Friday 22 December 2017

ಮಿಲಿಂದನ ಪ್ರಶ್ನೆಗಳು(ಪನ್ಹ) ಮೆಂಡಕ ಪನ್ಹೋ (ಇಕಟ್ಟಿನ ದ್ವಂದ್ವ ಪ್ರಶ್ನೆಗಳು)

 ಮೆಂಡಕ ಪನ್ಹೋ (ಇಕಟ್ಟಿನ ದ್ವಂದ್ವ ಪ್ರಶ್ನೆಗಳು)



ಮೆಂಡಕ ಪನ್ಹಾರಮ್ಮಣ ಕಥಾ (ಜಟಿಲ ಪ್ರಶ್ನೆಗಳ ರಮಣೀಯ ಕಥೆ)


ಭಾಷಾ ಪ್ರಾವಿಣ್ಯ, ಪದಪ್ರವೀಣ, ವಿತಂಡಿ, ಅತಿಬುದ್ಧಿವಂತ ಮತ್ತು ಜ್ಞಾನಿಯಾದ ಮಿಲಿಂದನು ಮಹಾನ್ ನಾಗಸೇನರವರ ಪ್ರಾಜ್ಞತೆಯನ್ನು ಪರೀಕ್ಷಿಸಲು ಮತ್ತೆ ಮತ್ತೆ ಪ್ರಶ್ನಿಸಿದನು ಮತ್ತು ಅಡ್ಡಪ್ರಶ್ನೆಗಳನ್ನು ಹಾಕಿದನು. ತನ್ನ ಕೌಶಲ್ಯವೇ ಮೌಢ್ಯವೆಂದು ತಿಳಿಯುವತನಕ ಮತ್ತೆ ಮತ್ತೆ ಪ್ರಯತ್ನಿಸಿದನು. ನಂತರ ತ್ರಿರತ್ನಗಳಿಗೆ ತನ್ನನ್ನು ಶರಣಾಗತಿ ಮಾಡಿದನು. ತಿಪಿಟಕಗಳ ಅಧ್ಯಯನವನ್ನು ಮಾಡಿದನು. ಇಡೀ ರಾತ್ರಿ ರಹಸ್ಯವಾಗಿ ನವಾಂಗಶಾಸ್ತ್ರವಾದ ತಿಪಿಟಕಗಳನ್ನು ಓದಿದನು. ಆಗ ಆತನಿಗೆ ಪೇಚುಗಳು ಹಲವಾರು ಕಂಡವು, ದ್ವಂದ್ವಗಳು ಕಠಿಣವಾಗಿತ್ತು, ಮೋಹ ಪಾಶಗಳ ಬಲೆಯನ್ನು ಕತ್ತರಿಸುವ ಅವಕಾಶ ಸಿಕ್ಕಿತ್ತು. ಆಗ ಆತನು ಹೀಗೆ ಯೋಚಿಸಿದನು. ಧಮ್ಮ ಚಕ್ರವತರ್ಿಗಳಾದ ಬುದ್ಧರ ವಚನಗಳು ಬಹುಮುಖವಾಗಿವೆ. ಹಲವು ವಿವರಣೆಗಳಲ್ಲಿ ವಿಸ್ತಾರವಾಗಿವೆ. ಹಲವು ಸಂದಭರ್ೊಚಿತವಾಗಿ ನುಡಿಯಲ್ಪಟ್ಟಿವೆ. ಹಲವು ನೇರವಾಗಿ ಸಾರಯುತ ಸಂಗತಿಗಳೊಂದಿಗೆ ವ್ಯವಹರಿಸುವುದು. ಅಜ್ಞಾನವಶಾತ್ ಒಮ್ಮೆ ಒಂದರ್ಥವಾಗಿ ಇನ್ನೊಮ್ಮೆ ವಿವಿಧರೀತಿಗಳಲ್ಲಿ ಗೋಚರಿಸುವ ಸತ್ಯಗಳನ್ನು ಸ್ವಯಂ ಪರಿಹರಿಸದ ರಾಜನು ಇವನ್ನು ನಾಗಸೇನರಲ್ಲಿಗೆ ಪ್ರಶ್ನಿಸಿ, ಪರಿಹರಿಸುವ ಎಂದು ತೀಮರ್ಾನಿಸಿದನು. ಏಕೆಂದರೆ ಆ ಸಂಶಯಗಳು ದ್ವಂದ್ವವಾಗಿವೆ, ಪೇಚಿಗೆ ಸಿಲುಕಿಸುವಂತಿವೆ, ಅಪರಿಚಿತವಾಗಿವೆ, ವಿರೋಧಾತ್ಮಕವಾಗಿವೆ. ಹೀಗಾಗಿ ಭವಿಷ್ಯದಲ್ಲಿ ಯಾರಿಗಾದರೂ ಇಂತಹ ಸಂಶಯ ಉಂಟಾದರೆ ಅವರಿಗೂ ಒಳಿತಾಗಿ ಸಮಯವುಳಿಯುವುದು, ಧಮ್ಮದ ದಾರಿಯುದ್ದಕ್ಕೂ ಮಾರ್ಗದಶರ್ಿಯಾಗುವುದು ಎಂದು ಚಿಂತಿಸಿದನು.
ರಾಜ ಮಿಲಿಂದನು ರಾತ್ರಿಯು ಕಳೆದೊಡನೆ, ಸೂರ್ಯ ಉದಯಿಸಿದಾಗ, ಸ್ನಾನಮಾಡಿ, ಕೈಗಳನ್ನು ಜೋಡಿಸಿ, ನೆತ್ತಿಯಿಂದ ಮೇಲೆತ್ತಿ ಹಿಂದಿನ, ಮುಂದಿನ ಮತ್ತು ಈಗಿನ ಬುದ್ಧರನ್ನು ಸ್ಮರಿಸಿ ವಂದಿಸಿದನು. ನಂತರ ಅಷ್ಟಾಂಗಶೀಲ ದೀಕ್ಷೆ ಕೈಗೊಂಡನು. ಇಂದಿನಿಂದ ಏಳು ದಿನದವರೆಗೂ ನಾನು ಅಷ್ಟಾಂಗಶೀಲ ಪಾಲಿಸುತ್ತೇನೆ. ನಂತರ ಗುರುಗಳಾದ ನಾಗಸೇನರವರಲ್ಲಿಗೆ ಹೋಗಿ ಈ ಪೇಚಿನ ದ್ವಂದ್ವಭರಿತ ಪ್ರಶ್ನೆಗಳನ್ನು ಅವರಿಗೆ ಹಾಕಿ ಉತ್ತರ ತಿಳಿದುಕೊಳ್ಳುತ್ತೇನೆ.
ಹೀಗಾಗಿ ಮಿಲಿಂದನು ತನ್ನ ರಾಜಯೋಗ್ಯ ಪೋಷಾಕು, ಆಭರಣಗಳನ್ನು ತೆಗೆದುಹಾಕಿ ಕಾಷಾಯ ವಸ್ತ್ರವನ್ನು ಹಾಕಿಕೊಂಡನು ಮತ್ತು ತಲೆಯಮೇಲೆ ಪಟಿಸೀನಕಂ (ಪೇಟ) ಧರಿಸಿದನು. ಮುನಿಭಾವದಲ್ಲಿದ್ದು ಅಷ್ಟಾಂಗಶೀಲ ಪಾಲನೆ ಮಾಡಲು ಪ್ರಾರಂಭಿಸಿದನು. ನಂತರ ಈ ಸಂಕಲ್ಪ ಮಾಡಿದನು ಏಳು ದಿನದವರೆಗೆ ನಾನು ಯಾವುದೇ ರಾಗಯುತ ಯೋಚನೆ ಮಾಡುವುದಿಲ್ಲ. ಯಾವುದೇ ದ್ವೇಷಯುತ ಯೋಚನೆ ಮಾಡುವುದಿಲ್ಲ. ಯಾವುದೇ ಮೋಹಯುತ ಯೋಚನೆ ಮಾಡುವುದಿಲ್ಲ. ನನ್ನ ಸೇವಕರೊಡನೆ, ಗುಲಾಮರೊಡನೆ, ನನ್ನ ಅವಲಂಬಿತರೊಡನೆ ನಾನು ವಿಧೇಯನಾಗಿರುತ್ತೇನೆ, ಸೌಮ್ಯವಾಗಿರುತ್ತೇನೆ ಮತ್ತು ತಗ್ಗಿ ನಡೆಯುತ್ತೇನೆ. ನಾನು ಇಡೀ ಕಾಯದ ಪ್ರತಿ ಚಟುವಟಿಕೆಯನ್ನು ಜಾಗ್ರತೆಯಿಂದ ಗಮನಿಸುತ್ತೇನೆ. ಹಾಗೆಯೇ ಆರು ಇಂದ್ರೀಯಗಳಲ್ಲಿ ಸಂಯಮದಿಂದಿದ್ದು ಜಾಗ್ರತೆಯಿಂದಿರುತ್ತೇನೆ ಮತ್ತು ನಾನು ಸರ್ವಜೀವಿಗಳಲ್ಲಿ ಮೈತ್ರಿ ಪ್ರಸಾರ ಮಾಡುತ್ತೇನೆ. ಮೆತ್ತ ಹೃದಯದಿಂದ ಕೂಡಿರುತ್ತೇನೆ.
ಈ ರೀತಿಯಾಗಿ ಅಷ್ಠಾಂಗ ಶೀಲದಿಂದ, ಏಳು ದಿನದವರೆಗೂ ಅವರು ಹೊರಗಡೆಯೇ ಹೋಗಲಿಲ್ಲ. ಏಳನೆಯ ರಾತ್ರಿ ಕಳೆದು 8ನೆಯ ದಿನದ ಮುಂಜಾನೆ ಅವರು ಉಪಹಾರ ಬೇಗ ಮುಗಿಸಿ, ನೇತ್ರಗಳನ್ನು ಕೆಳಗೆ ದೃಷ್ಟೀಕರಿಸಿ ಚಂಚಲಿತರಾಗದೆ, ಮಿತಭಾಷಿಯಾಗಿ, ಭವ್ಯವಾಗಿ, ಏಕಾಗ್ರಚಿತ್ತರಾಗಿ, ಅನಂತರಾಗಿ ಪ್ರಫುಲ್ಲಿತರಾಗಿ ನಾಗಸೇನರವರಲ್ಲಿಗೆ ಬಂದರು. ಅಲ್ಲಿ ಮಿಲಿಂದರು ನಾಗಸೇನರವರ ಪಾದಕ್ಕೆ ವಂದಿಸಿ ಒಂದೆಡೆ ಗೌರವಯುತವಾಗಿ ನಿಂತರು ಮತ್ತು ಹೀಗೆಂದರು :
ಭಂತೆ ನಾಗಸೇನ, ಕೆಲವು ವಿಷಯಗಳಿವೆ, ಅವುಗಳನ್ನು ನಾನು ಕೇವಲ ನಿಮ್ಮೊಂದಿಗೆ ಮಾತನಾಡಲು ಇಚ್ಛಿಸುತ್ತೇನೆ. ಅಲ್ಲಿ ಮೂರನೆಯ ವ್ಯಕ್ತಿ ಇರಲು ನಾನು ಇಚ್ಛಿಸುವುದಿಲ್ಲ. ನಾನು ಹೇಳುವಂತಹ ವಿಷಯಗಳಿಗೆ ಏಕಾಂತ ಪ್ರವೇಶ ಅವಶ್ಯಕ. ಅದು ಮರುಭೂಮಿಯಂತಹ ನಿರ್ಜನ ಅಥವಾ ಏಕಾಂತದ ಅರಣ್ಯ ಪ್ರದೇಶವು ಸಮಣರಿಗೆ ಅರ್ಹವೆಂದು ಭಾವಿಸುತ್ತೇನೆ ಮತ್ತು ಅಲ್ಲಿ ನಾನು ಗುಪ್ತವಾಗಿಡುವಂತಹ ವಿಷಯಗಳಾವುದು ಅಲ್ಲಿರುವುದಿಲ್ಲ, ಯಾವುದು ರಹಸ್ಯವಿರುವುದಿಲ್ಲ. ಆಳವಾದ ಪರಾಮಶರ್ೆಗೆ, ರಹಸ್ಯ ವಿಷಯಗಳ ಆಲಿಸುವಿಕೆಗೆ ನಾನು ಈಗ ಅರ್ಹನಾಗಿದ್ದೇನೆ. ನಾನು ಕೇಳುವಂತಹುದಕ್ಕೆ ವಿವರಣೆ ಉಪಮೆ ನೀಡಿ ಪರಿಹಾರ ನೀಡಿ.
ಓ ನಾಗಸೇನ, ಹೇಗೆ ವಿಶಾಲವಾದ ಭೂಮಿಯು ಅಪಾರ ನಿಧಿಗಳ ದೊರೆಯುವಿಕೆ ಹಾಗು ನಂಬಿಕೆಗೆ ಅರ್ಹವೋ, ಹಾಗೆಯೇ ಪಾರಮಶರ್ೆಗಳಿಂದ ದೊರೆಯುವ ಶ್ರೇಷ್ಠ ವಿಷಯಗಳಿಗೆ, ರಹಸ್ಯಗಳಿಗೆ ನಾನು ಅರ್ಹನಾಗಿದ್ದೇನೆ.


1. ಅಟ್ಠ ಮಂತಪರಿವಜ್ಜನಿಯಠಾನಾನ್ತಿ (ಚಚರ್ೆ ತಡೆಯಬೇಕಾದ 8 ಸ್ಥಳಗಳು)

ಹೀಗೆ ಅವರಿಬ್ಬರು ಏಕಾಂತ ಸ್ಥಳಕ್ಕೆ ಹೊರಟರು. ನಂತರ ಮಿಲಿಂದರು ಹೀಗೆ ಹೇಳಿದರು: ಸಲಹೆ ಕೇಳಲು ಅಥವಾ ಚಚರ್ಿಸಲು ಎಂಟುಬಗೆಯ ಸ್ಥಳಗಳನ್ನು ತಡೆಯಬೇಕು. ಅಂತಹ ಸ್ಥಳಗಳಲ್ಲಿ ಯಾವುದೇ ಜ್ಞಾನಿಯು ಮಾತನಾಡಲಾರರು. ಅಂತಹುದರಲ್ಲಿ ಮಾತುಕತೆಗೆ ಬಂದರೂ ಅವು ಇತ್ಯರ್ಥವಾಗುವುದಿಲ್ಲ. ಅವುಗಳೆಂದರೆ ಸಮನಾಗಿಲ್ಲದ ಭೂಮಿ, ಜನರ ಭಯದಿಂದ ಕೂಡಿದ ಅನಿರೀಕ್ಷಿತ ಪ್ರದೇಶ, ಗಾಳಿ ಬೀಸುವ ಪ್ರದೇಶ, ರಹಸ್ಯ ತಾಣಗಳು, ಪವಿತ್ರ ಪ್ರದೇಶಗಳು, ಹೆದ್ದಾರಿಗಳು, ಹಗುರವಾದ ಬಂಬು ಸೇತುವೆ ಮತ್ತು ಸಾರ್ವಜನಿಕ ಸ್ನಾನ ಸ್ಥಳಗಳು.
ಇವುಗಳಲ್ಲಿರುವ ತೊಡಕುಗಳೇನು?
ಆಗ ರಾಜರು ಉತ್ತರಿಸಿದರು ಸಮನಾಗಿಲ್ಲದ ಪ್ರದೇಶಗಳಲ್ಲಿ ಚಚರ್ಿಸುವ ವಿಷಯಗಳು ಚದುರುತ್ತವೆ, ವ್ಯರ್ಥವಾಗುತ್ತವೆ, ಕ್ಷೇಮವಲ್ಲದ ಸ್ಥಳಗಳಲ್ಲಿ ಭಯದಿಂದ ಮನಸ್ಸು ಕ್ಷೊಭೆಗೆ ಒಳಗಾಗುತ್ತದೆ. ಕ್ಷೊಭೆಗೆ ಒಳಗಾದ ಮನಸ್ಸು ವಿಷಯವನ್ನು ಸ್ಪಷ್ಟವಾಗಿ ಹಿಂಬಾಲಿಸುವುದಿಲ್ಲ. ಗಾಳಿ ಬೀಸುವ ಸ್ಥಳಗಳಲ್ಲಿ ಧ್ವನಿಯು ಸ್ಫುಟವಾಗಿರುವುದಿಲ್ಲ. ಅಡಗುವ ಸ್ಥಳಗಳಲ್ಲಿ ಕದ್ದು ಕಿವಿಗೊಡುವವರು ಇರುತ್ತಾರೆ, ಪವಿತ್ರ ಸ್ಥಳಗಳಲ್ಲಿ ಗಂಭೀರ ವಾತಾವರಣವಿರುವುದರಿಂದ, ವಿಷಯಗಳು ಬೇರೆಡೆಗೆ ತಿರುಗುವ ಸಾಧ್ಯತೆಯೇ ಹೆಚ್ಚು. ಹೆದ್ದಾರಿಯು ಚಚರ್ಿಸಲು ಕ್ಷುಲ್ಲಕವಾಗಿದೆ, ಏಕೆಂದರೆ ಸಾಮಾನ್ಯರ ಸ್ಥಳವಾಗಿದೆ. ಹಾಗು ಸೇತುವೆಯು ಅಸ್ಥಿರ ಹಾಗು ಅಲ್ಲಾಡುವುದರಿಂದಾಗಿ ಸರಿಯಲ್ಲ. ಸಾರ್ವಜನಿಕ ಸ್ನಾನ ಸ್ಥಳದಲ್ಲಿ ಚಚರ್ಿಸಿದರೆ ಅದು ಸಾಮಾನ್ಯರ ಬಾಯಲ್ಲಿ ಹರಿದಾಡುವಂತಾಗುತ್ತದೆ, ಆದ್ದರಿಂದಾಗಿ ಹೀಗೆ ಹೇಳಲಾಗಿದೆ.
ಸಮನಾಗಿಲ್ಲದ ಭೂಮಿ, ಅಸುರಕ್ಷಿತ ಪ್ರದೇಶ ಮತ್ತು ಗಾಳಿ ಬೀಸುವ ಸ್ಥಳ, ಅಡಗುತಾಣಗಳು, ಪವಿತ್ರ ಪ್ರದೇಶಗಳು, ಹೆದ್ದಾರಿಗಳು, ಸೇತುವೆಗಳು ಮತ್ತು ಸಾರ್ವಜನಿಕ ಸ್ನಾನ ಸ್ಥಳಗಳು ಇವನ್ನು ಶ್ರೇಷ್ಠ ವಿಷಯಗಳ ಚಚರ್ೆಗೆ ತಡೆಯಲೇಬೇಕು.


2. ಅಟ್ಠ ಮಂತವಿನಾಸಕ ಪುಗ್ಗಲಾ (ಚಚರ್ೆ ವಿನಾಶ ಮಾಡುವ 8 ವ್ಯಕ್ತಿಗಳೂ)

ಭಂತೆ ನಾಗಸೇನ, ಎಂಟುರೀತಿಯ ಜನರಿಂದ ಚಚರ್ೆಯು ನಿಲ್ಲುತ್ತದೆ ಮತ್ತು ನಾಶವಾಗುತ್ತದೆ. ಯಾರವರು ಎಂಟು ಜನರು? ರಾಗಭರಿತ ವ್ಯಕ್ತಿ, ದ್ವೇಷಭರಿತ ವ್ಯಕ್ತಿ, ಮೋಹಭರಿತ ವ್ಯಕ್ತಿ, ಅಹಂಕಾರಿ, ಲೋಭಿ, ಸೋಮಾರಿ, ಒಂದೇ ದೃಷ್ಟಿಕೋನಕ್ಕೆ ಅಂಟಿರುವವನು ಮತ್ತು ಮೂರ್ಖ.
ಇದರಿಂದಾಗುವ ತೊಂದರೆ ಏನು? ಎಂದು ಥೇರರು ಕೇಳಿದರು.
ಮೊದಲನೆಯವ ಚಚರ್ೆಯನ್ನು ತನ್ನ ರಾಗದಿಂದ ಹಾಳು ಮಾಡುವನು.
ಎರಡನೆಯವ ಚಚರ್ೆಯನ್ನು ತನ್ನ ದ್ವೇಷದಿಂದ ಹಾಳು ಮಾಡುವನು.
ಮೂರನೆಯವ ಚಚರ್ೆಯನ್ನು ತನ್ನ ಮೋಹದಿಂದ ಹಾಳು ಮಾಡುವನು.
ನಾಲ್ಕನೆಯವ ಚಚರ್ೆಯನ್ನು ತನ್ನ ಅಹಂಕಾರದಿಂದ ಹಾಳು ಮಾಡುವನು.
ಐದನೆಯವ ಚಚರ್ೆಯನ್ನು ತನ್ನ ಲೋಭದಿಂದ ಹಾಳು ಮಾಡುವನು.
ಆರನೆಯವ ಚಚರ್ೆಯನ್ನು ತನ್ನ ಸೋಮಾರಿತನದಿಂದ ಹಾಳು ಮಾಡುವನು.
ಏಳನೆಯವ ಚಚರ್ೆಯನ್ನು ತನ್ನ ಸಂಕುಚಿತ ಮನೋಭಾವದಿಂದ ಹಾಳು ಮಾಡುವನು.
ಎಂಟನೆಯವ ಚಚರ್ೆಯನ್ನು ತನ್ನ ಮೂರ್ಖತ್ವದಿಂದ ಹಾಳು ಮಾಡುವನು.
ಆದ್ದರಿಂದ ರಾಗಚರಿತನು, ದ್ವೇಷಚರಿತನು, ಮೋಹವಂತನು, ಅಹಂಕಾರಿ, ಲೋಭಿ ಅಥವಾ ಸೋಮಾರಿ, ಒಂದೇ ದೃಷ್ಟಿಕೋನ ಹೊಂದಿರುವ ಮತ್ತು ಮೂರ್ಖ ಇವರುಗಳು ಚಚರ್ೆಯನ್ನು ವಿನಾಶ ಮಾಡುವರು.


3. ನವ ಗುಹ್ಯಮಂತ ವಿಧಂಸಕಾ (ರಹಸ್ಯ ಒಡೆಯುವ 9 ವ್ಯಕ್ತಿಗಳು)

ಭಂತೆ ನಾಗಸೇನ, ಒಂಭತ್ತು ರೀತಿ ಜನರಿದ್ದಾರೆ. ಅವರಲ್ಲಿ ರಹಸ್ಯವು ಅವರ ಹೃದಯದಲ್ಲಿ ಉಳಿಯದೆ, ವಿದ್ವಂಸಕವಾಗುತ್ತದೆ. ಯಾರವರು? ಅವರೆಂದರೆ ರಾಗಯುಕ್ತನು  ರಾಗಕ್ಕೆ ವಶನಾಗಿ ರಹಸ್ಯವನ್ನು ತಿಳಿಸಿಬಿಡುತ್ತಾನೆ. ದ್ವೇಷಿಯು ದ್ವೇಷದ ಪರಿಣಾಮಕ್ಕೆ ಒಳಗಾಗಿ ರಹಸ್ಯ ಕಕ್ಕಿದರೆ, ಮೋಹಿಯು ಕೆಲವು ತಪ್ಪಿನಿಂದ ರಹಸ್ಯ ಬಿಟ್ಟುಕೊಡುತ್ತಾನೆ, ಭಯಸ್ತನು ಭೀತಿಯಿಂದ ರಹಸ್ಯಗಳನ್ನು ಹೇಳಿದರೆ, ಲೋಭಿಯು ಏನಾದರೂ ಲಾಭಗಿಟ್ಟಿಸುವುದಕ್ಕೆ ರಹಸ್ಯಗಳನ್ನು ಹೇಳುತ್ತಾನೆ. ಸ್ತ್ರೀಯು ಅಸ್ಥಿರತೆಯಿಂದಾಗಿ ರಹಸ್ಯ ಹೇಳಿದರೆ, ಕುಡುಕನು ಮತ್ತಿನಿಂದಾಗಿ ರಹಸ್ಯ ಹೇಳುವನು, ನಪುಂಸಕನು ತನ್ನ ಅಪೂರ್ಣತೆಯಿಂದಾಗಿ ರಹಸ್ಯ ಹೇಳುವನು ಮತ್ತು ಮಗುವು ಚಂಚಲತೆಯಿಂದಾಗಿ ರಹಸ್ಯ ಹೇಳುವುದು. ಆದ್ದರಿಂದಲೇ ಹೀಗೆ ಹೇಳಲಾಗಿದೆ. ರಾಗಯುಕ್ತನು, ದ್ವೇಷಿ, ಭಯಸ್ಥ, ಲಾಭಲೋಭಿ, ಪ್ರಿಯೆ, ಕುಡುಕ, ನಪುಂಸಕ ಮತ್ತು ಮಗುವು ಈ ಒಂಭತ್ತು ಜನರು ಚಂಚಲರಾಗಿರುತ್ತಾರೆ. ಕ್ಷುಲ್ಲುಕದವರಾಗಿದ್ದಾರೆ ಮತ್ತು ಹೊಯ್ದಾಡುವವರಾಗಿದ್ದಾರೆ ಇವರಿಗೆ ತಿಳಿಸಿದ್ದು ನೇರವಾಗಿ ಸಾರ್ವಜನಿಕ ಆಸ್ತಿಯಾಗುತ್ತದೆ.


4. ಅಟ್ಠ ಪಞ್ಞಾ ಪಟಿಲಾಭಕಾರಣಾನಿ (ಪ್ರಜ್ಞಾವಿಕಾಸದ 8 ವಿಷಯಗಳು)

ಭಂತೆ ನಾಗಸೇನ, ಎಂಟು ಕಾರಣಗಳಿಂದಾಗಿ ಪ್ರಜ್ಞಾವು ವಿಕಸಿತವಾಗಿ ಮುನ್ನಡೆಗೈಯುತ್ತದೆ, ಯಾವುವವು ಎಂಟು? ವರ್ಷಗಳ ಮುನ್ನಡೆ, ಖ್ಯಾತಿಯ ಅಭಿವೃದ್ಧಿ, ಸಕಾಲದಲ್ಲಿ ಪ್ರಶ್ನಿಸುವಿಕೆ, ಗುರುಗಳ ಸಾಮೀಪ್ಯ, ಸ್ವಯಂ ಚಿಂತನೆ, ಜ್ಞಾನಿಗಳೊಂದಿಗೆ ಚಚರ್ೆ, ಸ್ನೇಹಿತರ ಸೇವನೆ, ರಮಣೀಯ ಸ್ಥಳಗಳಲ್ಲಿ ವಾಸಿಸುವಿಕೆ. ಆದ್ದರಿಂದ ಹೀಗೆ ಹೇಳಲಾಗಿದೆ:
ವಯಸ್ಸು, ಖ್ಯಾತಿ, ಪ್ರಶ್ನಿಸುವಿಕೆ ಮತ್ತು ಗುರುಗಳ ಸಹಾಯ, ಚಿಂತನೆ ಮತ್ತು ಜ್ಞಾನಿಗಳೊಂದಿಗೆ ಚಚರ್ೆ, ಸ್ನೇಹಿತರ ಸೇವನೆ ರಮಣೀಯ ಸ್ಥಳ ಮತ್ತು ಸಾಕ್ಷಾತ್ಕಾರ ಇವುಗಳಿಂದ ಒಬ್ಬನ ಪ್ರಜ್ಞೆಯು ಪರಿಶುದ್ಧವಾಗುತ್ತದೆ. ಯಾರಿಗೆಲ್ಲಾ ಇವು ಇದೆಯೋ ಅವರ ಪ್ರಜ್ಞಾವು ಅಭಿವೃದ್ಧಿಯಾಗುತ್ತದೆ.
ಭಂತೆ ನಾಗಸೇನ ಈ ಸ್ಥಳವು ಎಲ್ಲಾ ದ್ವೇಷಗಳಿಂದ ಮುಕ್ತವಾಗಿದೆ, ನಾನು ಅರ್ಹ ವಿದ್ಯಾಥರ್ಿಯಾಗಿದ್ದೇನೆ, ನಾನು ರಹಸ್ಯವನ್ನು ಕಾಪಾಡುವವನು ಆಗಿದ್ದೇನೆ, ನಾನು ವಿವೇಚನೆಯುಳ್ಳವನಾಗಿದ್ದೆನೆ ಮತ್ತು ನನ್ನ ಬುದ್ಧಿಯು 8 ರೀತಿಯಲ್ಲಿ ವಿಕಸಿತವಾಗಿದೆ. ನನ್ನಂತಹ ಶಿಷ್ಯನು ನಿಮಗೆ ಸಿಗುವುದು ದುರ್ಲಭವಾಗಿದೆ.


5. ಪಂಚವೀಸತಿ ಆಚರಿಯಗುಣ (ಆಚಾರ್ಯರ 25 ಗುಣಗಳು)

ಅರ್ಹನಾದ ಶಿಷ್ಯನ ಬಗ್ಗೆ ಈ ಒಳಬಗೆಯ ಗುಣಗಳನ್ನು, ಆಚರಣೆಯನ್ನು ಹೊಂದಿರಬೇಕಾಗುತ್ತದೆ. ಯಾವುವವು? ಶಿಷ್ಯನ ಬಗ್ಗೆ ಸದಾ ಗಮನ ನೀಡಿರಬೇಕಾಗುತ್ತದೆ, ಶಿಷ್ಯನಿಗೆ ಯಾವುದು ಅಭಿವೃದ್ಧಿಗೊಳಿಸಬೇಕೋ ಮತ್ತು ಯಾವುದನ್ನು ತಡೆಯಬೇಕೋ ಅದೆಲ್ಲಾ ಕಲಿಸಿರಬೇಕಾಗುತ್ತದೆ; ಯಾವುದರಲ್ಲಿ ಗಂಭೀರತೆ ತಾಳಬೇಕೋ ಮತ್ತು ಯಾವುದರಲ್ಲಿ ಅಲಕ್ಷದಿಂದಿರಬೇಕೋ ಅದೆಲ್ಲಾ ಕಲಿಸಿರಬೇಕಾಗುತ್ತದೆ. ಹಾಗೆಯೇ ಮಿತನಿದ್ದೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ, ಅದರಂತೆಯೇ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ತೊರೆಯಬೇಕು; ಅಹಾರದಲ್ಲಿ ವಿವೇಚನೆ ಹಾಗು ಹಂಚಿ ತಿನ್ನುವ ಗುಣ ತಿಳಿಸಬೇಕು. ಹಾಗೆಯೇ ಆತನಿಗೆ ಹೆದರಬೇಡ, ನೀನು ಉನ್ನತಿ ಹೊಂದುವೆ ಎಂದು ಪ್ರೋತ್ಸಾಹಿಸಬೇಕು. ಹಾಗೆಯೇ ಯಾವ ವ್ಯಕ್ತಿಗಳ ಜೊತೆಗೆ ಬೆರೆಯಬೇಕು, ಯಾವ ಹಳ್ಳಿಗಳಿಗೆ ಮತ್ತು ವಿಹಾರಗಳಿಗೆ ಭೇಟಿ ನೀಡಬೇಕು ಎಂದು ಬುದ್ಧಿವಾದ ನೀಡಬೇಕು. ಶಿಷ್ಯನೊಂದಿಗೆ ಎಂದಿಗೂ ಹಾಸ್ಯಗಳಲ್ಲಿ ಮತ್ತು ಮೂರ್ಖತ್ವ ಮಾತುಗಳಲ್ಲಿ ತೊಡಗಬಾರದು. ಆತನಲ್ಲಿ ಏನಾದರೂ ದ್ವೇಷ ಕಂಡುಬಂದರೆ ಅದನ್ನು ಕ್ಷಮಿಸುವುದು, ಉತ್ಸಾಹಿತನಾಗಿರುವುದು, ಅಪೂರ್ಣವಾಗಿ ಆಗಲಿ, ಪಕ್ಷಪಾತದಿಂದಾಗಲಿ ಶಿಕ್ಷಣ ಕಲಿಸಬಾರದು. ಶಿಷ್ಯನೊಂದಿಗೆ ರಹಸ್ಯದಿಂದ ಕೂಡಿರಬಾರದು. ಹಿಂದಿನಿಂದ ಯಾವುದನ್ನು ಹಿಡಿದಿರಬಾರದು. ತನ್ನ ಮಗನಂತೆ ಕಾಣಬೇಕು. ತನ್ನಲ್ಲೇ ಶಿಕ್ಷಣದಿಂದ ನನ್ನಿಂದ ಜನಿಸಿದ್ದಾನೆ, ಆದ್ದರಿಂದ ಈತ ನನ್ನ ಮಗ ಎಂದು ಭಾವಿಸಬೇಕು. ಆತನ ಉನ್ನತಿಗೆ ಶ್ರಮಿಸಬೇಕು. ತನ್ನಲ್ಲೇ ಹೇಗೆ ಈತನನ್ನು ಹಿಂದಕ್ಕೆ ಹೋಗದಂತೆ ತಡೆಯಲಿ ಎಂದು ಭಾವಿಸಬೇಕು, ಆತನಿಗೆ ಜ್ಞಾನದಲ್ಲಿ ಬಲಿಷ್ಠಗೊಳಿಸಲು ದೃಢನಿಧರ್ಾರ ತಾಳಬೇಕು. ತನ್ನಲ್ಲೇ ನಾನು ಈತನನ್ನು ಬೃಹತ್ ಬಲಿಷ್ಠನನ್ನಾಗಿಸುವೆನು ಎಂದು ಸಂಕಲ್ಪಿಸಬೇಕು. ಆತನಲ್ಲಿ ಮೈತ್ರಿ ವಾತ್ಸಲ್ಯ ತೋರಬೇಕು. ಎಂದಿಗೂ ಅವಶ್ಯಕತೆ ಬಂದಾಗ ತೊರೆಯಬಾರದು. ಆತನ ಬಗ್ಗೆ ಯಾವುದರಲ್ಲೇ ಆಗಲಿ, ಎಂದಿಗೂ ಅಲಕ್ಷಿಸಬಾರದು, ಸದಾ ಮಿತ್ರನಾಗಿರಬೇಕು, ಆತ ತಪ್ಪು ಮಾಡಿದಾಗು, ತಿದ್ದಿ ಸರಿ ಮಾಡಬೇಕು. ಇವು ಭಂತೆ, ಆಚಾರ್ಯರಲ್ಲಿರಬೇಕಾದ 25 ಗುಣಗಳಾಗಿವೆ. ನನ್ನೊಂದಿಗೆ ಹೀಗೆ ವತರ್ಿಸಿರಿ, ಪ್ರಭುವೇ ನನ್ನಲ್ಲಿದ್ದ ಸಂಶಯವನ್ನು ದಾಟಿದ್ದೇನೆ, ಆದರೆ ಈಗ ಭಗವಾನರ ವಚನಗಳಲ್ಲಿ ತೋರಿಕೆಯ ವಿರೋಧಾತ್ಮಕಗಳ ಬಗ್ಗೆ ಕೇಳಬೇಕಿದೆ. ಅದರ ಬಗ್ಗೆ ಇನ್ನುಮೇಲೆ ಚಚರ್ೆ ಉದಯಿಸಲಿದೆ ಮತ್ತು ಭವಿಷ್ಯದಲ್ಲೂ ನಿಮ್ಮಂತಹ ಪ್ರಾಜ್ಞಾಯುತ ಗುರುವನ್ನು ಕಾಣಲು ಕಡುಕಷ್ಟಕರವಾಗಿದೆ, ಆದ್ದರಿಂದ ಈ ಕೆಲವು ಇಕ್ಕಟ್ಟುಗಳ ಪರಿಹಾರಕ್ಕಾಗಿ ಬೆಳಕನ್ನು ತೋರಿ, ವಿರೋಧಾತ್ಮಕತೆಗಳ ಅವನತಿಗೆ ಪ್ರಕಾಶ ಬೀರಿ, ಪ್ರಜ್ಞಾ ಚಕ್ಷುವನ್ನು ನೀಡಿ.


6. ಹತ್ತು ಉಪಾಸಕ ಗುಣಗಳು

ಆಗ ಥೇರರು ಆತನ ಹೇಳಿಕೆಗೆ ಒಪ್ಪಿ, ಉಪಾಸಕನಿಗೆ ಇರಬೇಕಾದ ದಶಗುಣಗಳ ಬಗ್ಗೆ ಹೀಗೆ ವಿವರಿಸಿದರು ಇವು ದಶಗುಣಗಳು ಓ ಮಹಾರಾಜ, ಇವು ಉಪಾಸಕನಲ್ಲಿ ಇದ್ದೇ ಇರುತ್ತವೆ. ಆತನು ಸಂಘವು ಸುಖಕರವಾಗಿದ್ದರೆ ಆನಂದದಿಂದಿರುತ್ತಾನೆ ಮತ್ತು ಸಂಘವು ಕಷ್ಟದಲ್ಲಿರುವಾಗ ದುಃಖಿಸುತ್ತಾನೆ. ಆತನು ಧಮ್ಮವನ್ನೇ (ಬುದ್ಧರ ಬೋಧನೆ) ತನ್ನ ಗುರುವನ್ನಾಗಿ ಸ್ವೀಕರಿಸುತ್ತಾನೆ, ತನಗೆ ಸಾಮಥ್ರ್ಯವಿರುವತನಕ ಆತನು ದಾನವನ್ನು ನೀಡುತ್ತಲೇ ಇರುತ್ತಾನೆ. ಆನಂದದಿಂದ ಭಗವಾನರ ಧಮ್ಮವು (ಶಾಸನವು/ಧಮ್ಮವು) ಶಿಥಿಲವಾಗತೊಡಗಿದಾಗ ಆತನು ಅದನ್ನು ಪುನರ್ಜ್ಜೀವನಗೊಳಿಸಲು ಪ್ರಯತ್ನಿಸುತ್ತಾನೆ. ಆತನು ಸಮ್ಮಾ ದೃಷ್ಟಿಕೋನ ಹೊಂದಿರುತ್ತಾನೆ. ಆತನು ವಿಧಿ, ಸಂಸ್ಕಾರ, ಮೌಡಾಚರಣೆ ಮತ್ತು ಮಿಥ್ಯಾದೃಷ್ಟಿಗಳನ್ನು ತೊರೆಯುತ್ತಾನೆ. ಆತನು ಪರಗುರುವಿನ ಹಿಂದೆ ಜೀವನದುದ್ದಕ್ಕು ಓಡಲಾರ. ಆತನು ತನ್ನ ಯೋಚನೆ ಮತ್ತು ಕರ್ಮಗಳಲ್ಲಿ ಸದಾ ರಕ್ಷಣೆಯಿಡುತ್ತಾನೆ, ಆತನು ಶಾಂತಿಯಲ್ಲಿ ಆನಂದಿಸುತ್ತಾನೆ ಮತ್ತು ಶಾಂತಪ್ರೇಮಿಯಾಗಿರುತ್ತಾನೆ. ಆತನಲ್ಲಿ ಅಸೂಯೆಯಿರುವುದಿಲ್ಲ ಮತ್ತು ಜಗಳದ ಭಾವದಲ್ಲಿ ನಡೆಯುವುದಿಲ್ಲ, ಆತನು ತ್ರಿರತ್ನಗಳಾದ ಬುದ್ಧ, ಧಮ್ಮ ಮತ್ತು ಸಂಘದಲ್ಲಿ ಶರಣು ಹೋಗಿರುತ್ತಾನೆ. ಇವೇ ಮಹಾರಾಜ ಉಪಾಸಕನಲ್ಲಿರಬೇಕಾದ 10 ಗುಣಗಳಾಗಿವೆ. ಅವೆಲ್ಲವೂ ನಿನ್ನಲ್ಲಿವೆ. ಆದ್ದರಿಂದ ಅಂತಹ ಗುಣಗಳಲ್ಲಿಯೇ ಇರುವಂತಹ, ಭಗವಾನರ ಧಮ್ಮದ ಶಿಥಿಲತೆ ಕಂಡು ಅದರ ಉದ್ಧಾರಕ್ಕಾಗಿ ಇಚ್ಛಿಸು, ಶ್ರಮಿಸು, ಯಾವುದೇ ಪ್ರಶ್ನೆಯನ್ನು ಕೇಳಲು ಅನುಮತಿ ನೀಡಿದ್ದೇನೆ ಪ್ರಶ್ನಿಸು.

ಇಕ್ಕಟ್ಟಿನ ದ್ವಂದ್ವ ಪ್ರಶ್ನೆಗಳ ಪೀಠಿಕೆ ಮುಗಿಯಿತ 

No comments:

Post a Comment