Wednesday, 6 December 2017

milinda panha in kannada sati vaggo ಮಿಲಿಂದ ಪನ್ಹ 6. ಸತಿ ವಗ್ಗೊ

6. ಸತಿ ವಗ್ಗೊ

1. ಕಾಯಪಿಯಾಯನ ಪನ್ಹೊ (ದೇಹ ಪ್ರೀತಿಯ ಪ್ರಶ್ನೆ)


ರಾಜರು ಕೇಳಿದರು ಭಂತೆ ನಾಗಸೇನ, ಪಬ್ಬಜಿತರಿಗೆ ಕಾಯವು (ದೇಹ) ಪ್ರಿಯವಾದುದೇ? (62)
ಇಲ್ಲ ಮಹಾರಾಜ, ಪಬ್ಬಜಿತರಿಗೆ ಕಾಯವು ಪ್ರಿಯವಲ್ಲ.
ಹಾಗಾದರೆ ಕಾಯದ ಬಗ್ಗೆ ಈ ಕಾಳಜಿಯುತ ಗಮನ ಮತ್ತು ಪೋಷಣೆ ಏಕೆ?
ಓ ಮಹಾರಾಜ, ನೀವು ಬಹಳಷ್ಟು ಕಾಲ ಮತ್ತು ಹಲವಾರು ಸ್ಥಳಗಳಲ್ಲಿ ಯುದ್ಧಗಳಿಗೆ ಹೋಗಿದ್ದೀರಿ. ನೀವು ಯಾವಾಗಲಾದರೂ ಬಾಣದಿಂದ ಗಾಯಗೊಂಡಿರುವಿರಾ?
ಹೌದು, ಈ ರೀತಿಯ ಸಂಗತಿಗಳಾಗಿವೆ.
ಓ ಮಹಾರಾಜ, ಅಂತಹ ವೇಳೆಗಳಲ್ಲಿ ನೀವು ಗಾಯಕ್ಕೆ ಮುಲಾಮು ಹಚ್ಚಿ, ಎಣ್ಣೆ ಹಚ್ಚಿ ಗಾಯಕ್ಕೆ ಪಟ್ಟಿ ಕಟ್ಟಿಲ್ಲವೆ?
ಹೌದು, ಆ ರೀತಿ ಗಾಯಕ್ಕೆ ಆರೈಕೆ ಮಾಡಲಾಗಿದೆ.
ಹಾಗಾದರೆ, ನಿಮಗೆ ಗಾಯವು ಪ್ರಿಯವಾಗಿರುವುದೇ? ಅದಕ್ಕಾಗಿಯೇ ನೀವು ಈ ರೀತಿ ಮುಲಾಮು ಹಚ್ಚಿ, ಗಾಯಕ್ಕೆ ಅತಿ ಮೃದುವಾಗಿ ವತರ್ಿಸುತ್ತಿದ್ದಿರಾ?
ಇಲ್ಲ, ನನಗೆ ಗಾಯವು ಪ್ರಿಯವಾಗಿಲ್ಲ, ಗಾಯವು ವಾಸಿಯಾಗಿ ಅದು ಮಾಂಸ, ಚರ್ಮ ಬಂದು ಸರಿಯಾಗಲೆಂದು ಹಾಗೆ ಮಾಡಲಾಗಿದೆ.
ಅದೇರೀತಿ ಮಹಾರಾಜ, ಪಬ್ಬಜಿತರು ಸಹಾ ಶರೀರಕ್ಕೆ ಅಂಟಿಕೊಳ್ಳದೆ, ಸಮ್ಮಾಜೀವನಕ್ಕೆ ಸಹಕಾರಿಯಾಗಲೆಂದು ಶರೀರಕ್ಕೆ ಯೋಗ್ಯರೀತಿಯ ಕಾಳಜಿ ವಹಿಸುತ್ತಾರೆ. ಶರೀರವನ್ನು ಹುಣ್ಣಿನ ರೀತಿ ಕಾಣುತ್ತಾರೆ. ಓ ಮಹಾರಾಜ, ಭಗವಾನರು ಶರೀರವನ್ನು ಹುಣ್ಣಿನ ರೀತಿ ಕಾಣಿ, ಕಾಯಕ್ಕೆ ಅಂಟದಿರಿ ಎಂದು ಭಿಕ್ಷುಗಳಿಗೆ ಪೋಷಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಭಗವಾನರ ಕೆಲವು ಗಾಥೆಗಳು ಹೀಗಿವೆ:
ಹೊಲಸಿನ ದೇಹವು ಖಂಡಿತವಾಗಿ ದುನರ್ಾತ ಬೀರುವುದು, ಶೌಚಸ್ಥಳದ ರೀತಿ ನಾತವು ಬೀಸುವುದು, ಪ್ರಾಜ್ಞರು ದೇಹವನ್ನು ನಿಂದಿಸಿದರೆ, ಮೂರ್ಖರು ಆನಂದಿಸುವರು.
ನವರಂದ್ರಗಳು ನೆಲೆಸಿರುವ ಮಾಂಸದ ಗಡ್ಡೆಯಂತೆ ಜಿಡ್ಡಿನ ಚರ್ಮದ ಹೊದಿಕೆಯ, ಹೊಲಸಿನ ಉಡುಪಿನ, ಕಾಯವಿದು. ಸರ್ವತ್ವ ವಾತಾವರಣವನ್ನು ಕಲುಷಿತಗೊಳಿಸಿಹ, ಪ್ರಾಯಶಃ ಒಳ ಅಂಗಾಂಗಗಳು ಹೊರಬಂದರೆ ಮಾನವನು ನಾಯಿ-ಕಾಗೆಗಳನ್ನು ಓಡಿಸಲು ಚಾಟಿ ಹಿಡಿಯಬೇಕಿತ್ತು.
ಚೆನ್ನಾಗಿ ವಿವರಿಸಿದಿರಿ, ನಾಗಸೇನ.

2. ಸಬ್ಬಞ್ಞ(ನ್ಯು)ಭಾವ ಪನ್ಹೋ

ರಾಜರು ಕೇಳಿದರು ಭಂತೆ ನಾಗಸೇನ, ಬುದ್ಧರು ಸರ್ವಜ್ಞರು (ಸಬ್ಬನ್ಯು) ಹಾಗು ಸರ್ವದಶರ್ಿಗಳಲ್ಲವೇ? (63)
ಹೌದು ಮಹಾರಾಜ, ಬುದ್ಧ ಭಗವಾನರು ಸರ್ವಜ್ಞರಲ್ಲದೆ ಸರ್ವದಶರ್ಿಗಳು ಹೌದು.
ಹಾಗಾದರೆ ಅವರು ಸಂಘದ ವಿನಯಗಳ ನಿಯಮಗಳನ್ನು ಒಂದೇಸಾರಿ ಏಕೆ ವಿಧಿಸಲಿಲ್ಲ. ಕಾಲಕಾಲಕ್ಕೆ ಸಂದಭರ್ೊಚಿತವಾಗಿ ಏಕೆ ವಿಧಿಸಿದರು?
ಓ ಮಹಾರಾಜ, ಎಲ್ಲಾ ವೈದ್ಯಕೀಯ ಔಷಧಿಗಳನ್ನು ಬಲ್ಲ ವೈದ್ಯನು ಭೂಮಿಯಲ್ಲಿ ಇದ್ದಾನೆಯೇ?
ಹೌದು, ಅಂತಹವರು ಇರುತ್ತಾರೆ.
ಅಂತಹ ವೈದ್ಯನು ತನ್ನ ಔಷಧಿಗಳನ್ನು ರೋಗಿಗೆ, ರೋಗಬಂದ ಮೇಲೆ ನೀಡುವನೋ ಅಥವಾ ಮುಂಚಿತವಾಗಿಯೇ ಎಲ್ಲಾ ಬಗೆಯ ಔಷಧಿ ಸ್ವೀಕರಿಸಲು ರೋಗಿಗೆ ಹೇಳುವನೋ?
ರೋಗ ಬಂದ (ಉದಯಿಸಿದ) ನಂತರ ನುಡಿಯುತ್ತಾನೆ.
ಹಾಗೆಯೇ ಮಹಾರಾಜ, ಭಗವಾನರು ಸರ್ವಜ್ಞರು ಮತ್ತು ಸರ್ವದಶರ್ಿಗಳು ಆಗಿದ್ದರೂ ಸಹಾ ಆ ಕಾಲದಲ್ಲಿ ಒಂದೇ ವೇಳೆಗೆ ನಿಯಮಗಳನ್ನು ವಿಧಿಸಲಿಲ್ಲ. ಬದಲಾಗಿ, ಸಂದಭರ್ೊಚಿತವಾಗಿ ಅಗತ್ಯದ ವೇಳೆ ನಿಯಮಗಳನ್ನು ವಿಧಿಸಿದರು.
ಚೆನ್ನಾಗಿ ವಿವರಿಸಿದಿರಿ ನಾಗಸೇನ.

3. ಮಹಾಪುರುಷ ಲಕ್ಷಣ ಪ್ರಶ್ನೆ

ರಾಜರು ಕೇಳಿದರು ಭಂತೆ ನಾಗಸೇನ, ಬುದ್ಧ ಭಗವಾನರು 32 ಮಹಾಪುರುಷ ಲಕ್ಷಣಗಳನ್ನು ಮತ್ತು 180 ಉಪ ಮಹಾಪುರುಷ ಲಕ್ಷಣಗಳನ್ನು ಹೊಂದಿದ್ದುದು ನಿಜವೇ? ಅಂದರೆ ಚಿನ್ನದ ಕಾಂತಿಯ ಚರ್ಮವನ್ನು, ಮಾರುದ್ದಕ್ಕೂ ಪರಮದಿವ್ಯವಾದ ಪ್ರಭೆಯನ್ನು, ಮುಂತಾದವನ್ನು ಹೊಂದಿದ್ದು ನಿಜವೇ? (64)
ಹೌದು ಮಹಾರಾಜ, ಬುದ್ಧರು ಅಂತಹ ಮಹಾಪುರುಷ ಲಕ್ಷಣಗಳನ್ನೆಲ್ಲಾ ಹೊಂದಿದ್ದರು.
ಆದರೆ ಅವರ ತಂದೆ-ತಾಯಿಗಳಿಗೆ ಅಂತಹ ಲಕ್ಷಣವಿತ್ತೇ?
ಇಲ್ಲ ಮಹಾರಾಜ.
ಹಾಗಾದರೆ ಅವರು ಹಾಗೆ ಹುಟ್ಟಿದ್ದಾರೆ ಎಂದು ನೀವು ಹೇಳುತ್ತೀರಿ. ಆದರೆ ತಂದೆಯಂತೆ ಮಗ ಅಥವಾ ತಾಯಿಯಂತೆ ಮಗನಿರಬೇಕು ಅಥವಾ ತಂದೆಯವರ ಕಡೆಯಂತೆ ಅಥವಾ ತಾಯಿಯವರ ಕಡೆಯಂತಿರಬೇಕು ಅಲ್ಲವೇ?
ಆಗ ಥೇರರು ಹೀಗೆ ಪ್ರಶ್ನಿಸಿದರು ಓ ಮಹಾರಾಜ, ಶತದಳದ ಕಮಲವು ಇರುವುದೇ?
ಹೌದು ಇರುವುದು.
ಎಲ್ಲಿ ಅದು ಉದಯಿಸುವುದು?
ಅದು ಕೆಸರಿನಲ್ಲಿ ಉದಯಿಸುವುದು ಮತ್ತು ನೀರಿನಲ್ಲಿ ಅದು ಪರಿಪೂರ್ಣ ವಾಗುವುದು.
ಆದರೆ ಕಮಲವು ಸರೋವರದ ಕೆಸರಿನಂತೆ ಕಾಣುವುದೇ? ಅಂದರೆ ಎಲ್ಲಿಂದ ಅದು ಬೆಳೆಯುವುದೋ ಅದರ ಬಣ್ಣವಾಗಲಿ ಅಥವಾ ವಾಸನೆಯಾಗಲಿ ಅಥವಾ ರುಚಿಯಾಗಲಿ ಸಾಮ್ಯತೆ ಹೋಲುವುದೇ?
ಖಂಡಿತ ಇಲ್ಲ.
ಹಾಗಾದರೆ ನೀರಿನಂತೆ ಕಾಣುವುದೇ?
ಇಲ್ಲ.
ಹಾಗೆಯೇ ಮಹಾರಾಜ, ಬುದ್ಧಭಗವಾನರು ಮಹಾಪುರುಷ ಲಕ್ಷಣಗಳನ್ನು ಹೊಂದಿದ್ದರೂ ಸಹಾ ಅವರ ತಾಯ್ತಂದೆಯರು ಹೊಂದಿರಲಿಲ್ಲ.
ಚೆನ್ನಾಗಿ ಉತ್ತರಿಸಿದಿರಿ ನಾಗಸೇನ.

4. ಭಗವಾನರ ಬ್ರಹ್ಮಚರ್ಯೆಯ ಪ್ರಶ್ನೆ

ರಾಜರು ಕೇಳಿದರು ಭಂತೆ ನಾಗಸೇನ, ಬುದ್ಧ ಭಗವಾನರು ಬ್ರಹ್ಮಚಾರಿಗಳೇ?(65)
ಹೌದು ಭಗವಾನರು ಬ್ರಹ್ಮಚಾರಿಗಳಾಗಿದ್ದರು.
ಹಾಗಾದರೆ ನಾಗಸೇನ ಅವರು ಬ್ರಹ್ಮ ಹಿಂಬಾಲಕರಾಗಿದ್ದರೇ?
ಓ ರಾಜ, ನೀವು ಆನೆಯನ್ನು ಹೊಂದಿದ್ದೀರಿ ಅಲ್ಲವೆ?
ಹೌದು.
ಆನೆಯು ಕ್ರೌಂಚ ಪಕ್ಷಿಯ ಹಾಗೆ ಕೂಗುತ್ತದೆ ಅಲ್ಲವೇ?
ಹೌದು.
ಹಾಗಾದರೆ ಆನೆಗಳು ಕ್ರೌಂಚ ಪಕ್ಷಿಗಳ ಹಿಂಬಾಲಕರೇ?
ಖಂಡಿತ ಅಲ್ಲ.
ಮಹಾರಾಜ, ಈಗ ಹೇಳಿ ಬ್ರಹ್ಮರವರು ಬುದ್ಧಿಯುಳ್ಳವರೋ, ಬುದ್ಧಿರಹಿತರೋ?
ಅವರು ಬುದ್ಧಿಯುಳ್ಳವರು.
ಹಾಗಾದರೆ (ನಿಮ್ಮ ವಾದದ ಪ್ರಕಾರ) ಬ್ರಹ್ಮ ಬುದ್ಧರ ಹಿಂಬಾಲಕರಾಗಿದ್ದಾರೆ.
ನೀವು ಉತ್ತರಿಸುವುದರಲ್ಲಿ ಮಹಾ ಚತುರರು ನಾಗಸೇನ.

5. ಬುದ್ಧರ ಉಪಸಂಪದದ ಬಗ್ಗೆ ಪ್ರಶ್ನೆ

ರಾಜರು ಕೇಳಿದರು ಭಂತೆ ನಾಗಸೇನ, ಉಪಸಂಪದವು ಸುಂದರ
ವಿಷಯವೇ? (66)
ಹೌದು, ಒಳ್ಳೆಯ ಹಾಗು ಸುಂದರ ವಿಷಯವೇ ಆಗಿದೆ.
ಆದರೆ ಬುದ್ಧರು ಉಪಸಂಪದವನ್ನು ಹೊಂದಿದ್ದರೆ ಅಥವಾ ಇಲ್ಲವೇ?
ಮಹಾರಾಜ, ಯಾವಾಗ ಬುದ್ಧಭಗವಾನರು ಬೋಧಿವೃಕ್ಷದ ಅಡಿಯಲ್ಲಿ ಸರ್ವಜ್ಞತಾಪ್ರಾಪ್ತಿ ಗಳಿಸಿದರೋ ಅದೇ ಅವರ ಉಪಸಂಪದವಾಗಿತ್ತು. ಅವರು ಪರರ ಬಳಿಯಲ್ಲಿ ಉಪಸಂಪದ ಪಡೆಯುವವರಲ್ಲ. ಅವರಿಂದ ಪರರು ಉಪಸಂಪದ ಪಡೆಯಬೇಕಾಗಿದೆ.

6. ಅಸ್ಸು ಬೆಸಜ್ಜಾಭಸಜ್ಜ ಪನ್ಹೋ (ಆಶ್ರುವಿನ ಪ್ರಶ್ನೆ)

ರಾಜರು ಕೇಳಿದರು ಭಂತೆ ನಾಗಸೇನ, ಒಬ್ಬ ತನ್ನ ತಾಯಿಯ ಮೃತ್ಯು ಕಂಡು ಆಶ್ರು ಸುರಿಸುತ್ತಾನೆ, ಇನ್ನೊಬ್ಬ ಧಮ್ಮ (ಸತ್ಯ) ಪ್ರೇಮಕ್ಕಾಗಿ ರೋಧಿಸುತ್ತಾನೆ. ಇವೆರಡರಲ್ಲಿ ಯಾವುದು ಔಷಧವಾಗಿದೆ? (67)
ಓ ಮಹಾರಾಜ, ಮೊದಲನೆಯವನ ಆಶ್ರುವು ರಾಗದ್ವೇಷ ಮೋಹಾಗ್ನಿಗಳ ಅಗ್ನಿಯಿಂದ ಮಲಿನಗೊಂಡು ಬಿಸಿಯಾದ ರಂಧ್ರವಾಗಿದೆ, ಮತ್ತೊಬ್ಬನದು ಮಲರಹಿತ ಮತ್ತು ಶಾಂತವಾದುದು. ಈ ಪ್ರಶಾಂತತೆಯಲ್ಲಿ ಮತ್ತು ತಂಪಿನಲ್ಲೇ ಔಷಧಿಯಿದೆ. ಆದರೆ ತಾಪ ಮತ್ತು ಬಾವೋದ್ರೇಕದಲ್ಲಿ ಔಷಧಿಯಿಲ್ಲ.
ತುಂಬಾ ಒಳ್ಳೆಯದು ನಾಗಸೇನ.

7. ಸರಾಗ, ವಿತರಾಗ, ನಾನಕಾರಣ ಪ್ರಶ್ನೆ

ರಾಜರು ಕೇಳಿದರು ನಾಗಸೇನ (ರಾಗಯುಕ್ತ)ನಲ್ಲಿ ಮತ್ತು ವಿರಾಗಯುಕ್ತ (ರಾಗರಹಿತ) ನಲ್ಲಿ, ಇವರಿಬ್ಬರಲ್ಲಿರುವ ವ್ಯತ್ಯಾಸವೇನು? (68)
ಓ ರಾಜ, ಒಬ್ಬ ಗುಲಾಮನಾಗಿದ್ದಾನೆ ಮತ್ತು ಮತ್ತೊಬ್ಬನಿಲ್ಲ.
ಅಂದರೆ ಅದರರ್ಥ?
ಒಬ್ಬ ಕೊರತೆಯಿಂದ ಕೂಡಿದ್ದಾನೆ (ಅನರ್ಥಕ), ಇನ್ನೊಬ್ಬ ಕೊರತೆಯಿಂದ ಕೂಡಿಲ್ಲ (ಅರ್ಥಕ).
ಭಂತೆ ನಾನು ಇದನ್ನು ಹೇಗೆ ಕಂಡಿದ್ದೇನೆ, ಯಾರು ರಾಗಯುಕ್ತರು, ವಿರಾಗಯುಕ್ತರು? ಇಬ್ಬರು ಸಹಾ ಮೃದುವಾಗಿ ಅಥವಾ ಗಟ್ಟಿಯಾದ ತಿನಿಸುಗಳನ್ನು ತಿನ್ನಲು ಇಚ್ಛಿಸುತ್ತಾರೆ ಮತ್ತು ಇಬ್ಬರಲ್ಲೂ ಇಚ್ಛೆಗಳಿವೆ. ಈಗ ತಪ್ಪೇನು (ವ್ಯತ್ಯಾಸವೇನು)?
ಓ ಮಹಾರಾಜ, ರಾಗಯುಕ್ತನು ಆಹಾರ ತಿನ್ನುವಾಗ ರುಚಿಯಲ್ಲಿ ಆನಂದಿಸುತ್ತಾನೆ ಮತ್ತು ಆತನಲ್ಲಿ ರುಚಿಯಿಂದ ರಾಗವು ಉದಯಿಸುತ್ತದೆ. ಆದರೆ ರಾಗರಹಿತನು (ವೀತರಾಗನು) ಕೇವಲ ರುಚಿಯನ್ನು ಗ್ರಹಿಸುತ್ತಾನೆ ಹೊರತು ಆತನಲ್ಲಿ ರಾಗವು ಉದಯಿಸುವುದಿಲ್ಲ.
ಬಹು ಚೆನ್ನಾಗಿ ವಿವರಿಸಿದಿರಿ ನಾಗಸೇನ.

8. ಪಞ್ಞಾ ಪತಿಟ್ಠಾನ ಪನ್ಹೊ (ಪ್ರಜ್ಞೆಯ ನೆಲೆಯ ಪ್ರಶ್ನೆ)

ರಾಜನು ಕೇಳಿದನು ಭಂತೆ ನಾಗಸೇನ, ಪ್ರಜ್ಞಾವು ಎಲ್ಲಿ ನೆಲೆಸಿರುತ್ತದೆ? (69)
ಎಲ್ಲೂ ಇಲ್ಲ, ಓ ರಾಜ.
ಹಾಗಾದರೆ ಭಂತೆ, ಪ್ರಜ್ಞಾದಂತಹ ವಿಷಯವೇ ಇಲ್ಲ.
ಓ ರಾಜ, ವಾಯುವು ಎಲ್ಲಿ ನೆಲೆಸಿರುತ್ತದೆ?
ಎಲ್ಲೂ ಇಲ್ಲ, ಭಂತೆ.
ಹಾಗಾದರೆ ವಾಯುವಿನಂತಹ ವಿಷಯವೇ ಇಲ್ಲ.
ಬಹು ಚೆನ್ನಾಗಿ ಪ್ರತ್ಯುತ್ತರ ನೀಡಿದಿರಿ ನಾಗಸೇನ.

9. ಸಂಸಾರ ಪ್ರಶ್ನೆ

ರಾಜರು ಕೇಳಿದರು ಭಂತೆ ನಾಗಸೇನ, ನೀವು ಸಂಸಾರ ಎಂದು ಹೇಳುತ್ತೀರಿ, ಏನಿದರ ಅರ್ಥ? (70)
ಓ ಮಹಾರಾಜ, ಒಂದು ಜೀವಿಯು ಇಲ್ಲಿ ಜನ್ಮಿಸುತ್ತದೆ, ಇಲ್ಲೇ ಸಾಯುತ್ತದೆ. ಇಲ್ಲಿಂದ ಸತ್ತು ಮತ್ತೆಲ್ಲೋ ಜನ್ಮಿಸುತ್ತದೆ. ನಂತರ ಅಲ್ಲಿಂದ ಸತ್ತು, ಮಗದೆಲ್ಲೋ ಜನ್ಮಿಸುತ್ತದೆ. ಇದನ್ನೇ ಸಂಸಾರ ಎನ್ನುವುದು.
ಉಪಮೆಯಿಂದ ಸ್ಪಷ್ಟಪಡಿಸಿರಿ.
ಒಬ್ಬನು ಮಾವಿನ ಹಣ್ಣನ್ನು ತಿಂದನಂತರ ನೆಲದಲ್ಲಿ ಅದರ ಬೀಜವನ್ನು ನೆಡುತ್ತಾನೆ, ಅದರಿಂದ ಮರವೊಂದು ಬರುತ್ತದೆ, ನಂತರ ಅದು ಸಹಾ ಫಲಗಳನ್ನು ನೀಡುತ್ತದೆ. ಆ ಫಲದಿಂದ ಮತ್ತೆ ಬೀಜ, ಮತ್ತೆ ಬೀಜದಿಂದ ಮರ. ಇದು ಅಂತ್ಯವಿಲ್ಲದ ಮಾವಿನ ಕ್ರಿಯೆಯಾಗಿದೆ.
ತುಂಬಾ ಒಳ್ಳೆಯದು ನಾಗಸೇನ.

10. ಚಿರಕತ ಸರಣ ಪನ್ಹೋ (ಯಾವುದರಿಂದ ನೆನಪು ಪ್ರಶ್ನೆ)

ರಾಜರು ಕೇಳಿದರು ಭಂತೆ ನಾಗಸೇನ, ಒಬ್ಬನು ತನ್ನ ಹಿಂದಿನ ಗತವನ್ನು ಯಾವುದರಿಂದ ಸ್ಮರಿಸಿಕೊಳ್ಳುತ್ತಾನೆ. (71)
ಸ್ಮೃತಿಯಿಂದ ಮಹಾರಾಜ.
ಭಂತೆ, ಆದರೆ ನಾವು ಸ್ಮರಿಸುವುದು ಚಿತ್ತ (ಮನಸ್ಸು)ದಿಂದ ಹೊರತು ಸ್ಮೃತಿಯಿಂದ ಅಲ್ಲ ಅಲ್ಲವೇ?
ಓ ಮಹಾರಾಜ, ನೀವು ಯಾವುದಾದರೂ ವ್ಯವಹಾರವನ್ನು ಸ್ಮರಿಸಬಲ್ಲಿರಾ?
ಅದನ್ನು ನೀವು ಮಾಡಿ ಮತ್ತು ನಂತರ ಮರೆತಿರುವುದು ಬಹಳಷ್ಟಿದೆ ಅಲ್ಲವೆ?
ಹೌದು.
ಮತ್ತೆ ಹಾಗೆ ಆದಾಗ, ನೀವು ಚಿತ್ತ (ಮನಸ್ಸು)ವೇ ಇಲ್ಲದವರಾದರೇ?
ಇಲ್ಲ, ಆದರೆ ನನ್ನ ಸ್ಮೃತಿಯು ನನ್ನನ್ನು ಸೋಲಿಸಿತು.
ಹಾಗಿದ್ದ ಮೇಲೆ ಸ್ಮರಿಸುವುದು ಚಿತ್ತದಿಂದ ಎಂದು ಏಕೆ ಹೇಳುವಿರಿ? ನಾವು ಸ್ಮರಿಸುವುದು ಸ್ಮೃತಿಯಿಂದ ಅಲ್ಲವೇ?
ಹೌದು, ನೀವು ತುಂಬಾ ವಿಶ್ಲೇಷಣೆಯಿಂದ ಉತ್ತರಿಸುವಿರಿ ನಾಗಸೇನ.

11. ಅಭಿಜಾನಂತ ಸತಿ ಪನ್ಹೊ (ನೆನಪಿನ ಮೂಲ ಪ್ರಶ್ನೆ)

ರಾಜರು ಕೇಳಿದರು ಭಂತೆ ನಾಗಸೇನ, ಸ್ಮರಣೆಯು ಯಾವಾಗಲು ಕತರ್ೃಸಂಬಂಧವಾಗಿ ಉದಯಿಸುತ್ತದೋ ಅಥವಾ ಅದು ಬಾಹ್ಯ ಸಲಹೆಯಿಂದ ಕದಡಿ ಉದಯಿಸುತ್ತದೋ? (72)
ಎರಡರಿಂದಲೂ ಉದಯಿಸುತ್ತದೆ.
ಆದರೆ ಎಲ್ಲಾ ನೆನಪುಗಳು ಕತರ್ೃ ಸಂಬಂಧವಾಗಿಯೇ ಉದಯಿಸುವುದಿಲ್ಲವೇ? ಮತ್ತು ಕೃತಕವಾಗಿ ಎಂದಿಗೂ ಇಲ್ಲ ಎನಿಸುತ್ತದೆ.
ಓ ಮಹಾರಾಜ, ಕೃತಕ ನೆನಪು, ಮುಟ್ಟಿಸುವಂತಹ ನೆನಪು ಎಂಬುದಿಲ್ಲದಿದ್ದರೆ ಶಿಲ್ಪಿಗಳು ತಮ್ಮ ಅಭ್ಯಾಸವನ್ನು ಮಾಡುವ ಅಗತ್ಯವಿರುತ್ತಿರಲಿಲ್ಲ. ಅಥವಾ ಕಲೆ ಅಥವಾ ಕಲಿಯುವಿಕೆ ಮತ್ತು ಗುರುಗಳು ವ್ಯರ್ಥವಾಗುತ್ತಿದ್ದರು. ಆದರೆ ಎಲ್ಲವೂ ಅದಕ್ಕೆ ವಿರುದ್ಧವಾಗಿದೆ.
ಚೆನ್ನಾಗಿ ವಿವರಿಸಿದಿರಿ ನಾಗಸೇನ.
ಇಲ್ಲಿಗೆ ಆರನೆಯ ವಗ್ಗವು ಮುಗಿಯಿತು (ಇದರಲ್ಲಿ 11 ಪ್ರಶ್ನೆಗಳಿವೆ) 

No comments:

Post a Comment