Saturday, 7 April 2018

milinda panha 7. ನಿಪ್ಪಪಂಚ ವಗರ್ೊ

7.  ನಿಪ್ಪಪಂಚ ವಗರ್ೊ

1. ನಿಪ್ಪಪಂಚ ಪನ್ಹೋ (ನಿಷ್ಪ್ರಪಂಚ ಪ್ರಶ್ನೆ)

ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಓ ಭಿಕ್ಖುಗಳೇ, ನಿಷ್ಪ್ರಪಂಚದಲ್ಲಿ ಜೀವಿಸಿರಿ, ನಿಷ್ಪ್ರಪಂಚದಲ್ಲೇ ಆನಂದದಿಂದ ವಿಹರಿಸಿರಿ, ಯಾವುದದು ನಿಷ್ಪ್ರಪಂಚ?(156)

ಸೋತಪತ್ತಿ ಫಲವು ನಿಷ್ಪ್ರಪಂಚವಾಗಿದೆ. ಮಹಾರಾಜ, ಹಾಗೆಯೇ ಸಕದಾಗಾಮಿ ಫಲ, ನಿಷ್ಪ್ರಪಂಚವಾಗಿದೆ. ಅನಾಗಾಮಿಫಲ ಮತ್ತು ಅರಹಂತ ಫಲವು ಮತ್ತು ನಿಬ್ಬಾಣವು ನಿಷ್ಪ್ರಪಂಚವಾಗಿದೆ ಮಹಾರಾಜ.

ಹಾಗಿದ್ದರೆ ಓ ಭಂತೆ ನಾಗಸೇನ, ಏತಕ್ಕಾಗಿ ಭಿಕ್ಷುಗಳು ಪಠಿಸುತ್ತಾರೆ, ಪ್ರಶ್ನಿಸುತ್ತಾರೆ, ಸುತ್ತಗಳ ಬಗ್ಗೆ ಏಕೆ ಕೇಳುತ್ತಾರೆ, ಗದ್ಯಗಾಥೆಗಳನ್ನೇಕೆ ಕೇಳುತ್ತಾರೆ. ವಿವರಣೆಗಳನ್ನು, ಗೆಯ್ಯಗಳನ್ನು, ವ್ಯಾಕರಣಗಳನ್ನು, ಉದಾನವನ್ನು, ಇತಿವುತ್ತಕವನ್ನು, ಜಾತಕವನ್ನು, ಅದ್ಭುತ ಧಮ್ಮವನ್ನು, ವೆದಲ್ಲವನ್ನು ಏಕೆ ಕೇಳುತ್ತಾರೆ? ಹಾಗೆಯೇ ಏತಕ್ಕಾಗಿ ಅವರು ಹೊಸ ಕಟ್ಟಡಗಳನ್ನೇಕೆ ಕಟ್ಟಿಸುತ್ತಾರೆ? ದಾನ, ಮುಂತಾದವುಗಳಲ್ಲಿ ಏಕೆ ತೊಂದರೆ ತೆಗೆದು ಕೊಳ್ಳುತ್ತಿದ್ದಾರೆ?

ಓ ಮಹಾರಾಜ, ಈ ಎಲ್ಲಾ ಕೆಲಸಗಳಿಂದಲೇ ಈ ಮೂಲಕ ಹಾದು ಹೋಗಿಯೇ ಅವರು ನಿಷ್ಪ್ರಪಂಚ ಸಾಧಿಸುತ್ತಾರೆ ಮತ್ತೆ ಓ ಮಹಾರಾಜ ಯಾವ ಭಿಕ್ಷುಗಳು ಸ್ವಭಾವಿಕವಾಗಿ ಈಗ ಶುದ್ಧರಾಗಿದ್ದಾರೋ ಅವರು ಹಿಂದಿನ ಜನ್ಮದಲ್ಲಿ ಅದಕ್ಕಾಗಿ ಅಪಾರ ಶ್ರಮಿಸಿದ್ದಾರೆ, ಅಂತಹವರು ಈಗ ಸುಲಭವಾಗಿ ಅರಹಂತರಾಗಬಹುದು. ಮತ್ತು ಮಿಕ್ಕವರಿಗೆ ಅರಹತ್ವ ಸಾಧಿಸಲು ಪರೋಕ್ಷವಾಗಿ ಸಹಾಯಕವಾಗಿರುವ ಇವೆಲ್ಲಾ ಕಡ್ಡಾಯವಾಗಿ ಬೇಕಾಗಿದೆ.

ಇದು ಹೇಗೆಂದರೆ ಓ ಮಹಾರಾಜ, ಒಬ್ಬನು ಹೊಲದಲ್ಲಿ ಬೀಜವನ್ನು ಬಿತ್ತಿ ಹಾಗೆಯೇ ಸುಲಭವಾಗಿ ಬೆಳೆಯನ್ನು ಪಡೆಯುವನು. ಆದರೆ ಪರರು ಮೊದಲು ಕಾಡಿಗೆ ಹೋಗಿ ಮರಗಳನ್ನು ಕತ್ತರಿಸಿ, ಅದರಿಂದ ಬೇಲಿಯನ್ನು ನಿಮರ್ಿಸಿ, ನಂತರ ಬೀಜವನ್ನು ಬಿತ್ತಿ ಬೆಳೆಯನ್ನು ಪಡೆಯುತ್ತಾರೆ. ಅದೇರೀತಿಯಲ್ಲಿ ಯಾರು ಈಗ ಶುದ್ಧ ಚಾರಿತ್ರ್ಯರೋ ಅವರು ಪೂರ್ವದಲ್ಲೇ ಅದಕ್ಕಾಗಿ ಅಪಾರ ಶ್ರಮಿಸಿರುವರು. ಅವರು ಈಗ ಸುಲಭವಾಗಿ, ಕ್ಷಿಪ್ರವಾಗಿ ಅರಹಂತರಾಗಬಲ್ಲರು. ಹೇಗೆಂದರೆ ಬೇಲಿ ಇಲ್ಲದೆಯೇ ಬೆಳೆ ಪಡೆಯುವಂತೆ. ಆದರೆ ಯಾರ ಚಿತ್ತಗಳು ಪಾಪದಿಂದ ಕತ್ತಲು ಕವಿದಿದೆಯೋ ಅವರೆಲ್ಲಾ ಈ ಎಲ್ಲಾರೀತಿಯ ಕಾರ್ಯ ಮಾಡಿಯೇ ಅರಹಂತರಾಗಬೇಕಾಗುತ್ತದೆ. ಹೇಗೆಂದರೆ ಬೇಲಿ ನಿಮರ್ಿಸಿ ಬೆಳೆ ಪಡೆದಂತೆ.

ಓ ಮಹಾರಾಜ, ಊಹಿಸಿ, ಒಂದು ಎತ್ತರವಾದ ಮಾವಿನ ಮರದ ತುದಿಯಲ್ಲಿ ಮಾವಿನ ಹಣ್ಣುಗಳಿವೆ. ಆಗ ಇದ್ದಿಸಂಪನ್ನರು ಸುಲಭವಾಗಿ ಹಾರಿ ಆ ಹಣ್ಣುಗಳನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಆದರೆ ಇದ್ದಿಸಂಪನ್ನರಲ್ಲದವರು, ಮರಗಳನ್ನು ಬಳ್ಳಿಗಳನ್ನು ಕತ್ತರಿಸಿ ಏಣಿಯನ್ನು ನಿಮರ್ಿಸಿ, ಹತ್ತಿ ಹಣ್ಣನ್ನು ಪಡೆಯಬೇಕಾಗುತ್ತದೆ. ಅದೇರೀತಿಯಲ್ಲಿ ಯಾರು ಹಿಂದಿನ ಜನ್ಮದಲ್ಲಿ ಕುಶಲ ಕರ್ಮಗಳನ್ನು ಮಾಡಿ ಈಗ ಸುಲಭವಾಗಿ ನಿಷ್ಪ್ರಪಂಚತೆಯನ್ನು ಸಾಧಿಸುವರೋ ಆ ಇದ್ದಿಸಂಪನ್ನರು ಹಣ್ಣನ್ನು ಸುಲಭವಾಗಿ ಪಡೆದಂತೆ ಪಡೆವರು. ಉಳಿದವರು ಯಾರ ಚಿತ್ತವು ಪಾಪದಿಂದ ಮಲೀನವೋ ಅವರೆಲ್ಲ ಈ ರೀತಿ ಶಿಕ್ಷಣದಿಂದ ಹಾದುಹೋಗಿಯೇ ಹಣ್ಣುಗಳನ್ನು ಏಣಿಯನ್ನು ಹಾಕಿ ಕಿತ್ತಂತೆ ಪಡೆಯಬೇಕಾಗಿದೆ.

ಓ ಮಹಾರಾಜ, ಇದು ಹೇಗೆಂದರೆ ಒಬ್ಬನು ವ್ಯಾಪಾರದಲ್ಲಿ ಅತಿಚತುರನಾಗಿದ್ದು, ತನ್ನ ಸ್ವಾಮಿಯ ಬಳಿಗೆ ಒಬ್ಬನೇ ಹೋಗುತ್ತಾನೆ. ಯಾವುದೇರೀತಿಯ ವ್ಯವಹಾರವಾಗಲಿ, ಒಬ್ಬನೇ ಚೆನ್ನಾಗಿ ನಿರ್ವಹಿಸುತ್ತಾನೆ. ಆದರೆ ಮತ್ತೊಬ್ಬನು ಶ್ರೀಮಂತನಾಗಿದ್ದರೂ ಸಹಾ ಪರರ ಸಹಾಯವಿಲ್ಲದೆ ಏನೂ ಮಾಡಲಾರ. ಪರರ ಸಹಾಯದಿಂದಲೇ ಎಲ್ಲವನ್ನೂ ಸಾಧಿಸುತ್ತಾನೆ. ಅದೇರೀತಿಯಲ್ಲಿ ಯಾರು ಸ್ವಾಭಾವಿಕವಾಗಿ ಪರಿಶುದ್ಧರೋ ಅವರು ತಮ್ಮ ಹಿಂದಿನ ಜನ್ಮದ ಪ್ರಯತ್ನ ಹಾಗು ಪುಣ್ಯದಿಂದಾಗಿ ಈಗ ಸುಲಭವಾಗಿ ಷಟಅಭಿಜ್ಞಾಗಳನ್ನು ಸಾಧಿಸುತ್ತಾರೆ. ಹೇಗೆಂದರೆ ಚತುರ ವ್ಯಾಪಾರಿಯ ಹಾಗೆ ಒಂಟಿಯಾಗಿಯೇ ಸಾಧಿಸುತ್ತಾರೆ. ಆದರೆ ಯಾರ ಚಿತ್ತವು ಪಾಪದಿಂದ ಕತ್ತಲಾಗಿದೆಯೋ ಅವರು ಪರರ ಸಹಾಯದಿಂದ ವ್ಯಾಪಾರ ಮಾಡುವವನ ರೀತಿ ಅವಲಂಬಿತರಾಗಿ ನಂತರ ಗುರಿ ಮುಟ್ಟುತ್ತಾರೆ.

ಮತ್ತೆ ಓ ಮಹಾರಾಜ, ಪಠಣವಾಗಲಿ, ಪ್ರಶ್ನಿಸುವಿಕೆಯಾಗಲಿ, ನಿಮರ್ಿಸುವ ಕಾರ್ಯವಾಗಲಿ, ದಾನ ಸ್ವೀಕಾರವಾಗಲಿ ಇವೆಲ್ಲಾ ಅವರ ಕರ್ತವ್ಯವೇ ಆಗಿದೆ. ಓ ಮಹಾರಾಜ, ಇದು ಹೇಗೆಂದರೆ ಮಂತ್ರಿಯಾಗಲಿ, ಸೈನಿಕನಾಗಲಿ ಅಥವಾ ದೂತನಾಗಲಿ ಅಥವಾ ಅಂಗರಕ್ಷಕನಾಗಲಿ, ಅಥವಾ ಸೇವಕನಾಗಲಿ ಅವರೆಲ್ಲಾ ವಿಶೇಷತಃ ಸೇವೆ ಮಾಡುವವರು ಹಾಗು ರಾಜನಿಗೆ ಸಹಾಯಕರಾಗಿಯೇ ಇದ್ದಾರೆ. ಆದರ ರಾಜನು ಅವರಿಗೆ ಯಾವುದಾದರೂ ಕೆಲಸ ಹೇಳಿದರೆ ಅವರೆಲ್ಲಾ ಆ ಕಾರ್ಯಗಳನ್ನು ಮಾಡಿ ಸಹಾಯ ಮಾಡುವರು. ಆದ್ದರಿಂದಾಗಿ ಇವೆಲ್ಲಾ ಪ್ರಾಪ್ತಿಗಾಗಿ ಇರುವ ಸಹಾಯಕ ಅಂಶಗಳೇ ಆಗಿವೆ. ಓ ಮಹಾರಾಜ, ಬರುವ ಎಲ್ಲರೂ ಸ್ವಾಭಾವಿಕವಾಗಿಯೇ ಪರಿಶುದ್ಧರೇ ಇದ್ದರೆ ಗುರುವಿಗೆ ಮಾಡಬೇಕಾದ್ದು ಏನೂ ಇರುವುದಿಲ್ಲ. ಆದರೆ ಎಲ್ಲಿಯವರೆಗೆ ಶಿಷ್ಯತ್ವದ ಅಗತ್ಯವಿರುವುದೋ, ಅಲ್ಲಿಯವರೆಗೆ ಅಂತಹ ಜನರು ಸಹಾ ಇರುತ್ತಾರೆ. ಓ ಮಹಾರಾಜ, ಮಹಾಥೇರನಾದ ಧಮ್ಮಸೇನಾನಿ ಸಾರಿಪುತ್ತರಿಗೇ ಶಿಷ್ಯತ್ವವಿಲ್ಲದೆ, ಅರಹಂತ ಪ್ರಾಪ್ತಿಯು ಅಸಾಧ್ಯವಾಯಿತು, ಕಷ್ಟಕರವಾಯಿತು (ಇನ್ನೂ ಸಾಮಾನ್ಯರ ಬಗ್ಗೆ ಹೇಳಬೇಕಿಲ್ಲ). ಆದ್ದರಿಂದ ಓ ಮಹಾರಾಜ, ತಿಪಿಟಕದ ಕೇಳುವಿಕೆ (ಓದುವಿಕೆ) ಪಠಣ, ಪ್ರಶ್ನಿಸುವಿಕೆ ಮತ್ತು ಇವೆಲ್ಲದರಲ್ಲಿ ಅವರು ತಲ್ಲೀನರಾದಾಗ ಮಾತ್ರ ಅವರು ತಡೆಗಳಿಂದ ಮುಕ್ತರಾಗಿ ಅರಹತ್ವ ಪ್ರಾಪ್ತಿಮಾಡಬಲ್ಲರು.

ಭಂತೆ ನಾಗಸೇನ, ಅತ್ಯಂತ ಸಮಂಜಸವಾಗಿ ಈ ಜಟಿಲ ಸಮಸ್ಯೆಗೆ ಉತ್ತರವನ್ನು ನೀವು ನನಗೆ ಅಥರ್ೈಸಿದಿರಿ ಮತ್ತು ನಾನು ನಿಮ್ಮ ಉತ್ತರವನ್ನು ಒಪ್ಪುತ್ತೇನೆ.


2. ಖೀಣಾಸವ ಭಾವ ಪನ್ಹೋ (ಕ್ಷೀಣಾಸ್ರವವುಳ್ಳವರ ಬಗ್ಗೆ ಪ್ರಶ್ನೆ)

ಭಂತೆ ನಾಗಸೇನ, ನೀವು ಹೇಳುವಿರಿ: ಯಾವ ಗೃಹಸ್ಥನೇ ಆಗಿರಲಿ, ಅರಹತ್ವವನ್ನು ಪ್ರಾಪ್ತಿಮಾಡಿದಾಗ ಆತನಿಗೆ ಮುಂದೆ ಎರಡು ಸ್ಥಿತಿಗಳು ಮಾತ್ರ ಸಾಧ್ಯವಿರುತ್ತದೆ. ಬೇರ್ಯಾವುದು ಅಲ್ಲ. ಒಂದು ಆತನು ಆ ದಿನವೇ ಸಂಘಕ್ಕೆ ಸೇರುತ್ತಾನೆ, ಇಲ್ಲವೆ ಪರಿನಿಬ್ಬಾಣ ಪಡೆಯುತ್ತಾನೆ.

ಈಗ ಭಂತೆ ನಾಗಸೇನ, ಆತನು ಆ ದಿನವೇ ಗುರುವನ್ನು ಪಡೆಯದಿದ್ದರೆ ಅಥವಾ ಪಿಂಡಪಾತ್ರೆಯನ್ನು ಅಥವಾ ಚೀವರಗಳನ್ನು ಪಡೆಯದಿದ್ದರೆ ಆತನು ಜೀವದಿಂದಿರುವನೊ ಅಥವಾ ಅರಹಂತನಾಗಿ ಭಿಕ್ಷುವಾಗುವನೋ? ಅಥವಾ ಪರಿನಿಬ್ಬಾಣ ಪಡೆಯುವನೋ? ಅಥವಾ ಬೇರೊಬ್ಬ ಅರಹಂತರು ಇದ್ದಿಬಲದಿಂದಾಗಿ ಆತನಿಗೆ ಕಾಣಿಸಿಕೊಂಡು ಆತನನ್ನು ಸಂಘಕ್ಕೆ ಸೇರಿಸಿಕೊಳ್ಳುವನೋ? (157)

ಓ ಮಹಾರಾಜ, ಅವರು ತಾವೇ ಅರಹಂತರೆಂದು ಘೋಷಿಸಿ ಸೇರಿಕೊಳ್ಳಲಾರರು. ತಾವಾಗಿಯೇ ತಮ್ಮಿಂದಲೇ ಅಪ್ಪಣೆ ಹೇಳಿ ಸಂಘಕ್ಕೆ ಸೇರುವುದು ಒಂದುರೀತಿಯ ತಪ್ಪು ಆಗುತ್ತದೆ ಮತ್ತು ಅವರು ಆ ದಿನದ ನಂತರ ಇರಲಾರರು. ಬೇರೊಬ್ಬ ಅರಹಂತರು ಅವರಿಗೆ ಸಿಗದಿದ್ದರೆ ಅವರು ಅದೇದಿನ ಪರಿನಿಬ್ಬಾಣ ಪಡೆಯುವರು.

ಹಾಗಾದರೆ ಭಂತೆ ನಾಗಸೇನ, ಯಾವರೀತಿಯಲ್ಲಿ ಅವರು ಪ್ರಾಪ್ತಿಮಾಡಿದರೂ, ಅವರ ಅರಹಂತ ಸ್ಥಿತಿಯು ವ್ಯರ್ಥವಾಗಿ ಕಳೆದುಹೋಗುತ್ತದೆ ಹಾಗು ಪರಿನಿಬ್ಬಾಣ ಲಭಿಸುತ್ತದೆ.

ಓ ಮಹಾರಾಜ, ಇದಕ್ಕೆ ಕಾರಣ ಗೃಹಸ್ಥತ್ವವೇ ಆಗಿದೆ. ಅಂತಹ ತಪ್ಪಾದ ಸ್ಥಿತಿಯು ಮತ್ತು ಪರಿಸ್ಥಿತಿಯು ದುರ್ಬಲತೆಯಿಂದಲೇ ಗೃಹಸ್ಥರು ಆ ದಿನವೇ ಸಂಘ ಸೇರುವರು ಅಥವಾ ಪರಿನಿಬ್ಬಾಣ ಪಡೆಯುವರು. ಇದರಲ್ಲಿ ಅರಹಂತರ ದೋಷವಿಲ್ಲ. ಓ ಮಹಾರಾಜ, ಗೃಹಸ್ಥರ ತಪ್ಪೇ ಆಗಿದೆ. ಏಕೆಂದರೆ ಅವರು ಅಷ್ಟು ಬಲಿಷ್ಠರಾಗಿಲ್ಲ.

ಓ ಮಹಾರಾಜ, ಇದು ಹೇಗೆಂದರೆ, ಆಹಾರವು ದೇಹವನ್ನು ವಿಕಾಸಗೊಳಿಸುವುದು ಮತ್ತು ಎಲ್ಲಾ ಜೀವಿಗಳನ್ನು ಕಾಪಾಡುವುದು. ಆದರೆ ಅಜೀರ್ಣತೆಯಿಂದಾಗಿ ಆ ಶಕ್ತಿಯುತ ಆಹಾರವೇ ಆತನಿಗೆ ಹಾನಿ ಉಂಟುಮಾಡುತ್ತದೆ. ಅದೇರೀತಿ ಗೃಹಸ್ಥರ ಅರಹತ್ವ ಪ್ರಾಪ್ತಿಮಾಡಿದರೆ, ಆಗ ಆತನಿಗೆ ಪರಿಸ್ಥಿತಿಗಳು ವಿಷಮವಾಗಿ ಸ್ಥಿತಿಯ ದುರ್ಬಲತೆ ಯಿಂದಾಗಿ ಆತನು ಆ ದಿನವೇ ಸಂಘ ಸೇರುತ್ತಾನೆ ಅಥವಾ ಪರಿನಿಬ್ಬಾಣ ಪಡೆಯುತ್ತಾನೆ.

ಅಥವಾ ಓ ಮಹಾರಾಜ, ಇದು ಹೇಗೆಂದರೆ ಚಿಕ್ಕ ಹುಲ್ಲಿನ ಎಲೆಯ ಮೇಲೆ ದೊಡ್ಡ ಬಂಡೆಯನ್ನು ಇಟ್ಟರೆ, ಅದರ ದುರ್ಬಲತೆಯಿಂದಾಗಿ ಹರಿದುಹೋಗಬಹುದು. ಅದೇರೀತಿಯಲ್ಲಿ ಗೃಹಸ್ಥನು ಅರಹಂತನಾದರೆ, ಅರಹತ್ವ ಸ್ಥಿತಿಯನ್ನು ಸಲಹಲಾರದಂತಹ ಆ ಸ್ಥಿತಿಯಲ್ಲಿ ಆತನು ಸಂಘಕ್ಕೆ ಸೇರುತ್ತಾನೆ. ಇಲ್ಲವೇ ಅದೇ ದಿನದಲ್ಲಿ ಪರಿನಿಬ್ಬಾಣ ಪಡೆಯುತ್ತಾನೆ.

ಇದು ಹೇಗೆಂದರೆ ಓ ಮಹಾರಾಜ, ಒಬ್ಬ ಬಡ ದುರ್ಬಲನು ಅಥವಾ ಕೆಳಜನ್ಮದವನು ಮತ್ತು ಅಲ್ಪ ಸಾಮಥ್ರ್ಯವುಳ್ಳವನು ಒಂದು ದೊಡ್ಡ ಸಾಮ್ರಾಜ್ಯಕ್ಕೆ ಅಧಿಪತಿಯಾದರೆ ಆತನು ಅದರ ಭವ್ಯತೆಗೆ ಸಲಹಲು ಅಸಮರ್ಥನಾಗುತ್ತಾನೆ. ಅದೇರೀತಿಯಲ್ಲಿ ಗೃಹಸ್ಥನು ಅರಹತ್ವ ಪಡೆದರೆ ಅದೇದಿನ ಸಂಘವನ್ನು ಪ್ರವೇಶಿಸುತ್ತಾನೆ ಅಥವ ಅದೇದಿನ ಪರಿನಿಬ್ಬಾಣ ಪಡೆಯುತ್ತಾನೆ.


ಬಹು ಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ವಿವರಣೆಯನ್ನು ನಾನು ಒಪ್ಪುತ್ತೇನೆ.

3. ಖೀಣಾಸವ ಸತಿಸಮ್ಮೋಹ ಪನ್ಹೋ (ಅರಹಂತರ ಸ್ಮೃತಿ ಪ್ರಶ್ನೆ)


ಭಂತೆ ನಾಗಸೇನ, ಅರಹಂತರು ಸ್ಮೃತಿಹೀನರಾಗಿರುವರೇ (ಎಚ್ಚರಿಕೆಯಿಲ್ಲದವರು ಆಗಿರುತ್ತಾರೆಯೇ?) (158)

ಓ ಮಹಾರಾಜ, ಸ್ಮೃತಿಹೀನತೆ ಅವರಿಂದ ತುಂಬಾ ದೂರ. ಅವರು ಎಂದಿಗೂ ಎಚ್ಚರಿಕೆಹೀನರಾಗುವುದಿಲ್ಲ.
ಆದರೆ ಅರಹಂತರು ತಪ್ಪು ಅಥವಾ ಉಲ್ಲಂಘನೆ ಮಾಡುತ್ತಾರೆಯೇ?

ಹೌದು ಮಹಾರಾಜ.

ಯಾವರೀತಿ?

ತಮ್ಮ ಕುಟೀರದ ಅಳತೆಯ ಬಗ್ಗೆ ತಪ್ಪು ಮಾಡಬಹುದು, ಅಕಾಲದಲ್ಲಿ ಆಹಾರ ಸೇವಿಸುವಿಕೆ, ಆಹ್ವಾನಿಸದೆ ಇದ್ದಾಗ ಆಹ್ವಾನಿಸಿದ್ದಾರೆ ಎಂದು ತಿಳಿಯುವಿಕೆ, ಹಾಗೆಯೇ ಆಹ್ವಾನಿಸಿದಾಗ ಮರೆಯುವುದು, ಇಂತಹ ಸಣ್ಣಪುಟ್ಟ ತಪ್ಪು ಅವರಲ್ಲಿ ಆಗುತ್ತದೆ.

ಆದರೆ ಭಂತೆ ನಾಗಸೇನ ನೀವು ಹೇಳುವಿರಿ: ಯಾರೆಲ್ಲ ತಪ್ಪು ಮಾಡುವರೋ, ಅದಕ್ಕೆ ಈ ಎರಡು ಕಾರಣಗಳಲ್ಲಿ ಒಂದು ಆಗಿರುತ್ತದೆ. ಅದೆಂದರೆ ಅಲಕ್ಷದಿಂದ (ಅನಾದರದಿಂದಾಗಿ) ಅಥವಾ ಅಜ್ಞಾನದಿಂದಾಗಿ.

ಹಾಗಿರುವಾಗ, ಇಲ್ಲಿ ಅರಹಂತರು ಅಲಕ್ಷದಿಂದಾಗಿ (ಆನಾದರದಿಂದಾಗಿ) ತಪ್ಪು ಮಾಡಿರುವರೇ?

ಇಲ್ಲ ಮಹಾರಾಜ.

ಹಾಗಾದರೆ ಅರಹಂತರು ಅನಾದರದಿಂದಾಗಿ ತಪ್ಪು ಮಾಡಿಲ್ಲ ಎಂದರೆ, ಅಜ್ಞಾನದಿಂದಲೇ ಅವರು ತಪ್ಪು ಮಾಡಿರಬೇಕಲ್ಲವೇ? (ಗೊಂದಲದಿಂದ ಕೂಡಿ ತಪ್ಪು ಮಾಡಿರಬೇಕಲ್ಲವೇ?)

ಇಲ್ಲ ಅರಹಂತರ ಸ್ಮೃತಿಯಲ್ಲಿ ಗೊಂದಲವಿರುವುದಿಲ್ಲ, ಆದರೂ ಅವರಿಂದ ತಪ್ಪಾಗಬಹುದು.

ಹಾಗಾದರೆ ನನಗೆ ಇದನ್ನು ಕಾರಣಸಹಿತ ವಿವರಿಸಿ, ಯಾವ ಕಾರಣದಿಂದಾಗಿ ಇದು ಸಂಭವಿಸುತ್ತದೆ.

ಓ ಮಹಾರಾಜ, ಎರಡು ರೀತಿಯ ತಪ್ಪುಗಳಿವೆ. ಒಂದು ಯಾವುದು ಪ್ರಾಪಂಚಿಕ ದೃಷ್ಟಿಯಲ್ಲಿ ಪಾಪವಾಗಿದೆಯೋ ಅದು ಮತ್ತು ಇನ್ನೊಂದು ಸಂಘದ ನಿಯಮಗಳಲ್ಲಿ ಉಲ್ಲಂಘನೆಯಾಗಿರುವುದು. ಯಾವುದು ಪ್ರಾಪಂಚಿಕರ ದೃಷ್ಟಿಯಲ್ಲಿ ಪಾಪವಾಗಿರುವುದು? ಅದೆಂದರೆ ಹತ್ಯೆ, ಕಳ್ಳತನ, ಮಿಥ್ಯಾಚಾರ, ಸುಳ್ಳು, ಚಾಡಿ, ಅಸಭ್ಯ ಮಾತು, ಕಾಡುಹರಟೆ, ದುರಾಸೆ, ಹಗೆತನ ಮತ್ತು ಮಿಥ್ಯಾದೃಷ್ಟಿ). ಇವು ಶೀಲಕ್ಕೆ ವಿರುದ್ಧವಾಗಿದೆ ಮತ್ತು ಯಾವುದು ಸಂಘದ ನಿಯಮಗಳ ಉಲ್ಲಂಘನೆಯಾಗಿದೆ? ಯಾವುದೆಲ್ಲ ಪ್ರಾಪಂಚಿಕತೆಯಲ್ಲಿ ಎತ್ತಿಹಿಡಿದಿದೆಯೋ ಅದೆಲ್ಲವೂ ಸಮಣರಿಗೆ ಅಸಮಂಜಸವಾಗಿದೆ. ಆದರೆ ಒಂದು ಮಾತು ನೆನಪಿಡಿ, ಇದು ಗೃಹಸ್ಥರ ದೃಷ್ಟಿಕೋನದಲ್ಲಿ ತಪ್ಪಲ್ಲ. ಅದೆಲ್ಲವನ್ನು ಭಿಕ್ಖುಗಳಾಗಿ ಭಗವಾನರು ನಿಯಮಗಳನ್ನು ಮಾಡಿದ್ದಾರೆ. ಆದರೆ ಅದನ್ನೆಲ್ಲಾ ಜೀವನ ಪರ್ಯಂತ ಮಾಡಬೇಕಿಲ್ಲ. ಮಧ್ಯಾಹ್ನದ ನಂತರ ಭೋಜನ ಮಾಡುವುದು ಪ್ರಾಪಂಚಿಕರ ದೃಷ್ಟಿಯಲ್ಲಿ ತಪ್ಪಲ್ಲ. ಆದರೆ ಜಿನಶಾಸನದಲ್ಲಿ ಇದು ತಪ್ಪಾಗಿದೆ. ಹಾಗೆಯೇ ಮರಗಿಡಗಳಿಗೆ ಹಾನಿಯುಂಟುಮಾಡುವುದು ಪ್ರಾಪಂಚಿಕರ ದೃಷ್ಟಿಯಲ್ಲಿ ತಪ್ಪಲ್ಲ, ಆದರೆ ಜಿನಶಾಸನದಲ್ಲಿ ಇದು ತಪ್ಪಾಗಿದೆ. ನೀರಿನಲ್ಲಿ ಆಟವಾಡುವುದು ಪ್ರಾಪಂಚಿಕರ ದೃಷ್ಟಿಯಲ್ಲಿ ತಪ್ಪಲ್ಲ. ಆದರೆ ವಿನಯದ ನಿಯಮದ ಪ್ರಕಾರ ಅದು ತಪ್ಪಾಗಿದೆ. ಇದೇರೀತಿಯಾದ ಹಲವು ನಿಯಮಗಳು ಪ್ರಾಪಂಚಿಕರ ದೃಷ್ಟಿಕೋನದಲ್ಲಿ ತಪ್ಪಲ್ಲ, ಆದರೆ ಜಿನಶಾಸನದ ಪ್ರಕಾರ ತಪ್ಪಾಗಿದೆ. ನಾನು ನಿಯಮ ಉಲ್ಲಂಘಿಸುತ್ತಾರೆ ಎಂದು ಹೇಳಿದ್ದು ಇವುಗಳನ್ನೇ. ಆದರೆ ಅರಹಂತರು ಪ್ರಾಪಂಚಿಕ ದೃಷ್ಟಿಕೋನದ ಯಾವುದೇ ಪಾಪವನ್ನು ಮಾಡಲಾರರು. ಆದರೆ ಸಂಘದ ನಿಯಮವು ಅವರಿಂದಲೂ ಉಲ್ಲಂಘನೆಯಾಗುವುದು. ಪ್ರತಿಯೊಂದನ್ನು ಅರಿಯುವುದು ಅಥವಾ ಅರಿತಿರುವುದು, ಅರಹಂತರ ವ್ಯಾಪ್ತಿಯಲ್ಲ, ಅಂತಹ ಮಹಾಶಕ್ತಿಯು ಅವರಲ್ಲಿಲ್ಲ. ಅವರಿಗೆ ಹಲವು ಸ್ತ್ರೀಯರ ಅಥವಾ ಪುರುಷರ ಹೆಸರಾಗಲಿ ಅಥವಾ ಕುಲದ ಹೆಸರಾಗಲಿ ತಿಳಿದಿರುವುದಿಲ್ಲ. ಭೂಮಿಯಲ್ಲಿರುವ ಹಲವು ರಸ್ತೆಗಳ ಹೆಸರು ಅಥವಾ ರಸ್ತೆಗಳೇ ತಿಳಿದಿರುವುದಿಲ್ಲ. ಆದರೆ ಪ್ರತಿ ಅರಹಂತರಿಗೆ ವಿಮುಕ್ತಿಯ ಬಗ್ಗೆ ತಿಳಿದಿರುತ್ತದೆ ಮತ್ತು ಅರಹಂತರು ಷಟಅಭಿಜ್ಞಾಗಳನ್ನು ಸಿದ್ಧಿಸಿರುತ್ತಾರೆ. ಅವೆಲ್ಲವೂ ಅವರ ಪರಿಧಿಯಲ್ಲಿರುತ್ತದೆ ಮತ್ತು ತಥಾಗತರು ಮಾತ್ರ ಸರ್ವವನ್ನು ತಿಳಿದವರಾಗಿರುತ್ತಾರೆ.

ಬಹುಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ವಿವರಣೆಯನ್ನು ನಾನು ಒಪ್ಪುವೆ.

4. ಲೊಕೆ ನತ್ಥಿಭಾವ ಪನ್ಹೋ (ಲೋಕದಲ್ಲಿ ಇಲ್ಲದಿರುವುದರ ಪ್ರಶ್ನೆ)


ಭಂತೆ ನಾಗಸೇನ, ನಾವು ಲೋಕದಲ್ಲಿ ಬುದ್ಧರನ್ನು ದಶರ್ಿಸಬಹುದು. ಹಾಗೆಯೇ ಪಚ್ಚೇಕ ಬುದ್ಧರನ್ನು ಮತ್ತು ತಥಾಗತರ ಶಿಷ್ಯರನ್ನು, ಚಕ್ರವತರ್ಿಗಳನ್ನು, ಮಹಾರಾಜರನ್ನು, ದೇವತೆಗಳನ್ನು ಮತ್ತು ಮನುಷ್ಯರನ್ನು ದಶರ್ಿಸಬಹುದು, ಹಾಗೆಯೇ ನಾವು ಬಡವ ಶ್ರೀಮಂತರನ್ನು, ಹಾಗೆಯೇ ಸುಖ-ದುಃಖಗಳನ್ನು ದಶರ್ಿಸಬಹುದು. ನಾವು ಪುರುಷರು ಸ್ತ್ರೀಯರಾಗಿರುವದನ್ನು ಹಾಗೆಯೇ ಸ್ತ್ರೀಯರು ಪುರುಷರಾಗಿರುವುದನ್ನು ದಶರ್ಿಸಬಹುದು. ಹಾಗೆಯೇ ಕುಶಲ, ಅಕುಶಲ ಕರ್ಮಗಳು ಅದರ ವಿಪಾಕದಿಂದಾಗಿ ಮೊಟ್ಟೆಗಳಲ್ಲಿ ಜೀವಿಗಳನ್ನು, ಜಲದಲ್ಲಿ ಜನಿಸುವ ಜೀವಿಗಳನ್ನು ಮತ್ತು ಸಂಸ್ತೆಜದ ಜೀವಿಗಳನ್ನು (ಬೆವರಿನಲ್ಲಿ ಹುಟ್ಟುವ) ಓಪಪಾತಿಕ ಜೀವಿಗಳನ್ನು ದಶರ್ಿಸಬಹುದು. ಹಾಗೆಯೇ ದ್ವೀಪಾದಿಗಳನ್ನು, ಚತುಷ್ಪಾದಿಗಳು, ಬಹುಪಾದಿಗಳನ್ನು ದಶರ್ಿಸಬಹುದು. ಅದರಂತೆಯೇ ಯಕ್ಷರನ್ನು, ರಾಕ್ಷಸರನ್ನು, ಕುಂಭಂಡರನ್ನು ಅಸುರ, ದಾನವ, ಗಂಧರ್ವ, ಪ್ರೇತ, ಪಿಶಾಚಿಗಳನ್ನು ಹಾಗೆಯೇ ಕಿನ್ನರ ಮಹೋರಗಾ, ನಾಗ, ಸುಪರ್ಣ, ಸಿದ್ಧ, ವಿದ್ಯಾಧರ ಇನ್ನಿತರರನ್ನು ದಶರ್ಿಸಬಹುದು. ಹಾಗೆಯೇ ಆನೆ, ಅಶ್ವ, ಗೋವುಗಳು, ಎಮ್ಮೆಗಳು, ಒಂಟೆಗಳು, ಕತ್ತೆಗಳು, ಮೇಕೆಗಳು, ಕುರಿಗಳು, ಜಿಂಕೆಗಳು, ಹಂದಿಗಳು, ಸಿಂಹಗಳು, ಹುಲಿಗಳು, ಚಿರತೆಗಳು, ಕರಡಿಗಳು, ತೋಳಗಳು, ನಾಯಿಗಳು, ನರಿಗಳು ಇನ್ನಿತರ ಪ್ರಾಣಿಗಳನ್ನು ಕಾಣಬಹುದು. ಹಾಗೆಯೇ ಹಲವಾರು ವಿಧದ ಪಕ್ಷಿಗಳನ್ನು ದಶರ್ಿಸಬಹುದು, ಚಿನ್ನ, ಬೆಳ್ಳಿ, ಮುತ್ತು, ವಜ್ರಗಳು, ಶಂಬ, ಶಿಲ, ಪವಾಳ (ಹವಳ), ಮಾಣಿಕ್ಯ, ಮಿಸಾರಕಲ್ಲು, ವೆಳೂರಿಯೋ (ಬೆಕ್ಕಿನ ಕಣ್ಣಿನ ರತ್ನ) ವಜ್ರ, ಫಳಿಕ, ಕಬ್ಬಿಣ, ತಾಮ್ರ, ಕಂಚುಗಳನ್ನು ದಶರ್ಿಸಬಹುದು. ಹಾಗೆಯೇ ನಾರುಮುಡಿ, ರೇಷ್ಮೆ, ಹತ್ತಿ, ನಾಣವಸ್ತ್ರ (ಸೆಣಬು) ಭಂಗವಸ್ತ್ರ, ಕಂಬಳಿ (ವುಲನ್)ಗಳನ್ನು ದಶರ್ಿಸಬಹುದು. ಹಾಗೆಯೇ ಅಕ್ಕಿಯನ್ನು, ಭತ್ತವನ್ನು, ಬಾಲರ್ಿಯನ್ನು, ಸಜ್ಞೆ ಕುಂದ್ರುಸ ಧಾನ್ಯ, ಬೇಳೆಗಳು, ಗೋಧಿ, ಎಣ್ಣೆಬೀಜಗಳು ಇತ್ಯಾದಿಗಳನ್ನು ದಶರ್ಿಸಬಹುದು. ಹಾಗೆಯೇ ಸೌಗಂಧಿಕ ಬೇರುಗಳು, ಸಸ್ಯರಸ, ಸಸ್ಯತಿರುಳು, ತೊಗಟೆ, ಎಲೆಗಳು, ಹೂಗಳು, ಹಣ್ಣು-ಕಾಯಿಗಳನ್ನು ದಶರ್ಿಸಬಹುದು. ಹಾಗೆಯೇ ಹುಲ್ಲು, ಬಳ್ಳಿ, ಗಿಡಮೂಲಿಕೆ, ಮರಗಳು ಮತ್ತು ಔಷಧಿಸಸತ್ಯಗಳು, ಅರಣ್ಯಗಳು, ನದಿಗಳು, ಪರ್ವತಗಳು, ಸಾಗರಗಳು, ಮೀನುಗಳು, ಆಮೆಗಳು ಇವೆಲ್ಲವನ್ನು ಈ ಜಗತ್ತಿನಲ್ಲಿ ಕಾಣಬಹುದು. ಆದರೆ ಭಂತೆ ಯಾವುದನ್ನು ನಾವು ಈ ಲೋಕಗಳಲ್ಲೇ ದಶರ್ಿಸಲು ಆಗುವುದಿಲ್ಲ? ಯಾವುದನ್ನು ನಾವು ಹುಡುಕಲು ಆಗುವುದಿಲ್ಲ? ಯಾವುದು ಈ ಜಗತ್ತಿನಲ್ಲಿ ಇಲ್ಲ ಹೇಳಿ? (159)

ಓ ಮಹಾರಾಜ, ಈ ಮೂರನ್ನು ಈ ಲೋಕದಲ್ಲಿ ದಶರ್ಿಸಲಾಗುವುದಿಲ್ಲ, ಹುಡುಕಲಾಗುವುದಿಲ್ಲ, ಯಾವುದದು? ಸಚೇತನಾ (ಅರಿವುಳ್ಳದ್ದನ್ನು) ಮತ್ತು ಅಚೇತನಾ (ಅರಿವಿಲ್ಲದಿರುವುದು) ಗಳಲ್ಲಿ ಅಜರಾಮರತೆಯನ್ನು (ನಿತ್ಯತೆಯನ್ನು) ದಶರ್ಿಸಲಾಗುವುದಿಲ್ಲ. ಸಂಖಾರಗಳಲ್ಲಿ ನಿತ್ಯವಾದದ್ದು ಇಲ್ಲ (ಎಲ್ಲವೂ ಅನಿತ್ಯಕರವಾಗಿದೆ) ಹಾಗೆಯೇ ಪರಮಾಥರ್ಿಕವಾಗಿ ಜೀವಿ (ಆತ್ಮ/ವ್ಯಕ್ತಿ) ಎಂಬುದೇ ಇಲ್ಲವಾಗಿದೆ. ಹೀಗೆ ಮಹಾರಾಜ, ಈ ಮೂರು ಲೋಕಗಳಲ್ಲೇ ಇಲ್ಲವಾಗಿದೆ.


ಸಾಧು ಭಂತೆ ನಾಗಸೇನ, ನಿಮ್ಮ ಸತ್ಯ ಅಭಿಪ್ರಾಯವನ್ನು ನಾನು ಒಪ್ಪುವೆನು.

5. ಅಕಮ್ಮಜಾದಿ ಪನ್ಹೋ (ಕರ್ಮ-ಕಾರಣಾತೀತ ಪ್ರಶ್ನೆ)

ಭಂತೆ ನಾಗಸೇನ, ನಾವು ಈ ಲೋಕದಲ್ಲಿ ಕಮ್ಮದಿಂದಾಗಿ ಜನಿಸಿದ ಜೀವಿಗಳನ್ನು ಹುಡುಕಬಹುದು. ಹಲವು ಜೀವಿಗಳು ಕಾರಣದ ಪರಿಣಾಮದಿಂದಾಗಿ ಉಂಟಾಗುತ್ತದೆ ಮತ್ತು ಕೆಲವು ಋತುನಿಯಮಗಳಿಗೆ ಅನುಸಾರವಾಗಿ ಉದಯಿಸುತ್ತದೆ. ಆದರೆ ಭಂತೆ ಮೂರರ ಗುಂಪಿಗೂ ಅನ್ವಯಿಸದ ಯಾವುದಾದರೂ ಇದೆಯೇ? (160)

ಒ ಮಹಾರಾಜ, ಅಂತಹ ಎರಡು ವಿಷಯಗಳಿವೆ. ಯಾವುವವು? ಆಕಾಶ ಓ ಮಹಾರಾಜ ಮತ್ತು ನಿಬ್ಬಾಣ ಓ ಮಹಾರಾಜ.

ಭಂತೆ ನಾಗಸೇನ, ದಯವಿಟ್ಟು ಬುದ್ಧ ಭಗವಾನರ ವಚನಗಳನ್ನು ಕಲುಷಿತ ಗೊಳಿಸಬೇಡಿ, ಅಥವಾ ನಿಮಗೆ ಅರಿವಿಲ್ಲದೆಯೇ ಪ್ರಶ್ನೆಗೆ ಉತ್ತರಿಸುವುದನ್ನು ಮಾಡಬೇಡಿ.

ನಾನು ಏನು ಹೇಳಿದೆ ಎಂದು ಓ ಮಹಾರಾಜ, ನನ್ನನ್ನು ಹೀಗೆ ಸಂಭೋಧಿಸುತ್ತಿರುವಿರಿ?

ಭಂತೆ ನಾಗಸೇನ, ನೀವು ಆಕಾಶದ ಬಗ್ಗೆ ಹೇಳಿದಿರಿ. ಅದು ಸರಿಯಾಗಿಯೇ ಇದೆ. ಆದರೆ ಭಗವಾನರು ನೂರಾರು ವಿಧಗಳಿಂದ ನಿಬ್ಬಾಣದ ಸಾಕ್ಷಾತ್ಕಾರಕ್ಕೆ ಮಾರ್ಗಗಳನ್ನು ಹೇಳಿದ್ದಾರೆ, ಆದರೆ ನೀವು ನಿಬ್ಬಾಣವನ್ನು ಯಾವುದೇ ಕಾರಣದ ಪರಿಣಾಮವಲ್ಲ ಎಂದು ಹೇಳುತ್ತಿರುವಿರಿ.


ಇದರ ಬಗ್ಗೆ ಸಂಶಯವೇ ಬೇಡ ಓ ಮಹಾರಾಜ, ಭಗವಾನರು ನಿಬ್ಬಾಣದ ಸಾಕ್ಷಾತ್ಕಾರಕ್ಕಾಗಿ ನೂರಾರು ವಿಧಗಳಿಂದ, ಕಾರಣಗಳಿಂದ ಮಾರ್ಗಗಳನ್ನು ನೀಡಿದ್ದಾರೆ. ಆದರೆ ಸ್ವತಃ ಭಗವಾನರೇ ಎಂದಿಗೂ ನಿಬ್ಬಾಣವನ್ನು, ಈ ಕಾರಣದಿಂದ ನಿಬ್ಬಾಣವನ್ನು ಉದಯಿಸುವಂತೆ ಮಾಡಬಹುದು ಎಂದು ಎಂದಿಗೂ ಹೇಳಿಲ್ಲ.

ಓ ಭಂತೆ ನಾಗಸೇನ, ಈಗ ನಾವು ಕತ್ತಲೆಯಿಂದ ಮತ್ತಷ್ಟು ಕತ್ತಲೆಗೆ ಹೋದಂತೆ ಆಯಿತು, ಕಾಡಿನಿಂದ ದಟ್ಟ ಅರಣ್ಯಕ್ಕೆ ಹೋದಂತೆ ಆಯಿತು. ಪೊದೆಗಳಿಂದ ದಟ್ಟ ಪೊದೆಗಳಿಗೆ ಹೋದಂತೆ ಆಯಿತು. ನೀವು ಹೇಳುವ ಪ್ರಕಾರ ನಿಬ್ಬಾಣದ ಸಾಕ್ಷಾತ್ಕಾರಕ್ಕೆ ಕಾರಣವಿದೆ, ಆದರೆ ನಿಬ್ಬಾಣ ಉದಯಿಸುವುದಕ್ಕೆ ಯಾವ ಕಾರಣವೂ ಇಲ್ಲ. ಆದರೆ ಭಂತೆ ನಾಗಸೇನ, ನಿಬ್ಬಾಣ ಸಾಕ್ಷಾತ್ಕಾರಕ್ಕೆ ಕಾರಣವಿರಬೇಕಲ್ಲವೇ? ಆಗ ಮಾತ್ರ ನಾವು ನಿಬ್ಬಾಣದ ಉದಯದ ಕಾರಣದ ಬಗ್ಗೆ ನಿರೀಕ್ಷಿಸಬಹುದು. ಹೇಗೆಂದರೆ ಭಂತೆ ನಾಗಸೇನರವರೇ, ಮಗನಿಗೆ ತಂದೆಯಿರುತ್ತಾನೆ. ಆದ್ದರಿಂದ ನಾವು ತಂದೆಗೂ ತಂದೆಯಿದ್ದಾನೆ ಎಂದು ನಿರೀಕ್ಷಿಸಬಹುದು ಅಥವಾ ಶಿಷ್ಯನಿಗೆ ಗುರುವಿದ್ದಾನೆ ಎಂದಮೇಲೆ, ಗುರುವಿಗೂ ಗುರು ಇರಲೇಬೇಕಲ್ಲವೇ? ಅಥವಾ ಬೀಜದಿಂದ ಸಸ್ಯ ಬಂತು ಎಂದಮೇಲೆ ಜೀಜಕ್ಕೂ ಮೂಲ ಬೀಜವೇ ಅಲ್ಲವೇ? ಅದೇರೀತಿಯಲ್ಲಿ ಭಂತೆ ನಾಗಸೇನ, ನಿಬ್ಬಾಣದ ಸಾಕ್ಷಾತ್ಕಾರಕ್ಕೆ ಕಾರಣವಿದ್ದಮೇಲೆ ನಾವು ನಿಬ್ಬಾಣದ ಉದಯಕ್ಕೂ ಕಾರಣವಿದೆ ಎಂದು ನಿರೀಕ್ಷೆ ಮಾಡಬಹುದಲ್ಲವೇ? ಹೇಗೆ ನಾವು ಮರದ ಅಥವಾ ಬಳ್ಳಿಯ ಶಿಖರವನ್ನು (ತುತ್ತ ತುದಿ) ನೋಡಿದಾಗ ಅದರ ಮಧ್ಯಭಾಗ ಮತ್ತು ಬೇರು ಸಹಾ ಇದೆ ಎಂದು ತೀಮರ್ಾನಿಸುವುದಿಲ್ಲವೇ?

ಓ ಮಹಾರಾಜ, ನಿಬ್ಬಾಣವು ಅನುತ್ಪಾದನೀಯವಾಗಿದೆ. ಆದ್ದರಿಂದಾಗಿ ಅದರ ಉದಯಕ್ಕಾಗಿ ಯಾವ ಕಾರಣವನ್ನು ಪೋಷಿಸಿಲ್ಲ.

ಓ ಭಂತೆ ನಾಗಸೇನ, ಈಗ ಬನ್ನಿ, ಇದಕ್ಕೆ ಕಾರಣವನ್ನು ತಿಳಿಸಿ, ಚಚರ್ೆಯಿಂದ ಮನವರಿಕೆ ಮಾಡಿ, ಏನೆಂದರೆ ನಿಬ್ಬಾಣ ಸಾಕ್ಷಾತ್ಕಾರಕ್ಕೆ ಕಾರಣವಿದೆ. ಆದರೆ ನಿಬ್ಬಾಣಕ್ಕೆ ಕಾರಣವಿಲ್ಲ.

ಹಾಗಾದರೆ ಓ ಮಹಾರಾಜ, ಗಮನವಿಟ್ಟು ಕೇಳಿ, ಚೆನ್ನಾಗಿ ಗ್ರಹಿಸಿ. ನಾನು ಇದರ ಬಗ್ಗೆ ವಿವರಿಸುವೆ. ಓ ಮಹಾರಾಜ, ಮಾನವನೊಬ್ಬನು ತನ್ನ ಸಾಮಾನ್ಯ ಶಕ್ತಿಯಿಂದ ಹಿಮಾಲಯ ಪರ್ವತ ಏರಬಹುದೇ?

ಹೌದು ಆತನು ಹತ್ತಬಲ್ಲನು.

ಆದರೆ ಮಾನವನೊಬ್ಬನು ತನ್ನ ಸಾಮಾನ್ಯ ಶಕ್ತಿಯಿಂದ ಹಿಮಾಲಯ ಪರ್ವತವನ್ನೇ ಇಲ್ಲಿಗೆ ತರಲು ತರಬಹುದೇ?
ಖಂಡಿತ ಸಾಧ್ಯವಿಲ್ಲ ಭಂತೆ.

ಇದೇರೀತಿಯೇ ನಿಬ್ಬಾಣದ ಸಾಕ್ಷಾತ್ಕಾರಕ್ಕೆ ಕಾರಣವನ್ನು ತಿಳಿಸಬಹುದು, ಆದರೆ ನಿಬ್ಬಾಣಕ್ಕೆ ಕಾರಣವಿಲ್ಲವಾಗಿದೆ ಮತ್ತು ಓ ಮಹಾರಾಜ ಮಾನವನೊಬ್ಬನು ತನ್ನ ಸಾಮಾನ್ಯ ಶಕ್ತಿಯಿಂದ ಮಹಾ ಸಮುದ್ರವನ್ನು ಹಡಗಿನಿಂದ ದಾಟಬಲ್ಲನೆ ಮತ್ತು ನಂತರದ ದಡಕ್ಕೂ ಹೋಗಬಲ್ಲನೇ?

ಹೌದು ಆತನು ಹೋಗಬಲ್ಲನು.

ಆದರೆ ಮಾನವನೊಬ್ಬನು ತನ್ನ ಸಾಧಾರಣ ಶಕ್ತಿಯಿಂದ ಸಾಗರದ ಆಚೆಯಲ್ಲಿರುವ ಆ ದಡವನ್ನು ಇಲ್ಲಿಗೆ ತರಲು ಸಾಧ್ಯವೇ?


ಖಂಡಿತ ಸಾಧ್ಯವಿಲ್ಲ ಭಂತೆ.

ಒಳ್ಳೆಯದು, ಹೀಗೆಯೇ ನಿಬ್ಬಾಣದ ಸಾಕ್ಷಾತ್ಕಾರದ ಕಾರಣವನ್ನು ವಿವರಿಸಲಾಗಿದೆ, ಆದರೆ ನಿಬ್ಬಾಣದ ಉದಯದ ಕಾರಣವನ್ನು ವಿವರಿಸಿಲ್ಲ ಮತ್ತು ಏಕೆ ಹೀಗೆ? ಏಕೆಂದರೆ ನಿಬ್ಬಾಣವು ಅಸಂಖತ ಧಮ್ಮವಾಗಿದೆ (ಸ್ಥಿತಿಯಿಲ್ಲದ/ಅಕಾರಣೀಯ/ಅನವಲಂಬಿತ ವಾದುದು).



ಏನು ಭಂತೆ ನಿಬ್ಬಾಣವು ಅಸಂಖತ ಧಮ್ಮವೇ?

ಹೌದು ಮಹಾರಾಜ, ನಿಬ್ಬಾಣವು ಅಸಂಖತ ಧಮ್ಮವಾಗಿದೆ.

ಭಂತೆ ಅದನ್ನು ಒಟ್ಟಿಗೆ ಇಡಲಾಗುವುದಿಲ್ಲವೇ?

ಇಲ್ಲ ಓ ಮಹಾರಾಜ, ನಿಬ್ಬಾಣವು ಅಸಂಯುಕ್ತವಾದುದು, ಯಾವುದರಿಂದಲೂ ರಚಿತವಾಗದಂತಹುದು. ಓ ಮಹಾರಾಜ, ಅದು ಉತ್ಪನ್ನವಲ್ಲ ಹಾಗೆಯೇ ಅನುತ್ಪನ್ನವೂ ಅಲ್ಲ. ಹಾಗೆಯೇ ಭವಿಷ್ಯಕಾಲವೂ ಅಲ್ಲ. ಹಾಗೆಯೇ ವರ್ತಮಾನವೂ ಅಲ್ಲ. ಅದನ್ನು ಚಕ್ಷುವಿಞ್ಞಾನದಿಂದ ಅರಿಯುವಂತಹದಲ್ಲ. ಹಾಗೆಯೇ ಶ್ರೋತವಿಞ್ಞಾನದಿಂದಲೂ ಅರಿಯುವಂತಹುದಲ್ಲ. ಹಾಗೆಯೇ ನಾಸಿಕ/ಜಿಹ್ವಾ ವಿನ್ಯಾನದಿಂದಲೂ ಅರಿಯಲು ಆಗುವುದಿಲ್ಲ. ಹಾಗೆಯೇ ಕಾಯವಿನ್ಯಾನದಿಂದಲೂ ಅರಿಯಲು ಅಗುವುದಿಲ್ಲ.
ಓಹ್ ಭಂತೆ ನಾಗಸೇನ, ಒಂದುವೇಳೆ ನಿಬ್ಬಾಣವು ಉತ್ಪನ್ನವಲ್ಲದಿದ್ದರೆ, ಅನುತ್ತನ್ನವೂ ಅಲ್ಲದಿದ್ದರೆ, ಉತ್ಪಾದನೀಯವೂ ಅಲ್ಲದಿದ್ದರೆ, ಅತೀತ, ಭವಿಷ್ಯ ವರ್ತಮಾನವೂ ಅಲ್ಲದಿದ್ದರೆ, ಇಂದ್ರೀಯಗಳಂತ ಅರಿಯಲು ಆಗದಿದ್ದರೆ ಭಂತೆ ನಾಗಸೇನ ನಿಬ್ಬಾಣದಲ್ಲಿ ಏನೂ ಇಲ್ಲವಾಗಿದೆ, ನಿಬ್ಬಾಣದಂತಹ ವಿಷಯವೇ/ಸ್ಥಿತಿಯೇ ಇಲ್ಲವಾಗಿದೆ.

ಓ ಮಹಾರಾಜ, ನಿಬ್ಬಾಣವು ಇದೆ ಮತ್ತು ಅದನ್ನು ಮನಸ್ಸಿನಿಂದಲೇ ಅರಿಯಲು ಸಾಧ್ಯ (ಮನೋವಿಞ್ಞಾನದಿಂದಲೇ ಅರಿಯಲು ಸಾಧ್ಯ). ವಿಶುದ್ಧವಾದ ಮನಸ್ಸಿನಿಂದ, ಸುಶುದ್ಧಗೊಳಿಸಿದ ಮತ್ತು ನೇರವಾದ, ಅನಾವರಣಗೊಂಡ, ನಿರಾಮಿಷದಿಂದ ಪ್ರತಿಷ್ಠಿತರಾದ ಆರ್ಯಶ್ರಾವಕರು ನಿಬ್ಬಾಣವನ್ನು ಸಾಕ್ಷಾತ್ಕರಿಸುವರು.

ಭಂತೆ, ಹಾಗಾದರೆ ನಿಬ್ಬಾಣ ಎಂದರೇನು? ಇದನ್ನು ಉಪಮೆಗಳ ಮೂಲಕ ವಿವರಿಸಬಹುದೇ? ಇದನ್ನು ಉಪಮೆಗಳ ಮೂಲಕ ಎಲ್ಲಿಯವರೆಗೆ ಚಚರ್ಿಸಿ ವಿವರಿಸಬಹುದೋ ವಿವರಿಸಿ.

ಓ ಮಹಾರಾಜ, ವಾಯುವಿನಂತಹ ವಸ್ತುವಿದೆಯೇ?

ಖಂಡಿತ ಇದೆ.

ಓ ಮಹಾರಾಜ, ಅದನ್ನು ತೋರಿಸಿ, ಅದು ಯಾವ ಬಣ್ಣ, ಯಾವ ಆಕಾರ, ಅದು ತೆಳ್ಳನೆಯದೆ ಅಥವಾ ದಪ್ಪಗಿರುವುದೇ ಅಥವಾ ಸಣ್ಣದಾಗಿರುವುದೇ ಅಥವಾ ಉದ್ದವಾಗಿರುವುದೇ?

ಆದರೆ ಭಂತೆ ನಾಗಸೇನ, ಅದನ್ನು ಈ ರೀತಿಯಾಗಿ ತೋರಿಸಲಾಗುವುದಿಲ್ಲ. ಅದು ನೀವು ಹೇಳಿದಂತಹ ಸ್ವಭಾವದ ಕೈಯಲ್ಲಿಟ್ಟು ಹಿಂಡುವಂತಹುದಲ್ಲ. ಆದರೆ ಅದು ಎಲ್ಲೆಡೆಯಿದೆ.

ಆದರೆ ನೀವು ವಾಯುವನ್ನು ತೋರಿಸಿಲ್ಲವಾದರೆ ವಾಯುವೇ ಇಲ್ಲ.

ಆದರೆ ಭಂತೆ ನಾಗಸೇನ, ಅದು ಇದೆಯೆಂದು ನಾನು ತಿಳಿದಿದ್ದೇನೆ, ನಿಮಗೆ ತೋರಿಸಿಲ್ಲವಾದರೂ ನನ್ನ ಹೃದಯಕ್ಕೆ ಅನುಭೂತಿಯಿದೆ.

ಓ ಮಹಾರಾಜ, ಅದೇರೀತಿಯಲ್ಲಿಯೇ ನಿಬ್ಬಾಣವು ಇದೆ. ನಾನು ನಿಮಗೆ ಅದರ ವರ್ಣ, ಆಕಾರ ಇಲ್ಲ ಎಂದಮಾತ್ರಕ್ಕೆ ನಿಮಗೆ ತೋರಿಸಿಲ್ಲ ಎಂದಮಾತ್ರಕ್ಕೆ ಅದು ಇಲ್ಲ ಎಂದು ಅರ್ಥವಲ್ಲ.

ಸಾಧು ಭಂತೆ ನಾಗಸೇನ, ಉಪಮೆಗಳಿಂದ ಸಾದೃಶ್ಯಗೊಳಿಸಿ, ಕಾರಣಗಳ ಸಮೇತ ನೀವು ವಿವರಿಸಿದಿರಿ. ಇಂದಿನಿಂದ ನಿಬ್ಬಾಣವು ಇದೆ ಎಂದು ಒಪ್ಪುತ್ತೇನೆ.

6. ಕಮ್ಮಜಾದಿ ಪನ್ಹೋ (ಕರ್ಮಜಾತದ ಪ್ರಶ್ನೆ)


ಭಂತೆ ನಾಗಸೇನ, ಕಮ್ಮಜಾತವು (ಕರ್ಮದಿಂದ ಹುಟ್ಟಿರುವುದು) ಯಾವುದು? ಹೇತುವಿನಿಂದ ಹುಟ್ಟಿರುವುದು (ಹೇತುಜಾ) ಯಾವುದು? ಋತುವಿನಿಂದ ಹುಟ್ಟಿರುವುದು (ಹೇತುಜಾ) ಯಾವುದು? ಹಾಗೆಯೇ ಯಾವುದು ಕಮ್ಮಜಾತವಲ್ಲ, ಹೇತುಜಾತವಲ್ಲ ಹಾಗು ಋತುಜಾತವಲ್ಲ? (161)

ಓ ಮಹಾರಾಜ, ಯಾವೆಲ್ಲಾ ಸಚೇತನವೋ (ವಿಞ್ಞಾನದಿಂದ ಕೂಡಿರುವವೋ) ಅವೆಲ್ಲಾ ಕರ್ಮಜಾ (ಕರ್ಮದಿಂದ ಹುಟ್ಟುವವೇ ಆಗಿದೆ). ಅಗ್ನಿಯು ಮತ್ತು ಇನ್ನಿತರ ಯಾವುದು ಬೀಜದಿಂದ ಜನಿಸಿ ಇರುವಂತಹುದೇ ಹೇತುಜ (ಕಾರಣದಿಂದ ಹುಟ್ಟಿರುವುದು) ಆಗಿದೆ. ಪೃಥ್ವಿ, ಬೆಟ್ಟ, ನೀರು, ಗಾಳಿ ಇವೆಲ್ಲ ಋತುಜಾ ಆಗಿದೆ (ಋತುವಿನಿಂದ ಜನಿಸಿವೆ). ಆಕಾಶ ಮತ್ತು ನಿಬ್ಬಾಣವು ಕರ್ಮಜವಲ್ಲ, ಹಾಗೆಯೇ ಹೇತುಜಾವು ಅಲ್ಲ, ಹಾಗೆಯೇ ಋತುಜಾವು ಅಲ್ಲ. ಓ ಮಹಾರಾಜ, ನಿಬ್ಬಾಣವನ್ನು ಕರ್ಮದಿಂದ ಹುಟ್ಟಿದೆ ಎಂದು ಹೇಳಲಾಗದು, ಹಾಗೆಯೇ ಹೇತುವಿನಿಂದ ಹುಟ್ಟಿದೆ ಎಂದು ಹೇಳಲಾಗದು, ಹಾಗೆಯೇ ಋತುವಿನಿಂದ ಹುಟ್ಟಿದೆ ಎಂದು ಹೇಳಲಾಗದು. ಇದ್ಯಾವುದರಿಂದಲೂ ನಿಬ್ಬಾಣ ಉತ್ಪನ್ನವಾಗಿಲ್ಲ. ಹಾಗೆಯೇ ಅದು ಅನುತ್ಪನ್ನವಲ್ಲ, ಹಾಗೆಯೇ ಉತ್ಪಾದನೀಯವೂ ಅಲ್ಲ, ಹಾಗೆಯೇ ಗತಕಾಲವಲ್ಲ, ಮುಂಬರುವ ಕಾಲವೂ ಅಲ್ಲ, ಹಾಗೆಯೇ ಈಗಿನ ಕಾಲವೂ ಅಲ್ಲ. ಹಾಗೆಯೇ ಅದನ್ನು ಕಣ್ಣಿನಿಂದಾಗಲಿ, ಕಿವಿಯಿಂದಾಗಲಿ, ಮೂಗಿನಿಂದಾಗಲಿ, ನಾಲಿಗೆಯಿಂದಾಗಲಿ ಅಥವಾ ದೇಹದಿಂದಾಗಲಿ ಅರಿಯಲಾಗದು. ಆದರೆ ಓ ಮಹಾರಾಜ, ಅದನ್ನು ಮನಸ್ಸಿನಿಂದ ಮಾತ್ರ ಗ್ರಹಿಸಲಾಗುತ್ತದೆ. ಯಾರು ಪರಿಶುದ್ಧವಾದ ಚಿತ್ತದಿಂದ, ಸುಶುದ್ಧಿಗೊಳಿಸಿದ, ನೇರವಾದ, ಅನಾವರಣಗೊಂಡ, ನಿರಾಮಿಶದಿಂದ ಪ್ರತಿಷ್ಠಿತರಾದ ಆರ್ಯಶ್ರಾವಕರು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸಬಲ್ಲರು.

ರಮಣೀಯವಾಗಿದೆ ಭಂತೆ ನಾಗಸೇನ, ಈ ಸಮಸ್ಯೆಯು. ಆದರೂ ನೀವು ಅದನ್ನು ಪರೀಕ್ಷಿಸಿ, ಸಂದೇಹ ದೂರೀಕರಿಸಿದಿರಿ. ಸತ್ಯ ಪ್ರಕಟಿಸಿದಿರಿ, ನಿಮ್ಮನ್ನು ಸಂಧಿಸಿದಾಗಲೇ ನನ್ನ ಸಂಶಯಗಳು ಅಂತ್ಯವಾಯಿತು. ನಿಜಕ್ಕೂ ನೀವು ಎಲ್ಲಾ ಶಾಲೆಗಳ ಗಣನಾಯಕರಲ್ಲೇ ಶ್ರೇಷ್ಠರಾಗಿರುವಿರಿ.


7. ಯಕ್ಷ ಪ್ರಶ್ನೆ 


ಭಂತೆ ನಾಗಸೇನ, ಈ ಲೋಕದಲ್ಲಿ ಯಕ್ಷರು ಇರುವರೇ? (162)

ಇದ್ದಾರೆ ಮಹಾರಾಜ.

ಅವರು ಆ ಸ್ಥಿತಿಯಿಂದ ಬೀಳುವರೇ?

ಹೌದು ಅವರು ಸಹಾ ಆ ಸ್ಥಿತಿಯಿಂದ ಬೀಳುವರು.

ಹಾಗಿದ್ದರೆ ಅವರ ಶವಗಳೇಕೆ ಕಾಣಿಸುವುದಿಲ್ಲ, ಅವುಗಳ ಶವಗಳ ವಾಸನೆ ಸಹಾ ಏಕೆ ಬರುವುದಿಲ್ಲ.

ಉಳಿದಿರುವ ಅವಶೇಷಗಳು ಸಿಗುತ್ತವೆ ಓ ಮಹಾರಾಜ, ಅವರ ಶವಗಳಿಂದ ವಾಸನೆಯು ಉದಯಿಸುತ್ತದೆ, ಹಾಗೆಯೇ ನೀಚ ಯಕ್ಷರ ಅವಶೇಷವು ಹುಳುಗಳಂತೆ, ಜೀರುಂಡೆಗಳಂತೆ, ಇರುವೆಗಳಂತೆ, ಚಿಟ್ಟೆಗಳಂತೆ, ಹಾವುಗಳಂತೆ, ಚೇಳುಗಳಂತೆ, ಜರಿಗಳಂತೆ, ಪಕ್ಷಿಗಳಂತೆ ಮತ್ತು ಕ್ರೂರ ಪ್ರಾಣಿಗಳಂತೆ ಕಾಣುವುವು.

ಓ ಭಂತೆ ನಾಗಸೇನ, ನಿಮ್ಮ ಹೊರತು ಬೇರ್ಯಾರು ಇಷ್ಟು ಬುದ್ಧಿವಂತಿಕೆಯಿಂದ ಈ ಪ್ರಶ್ನೆಯನ್ನು ಬಿಡಿಸಬಲ್ಲರು?


8. ಅನವಸೇಸ ಸಿಕ್ಖಾಪದ ಪನ್ಹೋ (ನಿಯಮಗಳ ವಿಧಿಸುವಿಕೆ ಬಗ್ಗೆ ಪ್ರಶ್ನೆ)


ಭಂತೆ ನಾಗಸೇನ, ಹಿಂದೆ ಯಾವೆಲ್ಲಾ ವೈದ್ಯಗುರುಗಳು ಇದ್ದರೋ ಉದಾಹರಿಸುವುದಾದರೆ ನಾರದ, ದಮ್ಮಾಂತರಿ (ಧನ್ವಂತರಿ), ಅಂಗಿರಸ, ಕಪಿಲ, ಕಂಡರಗ್ಗಿ, ಸಾಮ, ಅತುಲ, ಪುಬ್ಬಕಚ್ಚಾಯನ, (ಪೂರ್ವಕಾತ್ಯಾಯನ) ಇವರೆಲ್ಲರೂ ಸಹಾ ರೋಗವನ್ನು, ಅದರ ಲಕ್ಷಣಗಳನ್ನು, ರೋಗ ನಿವಾರಣೆಯನ್ನು, ಪೂರ್ಣವಾಗಿ ಯಾವುದನ್ನು ಬಿಡದೆ ಅರಿತಿದ್ದರು. ರೋಗ ನಿವಾರಣೆ ನಿರ್ವಹಣೆಯಲ್ಲಿ ಚೆನ್ನಾಗಿ ಅರಿತಿದ್ದರು. ಅವರಲ್ಲಿ ಪ್ರತಿಯೊಬ್ಬರು ಸಹಾ ತಮ್ಮ ಅಧ್ಯಯನದಲ್ಲಿ ಪೂರ್ಣ ಮಿಮಾಂಸೆ ಅರಿತಿದ್ದರು. ಅವರು ಯಾವ ಯಾವ ರೋಗವು ಯಾವುದರಿಂದ ಉದಯಿಸುತ್ತದೆ ಎಂದು ಸ್ಪಷ್ಟವಾಗಿ ಅರಿತಿದ್ದರು. ಹಾಗೆಯೇ ಯಾವರೀತಿ ರೋಗಗಳನ್ನು ತಡೆಗಟ್ಟಬೇಕೆಂದು ಅರಿತಿದ್ದರು. ಆದರೂ ಸಹಾ ಇವರ್ಯಾರು ಸರ್ವಜ್ಞರಾಗಿರಲಿಲ್ಲ. ಆದರೆ ತಥಾಗತರು ಸರ್ವಜ್ಞರಾಗಿದ್ದರೂ ಸಹಾ, ಭವಿಷ್ಯದಲ್ಲಿ ಏನೆಲ್ಲ ಆಗುವುದು ಎಂದು ತಿಳಿದಿದ್ದರೂ ಸಹಾ, ಅವರು ಸಂದಭರ್ಾನುಸಾರವಾಗಿ, ಅವಶ್ಯಕತೆ ಉದಯಿಸಿದಾಗ, ವಿನಯದ ನಿಯಮಗಳನ್ನು ವಿಧಿಸಿದರು. ಆದರೆ ಒಮ್ಮೆಗೆ ಎಲ್ಲಾ ನಿಯಮಗಳನ್ನು ಏಕೆ ವಿಧಿಸಲಿಲ್ಲ, ಯಾವಾಗೆಲ್ಲಾ ಶಿಷ್ಯರಿಂದ ಸಂದರ್ಭವು ಬಂದಿತೋ, ಆಗ ತಪ್ಪು ಎಲ್ಲಾಕಡೆ ತಿಳಿದಾಗ, ನಿಯಮಗಳನ್ನು ನಿಯಮಿಸಿದರು. ಮೊದಲೇ ತಡೆಗಟ್ಟುವಂತೆ ನಿಯಮಗಳನ್ನು ಏಕೆ ವಿಧಿಸಲಿಲ್ಲ. (163)

ಓ ಮಹಾರಾಜ, ತಥಾಗತರು ಸರ್ವಕಾಲವನ್ನು ತಿಳಿದಿದ್ದರು. ಅವರು ನಿಯಮಿಸಿದ್ದ 150 (227) ನಿಯಮಗಳ ಅವಶ್ಯಕತೆಯನ್ನು ಸಹಾ ಮೊದಲೇ ಅರಿತಿದ್ದರು. ಆದರೆ ಓ ಮಹಾರಾಜ, ತಥಾಗತರು ಹೀಗೆ ಯೋಚಿಸಿದ್ದಿರಬಹುದು: ನಾನು ಈಗಲೇ ಈ ಎಲ್ಲಾ 150 (227) ನಿಯಮಗಳನ್ನು ವಿಧಿಸಿದರೆ, ಜನರು ಭಯದಿಂದ ಕೂಡಿದವರಾಗುತ್ತಾರೆ, ಯಾರೆಲ್ಲರೂ ಸಂಘಕ್ಕೆ ಸೇರುವವರಾಗಿರುತ್ತಾರೋ ಅವರು ಸೇರದೆ ಹೀಗೆ ಹೇಳಬಹುದು ಓಹ್, ಎಷ್ಟೊಂದು ನಿಯಮಗಳನ್ನು ಗಮನಿಸುವುದು, ಸಮಣ ಗೋತಮರ ಸಂಘದಲ್ಲಿ ಪ್ರವೇಶಿಸುವುದು ಅತ್ಯಂತ ಕಷ್ಟಕರವಾದ ಸಂಗತಿಯಾಗಿದೆ ಆಗ ಅವರು ನನ್ನ ಮಾತುಗಳನ್ನು ನಂಬಲಾರರು, ಆಗ ಅವರು ದುರ್ಗತಿಯಲ್ಲಿ ಹುಟ್ಟುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಂದರ್ಭ ಉದಯಿಸಿದಾಗ ಮಾತ್ರ ನಿಯಮ ವಿಧಿಸುವುದು ಯೋಗ್ಯೋಚಿತವಾದುದು. ಆಗ ಧಮ್ಮ ಬೋಧನೆ ನೀಡಿ ನಿಯಮ ವಿಧಿಸುವೆನು. ಹಾಗೆ ಪ್ರತಿ ನಿಯಮ ವಿಧಿಸುವೆನು.

ಭಂತೆ ನಾಗಸೇನ, ಬುದ್ಧರಲ್ಲಿ ಅದ್ಭುತವಾದ ವಿಷಯವಿದೆ. ಹಾಗೆಯೇ ಅವರಲ್ಲಿನ ಸರ್ವಜ್ಞತೆಯು ಇನ್ನಷ್ಟು ಅದ್ಭುತವಾದುದು. ಇದು ಹಾಗೆಯೇ ಆಗಿದೆ ಭಂತೆ ನಾಗಸೇನ, ಇದು ತಥಾಗತರಿಂದ ಚೆನ್ನಾಗಿ ಅರಿಯಲ್ಪಟ್ಟಿದೆ. ಮೊದಲೇ ಅಷ್ಟು ನಿಯಮ ವಿಧಿಸಿದ್ದರೆ ಸೇರಲು ಬಹಳಷ್ಟು ಜನ ಭೀತಿಪಡುತ್ತಿದ್ದರು. ಇದು ಹೀಗೆಯೇ ಇರುವುದರಿಂದ ನೀವು ಹೇಳಿದ್ದನ್ನು ನಾನು ಒಪ್ಪುವೆನು.


9. ಸುರಿಯತಪನ ಪನ್ಹೊ (ಸೂರ್ಯನ ತಾಪ ಪ್ರಶ್ನೆ)


ಭಂತೆ ನಾಗಸೇನ, ಈ ಸೂರ್ಯ ಸದಾ ಉಗ್ರವಾಗಿ ಉರಿಯುತ್ತಾನಲ್ಲವೆ? ಅಥವಾ ಎಂದಾದರೂ ಅದರ ತಾಪ ಕಡಿಮೆಯಾಗುವುದೇ? (164)

ಓ ಮಹಾರಾಜ, ಸೂರ್ಯನು ಸದಾ ಉಗ್ರವಾಗಿ ಉರಿಯುತ್ತಾನೆ, ಎಂದಿಗೂ ಮಂದವಾಗಿ ಉರಿಯಲಾರನು.

ಆದರೆ ಇದು ಹೀಗಾದರೆ, ಹೇಗೆ ಸೂರ್ಯ ಹಲವಾರು ಸಾರಿ, ಉಗ್ರವಾಗಿ ಮತ್ತು ಕೆಲವಾರು ಸಾರಿ ಮಂದವಾಗಿ ಉರಿಯುತ್ತಾನೆ.

ಓ ಮಹಾರಾಜ ನಾಲ್ಕು ಅವ್ಯವಸ್ಥೆಗಳಿವೆ, ಅದರಿಂದಾಗಿ ಸೂರ್ಯನು ಪರಿಣಾಮಕ್ಕೆ ಒಳಪಟ್ಟು ಆತನ ತಾಪವು ಹಗುರವಾಗಿರುತ್ತದೆ, ಮಂದವಾಗಿರುತ್ತದೆ ಮತ್ತು ಯಾವುದವು ನಾಲ್ಕು? ಅವೆಂದರೆ ಓ ಮಹಾರಾಜ, ಮೋಡ, ಮಂಜು, ಹೊಗೆ ಮತ್ತು ಗ್ರಹಣ. ಈ ನಾಲ್ಕು ಅವ್ಯವಸ್ಥೆ ಅಡ್ಡಿಗಳಿಂದಾಗಿ ಸೂರ್ಯತಾಪ ಕ್ಷೀಣವಾಗಿರುತ್ತದೆ.

ಅದ್ಭುತ ಭಂತೆ ನಾಗಸೇನ, ಆಶ್ಚರ್ಯವು ಭಂತೆ ನಾಗಸೇನ. ಸೂರ್ಯನು ಇಷ್ಟೊಂದು ಉತ್ಕೃಷ್ಟನಾಗಿದ್ದರೂ, ವೈಭವಯುತನಾಗಿದ್ದರೂ, ಈ ಕೆಲವು ಅವ್ಯವಸ್ಥೆ (ಅಡ್ಡಿಗಳಿಂದಾಗಿ) ಯಿಂದಾಗಿ ನರಳಬೇಕಾಗುತ್ತದೆ. ಇನ್ನು ತುಚ್ಛ ಜೀವಿಗಳ ಬಗ್ಗೆ ಏನು ಹೇಳಬೇಕು. ಇಂತಹವುಗಳ ಬಗ್ಗೆ ನಿಮ್ಮಂಥ ಜ್ಞಾನಿಗಳೇ ಹೊರತು ಮತ್ಯಾರು ವಿವರಣೆ ನೀಡಬಲ್ಲರು.

10. ಕಠಿನತಪನ ಪನ್ಹೋ (ತಾಪದ ಪ್ರಶ್ನೆ)

ಭಂತೆ ನಾಗಸೇನ, ಸೂರ್ಯನು ಹೇಮಂತ ಋತುವಿನಲ್ಲಿ ಉಗ್ರವಾಗಿ ತಪಿಸುವನು. ಆದರೆ ಗೀಷ್ಮ ಋತುವಿನಲ್ಲಿ ಏಕೆ ಹಾಗಿಲ್ಲ? (165)


ಓ ಮಹಾರಾಜ, ಗೀಷ್ಮ ಋತುವಿನಲ್ಲಿ ಬೇಸಿಗೆಯಿರುತ್ತದೆ ಹಾಗು ಆಗ ಧೂಳು ಎಲ್ಲೆಡೆ ಹಬ್ಬಿರುತ್ತದೆ. ಹಾಗು ಧೂಳು ಮೋಡಗಳಲ್ಲೂ ನುಸುಳಿರುತ್ತದೆ ಮತ್ತು ಪುಷ್ಪರೇಣುಗಳು ವಾಯುವಿನಿಂದ ಆಕಾಶದಲ್ಲೆಲ್ಲಾ ಹರಡಿ, ಮೋಡಗಳು ಇಮ್ಮಡಿಯಾಗುವುದು ಮತ್ತು ಮಾರುತವು ಸಹಾ ಬಲಯುತವಾಗಿ ಆಗ ಬೀಸುತ್ತದೆ. ಹೀಗೆ ಇವೆಲ್ಲಾ ಗುಂಪುಗೂಡಿ ಸೂರ್ಯನ ಕಿರಣಗಳು ಪ್ರಕರವಾಗಿ ಬೀರಲು ಅಡ್ಡಿಯನ್ನುಂಟು ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಸೂರ್ಯನತಾಪ ಕೊಂಚ ಕ್ಷೀಣವಾಗಿಯೇ ಇರುತ್ತದೆ. ಆದರೆ ಅದೇ ಹೇಮಂತ ಋತುವಿನಲ್ಲಿ (ಚಳಿಗಾಲದಲ್ಲಿ) ಓ ಮಹಾರಾಜ, ಪೃಥ್ವಿಯ ಕೆಳಗೆ ವಿಶ್ರಾಂತಿಯಿರುತ್ತದೆ, ಮಳೆಯು ಕಾಯ್ದುಟ್ಟಿರುತ್ತದೆ, ಧೂಳು ಶಾಂತವಾಗಿರುತ್ತದೆ. ಪುಷ್ಪರೇಣುಗಳು ಸಹಾ ಮಂದವಾಗಿ ಗಾಳಿಯಲ್ಲಿರುತ್ತದೆ. ಆಕಾಶವು ಸಹಾ ಮೋಡಗಳಿಂದ ಮುಕ್ತವಾಗಿ ಶುಭ್ರವಾಗಿರುತ್ತದೆ ಮತ್ತು ತಂಪಾದ ಮಂದಗಾಳಿಯು ಬೀಸುತ್ತಿರುತ್ತದೆ. ಹೀಗೆ ಇವೆಲ್ಲದರಿಂದಾಗಿ ಸೂರ್ಯನ ಕಿರಣಗಳಿಗೆ ಅಡ್ಡಿಯಿರುವುದಿಲ್ಲ. ಸೂರ್ಯ ಸ್ಪಷ್ಟವಾಗಿ ಕಾಣುತ್ತಾನೆ ಮತ್ತು ಎಲ್ಲಾ ತಡೆಗಳಿಂದ ಮುಕ್ತವಾಗಿರುತ್ತಾನೆ, ಹೀಗಾಗಿ ಸೂರ್ಯನು ಪ್ರಕಾಶಯುತವಾಗಿ ಹೊಳೆಯುತ್ತಾನೆ. ಓ ಮಹಾರಾಜ, ಈ ಕಾರಣದಿಂದಲೇ ಸೂರ್ಯನು ಗೀಷ್ಮ ಋತುವಿಗಿಂತ ಹೇಮಂತ ಋತುವಿನಲ್ಲಿ ಪ್ರಕಾಶಯುತವಾಗಿ ಹೊಳೆಯುವನು.

ಹೀಗೆ ತಡೆಗಳಿಂದ ಮುಕ್ತವಾಗಿ ಸೂರ್ಯನು ಪ್ರಕಾಶಮಾನವಾಗಿ ಕಾಣುವನು, ಆ ಪ್ರಕಾಶತೆಯು ಮಳೆಗಾಲದಲ್ಲಿ ಇನ್ನಿತರ ತಡೆಗಳು ಇರುವಾಗ ಸಂಭವಿಸಲಾರದು.

ಸಾಧು ಭಂತೆ, ನಿಮ್ಮ ವಿವರಣೆಯನ್ನು ನಾನು ಒಪ್ಪುವೆ. 

No comments:

Post a Comment