಯಿಸದಂತೆ ಮಾಡಲು, ನಿಂದಾತೀತನಾಗಲು, ಹಿತಸುಖವಾಗಿ ಬಾಳಲು ಆಹಾರ ಸೇವಿಸುತ್ತೇನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಕೋಳಿಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಮರಳುಗಾಡಿನ ಪ್ರಾಣಿಗಳ ಮರಿಯ ಮಾಂಸದಷ್ಟು ಅಥವಾ ಚಕ್ರಕ್ಕೆ ಸವರಿದ ಎಣ್ಣೆಯಷ್ಟು ಕೇವಲ ಜೀವಂತವಾಗಿರಲು ತಿನ್ನಲಿ, ಯಾವಾಗೆಲ್ಲಾ ತಲೆ ಸುತ್ತಿದಂತಾಗುವುದು ಆಗ ಆಹಾರ ತೆಗೆದುಕೊಳ್ಳಲಿ.
ಮತ್ತೆ ಓ ಮಹಾರಾಜ, ಕೋಳಿಗೆ ಕಣ್ಣುಗಳು ಇದ್ದರೂ ಸಹಾ ರಾತ್ರಿಯಲ್ಲಿ ಕುರುಡಾಗಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಯತ್ನಶೀಲ ಭಿಕ್ಷುವು, ಕುರುಡನಲ್ಲದಿದ್ದರೂ ಕುರುಡಾಗಿ ವತರ್ಿಸಲಿ. ಹೇಗೆಂದರೆ, ಕಾಡಿನಲ್ಲೇ ಇರಲಿ, ಅಥವಾ ಆಹಾರಕ್ಕೆ ಹೊರಡಲಿ, ಆತನು ಇಂದ್ರೀಯ ವಿಷಯಗಳಾದ ರೂಪ, ಶಬ್ದ, ವಾಸನೆ, ರಸ, ಸ್ಪರ್ಶಗಳಿಗೆ ಕುರುಡನಂತೆ, ಕಿವುಡನಂತೆ ಎಲ್ಲಾ ಇಂದ್ರೀಯಗಳಿಗೂ ತಟಸ್ಥನಾಗಿ ವತರ್ಿಸಲಿ. ಅವುಗಳ ಬಗ್ಗೆ ಯೋಚನೆಯು ಮಾಡದಿರಲಿ, ಅದರ ಬಗ್ಗೆ ವಿಶೇಷ ಗಮನವನ್ನು ಕೊಡದಿರಲಿ, ಇದೇ ಓ ಮಹಾರಾಜ, ಕೋಳಿಯಲ್ಲಿನ ನಾಲ್ಕನೆಯ ಗುಣವಾಗಿದೆ. ಅದನ್ನು ಭಿಕ್ಷು ಹೊಂದಲೇಬೇಕಾಗಿದೆ. ಓ ಮಹಾರಾಜ, ಇದರ ಬಗ್ಗೆ  ಥೇರ ಮಹಾ ಕಾಚ್ಚಾಯನರವರು ಹೀಗೆ ಹೇಳಿದ್ದಾರೆ:
ಚಕ್ಷುವಿದ್ದರೂ ಅಂಧನಂತೆ ಇರಲಿ, ಕೇಳಿಸುತ್ತಿದ್ದರೂ ಕಿವುಡನಂತೆ ಇರಲಿ, ಮಾತನಾಡಬಲ್ಲವನಾಗಿದ್ದರೂ ಮೂಗನಂತೆ ಇರಲಿ, ಬಲವಂತನಾಗಿದ್ದರೂ ದುರ್ಬಲನಂತೆ  ಇರಲಿ. ಆತನ ದೃಷ್ಟಿ ವೈಶಾಲ್ಯತೆಗೆ ಹೊಸ ಹೊಸ ವಸ್ತುಗಳು ಗೋಚರವಾದರೂ ಗಮನಿಸದೆ, ನಿಬ್ಬಾಣದ ಶಯ್ಯೆಯಲ್ಲಿ ಮಗ್ನನಾಗಿ ಮಲಗಿ ವಿಶ್ರಾಂತಿಸಲಿ.
ಮತ್ತೆ ಓ ಮಹಾರಾಜ, ಕೋಳಿಯು ಉಪದ್ರವಕ್ಕೆ ಒಳಪಟ್ಟರೂ, ಹೆಂಟೆಗಳಿಂದ, ಕಡ್ಡಿಗಳಿಂದ, ದೊಣ್ಣೆಗಳಿಂದ, ಚಾಟಿಗಳಿಂದ ಹೊಡೆದರೂ ಸಹಾ ತನ್ನ ಮನೆಯನ್ನು ತೊರೆಯುವುದಿಲ್ಲ. ಹಾಗೆಯೇ ಓ ಮಹಾರಾಜ, ಯತ್ನಶೀಲ ಭಿಕ್ಖುವು ಚೀವರ ತಯಾರಿಸುವಾಗಲೇ ಆಗಲಿ, ವಿಹಾರ ನಿಮರ್ಿಸುವಾಗಲೇ ಆಗಲಿ, ಅಥವಾ ದಿನನಿತ್ಯದ ಯಾವುದೇ ಕೆಲಸಗಳಲ್ಲೇ ಇರಲಿ, ಅಥವಾ ಬೋಧಿಸುತ್ತಿರಲಿ, ಅಥವಾ ಶಿಕ್ಷಣ ಪಡೆಯುತ್ತಿರಲಿ, ಆತನು ಎಂದಿಗೂ ಜ್ಞಾನಯುತ ಗಮನಹರಿಸುವಿಕೆಯನ್ನು ತೊರೆಯದಿರಲಿ, ಏಕೆಂದರೆ ಓ ಮಹಾರಾಜ, ಆತನಿಗೆ ಅದೇ ಮನೆಯಾಗಿದೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಕೋಳಿಯ 5ನೇಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಓ ಭಿಕ್ಷುಗಳೇ ಯಾವುದು ಭಿಕ್ಷುವಿನ ನೆಲೆ ಅಥವಾ ಆಶ್ರಯಸ್ಥಾನ ಅಥವಾ ಕ್ಷೇತ್ರ? ಅದೇ ನಾಲ್ಕು ಸ್ಮೃತಿ ಪ್ರತಿಷ್ಠಾನಗಳು.
ಮತ್ತೆ ಓ ಮಹಾರಾಜ, ಧಮ್ಮಸೇನಾನಿ ಸಾರಿಪುತ್ರರು ಸಹಾ ಈ ರೀತಿ ಹೇಳಿರುವರು: ಹೇಗೆ ಆನೆಯು ಉತ್ತಮ ಆಹಾರವನ್ನು, ಕೆಟ್ಟದ್ದರಿಂದ ವ್ಯತ್ಯಾಸ ತಿಳಿಯುವುದೋ, ನಿದ್ರೆಯಲ್ಲಿರುವಾಗಲು ತನ್ನ ಸೊಂಡಿಲ್ಲನ್ನು ರಕ್ಷಿಸುವುದೋ ಹಾಗೆಯೇ ಬುದ್ಧರ ಪುತ್ರನು ಅಪ್ರಮಾದ ಧ್ಯಾನಿಯಾಗಿ, ಜೀನವಚನಕ್ಕೆ ಅಪಚಾರ ಮಾಡದಿರಲಿ, ಉತ್ತಮವಾದ ಗಮನಹರಿಸುವಿಕೆಗೆ ಹಾನಿ ಮಾಡದಿರಲಿ.

3. ಅಳಿಲಿನ (ಕಲಂದಕಂಗ ಪನ್ಹೊ) ಪ್ರಶ್ನೆ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಅಳಿಲಿನಲ್ಲಿರುವ ಒಂದು ಗುಣ ಯಾವುದು? (218)
ಓ ಮಹಾರಾಜ, ಅಳಿಲಿನ ಮೇಲೆ ಶತ್ರುವು ನಿಗ್ರಹ ಸಾಧಿಸಿದಾಗ, ಅಳಿಲು ತನ್ನ ಬಾಲವನ್ನು ನೆಲಕ್ಕೆ ಅದು ಮುಟ್ಟುವವರೆಗೆ ಹೊಡೆಯುತ್ತಿರುತ್ತದೆ. ನಂತರ ಅದನ್ನು ಗಧೆಯಂತೆ ಬಳಸಿ ಶತ್ರುವನ್ನು ದೂರ ಮಾಡುತ್ತದೆ. ಅದೇರೀತಿಯಾಗಿ ಓ ಮಹಾರಾಜ ಯತ್ನಶೀಲ ಭಿಕ್ಷುವು ಪರಿಶ್ರಮದಲ್ಲಿ ಉತ್ಸಾಹಿತವಾಗಿ, ಆತನ ಶತ್ರುವಾದ ಪಾಪವು ಆಕ್ರಮಣ ಮಾಡಿದಾಗ, ಭಿಕ್ಷುವು ತನ್ನ ಗಧೆಯಾದ ಸಮ್ಯಕ್ಸ್ಮೃತಿ ಅಥವಾ ನಾಲ್ಕು ಸತಿಪಟ್ಠಾನವನ್ನು ವೃದ್ಧಿಸಿ ಆ ಪಾಪವನ್ನು ನಾಶಪಡಿಸುತ್ತಾನೆ. ಇದೇ ಭಿಕ್ಷುವು ಹೊಂದಬೇಕಾದ ಅಳಿಲಿನಲ್ಲಿರುವ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ಚುಲ್ಲಪಂಥಕ ಥೇರರು ಹೀಗೆ ಹೇಳಿದ್ದಾರೆ: ಯಾವಾಗ ಎಲ್ಲಾ ಗುಣಗಳನ್ನು ಧ್ವಂಸ ಮಾಡುವ ಕ್ಲೇಷಗಳು ಮೇಲೆ ಬೀಳುವುದೋ, ಆಗ ಸತಿಪಟ್ಠಾಣವನ್ನೇ ಗಧೆಯನ್ನಾಗಿಸಿ ಪುನಃ ಪುನಃ ಹೊಡೆದು ಹತವಾಗಿಸಲಿ.


4. ದೊಪಿನಿಯಂಗ (ಹೆಣ್ಣು ಚಿರತೆಯ ಪ್ರಶ್ನೆ) ಪನ್ಹೊ

ಭಂತೆ ನಾಗಸೇನ, ಭಿಕ್ಷವು ಹೊಂದಬೇಕಾದ ಹೆಣ್ಣು ಚಿರತೆಯ ಒಂದು ಗುಣವು ಯಾವುದು? (219)
ಓ ಮಹಾರಾಜ, ಹೆಣ್ಣು ಚಿರತೆಯು ಗಂಡು ಚಿರತೆಯಿಂದ ಒಮ್ಮೆ ಮಾತ್ರ ಬಸಿರು ತಾಳುತ್ತದೆ. ಅದು ಪುನಃ ಗಂಡು ಚಿರತೆಯೊಂದಿಗೆ ಸೇರುವುದೇ ಇಲ್ಲ. ಅದೇರೀತಿಯಾಗಿ ಓ ಮಹಾರಾಜ, ಪ್ರಯತ್ನಶೀಲನಾದ ಭಿಕ್ಷುವು ಯತ್ನಶೀಲತೆಯಲ್ಲಿ ನಿಷ್ಠನಾಗಿ, ಪುನರ್ಜನ್ಮಗಳ ಭೀಕರತೆ ಕಂಡು, ಜನ್ಮಗಳ ದುಃಖಗಳನ್ನು ಕಂಡು, ಜರಾಮರಣಗಳಿಗೆ ಕಾರಣವನ್ನು ತಿಳಿದು, ಅವುಗಳಿಂದಾದ ಉಪದ್ರವ ಸ್ಪಷ್ಟವಾಗಿ ತಿಳಿದು, ಮತ್ತೆ ಜನ್ಮ ತಾಳದಿರಲು ನಿರ್ಧರಿಸುತ್ತಾನೆ. ಹಾಗೆಯೇ ಪ್ರಯತ್ನಿಸಿ ಯಶಸ್ವಿಯಾಗುತ್ತಾನೆ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಹೆಣ್ಣು ಚಿರತೆಯ ಒಂದು ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಸುತ್ತನಿಪಾತದಲ್ಲಿ ಧನಿಯ ಗೋಪಾಲಕ ಸುತ್ತದಲ್ಲಿ ಹೀಗೆ ಹೇಳಿದ್ದಾರೆ: ಹೇಗೆ ಋಷಭವು ಬಂಧನಗಳನ್ನು ಛೇದಿಸುತ್ತದೆಯೋ ಅಥವಾ ಆನೆಯು ಕಾಡಿನಲ್ಲಿ ತನ್ನ ಬಲದಿಂದಲೇ ಮಾರ್ಗ ನಿಮರ್ಿಸುತ್ತದೆಯೋ ಹಾಗೇ ನಾನು ಎಂದಿಗೂ ಗರ್ಭವನ್ನು ಪ್ರವೇಶಿಸುವುದಿಲ್ಲ. ಈಗ ನೀವು ಇಷ್ಟಪಡುವುದಾದರೆ ಸುರಿಸಿ ದೇವ.


5. ಗಂಡು ಚಿರತೆಯ ಪ್ರಶ್ನೆ (ದೀಪಿಕಂಗ ಪನ್ಹೊ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಗಂಡು ಚಿರತೆಯ ಎರಡು ಗುಣಗಳು ಯಾವುದು? (220)
ಮಹಾರಾಜ, ಚಿರತೆಯು ಕಾಡು ಸ್ಥಳಗಳಲ್ಲಿ, ಉದ್ದವಾದ ಹುಲ್ಲುಗಳಲ್ಲಿ, ಪೊದೆಗಳಲ್ಲಿ, ಬಂಡೆಗಳಲ್ಲಿ ಅಡಗಿ ನಂತರವೇ ಜಿಂಕೆಯನ್ನು ಹಿಡಿಯುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಯತ್ನಶೀಲನಾದ ಭಿಕ್ಷುವು ಏಕಾಂತ ಸ್ಥಳಗಳಾದ ಕಾಡು, ಮರದಬುಡ, ಗಿರಿಶಿಖರ, ಗುಹೆಗಳು ಮತ್ತು ಕೃತಕ ಗುಹೆಗಳಲ್ಲಿ, ಸ್ಮಶಾನದಲ್ಲಿ ತೆರೆದ ಆಕಾಶದಲ್ಲಿ ಹುಲ್ಲಿನ ಮೇಲೆ, ಶಾಂತವಾದ ನಿಶ್ಶಬ್ದ ಸ್ಥಳಗಳಲ್ಲಿ ಗಾಳಿಯಿಲ್ಲದಿರುವ ಸ್ಥಳದಲ್ಲಿ, ನಿರ್ಜನ ಸ್ಥಳಗಳಲ್ಲಿ ಧ್ಯಾನಿಸುತ್ತಾನೆ. ಸಮಾಧಿ ಪ್ರಾಪ್ತಿಮಾಡುತ್ತಾನೆ. ಅಂತಹ ಯತ್ನಶೀಲ ಭಿಕ್ಷುವು ಶೀಘ್ರದಲ್ಲೇ ಆರು ಅಭಿಜ್ಞಾಗಳನ್ನು ಪ್ರಾಪ್ತಿಮಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಿರತೆಯ ಒಂದನೆಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಥೇರರು ಗ್ರಂಥಗಳಲ್ಲಿ ಹೀಗೆ ಹೇಳಿದ್ದಾರೆ: ಹೇಗೆ ಅಡಗುತಾಣಗಳಲ್ಲಿ ಅವಿತು ಜಿಂಕೆಯನ್ನು ಚಿರತೆಯು ಹಿಡಿಯುವುದೋ ಹಾಗೇ ಬುದ್ಧಪುತ್ರರು ವಿಪಸ್ಸನ ಮತ್ತು ಧ್ಯಾನದಿಂದ ಏಕಾಂತತೆಯಲ್ಲಿ ನೆಲೆಸಿ ಅತ್ಯುತ್ತಮ ಫಲವನ್ನು ಪ್ರಾಪ್ತಿಮಾಡಲಿ.
ಮತ್ತೆ ಓ ಮಹಾರಾಜ, ಹೇಗೆ ಚಿರತೆಯು ಯಾವಾಗಲೇ ಬೇಟೆ ಆಡಲಿ, ಅದು ತಿನ್ನುವಾಗ, ಎಡಬದಿಯಲ್ಲಿ ಬಿದ್ದುದನ್ನು ಎಂದಿಗೂ ತಿನ್ನಲಾರದು. ಅದೇರೀತಿಯಲ್ಲಿ ಓ ಮಹಾರಾಜ, ಯತ್ನಶೀಲ ಭಿಕ್ಷುವು ಸಹಾ ದಾನಗಳನ್ನು ಬಿದಿರಿನಲ್ಲಾಗಲಿ, ತಾಳೆಯ ಎಲೆಗಳಲ್ಲಾಗಲಿ, ಹೂಗಳಲ್ಲಾಗಲಿ, ಹಣ್ಣುಗಳಲ್ಲಿ ಆಗಲಿ, ಸ್ನಾನ ಮಾಡುವಾಗ ಆಗಲಿ, ಹಲ್ಲುಕಡ್ಡಿ ಉಜ್ಜುವಾಗ, ತೊಳೆಯುವಾಗ, ದಾನ ಸ್ವೀಕರಿಸುವುದಿಲ್ಲ, ದಾನಕ್ಕಾಗಿ ಹೊಗಳುವುದಿಲ್ಲ, ದಾನಕ್ಕಾಗಿ ಸಿಹಿಮಾತುಗಳು ಬಳಸುವುದಿಲ್ಲ, ಆಹಾರಕ್ಕಾಗಿ ಸತ್ಯಮುಚ್ಚಿ, ಅಸತ್ಯ ಎತ್ತಿಹಿಡಿಯುವುದಿಲ್ಲ, ಮಕ್ಕಳಿಗೆ ಆಡಿಸುವುದಿಲ್ಲ, ದೂತನಾಗುವುದಿಲ್ಲ, ವೈದ್ಯನಾಗುವುದಿಲ್ಲ, ಸಂಧಾನ ಮಾಡುವುದಿಲ್ಲ, ನಟನೆ ಮಾಡುವುದಿಲ್ಲ. ಮದುವೆಯ ಅಥವಾ ವ್ಯವಹಾರದ ದಲ್ಲಾಳಿ ಆಗುವುದಿಲ್ಲ, ಅಂಗೈಯಲ್ಲಿ ದಾನ ಸ್ವೀಕರಿಸುವುದಿಲ್ಲ ಅಥವಾ ವಿನಿಮಯ ಮಾಡುವುದಿಲ್ಲ ಅಥವಾ ಆತನು ಇದು ಶುಭ ನೆಲೆ, ಶುಭದಿನ, ಶುಭಲಕ್ಷಣ ಎಂದು ಹೇಳಿ ಮಿಥ್ಯಾಜೀವನ ನಡೆಸುವುದಿಲ್ಲ. ಈ ರೀತಿಯ ಮಿಥ್ಯಾ ಜೀವನಗಳು ಬುದ್ಧರಿಂದ ಖಂಡಿಸಲ್ಪಟ್ಟಿವೆ. ಅಂತಹ ಆಹಾರವನ್ನು ಆತನ ಚಿರತೆಯು ಎಡಬದಿಯಲ್ಲಿ ಬಿದ್ದಿರುವ ಆಹಾರ ತಿನ್ನದ ಹಾಗೆ ತಿನ್ನುವುದಿಲ್ಲ. ಇದೇ ಭಿಕ್ಷುವು ಹೊಂದಬೇಕಾದ ಚಿರತೆಯಲ್ಲಿನ ಎರಡನೆಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಧಮ್ಮಸೇನಾನಿ ಸಾರಿಪುತ್ರರು ಹೀಗೆ ಹೇಳಿದ್ದಾರೆ: ಈ ಆಹಾರವು, ಮಧುಪಾಯಸವು ಮಾತಿನ ಸಂದೇಶದಿಂದ ಗಳಿಸಿದ್ದಾಗಿದೆ. ನಾನು ಇದರಲ್ಲಿ ಭಾಗಿಯಾದರೆ ನನ್ನ ಜೀವನೋಪಾಯವು ಭ್ರಷ್ಟವಾಗಿ ನಿಂದನೀಯವಾಗುತ್ತದೆ. ಹಸಿವಿನಿಂದ ಧಾರುಣವಾಗಿ ಪೀಡಿಸಲ್ಪಟ್ಟರೂ ಹೊಟ್ಟೆಯು ಸಿದ್ಧವಾದರೂ, ನಾನು ಮಾತ್ರ ಜೀವನೋಪಾಯದ ನಿಯಮ ಭಂಗ ಮಾಡಲಾರೆ. ಬೇಕಾದರೆ ಜೀವಿತವನ್ನು ತ್ಯಾಗಮಾಡುತ್ತೇನೆ.


6. ಕುಮ್ಮಾಂಗ ಪನ್ಹೊ (ಆಮೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಆಮೆಯ ಯಾವ 5 ಗುಣಗಳನ್ನು ಹೊಂದಿರಬೇಕೆಂದು ಹೇಳುವಿರಿ. (221)
ಓ ಮಹಾರಾಜ, ಹೇಗೆ ಆಮೆಯು ಜಲಚರವೋ, ಜಲದಲ್ಲೇ ಜೀವಿಸುವುದೋ ಹಾಗೆಯೇ ಓ ಮಹಾರಾಜ, ಯತ್ನಶೀಲ ಭಿಕ್ಷುವು ಪರಿಶ್ರಮದಲ್ಲಿ ತಲ್ಲೀನನಾಗಿ, ಮೈತ್ರಿಯಿಂದ ಇಡೀ ವಿಶ್ವವನ್ನು ಹಿತಸುಖಭಾವನೆಗಳಿಂದ ಪ್ರಸರಿಸುತ್ತಾನೆ. ಆತನು ಅಪರಿಮಿತವಾಗಿ, ದ್ವೇಷರಹಿತವಾಗಿ ಎಲ್ಲ ಜೀವಿಗಳಿಗೆ ಮೈತ್ರಿಯನ್ನು ಪ್ರಸರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಆಮೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಮೆಯು ನೀರಿನಲ್ಲಿ ಈಜುವಾಗ ತನ್ನ ತಲೆಯನ್ನು ಎತ್ತಿರುತ್ತದೆಯೋ, ಆದರೆ ಯಾರಾದರೂ ಅದಕ್ಕೆ ನೋಡಿದಾಗ ಅದು ತಕ್ಷಣ ಮುಳುಗುತ್ತದೆ ಮತ್ತು ಆಳವಾದ ತಳಕ್ಕೆ ಹೋಗುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಭಿಕ್ಷುವು ತನ್ನ ಸಾಧನೆಯಲ್ಲಿ ನಿಷ್ಠೆಯಿಂದ ನಿರತನಾಗಿರುವಾಗ, ಧ್ಯಾನಿಸುತ್ತಿರುವಾಗ, ಪಾಪಯುತ ಯೋಚನೆಗಳು ಆತನಲ್ಲಿ ಉಂಟಾದರೆ ತಕ್ಷಣ ಆತನು ಧ್ಯಾನದ ಆಳದಲ್ಲಿ ಮುಳುಗುತ್ತಾನೆ. ಹಾಗೆ ನಿರಂತರವಾಗಿ ಮಗ್ನನಾಗುತ್ತಾನೆ. ಮತ್ತೆ ಏನಾದರೂ ಪಾಪಗಳು ಉತ್ಪನ್ನವಾದರೆ ಆತನು ಪುನಃ ಮೊದಲಿಗಿಂತ ಆಳವಾಗಿ ಧ್ಯಾನ ಸಮಾಧಿಯಲ್ಲಿ ಆಳವಾಗಿ ಮುಳುಗುತ್ತಾನೆ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಆಮೆಯ ಎರಡನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಮೆಯು ಜಲದಿಂದ ಮೇಲೆ ಎದ್ದಾಗ ಬಿಸಿಲಿಗೆ ಮೈ ಒಡ್ಡುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಯತ್ನಶೀಲ ಭಿಕ್ಷುವು, ತನ್ನ ಪರಿಶ್ರಮದಲ್ಲಿ ನಿಷ್ಠನಾಗಿ, ಯಾವಾಗ ಧ್ಯಾನದಿಂದ ಮೇಲೆಳುವನೋ ಆಗ ಆತನು ಕುಳಿತಿರಲಿ ಅಥವಾ ಮಲಗಿರಲಿ ಅಥವಾ ನಿಂತಿರಲಿ ಅಥವಾ ನಡೆಯುತ್ತಿರಲಿ, ಆತನು ಸಮ್ಮಪದಾನದಲ್ಲಿ (ಮಾನಸಿಕ ವ್ಯಾಯಾಮಗಳಾದ ಸಂಯಮ, ವರ್ಜನೆ ಭಾವನೆ ಮತ್ತು ರಕ್ಷಣೆಗಳಲ್ಲಿ) ತಲ್ಲೀನನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಆಮೆಯ 3ನೆಯ ಗುಣವಾಗಿದೆ.)
ಮತ್ತೆ ಓ ಮಹಾರಾಜ, ಹೇಗೆ ಆಮೆಯು ಭೂಮಿಯಲ್ಲಿ ರಂಧ್ರವನ್ನು ಕೊರೆದು ಒಂಟಿಯಾಗಿ ವಾಸಿಸುವುದೋ, ಹಾಗೆಯೇ ಓ ಮಹಾರಾಜ, ಯತ್ನಶೀಲ ಭಿಕ್ಷುವು, ಧ್ಯಾನಶೀಲ ಭಿಕ್ಷುವು ಲಾಭ, ಸತ್ಕಾರ, ಸ್ತುತಿಗಳನ್ನು ತೊರೆದು ಅವುಗಳಿಗೆ ಅತೀತನಾಗುತ್ತಾನೆ. ಒಂಟಿಯಾದ ನಿರ್ಜನ ನಿಶ್ಶಬ್ದ ಸ್ಥಳ ಆಯ್ಕೆಮಾಡಿ, ಏಕಾಂತತೆಯಲ್ಲಿ ತಲ್ಲೀನನಾಗಿ, ಶೂನ್ಯ ಗೃಹದಲ್ಲಿ ವಾಸಿಸಿ, ಅಥವಾ ತೋಪುಗಳಲ್ಲಿ, ಕಾಡುಗಳಲ್ಲಿ, ಗಿರಿಶಿಖರಗಳಲ್ಲಿ, ಗವಿಗಳಲ್ಲಿ, ಗುಹೆಗಳಲ್ಲಿ ಶಬ್ದರಹಿತ ಮತ್ತು ಶಾಂತ ವಾತಾವರಣದಲ್ಲಿ ನೆಲೆಸಿ ಧ್ಯಾನ ಸಾಧಿಸುತ್ತಾನೆ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಆಮೆಯ ನಾಲ್ಕನೆಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ವಂಗತಪುತ್ರ ಉಪಸೇನ ಥೇರರು ಹೀಗೆ ಹೇಳಿದ್ದಾರೆ: ಒಂಟಿಯಾದ ಮತ್ತು ಸ್ತಬ್ದವಾದ ಸ್ಥಳಗಳಲ್ಲೇ ಜಿಂಕೆಯನ್ನು ಕ್ರೂರ ಪ್ರಾಣಿಗಳು  ಬೇಟೆಯಾಡುತ್ತವೆ, ಭಿಕ್ಷುವು ಸಹಾ ತನ್ನ ವಾಸಸ್ಥಾನವನ್ನು ಏಕಾಂತತೆಯ ನಿಶ್ಶಬ್ದ ಮಾಧುರ್ಯದಲ್ಲಿ ನೆಲೆಸಲಿ.
ಮತ್ತೆ ಓ ಮಹಾರಾಜ, ಹೇಗೆ ಆಮೆಯು ಸಂಚರಿಸುವಾಗ ಯಾರನ್ನಾದರೂ ಕಂಡರೆ ತಕ್ಷಣ ಅದು ಶಿರ ಮತ್ತು ಕಾಲುಗಳನ್ನು ಒಳಕ್ಕೆ ತೆಗೆದುಕೊಂಡು ಬೀಡುತ್ತದೆ. ಅಲ್ಲಿಯೇ ಅಡಗಿಕೊಂಡು ಶಾಂತವಾಗಿದ್ದು ತನ್ನನ್ನು ಕಾಪಾಡಿಕೊಳ್ಳುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ನಡೆಯುವಾಗ, ಯಾವುದೇ ರೂಪವಾಗಲಿ, ಶಬ್ದವಾಗಲಿ, ಗಂಧವಾಗಲೀ, ರಸವಾಗಲಿ, ಸ್ಪರ್ಶವಾಗಲಿ ಆತನಲ್ಲಿ ಸ್ಪಶರ್ಿಸಿದಾಗ ಆತನು ಸಂಯಮತಾಳಿ 6 ಇಂದ್ರೀಯಗಳ ದ್ವಾರಗಳನ್ನು ಮುಚ್ಚಿಬಿಡುತ್ತಾನೆ. ಸ್ವನಿಯಂತ್ರಣ ಸಾಧಿಸುತ್ತಾನೆ. ಸದಾ ಸ್ಮೃತಿ ಮತ್ತು ಅರಿವಿನಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಆಮೆಯ 5ನೆಯ ಗುಣವಾಗಿದೆ. ಇದರ ಬಗ್ಗೆ ಭಗವಾನರು ದೇವಾದಿದೇವರು ಆಗಿದ್ದ ಬುದ್ಧರು ಸಂಯುಕ್ತ ನಿಕಾಯದ ಕುಮ್ಮುಪಮ ಸುತ್ತದಲ್ಲಿ ಹೀಗೆ ಹೇಳಿದ್ದಾರೆ.
ಹೇಗೆ ಆಮೆಯು ತನ್ನ ಅಂಗಾಗಗಳನ್ನು ತನ್ನ ಚಿಪ್ಪಿನಲ್ಲಿ ಹೇಗೆ ಅಡಗಿಸುತ್ತದೆಯೋ ಹಾಗೆಯೇ ಭಿಕ್ಷುವು ತನ್ನ ಚಿತ್ತದಲ್ಲೇ ಯೋಚನೆಗಳ ಸಮಾಧಿ ಮಾಡಬೇಕು. ತನ್ನಲ್ಲೇ ಸ್ವತಂತ್ರನಾಗಿ, ಯಾರಿಗೂ ಹಾನಿ ನೀಡದೆ, ಬಿಡುಗಡೆ ಹೊಂದಿದವನಾಗಿ ಯಾರಿಗೂ ನಿಂದಿಸನು.

7. ಮಸಂಗ ಪನ್ಹೊ (ಬಿದಿರಿನ ಪ್ರಶ್ನೆ)

ಭಂತೆ ನಾಗಸೇನ, ಬಿದಿರಿನ ಯಾವ ಒಂದು ಗುಣವನ್ನು ಭಿಕ್ಷುವು ಹೊಂದ ಬೇಕು? (222)
ಓ ಮಹಾರಾಜ, ಹೇಗೆ ಬಿದಿರು (ಬಂಬುಗಿಡ) ಬಿರುಗಾಳಿ ಬೀಸುವಾಗ ಅದರಂತೆಯೇ ಬಾಗುತ್ತದೆ. ಅದು ತನ್ನತನವನ್ನೇ ಬಳಸುವುದಿಲ್ಲ, ಅದೇರೀತಿಯಾಗಿ ಧ್ಯಾನಶೀಲ ಭಿಕ್ಷುವು, ಬುದ್ಧಭಗವಾನರ ನವಾಂಗಶಾಸನದಲ್ಲಿ ಶೀಲದಲ್ಲಿ ಇತ್ಯಾದಿಗಳಲ್ಲಿ ತಲ್ಲೀನನಾಗುತ್ತಾನೆ ಮತ್ತು ಅವುಗಳಲ್ಲಿ ಜಾಗೃತನಾಗಿ, ಶೀಲವಂತನು, ನಿಂದಾತೀತನು ಆಗುತ್ತಾನೆ. ಆತನು ಸಮಣತ್ವವನ್ನು ಹುಡುಕುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಿದಿರಿನ ಗುಣವಾಗಿದೆ. ಇದರ ಬಗ್ಗೆ ಓ ರಾಜ, ರಾಹುಲ ಥೇರರು ಹೀಗೆ ಹೇಳಿದ್ದಾರೆ: ನವಾಂಗ ಬುದ್ಧನ ವಚನದಲ್ಲೇ ತಲ್ಲೀನನಾಗಿ, ಎಲ್ಲವನ್ನೂ ಪಾಲಿಸಿ ಶೀಲವಂತನಾಗಿ, ಅನಿಂದಿತ ಕ್ರಿಯೆಗಳಲ್ಲಿ ಬದ್ಧನಾಗಿ, ಅವನು ಪುನರ್ಜನ್ಮ ಮತ್ತು ಪಾಪಯುತ ಸ್ಥಿತಿಗಳಿಂದ ಆಚೆ ಹೋಗುವನು.

8. ಚಾಪಂಗ ಪನ್ಹೊ (ಬಿಲ್ಲಿನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಬಿಲ್ಲಿನ ಯಾವ ಒಂದು ಗುಣವನ್ನು ಹೊಂದಿರ ಬೇಕು? (223)
ಮಹಾರಾಜ, ಹೇಗೆ ಸುರಚಿತವಾದ ಮತ್ತು ಸಮತೋಲಿತ ಬಿಲ್ಲನ್ನು ಬಾಗಿಸಿದಾಗ, ಅದು ಕಾಠಿಣ್ಯಕ್ಕೆ ಒಳಗಾಗುವುದಿಲ್ಲ ಮತ್ತು ಅದು ಕಂಬದಂತೆ ವಿರೋಧಪಡಿಸುವುದಿಲ್ಲ. ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು, ಯತ್ನಶೀಲ ಭಿಕ್ಷುವು, ಭಿಕ್ಷುಗಳಿಗೆ ಸುಲಭವಾಗಿ ಬಾಗುವ ಬಿಲ್ಲಿನಂತಿರುತ್ತಾನೆ. ಆತನು ಹಿರಿಯರಿಗೆ, ಮಧ್ಯಮವಯಸ್ಕರಿಗೆ, ಕಿರಿಯರಿಗೆ, ಎಲ್ಲರಿಗೂ ಸಮಾನವಾಗಿ ಕಂಡು ವತರ್ಿಸುತ್ತಾನೆ ಹೊರತು ವಿರೋಧ ತಾಳನು. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಬಿಲ್ಲಿನ ಒಂದು ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಭಗವಾನರು ದೇವಾದಿದೇವರು ವಿಧುಪುನ್ನಕ ಜಾತಕದಲ್ಲಿ ಹೀಗೆ ಹೇಳಿದ್ದಾರೆ: ಪ್ರಜ್ಞಾವಂತರು ಬಿಲ್ಲಿನಂತೆ ಬಾಗಲಿ, ಜೊಂಡಿನಂತೆ ಇಳುವರಿ ಪಡೆಯಲಿ, ಹೊರತು ವಿರೋಧ ಪಡದಿರಲಿ, ಹೀಗಿದ್ದು ರಾಜನಂತೆ ವಾಸಿಸಲಿ.

9. ವಾಯಸಂಗ ಪನ್ಹೊ (ಕಾಗೆಯ ಪ್ರಶ್ನೆ)

ಭಂತೆ ನಾಗಸೇನ, ಕಾಗೆಯ ಯಾವ 2 ಗುಣಗಳಿಂದ ಭಿಕ್ಷುವು ಕೂಡಿರಬೇಕು?(224)
ಓ ಮಹಾರಾಜ, ಹೇಗೆ ಕಾಗೆಯು ಪೂರ್ಣವಾದ ಗ್ರಹಣಶಕ್ತಿಯಿಂದ ಮತ್ತು ಸಂದೇಹಗಳಿಂದಲೇ ತಿರುಗಾಡುತ್ತಿರುತ್ತದೆಯೋ ಮತ್ತು ವೀಕ್ಷಿಸುತ್ತ ತನ್ನನ್ನು ರಕ್ಷಿಸಿಕೊಳ್ಳುತ್ತದೆಯೋ ಅದೇರೀತಿ ಓ ರಾಜ, ಯತ್ನಶೀಲ ಭಿಕ್ಷುವು ಸಹಾ ಪೂರ್ಣವಾದ ಗ್ರಹಣಶಕ್ತಿಯಿಂದ ಮತ್ತು ಸಂದೇಹಗಳಿಂದ ಸದಾ ಸ್ಮೃತಿವಂತನಾಗಿ ತನ್ನನ್ನು ರಕ್ಷಿಸಿಕೊಳ್ಳಲು ಸದಾ ಜ್ಞಾನಯುತ ಗಮನಹರಿಸುವಿಕೆಯಿಂದಲೇ, ಇಂದ್ರಿಯಗಳನ್ನು ವಶದಲ್ಲಿರಿಸಿರಲಿ. ಇದೇ ಓ ಮಹಾರಾಜ, ಕಾಗೆಯ ಪ್ರಥಮ ಗುಣವು ಭಿಕ್ಷುವಿನಲ್ಲಿಬೇಕಾಗಿದೆ.
ಮತ್ತೆ ಓ ರಾಜ, ಹೇಗೆ ಕಾಗೆಯು ತನಗೆ ಸಿಗುವಂತಹ ಯಾವುದೇ ತಿಂಡಿಯಿರಲಿ ಅದನ್ನು ಹಂಚಿಯೇ ತಿನ್ನುತ್ತದೆ. ಅದೇರೀತಿ ಧ್ಯಾನಶೀಲನಾದ ಭಿಕ್ಷುವು ಸಹಾ, ಪರಿಶ್ರಮಭರಿತವಾಗಿರಲಿ ಹಾಗು ತನಗೆ ಸಿಗುವಂತಹ ಎಂತಹ ಉಡುಗೊರೆಯಾಗಿರಲಿ ಅದನ್ನು ಸಹ ಭಿಕ್ಕುಗಳೊಂದಿಗೆ ಹಂಚಿಕೊಳ್ಳಲಿ. ಆತನಿಗೆ ಪಿಂಡಪಾತ್ರೆಯಲ್ಲಿರುವ ಆಹಾರವನ್ನು ಹಂಚಿ ತಿಂದರೆ ಅದು ಸುತಾರ್ಹವೇ ಆಗಿದೆ. ಹಂಚಿಕೊಂಡು ಸಂತೃಪ್ತವಾಗಿ ಇರುವುದನ್ನು ಎಂದಿಗೂ ವಜರ್ಿಸದಿರಲಿ. ಇದೇ ಓ ಮಹಾರಾಜ, ಕಾಗೆಯಲ್ಲಿರುವ ದ್ವಿತೀಯ ಗುಣವು ಭಿಕ್ಷುವು ಹೊಂದಬೇಕಾಗಿದೆ. ಓ ಮಹಾರಾಜ ಇದರ ಬಗ್ಗೆ ಧಮ್ಮಸೇನಾನಿ ಸಾರಿಪುತ್ತ ಥೇರರು ಸಹಾ ಹೀಗೆ ಹೇಳಿರುವರು: ನನಗೆ ಯಾರೇ ಉಡುಗೊರೆ ನೀಡಲಿ, ಅದೆಲ್ಲವನ್ನು ಅದು ಬಂದೊಡನೆಯೇ ಹಾಗೆ ಹಂಚಿ ನಂತರ ನನ್ನ ಪಾಲನ್ನು ತೆಗೆದುಕೊಳ್ಳುವೆ.

10. ಮಕ್ಕಟ ಪನ್ಹೊ (ಮರ್ಕಟ/ಕೋತಿಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಕೋತಿಯ 2 ಗುಣಗಳಾವುವು?(225)
ಓ ಮಹಾರಾಜ, ಹೇಗೆ ಕೋತಿಯು ತನ್ನ ವಾಸಸ್ಥಾನ ಆಯ್ಕೆ ಮಾಡುವಾಗ ದೊಡ್ಡದಾದ ವೃಕ್ಷವನ್ನು ಮತ್ತು ಅದರಲ್ಲಿಯು ಅಪಾರ ಕೊಂಬೆಗಳು ಆವರಿಸಿರುವ ಸ್ಥಳವನ್ನೇ ವಾಸಕ್ಕೆ ಕ್ಷೇಮಕ್ಕೆ ಆಯ್ಕೆ ಮಾಡುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ದ್ಯಾನಶೀಲ ಭಿಕ್ಷುವು ತನ್ನ ಗುರುವಿಗಾಗಿ ಪಾಪಲಜ್ಜೆಯಿಂದಿರುವ, ಶೀಲವಂತರು, ಕಲ್ಯಾಣ ಧಮ್ಮ ತಿಳಿದಿರುವವರು, ಬಹುಶ್ರುತರು, ಧಮ್ಮಥೇರರು, ವಿನಯಧರರು, ಪ್ರಿಯರು, ಪೂಜ್ಯರು, ಗೌರವಕ್ಕೆ ಅರ್ಹರು, ಕುಶಲ ಪ್ರಯೋಜನಕಾರಿ ವಿಷಯಗಳನ್ನು ಮಾತನಾಡುವವರು, ಸೌಮ್ಯರು, ಚಾತುರ್ಯರು, ಅಪಾರ ಶೌರ್ಯ ಪಡೆದವರು, ಪ್ರೋತ್ಸಾಹಿಸುವವರು, ಆನಂದ ತರುವವರು ಆದಂತಹವರನ್ನೇ ಗುರುವಾಗಿ ಆಯ್ಕೆ ಮಾಡುತ್ತಾನೆ. ಇದೇ ಭಿಕ್ಷುವು ಹೊಂದಬೇಕಾದ ಮಕ್ಕಟನಲ್ಲಿರುವ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಕೋತಿಯು ಸಹಾ ಕ್ರಿಯಾಶಾಲಿಯಾಗಿರುತ್ತದೆ ಮತ್ತು ಸದಾ ಮರಗಳಲ್ಲೇ ನಿಲ್ಲುವುದು ಕುಳಿತುಕೊಳ್ಳುವುದು, ನಿದ್ರಿಸುವುದು, ಹಾರುವುದು ಎಲ್ಲಾ ಮಾಡುತ್ತದೆ. ಅಷ್ಟೇ ಅಲ್ಲ, ಅದು ನಿದ್ರಿಸಬೇಕಾದರೂ ಅದಕ್ಕಾಗಿ ರಾತ್ರಿಯನ್ನೇ ಆಯ್ಕೆ ಮಾಡುತ್ತದೆ. ಅದೇರೀತಿಯಾಗಿ, ಧ್ಯಾನಿಯಾದ ಭಿಕ್ಷುವು ಸದಾ ಪ್ರಯತ್ನಶೀಲನಾಗಿರುತ್ತಾನೆ. ನಿಂತಿರುವಾಗಲಿ, ನಡೆಯುವಾಗ ಆಗಲಿ, ಮಲಗಿರುವಾಗ ಆಗಲಿ ಅಥವಾ ಕುಳಿತಿರುವಾಗ ಆಗಲಿ ಸದಾ ಜಾಗರೂಕನಾಗಿ ಸ್ಮೃತಿ ಪ್ರತಿಷ್ಠಾನದಲ್ಲಿ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಕೋತಿಯಲ್ಲಿನ ದ್ವಿತೀಯ ಗುಣವಾಗಿದೆ ಮತ್ತು ಓ ಮಹಾರಾಜ, ಇದರ ಬಗ್ಗೆ ಧಮ್ಮಸೇನಾನಿ ಸಾರಿಪುತ್ರರವರು ಹೀಗೆ ಹೇಳಿದ್ದಾರೆ: ನಡೆಯುವಾಗ ಆಗಲಿ ಅಥವಾ ನಿಂತಿರುವಾಗ ಆಗಲಿ ಅರಣ್ಯದಲ್ಲಿ ಭಿಕ್ಷುವು ಹೊಳೆಯುತ್ತಾನೆ. ಅಲ್ಲೇ ದೂರದ ವನದಲ್ಲಿ ವಾಸಿಸುವುದು ಸರ್ವಬುದ್ಧರಿಂದ ಪ್ರಶಂಸೆಗೆ ಪಾತ್ರವಾಗಿದೆ. 

No comments:

Post a Comment