Saturday 7 April 2018

milinda panha 10 ಧೂತಂಗಗಳು (ಪರಿಶುದ್ಧತೆಯ ಸಾಧಕ ನಿಯಮಗಳು)

ಧೂತಂಗಗಳು (ಪರಿಶುದ್ಧತೆಯ ಸಾಧಕ ನಿಯಮಗಳು)



ಮಹಾರಾಜರು ಅರಣ್ಯದ ಭಿಕ್ಖುಗಳನ್ನು ಕಂಡರು. ಭಿಕ್ಷುಗಳು ಏಕಾಂಗಿಯಾಗಿ, ಜನರಿಂದ ದೂರವಾಗಿ, ಕಠಿಣವಾದ ನಿಯಮಗಳನ್ನು ಪಾಲಿಸುತ್ತ ಇರುವುದನ್ನು ಕಂಡರು ಮತ್ತು ಹಾಗೆಯೇ ಗೃಹಗಳಲ್ಲಿರುವ ಗೃಹಸ್ಥರನ್ನು ಕಂಡರು. ಅವರು ಸಹಾ ಅನಾಗಾಮಿಗಳಾಗಿ, ಲೋಕೋತ್ತರ ಫಲಗಳನ್ನು ಅನುಭವಿಸುತ್ತ ಸುಖಿಯಾಗಿರುವುದನ್ನು ಕಂಡರು. ಇವೆರಡು ಘಟನೆಗಳನ್ನು ತುಲನಾತ್ಮಕತೆ ಮಾಡುತ್ತ, ಆಳವಾದ ಚಿಂತನೆಯಲ್ಲಿ ಅವರು ಮುಳುಗಿದರು: ಗೃಹಸ್ಥರು ಸಹಾ ಸತ್ಯ ಸಾಕ್ಷಾತ್ಕಾರಕ್ಕಾಗಿ, ಲೋಕೋತ್ತರ ಫಲಗಳನ್ನು ಪಡೆಯಲು ಸಾಧ್ಯವಾಗುವ ಹಾಗಿದ್ದರೆ, ಖಂಡಿತವಾಗಿಯು ಈ ಕಠಿಣ ನಿಯಮಗಳಾದ (ಧೂತಾಂಗಗಳು) ವ್ಯರ್ಥವೇ ಸರಿ. ಇದರ ಬಗ್ಗೆ ಶ್ರೇಷ್ಠ ಗುರುಗಳು, ಪ್ರಾಜ್ಞರು, ತಿಪಿಟಕಚಾರ್ಯರು, ಚಚರ್ೆಯಲ್ಲಿ ನಿಪುಣರು ಆದ ನಾಗಸೇನರವರೇ ನನ್ನ ಸಂಶಯಗಳನ್ನು ನಿವಾರಿಸುತ್ತಾರೆ.

ನಂತರ ಮಿಲಿಂದ ಮಹಾರಾಜ ನಾಗಸೇನರು ಇರುವಲ್ಲಿಗೆ ಹೋಗಿ ಭಾಗಿ ವಂದಿಸಿದರು. ನಂತರ ಒಂದು ಪಕ್ಕದಲ್ಲಿ ಕುಳಿತರು ಮತ್ತು ಕುಳಿತು ಆದಮೇಲೆ ಭಂತೆ ನಾಗಸೇನರವರಿಗೆ ಹೀಗೆ ಹೇಳಿದರು: ಭಂತೆ ನಾಗಸೇನ, ಯಾರಾದರೂ ಗೃಹದಲ್ಲೇ ಗೃಹಸ್ಥನಾಗಿದ್ದುಕೊಂಡು ಇಂದ್ರೀಯಸುಖಗಳನ್ನು ಅನುಭವಿಸುತ್ತಲೇ ಪತ್ನಿ ಪುತ್ರರೊಂದಿಗೆ ವಾಸಿಸುತ್ತಲೇ, ಕಾಶಿಯ ಚಂದನವನ್ನು ಲೇಪಿಸುತ್ತಲೇ, ಹೂಹಾರ, ಸೌಗಂಧ ದ್ರವ್ಯ ಬಳಸುತ್ತಲೇ, ಚಿನ್ನ ಬೆಳ್ಳಿ ಸ್ವೀಕರಿಸುತ್ತಲೇ ಕುಸಲ ಕಲೆಯ ವಸ್ತ್ರಗಳನ್ನು ಧರಿಸುತ್ತಲೇ, ವಜ್ರ ವೈಢೂರ್ಯ, ಮುತ್ತು ಚಿನ್ನಗಳನ್ನು ಧರಿಸುತ್ತಲೇ, ಪರಮಶ್ರೇಷ್ಠವಾದ ನಿಬ್ಬಾಣವನ್ನು ಸಾಕ್ಷಾತ್ಕರಿಸಿರುವರೇ? (213)

ಮಹಾರಾಜ, ಕೇವಲ ನೂರಲ್ಲ, ಇನ್ನೂರಲ್ಲ, ಐದು ಅಥವಾ ಆರುನೂರಲ್ಲ ಅಥವಾ ಸಾವಿರವಲ್ಲ ಅಥವಾ ಲಕ್ಷವಲ್ಲ ಅಥವಾ ಕೋಟಿಯಲ್ಲ, ಕೋಟಿ ಶತಸಹಸ್ರವಲ್ಲ, ಲಕ್ಷ ಸಹಸ್ರ ಕೋಟಿಯಷ್ಟು ಗೃಹಸ್ಥರು ನಿಬ್ಬಾಣವನ್ನು ಸಾಕ್ಷಾತ್ಕರಿಸಿದ್ದಾರೆ. ಯಾವುದರಿಂದ ಇದನ್ನು ನಾನು ನಿಮಗೆ ಖಚಿತಪಡಿಸಲಿ.

ನಿಮ್ಮ ಮುಖಾಂತರವೇ ತಿಳಿಯಪಡಿಸಿ.

ಹಾಗಾದರೆ ಓ ಮಹಾರಾಜ, ನಾನು ವಿವರಿಸುವೆ. ಯಾವ ಬುದ್ಧ ಭಗವಾನರು ನವಾಂಗ ಶಾಸನವಿದೆಯೋ, ಯಾವುದೋ ಪರಿಶುದ್ಧಕ್ಕೆ ವ್ಯವಹರಿಸುವುದೋ ಮತ್ತು ಲೋಕೋತ್ತರ ಮಾರ್ಗ ಪ್ರಾಪ್ತಿಗೆ ಸಹಾಯಕವೋ, ಧೂತಾಂಗುವಿಗೆ, ಅದಕ್ಕೆಲ್ಲಕ್ಕೂ ಸಂಬಂಧಿಸಿದುದು ನಾನು ಹೇಳುವೆ. ಓ ಮಹಾರಾಜ, ಹೇಗೆ ಮಳೆಯ ನೀರು, ಎತ್ತರವಾದ ಪ್ರದೇಶದಲ್ಲೂ ಮತ್ತು ಸಮತಟ್ಟಾದ ಪ್ರದೇಶದಲ್ಲೂ ಹಾಗೆಯೇ ತಗ್ಗಾದ ಭೂಮಿಯಲ್ಲೂ ಎಲ್ಲಾಕಡೆ ಬಿದ್ದು, ಹರಿಯುವುದೋ, ಒಣಭೂಮಿಯನ್ನು ಒದ್ದೆ ಮಾಡುವುದೋ ಹಾಗೇ ಆ ಜಲವೆಲ್ಲಾ ಹರಿಯುತ್ತ ಸಮುದ್ರವನ್ನು ಸೇರುತ್ತದೋ, ಹೀಗಾಗಿ ಆ ಎಲ್ಲಾ ಮಾರ್ಗಗಳು ಸೇರಿ, ಸಂಪರ್ಕವಾಗುವುವೋ ಮತ್ತು ಹಾಗೆಯೇ ನನ್ನ ಅನುಭವ ಮತ್ತು ಜ್ಞಾನಗಳು ವ್ಯಕ್ತಗೊಂಡು ಫಲ ನೀಡುವುವು, ಹೀಗೆ ಈ ವಿಷಯವು ಪೂರ್ಣವಾಗಿ ವಿಶ್ಲೇಷಿತಗೊಂಡು, ಸಾಕಾರಗೊಂಡು, ಪರಿಪೂರ್ಣವಾಗಿ ಸಮಾನಿತವಾಗುತ್ತದೆ. ಓ ಮಹಾರಾಜ, ಸಮರ್ಥ ಲೇಖಕನೊಬ್ಬ ಕೋರಿಕೆಯಿಂದ ತನ್ನ ಕಲೆ ಪ್ರದಶರ್ಿಸಿದರೆ ಆತನ ಬರವಣಿಗೆಯಲ್ಲಿ ಕೌಶಲ್ಯವು, ತರ್ಕ ವಿವರಣೆ, ಜ್ಞಾನ, ಅನುಭವ, ಇವೆಲ್ಲಾ ಕಂಡು ಆತನ ಲೇಖನ ಪೂರ್ಣವಾಗಿ, ದೋಷರಹಿತವಾಗಿರುತ್ತದೆ. ಹಾಗೆಯೇ ನಾನು ಸಹಾ ನನ್ನ ತರ್ಕ, ಅನುಭವ, ಜ್ಞಾನ, ವಿಶ್ಲೇಷಣೆಗಳಿಂದ ವ್ಯಕ್ತಗೊಂಡು ಸಾಕಾರಗೊಂಡು ವಿವರಿಸುತ್ತಿರುವೆನು.

ಓ ಮಹಾರಾಜ, ಶ್ರಾವಸ್ತಿ ನಗರದಲ್ಲಿ, 50 ದಶಲಕ್ಷಗಳಷ್ಟು ಭಗವಾನರ ಶಿಷ್ಯರಿದ್ದರು. ಶ್ರದ್ಧೋಪಾಸಕರು, ಶ್ರದ್ಧೋಪಾಸಕಿಯರು. ಅವರೆಲ್ಲರೂ ಮಾರ್ಗದಲ್ಲಿ ಚಲಿಸುವವರಾಗಿದ್ದರು ಮತ್ತು ಅವರಲ್ಲಿ 375 ಸಾವಿರ ಜನರು ಅನಾಗಾಮಿ ಫಲ ಪಡೆದಿದ್ದರು ಮತ್ತು ಅವರೆಲ್ಲರೂ ಗೃಹಸ್ಥರಾಗಿದ್ದರು ಹೊರತು ಸಂಘದಲ್ಲಿರಲಿಲ್ಲ ಮತ್ತು ಗಂಡಂಬ ವೃಕ್ಷದ ಮೂಲದಲ್ಲಿ ಯಮಕ ಪಟಿಹಾರಿಯ ಪವಾಡ ನಡೆದಾಗ, ನಂತರದ ಬೋಧನೆಯಿಂದ ಇನ್ನೂರು ದಶಲಕ್ಷ ಜೀವಿಗಳು ಆರ್ಯಸತ್ಯಗಳನ್ನು ಸಾಕ್ಷಾತ್ಕರಿಸಿದರು. ಮತ್ತೆ ರಾಹುಲೋವಾದ ಸುತ್ತ ಮತ್ತು ಮಹಾಮಂಗಳ ಸುತ್ತ ಮತ್ತು ಸಮಚಿತ್ತಪರಿಯಾಯನಲ್ಲಿ, ಪರಾಭವಸುತ್ತ, ಪುರಭೇದಸುತ್ತ, ಕಲಹವಿವಾದಸುತ್ತ, ಚೂಳಬ್ಯೂಹಸುತ್ತ, ಮಹಾಬ್ಯೂಹಸುತ್ತ, ತುವಟಕಸುತ್ತ, ಸಾರಿಪುತ್ತ ಸುತ್ತ ಇವೆಲ್ಲಾ ಸುತ್ತಗಳನ್ನು ಭಗವಾನರು ಬೋಧಿಸುವಾಗ ಅಸಂಖ್ಯ ಜೀವಿಗಳು ಆರ್ಯಸತ್ಯಗಳ ಜ್ಞಾನವನ್ನು ಪಡೆದರು. ರಾಜಗೃಹ ನಗರದಲ್ಲೇ 350 ಸಾವಿರ ಉಪಾಸಕ, ಉಪಾಸಕಿಯರು ಮತ್ತು ಶಿಷ್ಯರು ಮಾರ್ಗದಲ್ಲಿ ನಡೆಯುವವರಾಗಿದ್ದರು.
ಮತ್ತು ಧನಪಾಲ (ನಾಲಾಗಿರಿ) ಮಹಾ ಆನೆಯನ್ನು ಧಮಿಸುವಾಗ 900 ದಶಲಕ್ಷ ಜೀವಿಗಳು ಆರ್ಯಸತ್ಯಗಳ ಜ್ಞಾನ ಪಡೆದರು. ಮತ್ತೆ ಪಾಸಾಣಿಕ ಚೇತಿಯಾ ಬಳಿ ಪಾರಾಯನ ಸುತ್ತ ಬೋಧಿಸುವಾಗ, 150 ದಶಲಕ್ಷ ಜೀವಿಗಳು ಮತ್ತು ಇಂದಸಾಲ ಗುಹೆಯ ಬಳಿ 800 ದಶಲಕ್ಷ ದೇವತೆಗಳು ಮತ್ತು ವಾರಣಾಸಿಯ ಬಳಿ ಇಸಿಪಟ್ಟನ ಮೃಗದಾಮದ ಬಳಿ ಪ್ರಥಮ ಬೋಧನೆ ಮಾಡುವಾಗ, 180 ದಶಲಕ್ಷ ಬ್ರಾಹ್ಮಣರು ಮತ್ತು ಅಪರಿಮಾಣ ಇತರರು. ಮತ್ತೆ ತಾವತಿಂಸ ತುಸಿತಾ ಲೋಕದ ಭವನದಲ್ಲಿ ಪಂಡು ಕಂಬಲ ಶಿಲೆಯ ಮೇಲೆ ಅಭಿಧಮ್ಮ ವಿವರಿಸುವಾಗ 800 ದಶಲಕ್ಷ ದೇವತೆಗಳು. ಮತ್ತು ಅಲ್ಲಿಂದ ಸಂಕಸ್ಸ ನಗರದ ಹೆಬ್ಬಾಗಿಲಿನಲ್ಲಿ ಇಳಿದು ಲೋಕ ವಿವರಣ ಪಾಟಿಹಾರಿಯೆ ಪವಾಡ ಮಾಡುವಾಗ 300 ದಶಲಕ್ಷ ಶ್ರದ್ಧಾಳುಗಳು ಮತ್ತು ದೇವತೆಗಳು ಆರ್ಯಸತ್ಯಗಳ ಜ್ಞಾನವನ್ನು ಪಡೆದರು. ಮತ್ತೆ ಕಪಿಲವಸ್ತುವಿನಲ್ಲಿ ಶಾಕ್ಯರ ನಡುವೆ ನಿಗ್ರೋಧ ಆರಾಮದಲ್ಲಿ ಬುದ್ಧವಂಶವನ್ನು ಬೋಧಿಸುವಾಗ ಮತ್ತು ಮಹಾಸಮಯ ಸುತ್ತವನ್ನು ದೇವತೆಗಳಿಗೆ ಬೋಧಿಸುವಾಗ ಅಸಂಖ್ಯಾತ ದೇವತೆಗಳು ಧಮ್ಮ ಸಾಕ್ಷಾತ್ಕಾರ ಪಡೆದರು. ಮತ್ತೆ ಗರಹದಿನ್ನನ ಸುಮನ ಹೂಗಾರನಿಂದ ಆದ ಸಭೆಯಲ್ಲಿ, ಶ್ರೇಷ್ಠಿ ಆನಂದ, ಜಂಬುಕನಗ್ನ ಸಮಣ, ಮರಚೂಕದೇವ, ಮಾತ್ತಕುಂಡಲಿ ದೇವಿ, ಸುಲಸ ನರ್ತಕಿ, ಸಿರಿಮಾ ನರ್ತಕಿ, ಸುಭದ್ರ ನೇಯ್ಗೆಯವನ ಪುತ್ರಿ, ಸಾಕೇತ ಬ್ರಾಹ್ಮಣನ, ಸೂನಾಪರಂತ, ಸಕ್ಕ ಪ್ರಶ್ನೆಯ ಪ್ರಸಂಗ, ತಿರೊಕಡ್ಡಸುತ್ತ ಮತ್ತು ರತನಸುತ್ತ ಇವೆಲ್ಲಾ ಪ್ರತಿ ಸುತ್ತದ ಘಟನೆಗಳಲ್ಲಿ ಸುತ್ತ ಪ್ರವಚಿಸುವಾಗ 84 ಸಾವಿರ ಜನರು ಧಮ್ಮ ಸಾಕ್ಷಾತ್ಕಾರ ಪಡೆದರು. ಓ ಮಹಾರಾಜ ಎಲ್ಲಿಯವರೆಗೆ ಭಗವಾನರು ಈ ಲೋಕದಲ್ಲಿ ಇರುವರೋ, ಎಲ್ಲಿಯವರೆಗೆ ಮೂರು ಮಂಡಲಗಳಲ್ಲಿ 16 ಮಹಾಜನ ಪ್ರದೇಶಗಳಲ್ಲಿ ಅವರು ವಾಸಿಸಿದ್ದರೋ ಅಲ್ಲೆಲ್ಲಾ ಅಸಾಧಾರಣ ಸಂಗತಿಗಳು ನಡೆದು 2, 3, 4 ಅಥವಾ 5 ಅಥವಾ ಸಾವಿರ ಅಥವಾ ಲಕ್ಷ ಜನ ಮತ್ತು ದೇವತೆಗಳು ನಿಬ್ಬಾಣವನ್ನು ಸಾಕ್ಷಾತ್ಕರಿಸಿದ್ದಾರೆ, ಇವರಲ್ಲದೆ ದೇವತೆಗಳಲ್ಲಿ ಬಹುಪಾಲು ಗೃಹಸ್ಥರಾಗಿದ್ದರು. ಅವರು ಸಂಘವನ್ನು ಪ್ರವೇಶಿಸಿರಲಿಲ್ಲ ಮತ್ತು ಹಲವಾರು ದಶಲಕ್ಷ ದೇವತೆಗಳು ಬೋಗದ ಜೀವನದಲ್ಲೇ ಇದ್ದರೂ ಸಹಾ ನಿಬ್ಬಾಣದ ದರ್ಶನ ಪಡೆದಿದ್ದರು.

ಹಾಗಿರುವಾಗ ಭಂತೆ ನಾಗಸೇನರವರೇ, ಗೃಹಸ್ಥರು ಮನೆಯಲ್ಲಿದ್ದುಕೊಂಡೇ ಇಂದ್ರೀಯ ಸುಖಗಳನ್ನು ಅನುಭವಿಸಿಕೊಂಡೇ ನಿಬ್ಬಾಣವನ್ನು ದಶರ್ಿಸಬಲ್ಲವರಾಗಿದ್ದರೆ, ಈ ಕಠಿಣ ನಿಯಮಗಳ ಧೂತಂಗ ಅಗತ್ಯವಾದರೂ ಏತಕ್ಕೆ, ಇದರ ಉದ್ದೇಶವಾದರೂ ಏನು? ಇದು ಅನಾವಶ್ಯಕ ಎನಿಸುವುದಿಲ್ಲವೇ? ಭಂತೆ ನಾಗಸೇನ, ರೋಗಗಳೂ ಔಷಧ ಇಲ್ಲದೆಯೇ ತಗ್ಗುವುದಾದರೇ ವಾಂತಿಕಾರಕ ಅಥವಾ ಬೇಧಿಕಾರಕ ಔಷಧದಿಂದ ದೇಹವನ್ನು ದುರ್ಬಲಗೊಳಿಸುವ ಅಗತ್ಯವಾದರೂ ಏತಕ್ಕಾಗಿ? ಶತ್ರುವನ್ನು ಮುಷ್ಠಿಯಿಂದಲೇ ಧಮಿಸಬಹುದಾದರೆ ಕತ್ತಿಗಳು, ಈಟಿಗಳು, ಬಿಲ್ಲು-ಬಾಣಗಳು, ಗಧೆ ಇತ್ಯಾದಿಗಳು ಏತಕ್ಕಾಗಿ? ಮರವನ್ನು ಹಾಗೆಯೇ ಸುಲಭವಾಗಿ ಗಂಟುಗಳ, ಬಳ್ಳಿಗಳ, ಕೊಂಬೆ ರೆಂಬೆಗಳ ಸಹಾಯದಿಂದಲೇ ಹತ್ತಲು ಅನುಕೂಲಕರವಿರಬೇಕಾದರೆ ಉದ್ಧ ಬಲಿಷ್ಠತೆಯ ಏಣಿಯ ಅಗತ್ಯವಾದರೂ ಏತಕ್ಕಾಗಿ? ಬರಿ ನೆಲದಲ್ಲಿ ಮಲಗಿ ಅಂಗಾಗಗಳಿಗೆ ಹಿತವೆನಿಸುವುದಾದರೆ, ಅತ್ಯಂತ ವಿಶಾಲವಾದ ಚೆಂದದ ಮೃದು ಹಾಸಿಗೆಗಳು ಏಕೆ? ಅಗಮ್ಯವಾದ ಮರುಭೂಮಿಯನ್ನು ಒಬ್ಬನೇ ದಾಟಲು ಸುಲಭವಾಗಿರುವ ಹಾಗಿದ್ದರೆ ಶಸ್ತ್ರಾಸ್ತ್ರ ರಕ್ಷಕ ಪಡೆಯ ದಂಡಿನ ಅಗತ್ಯವೇಕೆ? ಒಬ್ಬನು ಬರಿಗೈಯಲ್ಲೇ ನದಿಯನ್ನು ದಾಟುವ ಹಾಗಿದ್ದರೆ ದೋಣಿಗಳು ಏತಕ್ಕಾಗಿ? ಒಬ್ಬನು ತನ್ನನ್ನು ಸಲಹಿಕೊಳ್ಳಲು ವಸತಿ ಆಹಾರವನ್ನು ತಾನೇ ಸಿದ್ಧಪಡಿಸಿಕೊಳ್ಳುವುದಾದರೆ ಪರರಿಗೆ, ಸೇವೆ, ಸ್ತುತಿ, ಅವರ ಹಿಂದೆ ಸುತ್ತಾಡುವಿಕೆ ಏಕೆ? ಒಬ್ಬನಿಗೆ ಸ್ವಾಭಾವಿಕ ಕೊಳದಲ್ಲೇ ಶುದ್ಧ ನೀರು ಸಿಗುವ ಹಾಗಿದ್ದರೆ ಆತನು ಏತಕ್ಕಾಗಿ ಬಾವಿ, ಕೊಳಗಳನ್ನು ಅಗೆಸಬೇಕು (ನಿಮರ್ಿಸಬೇಕು)? ಅದೇರೀತಿಯಾಗಿ ಪೂಜ್ಯ ನಾಗಸೇನ, ಗೃಹಸ್ಥನಾಗಿ ಜೀವಿಸಿ, ಇಂದ್ರೀಯ ಬೋಗದಲ್ಲಿ ನಲಿಯುತ್ತಲೇ ನಿಬ್ಬಾಣವನ್ನು ಸಾಕ್ಷಾತ್ಕರಿಸಬಹುದಿದ್ದರೆ, ಈ ಧೂತಂಗ ಕಠಿಣ ನಿಯಮಗಳ ಅಗತ್ಯ ವಾದರೂ ಏತಕ್ಕಾಗಿ? (214)

ಓ ಮಹಾರಾಜ, ಈ ಧೂತಾಂಗ (ಕಠಿಣ ನಿಯಮಗಳು) ಗಳಲ್ಲಿ 28 ಸದ್ಗುಣಗಳು ಅಡಕವಾಗಿವೆ. ಇವುಗಳ ಕಾರಣದಿಂದಾಗಿ ಬುದ್ಧರು ಇವನ್ನು ಇಷ್ಟಪಡುತ್ತಾರೆ ಮತ್ತು ಯಾವುದವು 28? ಈ ನಿಯಮಗಳ ಪಾಲನೆಯಿಂದ ಜೀವನವು ಪಾಪರಹಿತವಾಗಿರುತ್ತದೆ. ಸುಖಫಲ ನೀಡುತ್ತದೆ, ನಿಂದೆಗೆ ತಡೆಯುತ್ತವೆ. ಪರರಿಗೆ ದುಃಖ ನೀಡುವುದಿಲ್ಲ. ಅಭಯವು, ಇದರಿಂದ ಪರರಿಗೆ ಹಾನಿಯಲ್ಲ. ಒಳಿತಿನ ಮತ್ತು ಶ್ರದ್ಧೆಯ ವೃದ್ಧಿ, ದಬ್ಬಾಳಿಕೆಗೆ ಆಸ್ಪದವಿಲ್ಲ. ಆಮಾಯವು (ಮೋಸ ಇಲ್ಲದಿರುವಿಕೆ), ರಕ್ಷಣೆ ನೀಡುವುದು, ಬಯಕೆಗಳಿಗೆ ತೃಪ್ತಿ ನೀಡುತ್ತದೆ. ಎಲ್ಲಾ ಜೀವಿಗಳಿಗೂ ಪಳಗಿಸುತ್ತದೆ. ಇದು ಸ್ವ-ನಿಯಂತ್ರಣಕ್ಕೆ ಹಿತಕಾರಿ, ಇದು ಶಾಸನಕ್ಕೆ ಪ್ರತಿರೂಪವಾಗಿದೆ (ಸಮಣತ್ವಕ್ಕೆ ಪ್ರತಿರೂಪವಾಗಿದೆ). ಆತನು ಸ್ವಾವಲಂಬಿಯೂ ಆಗಿರುತ್ತಾನೆ (ಅನಿಸ್ಸಿತ್ತಂ). ಹಾಗೆಯೇ ಸ್ವತಂತ್ರನೂ ಆಗಿರುತ್ತಾನೆ (ವಿಪ್ಪಮುತ್ತಂ), ಇದು ರಾಗ ಕ್ಷಯಕಾರಿ, ದ್ವೇಷಕ್ಷಯಕಾರಿ, ಮೋಹಕ್ಷಯಕಾರಿ, ಅಹಂಕಾರವನ್ನು ನಾಶಗೊಳಿಸುತ್ತದೆ. ಕೆಟ್ಟ ಯೋಚನೆಗಳನ್ನು ಛೇದಿಸುತ್ತದೆ, ಸಂಶಯಗಳನ್ನು ನಾಶಗೊಳಿಸುತ್ತದೆ. ಜಡತೆಯನ್ನು ದೂರೀಕರಿಸುತ್ತದೆ, ಬೇಸರಿಸುವಿಕೆಯನ್ನು ಇಲ್ಲವಾಗಿಸುತ್ತದೆ. ಕ್ಷಮಾಗುಣ ಸಹನೆ ವೃದ್ಧಿಸುತ್ತದೆ. ಭಾರವಾದ ಕರ್ಮಫಲ (ಅತುಲ), ಅಪ್ರಮಾಣವು, ಸರ್ವ ದುಃಖದ ಅಂತ್ಯಕಾರಿ, ಇವೇ ಓ ಮಹಾರಾಜ, ಈ ನಿಯಮಗಳ 28 ಗುಣಗಳು. ಇವಕ್ಕೆ ಅಂತಹ ವಿಶೇಷ ಸದ್ಗುಣವಿರುವುದರಿಂದಲೇ ಬುದ್ಧರು ಸಹಾ ಇವಕ್ಕೆ ಪ್ರಿಯವೆಂದು ಬಗೆದು ಪಾಲಿಸುತ್ತಿದ್ದರು.

ಮತ್ತೆ ಯಾರೆಲ್ಲರೂ ಇದನ್ನು ಪಾಲಿಸುತ್ತಿರುವರೋ, ಅವರು 18 ಗುಣಗಳಿಂದ ಕೂಡಿರುತ್ತಾರೆ. ಯಾವುದದು 18? ಅವೆಂದರೆ: ಆತನ ಚಾರಿತ್ರ್ಯ ಶುದ್ಧವಾಗಿರುತ್ತದೆ. ಆತನ ಸಾಧನೆಯು ಸಿದ್ಧಿ ಪಡೆಯುತ್ತದೆ. ಆತನ ಕರ್ಮ ಮತ್ತು ವಚನಗಳು ರಕ್ಷಿತವಾಗುತ್ತದೆ. ಆತನ ಮನಸ್ಸು ಸುವಿಶುದ್ಧವಾಗುತ್ತದೆ. ಆತನ ಪ್ರಯತ್ನಶೀಲತೆಯು ದುರ್ಬಲವಾಗುವುದಿಲ್ಲ, ಬಲಿಷ್ಠವಾಗುತ್ತದೆ. ಆತನು ಎಲ್ಲಾ ಭಯಗಳಿಂದ ಮುಕ್ತನಾಗುತ್ತಾನೆ. ಆತನಲ್ಲಿ ಆತ್ಮದ (ವ್ಯಕ್ತಿತ್ವ)ದ ಎಲ್ಲಾ ದೃಷ್ಟಿಕೋನಗಳು ನಾಶವಾಗುತ್ತದೆ. ದ್ವೇಷವು ನಾಶವಾಗಿ, ಮೈತ್ರಿಯು ಪ್ರತಿಷ್ಠಾಪಿಸಲ್ಪಡುತ್ತದೆ. ಆತನಲ್ಲಿ ಆಹಾರದ ಬಗೆಗಿನ ದೃಷ್ಟಿಕೋನವು ನಾಶವಾಗಿ ಆಹಾರ (ಪರಿನ್ಯಾತ)ದ ಸ್ವಭಾವ, ವಿಕಾರ, ಕಂಡು ಆಹಾರ ಲೋಲುಪತೆಯಿಂದ ಮುಕ್ತನಾಗುತ್ತಾನೆ. ಸರ್ವಜೀವಿಗಳಿಂದ ಗೌರವಿಸಲ್ಪಡುತ್ತಾನೆ. ಭೋಜನವು ಮಿತವಾಗಿ ಸೇವಿಸುತ್ತಾನೆ, ಜಾಗರೂಕ ಮನಸ್ಕನಾಗುತ್ತಾನೆ. ಆತನು ಅನಿಕೇತನನಾಗಿ ಇಷ್ಟಬಂದಲ್ಲಿ ವಾಸಿಸುತ್ತಾನೆ, ಪಾಪದಿಂದ ಜಿಗುಪ್ಸೆ ತಾಳುತ್ತಾನೆ, ಏಕಾಂತತೆಯಲ್ಲಿ ಆನಂದಿಸುತ್ತಾನೆ, ಸತತವಾಗಿ ಅಪ್ರಮಾದಿಯಾಗಿರುತ್ತಾನೆ. ಇದೇ ಮಹಾರಾಜ, ಧುತಾಂಗಗಳಿಂದ ಲಭಿಸುವ 18 ಲಾಭಗಳು.

ಮತ್ತು ಮಹಾರಾಜ, ಈ 10 ಬಗೆಯ ವ್ಯಕ್ತಿಗಳು ಧುತಾಂಗಗಳ ಲಾಭಕ್ಕೆ ಅರ್ಹರಾಗಿರುತ್ತಾರೆ. ಅವರೆಂದರೆ: ಶ್ರದ್ಧೆಯಿಂದ ಕೂಡಿರುವವನು, ಪಾಪಲಜ್ಜೆಯಿಂದ ಕೂಡಿರುವವನು, ಧೈರ್ಯಶಾಲಿಯು, ಕುಹಕವಿಲ್ಲದವನು, ಸ್ವ-ಪ್ರಭುತ್ವ ಪಡೆದವನು, ಸ್ಥಿರನು, (ಲೋಲುಪತೆ ಇಲ್ಲದವನು), ವಿದ್ಯಾಕಾಮಿಯು, ಆನಂದದಿಂದ ಕಠಿಣವಾದ ಕಾರ್ಯ ಮಾಡಲು ಸಿದ್ಧನಾದ ದೃಢಮನಸ್ಕನು, ಬಹುಚಿಂತನಶೀಲನು, ಮೆತ್ತ (ಮೈತ್ರಿ) ವಿಹಾರಿಯು, ಇವರೇ ಆ 10 ವ್ಯಕ್ತಿಗಳು. ಮಹಾರಾಜ, ಅವರು ಧುತಾಂಗಗಳ ಲಾಭಕ್ಕೆ ಅರ್ಹರಾಗಿರುವರು.

ಮತ್ತೆ ಓ ಮಹಾರಾಜ, ಯಾವೆಲ್ಲಾ ಗೃಹಸ್ಥರು, ಸುಖಬೋಗಿಗಳಾಗಿಯು ನಿಬ್ಬಾಣ ಸಾಕ್ಷಾತ್ಕಾರ ಪಡೆದಿರುವರೋ, ಅವರೆಲ್ಲರೂ ಹಿಂದಿನ ಜನ್ಮಗಳಲ್ಲಿ ಈ ಧುತಾಂಗಗಳನ್ನು ಸಿದ್ಧಿಸಿದ್ದರು ಮತ್ತು ಶುದ್ಧ ಚಾರಿತ್ರ್ಯವನ್ನು ವೈರಾಗ್ಯವನ್ನು ವೃದ್ಧಿಸಿ ತ್ಯಾಗವನ್ನು ಸಾಧಿಸಿದ್ದರು. ಆದ್ದರಿಂದ ಅವರು ಈಗ ಗೃಹಸ್ಥರಾಗಿರುವಾಗಲು, ಇಂದ್ರೀಯ ಸುಖ ಹೊಂದಿದ್ದು ನಿಬ್ಬಾಣ ಸಾಕ್ಷಾತ್ಕಾರ ಪಡೆದಿದ್ದರು. ಧುತಾಂಗಗಳ ಸಿದ್ಧಿಯನ್ನು ಈಗ ಅಥವಾ ಹಿಂದೆ ಸಿದ್ಧಿಸಿಲ್ಲದಿದ್ದರೆ ಅರಹತ್ವ ಲಭಿಸದು. ಇದು ಹೇಗೆಂದರೆ ಓ ಮಹಾರಾಜ, ಅತ್ಯಂತ ಕೌಶಲ್ಯಯುತ ಬಿಲ್ಗಾರ ಗುರುವು ತನ್ನ ಶಿಷ್ಯರಿಗೆ ಹೀಗೆ ಈ ರೀತಿ ಹಂತ ಹಂತವಾಗಿ ಕಲಿಸುತ್ತಾನೆ. ವಿವಿಧ ಬಿಲ್ಲುಗಳನ್ನು ಪರಿಚಯಿಸುತ್ತಾನೆ. ಬಿಲ್ಲನ್ನು ಹಿಡಿಯುವುದು ಕಲಿಸುತ್ತಾನೆ, ಬಿಲ್ಲನ್ನು ದೃಢವಾಗಿ ಹಿಡಿಯುವುದು ಕಲಿಸುತ್ತಾನೆ, ಬೆರಳನ್ನು ಬಾಗಿಸುವುದು ಕಲಿಸುತ್ತಾನೆ. ಕಾಲುಗಳನ್ನು ನೆಲದಲ್ಲಿ ಯಾವರೀತಿ ಊರಿ ನಿಲ್ಲಬೇಕು ಎಂದು ಕಲಿಸುತ್ತಾನೆ, ಬಾಣವನ್ನು ಹೇಗೆ ತೆಗೆದುಕೊಳ್ಳಬೇಕು, ಬಿಲ್ಲಿನ ದಾರಕ್ಕೆ ಹೇಗೆ ಬಾಣವನ್ನು ಇಡಬೇಕು, ಹಾಗೆಯೇ ಬಾಣವನ್ನು ಹೇಗೆ ಎಳೆಯಬೇಕು, ಹೇಗೆ ಅದನ್ನು ನಿಯಂತ್ರಿಸಿ ಹಿಡಿಯಬೇಕು, ಹೇಗೆ ಗುರಿ ಇಡಬೇಕು ಮತ್ತು ಹೇಗೆ ಬಾಣವನ್ನು ಬಿಟ್ಟು ಹೊಡೆಯಬೇಕು. ಯಾವ ಯಾವ ಗುರಿಗಳಿಗೆ ಹೊಡೆಯಬೇಕು ಉದಾಹರಣೆಗೆ ಹುಲ್ಲಿನ ಮಾನವ, ವನಕ ವೃಕ್ಷಕ್ಕೆ, ಇಲ್ಲಿಗೆ ಮಣ್ಣಿನ ಹೆಂಟೆಗೆ, ಫಲಕಗಳಿಗೆ, ಫಲಕಗಳ ವೃತ್ತದ ಕಣ್ಣಿಗೆ ಇತ್ಯಾದಿ. ಇದರಲ್ಲಿ ಸಿದ್ಧನಾದ ಬಳಿಕ ಆತನನ್ನು ರಾಜನ ಬಳಿಗೆ ಸೇವೆಗೆ ಕರೆದೊಯ್ಯುತ್ತಾನೆ, ಬಿರುದುಗಳನ್ನು ಪಡೆಯುತ್ತಾನೆ. ಹಾಗೆಯೇ ಆತನು ರಥಗಳನ್ನು, ಆನೆಗಳನ್ನು, ಅಶ್ವಗಳನ್ನು, ಹಣವನ್ನು, ಧಾನ್ಯವನ್ನು, ಚಿನ್ನವನ್ನು, ದಾಸ-ದಾಸಿಯರನ್ನು, ಪತ್ನಿಯನ್ನು ಮತ್ತು ಭೂಮಿಯನ್ನು ಪಡೆಯುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರು ಈಗ ಗೃಹಸ್ಥನಾಗಿ ಇಂದ್ರೀಯ ಸುಖಗಳಲ್ಲಿ ತಲ್ಲೀನನಾಗಿಯು, ನಿಬ್ಬಾಣವನ್ನು ಸಾಕ್ಷಾತ್ಕರಿಸಿದ್ದರೆ, ಆತನು ಹಿಂದಿನ ಜನ್ಮಗಳಲ್ಲಿ ಆ ಧುತಾಂಗನಿಯಮಗಳ ಪಾಲನೆಯನ್ನು ಮಾಡೇ ಇರುತ್ತಾನೆ. ಅದನ್ನು ಹಿಂದೆಯೇ ಸ್ಥಾಪಿಸಿರುತ್ತಾನೆ. ಧುತಾಂಗಗಳ ಸಾಧನೆಯಿಂದ ಶುದ್ಧನು, ಚಾರಿತ್ರ್ಯವುಳ್ಳವನು ಆಗಿರುತ್ತಾನೆ. ಹಾಗಿದ್ದುದರಿಂದಲೇ ಆತನು ಈಗ ಗೃಹಸ್ಥನಾಗಿಯು ಇಂದ್ರೀಯ ಬೋಗಿಯು ಆಗಿಯೂ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾನೆ.

ಮತ್ತೆ ಓ ಮಹಾರಾಜ, ಹಿಂದಿನ ಜನ್ಮಗಳಲ್ಲಿ ಸಾಧನೆಗಳಿಲ್ಲದೆ, ನಿಯಮಾಚಾರಣೆ ಗಳಿಲ್ಲದೆ, ಒಂದೇ ಜನ್ಮದಲ್ಲಿ ಅರಹಂತತ್ವ ಲಭಿಸದು. ಕೇವಲ ಪರಮ ಉತ್ಸಾಹಿಯು ಮತ್ತು ಅತ್ಯಂತ ಶ್ರದ್ಧಾನಿಷ್ಠಾ ಸಾಧನೆಗಾರನು, ಸಮ್ಯಕ್ ಜೀವನದಲ್ಲಿರುವವನು, ಯೋಗ್ಯ ಗುರುವಿನ ಸಹಾಯದಿಂದ ಅರಹಂತತ್ವ ಸಾಕ್ಷಾತ್ಕರಿಸುತ್ತಾನೆ. ಓ ಮಹಾರಾಜ, ಇದು ಹೇಗೆಂದರೆ ಒಬ್ಬ ವೈದ್ಯನು ಅಥವಾ ಶಸ್ತ್ರಚಿಕಿತ್ಸಕನು ಮೊದಲು ಗುರುವನ್ನು ಸಂಪಾದಿಸುತ್ತಾನೆ. ಅದಕ್ಕೆ ಬದಲಾಗಿ ಗುರುದಕ್ಷಿಣೆಯನ್ನೋ ಅಥವಾ ಗುರುಸೇವೆಯನ್ನೋ ಮಾಡುತ್ತಾನೆ. ನಂತರ ಆತನು ಶೀಘ್ರದಲ್ಲೇ ಶಸ್ತ್ರವನ್ನು ಹಿಡಿಯುವುದು ಕಲಿಯುತ್ತಾನೆ. ಗುರುತು ಹಾಕುವಿಕೆ, ಕತ್ತರಿಸುವಿಕೆ, ತೂರಿಸುವಿಕೆ, ಭಜರ್ಿಗಳನ್ನು ಕತ್ತರಿಸುವಿಕೆ, ಹುಣ್ಣನ್ನು ಸ್ವಚ್ಛಗೊಳಿಸುವಿಕೆ, ಒಣಗಿಸುವಿಕೆ, ಮುಲಾಮನ್ನು ಲೇಪಿಸುವಿಕೆ, ವಾಂತಿಕಾರಕ ಮತ್ತು ಬೇಧಿಕಾರಕ ನೀಡುವಿಕೆ ಮತ್ತು ಎಣ್ಣೆಯ ಪಿಚಕಾರಿ ನೀಡುವಿಕೆ, ಹೀಗೆ ಆತನು ಶಿಕ್ಷಣದಲ್ಲಿ ಮುಂದುವರೆದಾಗ, ಹೀಗೆ ಶಿಕ್ಷಣಕಾಲ, ಸೇವಾಕಾಲದಲ್ಲಿ ತಲ್ಲೀನನಾಗುತ್ತಾನೆ. ಕುಶಲಿಯಾಗುತ್ತಾನೆ, ರೋಗಿಗಳ ಹತ್ತಿರ ವಾಸಿಮಾಡಲು ಹೋಗುತ್ತಾನೆ, ಅದೇರೀತಿಯಾಗಿ ಓ ಮಹಾರಾಜ, ಯಾರೆಲ್ಲರು ಗೃಹಸ್ಥರಾಗಿರುವರೋ, ಇಂದ್ರೀಯ ಸುಖದಲ್ಲಿ ಇರುವರೋ ಹಾಗಿದ್ದು ನಿಬ್ಬಾಣ ಸಾಕ್ಷಾತ್ಕರಿಸಿರುವರೋ, ಅವರೆಲ್ಲರೂ ಸಹಾ ತಮ್ಮ ಹಿಂದಿನ ಜನ್ಮದಲ್ಲಿ ಶಿಕ್ಷಣ ಪಡೆದಿದ್ದಾರೆ. ಹಾಗೆಯೇ 13 ಧುತಾಂಗಗಳನ್ನು ಸಿದ್ಧಿಸಿದ್ದಾರೆ. ತಮ್ಮ ಶೀಲಾಚರಣೆಯಲ್ಲಿ ಪರಿಶುದ್ಧರಾಗಿದ್ದರು. ಹೀಗಿದ್ದು ಈಗ ಈ ಜನ್ಮದಲ್ಲಿ ಗೃಹಸ್ಥರಾಗಿಯು, ಇಂದ್ರಿಯ ಬೋಗದಲ್ಲಿದ್ದರೂ, ಪರಮಶ್ರೇಷ್ಠ ಶಾಂತಿ, ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ.

ಮತ್ತು ಯಾರು ಶೀಲಗಳಲ್ಲಿ ಶುದ್ಧಿಯಿಲ್ಲವೋ ಮತ್ತು ವ್ರತಗಳಲ್ಲಿ ತಲ್ಲೀನರೋ ಅವರಿಗೆ ಸತ್ಯದ ಗ್ರಹಿಕೆಯಿಲ್ಲ. ಹೇಗೆ ನೀರಿಲ್ಲದೆ ಬೀಜವು ಬೆಳೆಯುವುದಿಲ್ಲವೋ ಹಾಗೆಯೇ ಧುತಾಂಗಗಳಲ್ಲಿ ಪರಿಶುದ್ಧತೆಯಿಲ್ಲದವರಿಗೆ ಸತ್ಯದ ಗ್ರಹಿಕೆಯಿಲ್ಲ. ಹಾಗೆಯೇ ಯಾರು ಪುಣ್ಯಕಾರ್ಯಗಳನ್ನು ಮಾಡಿಲ್ಲವೋ ಅವರಿಗೆ ಸುಗತಿಯಿಲ್ಲ. ಹಾಗೆಯೇ ಧುತಾಂಗಗಳಲ್ಲಿ ಪರಿಶುದ್ಧತೆಯಿಲ್ಲದವರಿಗೆ ಸತ್ಯ ಸಾಕ್ಷಾತ್ಕಾರವಿಲ್ಲ.

ಓ ಮಹಾರಾಜ, ಧೂತಂಗ ಗುಣವು ವಿಶುದ್ಧ ಕಾಮನೆವುಳ್ಳವರಿಗೆ ಹೀಗೆ ಶುದ್ಧೀಕರಿಸುತ್ತದೆ. ಹೇಗೆಂದರೆ ಪೃಥ್ವಿಯು ವಿಶುದ್ಧಿ ಬಯಸುವವರಿಗೆ ಕಾಪಾಡುವದೋ ಹೇಗೆ ಜಲವು ಎಲ್ಲಾ ವಸ್ತುಗಳ ಕೊಳೆಯನ್ನು ದೂರ ಮಾಡುವುದೋ ಹೇಗೆ ಅಗ್ನಿಯು ಕಶ್ಮಲವನ್ನು ಸುಟ್ಟು ಹಾಕುವುದೋ, ಹೇಗೆ ವಾಯುವು ಕಶ್ಮಲವನ್ನು ದೂರ ಹಾಕುವುದೋ, ಹೇಗೆ ಔಷಧಿಯು ರೋಗ ಕಶ್ಮಲವನ್ನು ದೂರೀಕರಿಸುವುದೋ, ಹೇಗೆ ಅಮೃತವು ವಿಷದ ಪ್ರತ್ಯೌಷಧವಾಗಿ ಶುದ್ಧೀಕರಿಸುವುದೋ ಹೇಗೆ ಕೃಷಿ ಯೋಗ್ಯ ಭೂಮಿಯು ಕಶ್ಮಲರಹಿತ ಬೆಳೆಯನ್ನು ನೀಡುವುದೋ, ಮನೋಹರ ಮಣಿರತ್ನವು ಇಚ್ಛಾ ಬಯಕೆಗಳನ್ನು ಈಡೇರಿಸುವುದೋ, ಹೇಗೆ ದೋಣಿಯು ಆ ತೀರವನ್ನು ತಲುಪಿಸುವುದೋ, ಹೇಗೆ ಶರಣು ಯೋಗ್ಯ ಸ್ಥಳವು ರಕ್ಷಣೆ ನೀಡುವುದೋ, ಹೇಗೆ ತಾಯಿಯು ರೋಗಾಧಿಗಳು ಬಂದಾಗ ಸಲುಹುವಳೋ, ಹೇಗೆ ತಂದೆಯು ಉತ್ತಮ ಗುಣಗಳನ್ನು ಪೋಷಿಸುವನೋ, ಹೇಗೆ ಮಿತ್ರನು ನಿರಾಶೆಯನ್ನುಂಟು ಮಾಡುವುದಿಲ್ಲವೋ, ಹೇಗೆ ಕಮಲವು ಕಶ್ಮಲಗಳಿಗೆ ಅಂಟುವುದಿಲ್ಲವೋ, ಹೇಗೆ ಅಮೂಲ್ಯ ಸುಗಂಧವು ದುರ್ಗಮಗಳನ್ನೆಲ್ಲಾ ದೂರೀಕರಿಸುವುದೋ, ಹೇಗೆ ಉನ್ನತ ಪರ್ವತವು ಗಾಳಿಯಿಂದ ಅಚಲವಾಗಿ ಇರುವಂತೆ, ಧುತಾಂಗ ಗುಣವು ವಿಶುದ್ಧ ಕಾಮನೆಯುಳ್ಳವರಿಗೆ ಲೋಕದ ಅಷ್ಟಧಮ್ಮಗಳಾದ (ಲಾಭ, ನಷ್ಟ, ಸೋಲು, ಗೆಲುವು, ನಿಂದೆ, ಸ್ತುತಿ, ಜಯ ಪರಾಜಯ) ಇವುಗಳಿಂದ ಅಕಂಪನವನ್ನುಂಟು ಮಾಡುತ್ತದೆ. ಹೇಗೆ ಆಕಾಶವು ಯಾವುದೇ ತಡೆಗಳಿಲ್ಲದೆ, ವಿಶಾಲ ಅನಂತವಾಗಿದೆಯೋ ಹಾಗೆಯೇ ವಿಶುದ್ಧ ಕಾಮನೆಯುಳ್ಳವರು ಧುತ್ತಾಂಗಗಳಿಂದ ಪರಿಶುದ್ಧತೆ ಪಡೆಯುವರು ಮತ್ತು ಹೇಗೆ ಹೊಳೆಯು ಎಲ್ಲಾ ಕಶ್ಮಲಗಳನ್ನು ಹೇಗೆ ತೊಳೆಯುವುದೋ, ಹೇಗೆ ಮಾರ್ಗದಶರ್ಿಯು ಕ್ಷೇಮಕರ ಸ್ಥಳಗಳಿಗೆ ತಲುಪಿಸಿದನೋ, ಹೇಗೆ ಬೃಹತ್ ವರ್ತಕರ ತಂಡವು ಕ್ಷೇಮಕರ ನಗರವನ್ನು ತಲುಪುವಂತೆ, ಧುತಾಂಗ ಗುಣವು ವಿಶುದ್ಧ ಕಾಮನೆಯುಳ್ಳವರಿಗೆ ನಿಬ್ಬಾಣದಂತಹ ಭಯರಹಿತ, ಶಾಂತ ನಗರಿಯಲ್ಲಿ ತಲುಪಿಸುವುದು, ಹೇಗೆ ಸ್ವಚ್ಛ ಪರಿಶುದ್ಧ ಕನ್ನಡಿಯು ಪ್ರತಿಬಿಂಬ ತೋರಿಸುವುದೋ ಹಾಗೆಯೇ ವಿಶುದ್ಧಿ ಕಾಮನೆಯುಳ್ಳವರಿಗೆ ತಮ್ಮ ನಿಜಸ್ವರೂಪ ತೋರಿಸಿ ವಿಮುಕ್ತರನ್ನಾಗಿಸುತ್ತದೆ. ಹೇಗೆ ಗುರಾಣಿಯು ಬಾಣ, ಕತ್ತಿಗಳಂತಹ ಶಸ್ತ್ರದಿಂದ ಕಾಪಾಡುವುದೋ ಹಾಗೆ ಧುತಾಂಗ ಗುಣವು ವಿಶುದ್ಧಿ ಕಾಮನೆಯುಳ್ಳವರಿಗೆ ಕಾಪಾಡುವುದು. ಹೇಗೆ ಛತ್ರಿಯು ಸೂರ್ಯನ ತಾಪ, ಮಳೆಯಿಂದ ಕಾಪಾಡುವಂತೆ, ಧುತಾಂಗ ಗುಣವು ತ್ರಿವಿಧ ಅಗ್ನಿಗಳಿಂದ ಕಾಪಾಡುವುದು. ಹೇಗೆ ಚಂದ್ರವು ಪ್ರಿಯವಾಗಿ ಹಿತವಾಗಿ ಆನಂದ ನೀಡುವುದೋ ಹಾಗೆಯೇ ವಿಶುದ್ಧಿ ಕಾಮನೆಯುಳ್ಳವರಿಗೆ ಆನಂದ ಸಿಗುವುದು. ಹೇಗೆ ಸೂರ್ಯನು ಕತ್ತಲೆಯನ್ನು ದೂರಮಾಡಿ ಪ್ರಕಾಶ ನೀಡುವಂತೆ ಧುತಾಂಗ ಗುಣವು ಅಜ್ಞಾನವನ್ನು ದೂರೀಕರಿಸಿ ಜ್ಞಾನವನ್ನು ನೀಡುತ್ತದೆ. ಹೇಗೆ ಸಮುದ್ರವು ಅಪರಿಮಿತ ಐಶ್ವರ್ಯವನ್ನು ನೀಡುವುದೋ ಹಾಗೆಯೇ ವಿಶುದ್ಧಿ ಕಾಮನೆ ಉಳ್ಳವರಿಗೆ ಪರಿಶುದ್ಧತೆ ಸಿಗುವುದು.

ಓ ಮಹಾರಾಜ, ವಿಶುದ್ಧಿ ಕಾಮನೆಯುಳ್ಳವರು ಧುತಾಂಗಗಳಿಂದ ಪರಿಶುದ್ಧರಾಗುತ್ತಾರೆ, ದುಃಖವಿಮುಕ್ತರಾಗುತ್ತಾರೆ, ಅರತಿಯಿಂದ ಮುಕ್ತರಾಗುತ್ತಾರೆ, ಭಯದಿಂದ ಮುಕ್ತರಾಗುತ್ತಾರೆ, ಭವದಿಂದ ಪಾರಾಗುತ್ತಾರೆ, ಪಾಪದಿಂದ, ಶೋಕದಿಂದ, ದುಃಖದಿಂದ, ರಾಗದಿಂದ, ದ್ವೇಷದಿಂದ, ಮೋಹದಿಂದ, ಅಹಂಕಾರದಿಂದ, ಮಿಥ್ಯಾದೃಷ್ಟಿಗಳಿಂದ, ಎಲ್ಲಾ ಅಕುಶಲ ಧಮ್ಮದಿಂದ, ಪಾರುಮಾಡಿ ಘನತೆಯನ್ನು, ಯಶಸ್ಸನ್ನು ಆನಂದವನ್ನು ನೀಡುತ್ತದೆ, ಹಿತವನ್ನು, ಸುಖವನ್ನು, ಶಾಂತಿಯನ್ನು ನೀಡುತ್ತದೆ. ಇದು ನಿಂದೆಯಿಂದ ಪಾರುಮಾಡುತ್ತದೆ. ಸುಖವೇ ಇದರ ಫಲ, ಇದು ಗಣಿಯಾಗಿದೆ, ನಿಧಿಯಾಗಿದೆ, ಅಳತೆಗೆ ಮೀರಿದ ಎಲ್ಲಕ್ಕಿಂತ ಅಮೂಲ್ಯವಾದ ಮತ್ತು ಬೆಲೆಬಾಳುವದ್ದಾಗಿದೆ.

ಓ ಮಹಾರಾಜ, ಹೇಗೆ ಮಾನವರು ಆಹಾರ ಸೇವನೆಯ ನಂತರ ಚೈತನ್ಯ, ಶಕ್ತಿ ಪಡೆಯುವರು. ಆರೋಗ್ಯಕ್ಕಾಗಿ ಔಷಧಿಗೆ ಮೊರೆ ಹೋಗುವರು. ಸಹಾಯಕ್ಕಾಗಿ ಮಿತ್ರನ ಬಳಿ ಹೋಗುವರು, ನದಿ ದಾಟಲು ದೋಣಿಯ ಆಸರೆ ಪಡೆಯುವರೋ, ಸುಗಂಧಕ್ಕಾಗಿ ಸೌಗಂಧದ್ರವ್ಯ ಬಳಸುವರೋ, ಕ್ಷೇಮಕ್ಕಾಗಿ ಸುರಕ್ಷಿತ ಸ್ಥಳಕ್ಕೆ ಹೋಗುವರೋ, ಆಧಾರಕ್ಕಾಗಿ ಪೃಥ್ವಿಗೆ ಆಸರೆ ಹೋಗುವರೋ, ಬುದ್ಧಿವಾದಕ್ಕೆ ಗುರುವಿನ ಬಳಿಗೆ ಹೋಗುವರೋ, ಗೌರವಕೀತರ್ಿ ಪಡೆಯಲು ರಾಜನ ಆಶ್ರಯ ಪಡೆಯುವರೋ, ಏನೆಲ್ಲವನ್ನು ಪಡೆಯಲು ಮಣಿರತ್ನವನ್ನು ಆಶಿಸುವರೋ ಅದೇರೀತಿಯಲ್ಲಿ ಓ ಮಹಾರಾಜ, ಅರಹಂತರು ಲೋಕೋತ್ತರದ ಸರ್ವಲಾಭವನ್ನು ಪಡೆಯಲು ಧುತಗುಣದ ಪಾಲನೆಯನ್ನು ಮಾಡುತ್ತಾರೆ.

ಮತ್ತೆ ಹೇಗೆ ನೀರು, ಬೀಜಗಳ ಬೆಳವಣಿಗೆ ಕಾರಣವೋ, ಉರಿಯುವುದಕ್ಕಾಗಿ ಬೆಂಕಿಯು ಕಾರಣವೋ, ಶಾರೀರಿಕ ಶಕ್ತಿಗೆ ಆಹಾರ ಕಾರಣವೋ, ಕಟ್ಟುವುದಕ್ಕಾಗಿ ಬಳ್ಳಿ (ಹಗ್ಗ) ಕಾರಣವೋ, ಕತ್ತರಿಸಲು ಕತ್ತಿ ಕಾರಣವೋ, ಬಾಯಾರಿಕೆ ದೂರೀಕರಿಸಲು ನೀರು ಕಾರಣವೋ, ದಾನಕ್ಕೆ ಐಶ್ವರ್ಯ ಅವಶ್ಯಕವೋ, ಆ ಬದಿಯ ದಡ ಸೇರಲು ದೋಣಿಯ ಅವಶ್ಯಕವೋ, ರೋಗ ನಿವಾರಣೆಗೆ ಔಷಧಿ ಅವಶ್ಯವೋ, ಪ್ರಯಾಣಕ್ಕೆ ಬಂಡಿಯು ಅವಶ್ಯವೋ, ರಕ್ಷಣಾ ಸ್ಥಳವು ಭಯನಿವಾರಣೆಗೆ ಅವಶ್ಯಕವೋ, ರಕ್ಷಣೆಗೆ ರಾಜನು ಅಗತ್ಯವೋ, ಗುರಾಣಿ ಫಲಕವು ಶಸ್ತ್ರಗಳಿಂದ ರಕ್ಷಣೆಗೆ ಅಗತ್ಯವೋ, ಶಿಕ್ಷಣಕ್ಕೆ ಗುರುವು ಅಗತ್ಯವೋ, ಪೋಷಣೆಗೆ ತಾಯಿಯು ಸರಿಯೋ, ಮುಖ ನೋಡುವುದಕ್ಕೆ ದರ್ಪಣವು ಅವಶ್ಯಕವೋ, ಆಭರಣಗಳಿಗೆ ರತ್ನವು ಅವಶ್ಯವೋ, ವಸ್ತ್ರಗಳಿಗೆ ಬಟ್ಟೆ  ಅಗತ್ಯವೋ, ಹತ್ತಲು ಏಣಿ ಅವಶ್ಯವೋ, ತುಲನೆಗೆ ತಟ್ಟೆಗಳು ಅವಶ್ಯವೋ, ಜಪಕ್ಕೆ ಮಂತ್ರ ಮುಖ್ಯವೋ, ಕೀಟಗಳು, ಪ್ರಾಣಿಗಳನ್ನು ದೂರೀಕರಿಸಲು ಆಯುಧವು ಅವಶ್ಯಕವೋ, ಅಂಧಕಾರ ದೂರಕ್ಕೆ ಪ್ರದೀಪವು ಅವಶ್ಯಕವೋ ಜ್ವರತಾಪ ಕ್ಷೀಣಿಸಲು ತಂಗಾಳಿಯು ಅವಶ್ಯಕವೋ, ವೃತ್ತಿಯಲ್ಲಿ ವಿಕಾಸವಾಗಲು ಜ್ಞಾನವು ಅವಶ್ಯಕವೋ, ಜೀವದ ಉಳಿವಿಗೆ ಔಷಧದ ಅಗತ್ಯವೋ, ರತ್ನಗಳ ಉಗಮಕ್ಕೆ ಗಣಿಯ ಅಗತ್ಯವೋ, ಆಭರಣಗಳಿಗೆ ವಜ್ರದ ಅಗತ್ಯವೋ ನಿಯಮಗಳ ಉಲ್ಲಂಘನೆಗಳ ತಡೆಗೆ ಆಜ್ಞೆ ಅವಶ್ಯಕವೋ, ಚಕ್ರಾಧಿಪತ್ಯಕ್ಕೆ ಚಕ್ರವತರ್ಿ ಅವಶ್ಯಕವೋ, ಅದೇರೀತಿಯಲ್ಲಿ ಓ ಮಹಾರಾಜ, ಧುತಾಂಗಗಳಿಂದಲೇ ಚಾರಿತ್ರ್ಯ ನಿಮರ್ಾಣವಾಗುತ್ತದೆ. ವೈರಾಗ್ಯ ಸ್ಥಾಪನೆಯಾಗುತ್ತದೆ. ಕ್ಲೇಷಗಳು ಸುಟ್ಟು ಹೋಗುತ್ತದೆ. ಇದ್ದಿಬಲವು ವಿಕಾಸವಾಗುತ್ತದೆ. ಸ್ಮೃತಿ ಸಂಯಮವು ಸ್ಥಾಪಿತವಾಗುತ್ತದೆ. ವಿಮತಿ, ಹಾಗು ಸಂಶಯವು ನಾಶವಾಗುತ್ತದೆ. ತಣ್ಹಾ, ಪಿಪಾಸೆಯು ಇನ್ನಿಲ್ಲವಾಗುತ್ತದೆ. ಸತ್ಯಗ್ರಹಿಕೆಯಿಂದ ಶ್ರದ್ಧೆಯು ನಿಮರ್ಾಣವಾಗುತ್ತದೆ. ನಾಲ್ಕು ವಿಧದ ಪ್ರವಾಹದಿಂದ ಪಾರಾಗುತ್ತಾನೆ, ಕ್ಲೇಶಗಳ ವ್ಯಾಧಿಯಿಂದ ಪಾರಾಗುತ್ತಾನೆ. ನಿಬ್ಬಾಣ ಸುಖ ಲಾಭವನ್ನು ಪಡೆಯುತ್ತಾನೆ. ಜನ್ಮ, ಜರಾ, ವ್ಯಾಧಿ, ಮರಣ, ಶೋಕ ಇತ್ಯಾದಿ ದುಃಖಗಳಿಂದ ಪಾರಾಗುತ್ತಾನೆ. ತ್ಯಾಗದ ಲಾಭಗಳಿಂದಾಗಿ ಸುರಕ್ಷತೆಯಿರುತ್ತಾನೆ. ಆಲಸ್ಯ (ಬೇಸರ) ಮತ್ತು ಕೆಟ್ಟ ಯೋಚನೆಗಳಿಂದ ದೂರವಿರುತ್ತಾನೆ. ಗೃಹ ಬಿಟ್ಟವರು (ಭಿಕ್ಷುಗಳು) ಪಾಲಿಸುವ ಎಲ್ಲವನ್ನು ಪಾಲಿಸುತ್ತಾನೆ, ಅದರಲ್ಲೇ ಪೋಷಿತನಾಗಿ, ಜನರಿಗೆ ಸಮಥ ಮತ್ತು ವಿಪಸ್ಸನದ ಬಗ್ಗೆ ಹೇಳುತ್ತಾನೆ. ಮಾರ್ಗ, ಫಲ ಮತ್ತು ನಿಬ್ಬಾಣದ ಬಗ್ಗೆ ಹೇಳುತ್ತಾನೆ. ಎಲ್ಲಕ್ಕಿಂತ ಶ್ರೇಷ್ಠವಾದ ದಾನವನ್ನು ಆತನು ಜನರಿಗೆ ನೀಡುತ್ತಿದ್ದಾನೆ. ಎಲ್ಲಾ ಸುಸ್ಥಿತಿಯ ದ್ವಾರಗಳನ್ನು ಮುಚ್ಚಿ, ತ್ಯಾಗದ ಶಿಖರವನ್ನು ತಲುಪಿ, ಎಲ್ಲ ಪರರಲ್ಲದ ಕುಸ್ಥಿತಿಗಳ ವಿವೇಚನೆ ಮಾಡುತ್ತಾನೆ. ಪಾಲಿಸಬೇಕಾದುದನ್ನು ಪಾಲಿಸುತ್ತಾನೆ, ದೂರೀಕರಿಸ ಬೇಕಾದುದನ್ನು ದೂರೀಕರಿಸುತ್ತಾನೆ. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುತ್ತಾನೆ. ತ್ರಿವಿಧಾಗ್ನಿಯಿಂದಾಗುವ ಜ್ವರದಿಂದ ಮುಕ್ತನಾಗುತ್ತಾನೆ. ಪರಮಶಾಂತಿಯನ್ನು ಪ್ರಾಪ್ತಿಮಾಡುತ್ತಾನೆ. ಸಮಣ ಶೀಲವನ್ನು ಕಾಪಾಡುತ್ತಾನೆ. ಸಪ್ತ ಬೋಧಿ ಅಂಗಗಳಾದ ಸತ್ಯದ ಅನ್ವೇಷಣೆ, ಸ್ಮೃತಿ, ಪ್ರಯತ್ನಶೀಲತೆ, ಆನಂದ, ಶಾಂತತೆ, ಸಮಾಧಿ ಮತ್ತು ಸಮಚಿತ್ತತೆ ಪೂರ್ಣಗೊಳಿಸುತ್ತಾನೆ. ಇವನ್ನೇ ಅಲಂಕರಿಸುತ್ತಾನೆ. ಹಾಗೆಯೇ ನಿಂದನೀಯವಾದುದೆಲ್ಲವನ್ನು ಅಸ್ಪಷ್ಟತೆಯನ್ನೆಲ್ಲಾ ತಡೆದು, ಸೂಕ್ಷ್ಮವಾದ ಅನಂದ ಮತ್ತು ಶಾಂತಿ ವೃದ್ಧಿಸುತ್ತಾನೆ. ಹೀಗೆ ಸಕಲ ಶ್ರೇಷ್ಠ ಆರ್ಯ ಧಮ್ಮವನ್ನು ಪಾಲಿಸುತ್ತಾನೆ. ಹೀಗೆ ಓ ಮಹಾರಾಜ, ಈ ಧುತಾಂಗಗಳ ನಿಯಮವನ್ನು ಪಾಲಿಸುವುದು ಹಾಗೆಯೇ ಎಲ್ಲಾ ಸದ್ಗುಣಗಳನ್ನು ಪ್ರಾಪ್ತಿಮಾಡುವುದು ಎರಡು ಒಂದೇ ಆಗಿದೆ. ಅದರಿಂದಾಗುವ ಲಾಭವನ್ನು ಅಳೆಯಲಾಗದು, ಲೆಕ್ಕ ಹಾಕಲಾಗದು. ಅದು ಅಸಮಾನವು, ಶ್ರೇಷ್ಠವು, ಭವ್ಯವು, ವಿಸ್ತಾರವು ವಿಫುಲವು, ಆಳಿವು, ವೈಶಾಲ್ಯವೂ, ಭಾರವು, ಮಹತ್ತರವೂ ಆಗಿದೆ.

ಮತ್ತೆ ಓ ಮಹಾರಾಜ, ಯಾರೇ ಆಗಲಿ, ಚಿತ್ತದಲ್ಲಿ ಕೆಟ್ಟ ಬಯಕೆಗಳನ್ನು ಇಟ್ಟಿರುವರೋ, ಕುಹಕನೊ, ಲೋಭಿಯೋ, ಹೊಟ್ಟೆ ಗುಲಾಮನೋ, ಲೌಕಿಕ ಲಾಭದ ಹಿಂದೆ ಬಿದ್ದಿರುವನೋ, ಕೀತರ್ಿ ವ್ಯಾಮೋಹದ ಹಿಂದೆ ಸುತ್ತುತ್ತಿರುವನೋ, ಆತನು ಅರಹಂತ ಚಿಹ್ನೆಗಳಿಗೆ ಅನರ್ಹನಾಗಿದ್ದಾನೆ. ಫಲಗಳನ್ನು ಪ್ರಾಪ್ತಿಮಾಡಿಲ್ಲವೋ, ಯಾರ ಚಾರಿತ್ರ್ಯವೂ ಸಂಶಯಸ್ಥವೋ, ಅನರ್ಹವೋ, ವ್ಯತಿರಿಕ್ತವೋ, ಅಂತಹವರು ಧುತಾಂಗವನ್ನು ಪಾಲಿಸಲು ಒಪ್ಪಿ, ಉದ್ದೆಶಪೂರ್ವಕವಾಗಿ ವಿಫಲರೋ ಅಂತಹವರಿಗೆ ಎರಡು ಶಿಕ್ಷೆ ಕಾದಿದೆ. ಅದೆಂದರೆ ಈ ಲೋಕದಿಂದ ನಿಂದನೆ, ಅಪಮಾನ, ತಿರಸ್ಕಾರ ಮತ್ತು ಉಚ್ಛಾಟನೆ ಮಾಡುತ್ತಾರೆ. ಮತ್ತು ಮುಂದಿನ ಅವೀಚಿ ನರಕದಲ್ಲಿ ಬೆಂಕಿಯ ಜ್ವಾಲೆಗಳು, ಕೆಂಡಗಳ ನಡುವೆ ಜನಿಸುತ್ತಾನೆ. ಅಲ್ಲಿ ನರಳುತ್ತಾನೆ. ಅದು ನೂರು ಯೋಜನಕ್ಕಿಂತಲೂ ಹೆಚ್ಚಿನ ಆಳವಿರುತ್ತದೆ. ಆ ಆಳವೆಲ್ಲಾ ಬೆಂಕಿ, ಕೊಂಡಿ, ಜ್ವಾಲೆಗಳೇ ಇರುತ್ತವೆ. ಅದು ಭಯಾನಕವಾಗಿರುತ್ತದೆ. ಅಲ್ಲೇ ಆತನು ಎಷ್ಟೋ ವರ್ಷಗಳವರೆಗೆ ಇರುತ್ತಾನೆ. ಆ ಜ್ವಾಲ ಸಾಗರದಲ್ಲೇ ಸುತ್ತಾಡುತ್ತಿರುತ್ತಾನೆ. ನೋವು ಅನುಭವಿಸುತ್ತಿರುತ್ತಾನೆ. ಮತ್ತೆ ಅಲ್ಲಿಂದ ಮುಕ್ತನಾಗಿ ಪ್ರೇತವಾಗುತ್ತಾನೆ. ಆಗ ಆತನ ಬಾಹ್ಯ ಆಕಾರವು ಭಿಕ್ಖುವಿನದೇ ಆಗಿರುತ್ತದೆ. ಆದರೆ ಆತನ ಶರೀರ ಮತ್ತು ಅಂಗಗಳು ಸೊರಗಿ, ಕೊರಕಲಾಗಿ, ಕಪ್ಪಾಗಿ, ತಲೆಯು ಊದಿ, ರಂಧ್ರಗಳಿಂದ ಕೂಡಿ, ಹಸಿವು ಮತ್ತು ಬಾಯಾರಿಕೆಯಿಂದ ಕೂಡಿ, ಬೀಭತ್ಸ, ಭಯಾನಕವಾಗಿ ವರ್ಣ ಆಕಾರಗಳೆರಡರಿಂದಲೂ ಅಸಹ್ಯ ರೌದ್ರವಾಗಿ ಕಂಡು, ಕಿವಿಗಳು ತಿರುಚಿ, ಕಣ್ಣುಗಳು ಸದಾ ಹೊಡೆದುಕೊಳ್ಳುತ್ತ, ಅಂಗಾಗಗಳೆಲ್ಲವೂ ಕಣ್ಣುಗಳಿಂದ ಕೂಡಿರುತ್ತದೆ. ಆತನ ಇಡೀ ಶರೀರವು ಕೀಟಗಳಿಂದ ಕೂಡಿರುತ್ತದೆ. ಆತನ ಹೊಟ್ಟೆಯು ದಹಿಸುತ್ತ, ತಂಗಾಳಿಗೂ ಕುದಿಯುತ್ತ ಹೋಗುತ್ತದೆ. ಆದರೂ ಆತನ ಬಾಯಿಯು ಸೂಜಿಯಷ್ಟು ಅಗಲವಾಗಿರದೆ, ಆತನ ಬಾಯಾರಿಕೆ ಎಂದೂ ಹಿಂಗದು. ಆತನ ರಕ್ಷಣೆಗೆ ಯಾವ ತಾಣವೂ ಸಿಗದು, ರಕ್ಷಿಸಲು ಯಾರೂ ಸಿಗರು. ನರಳುತ್ತಾ, ಪ್ರಲಾಪಿಸುತ್ತ ಇಡೀ ಪೃಥ್ವಿ ಸುತ್ತಾಡುತ್ತಿರುತ್ತಾನೆ.

ಓ ಮಹಾರಾಜ, ಹೇಗೆ ಒಬ್ಬನು ರಾಜ ಅಧಿಕಾರಕ್ಕೆ ಅನರ್ಹನಾಗಿಯು ಯಾವುದೇ ಯೋಗ್ಯತೆ ಇಲ್ಲದವನಾಗಿಯು, ಸಮಂಜಸನಲ್ಲದೆಯೂ, ಹೀನ ಕುಲದಲ್ಲಿ ಹುಟ್ಟಿಯು, ಹೀನವಾಗಿ ಬದುಕಿಯು, ರಾಜನ ದೀಕ್ಷೆ ಪಡೆದಾಗ, ಮುಂದೆ ಗೊತ್ತಾದಾಗ, ಅವನ ಕೈ ಅಥವಾ ಕಾಲುಗಳನ್ನು ಕತ್ತರಿಸುತ್ತಾರೆ ಅಥವಾ ಕಿವಿಗಳನ್ನು ಅಥವಾ ಮೂಗನ್ನು ಅಥವಾ ಎರಡನ್ನೂ ಕತ್ತರಿಸುತ್ತಾರೆ ಅಥವಾ ಚಿತ್ರಹಿಂಸೆ ನೀಡುತ್ತಾರೆ. ಆತನಿಗೆ ನಾನಾವಿಧವಾದ ಚಿತ್ರಹಿಂಸೆಗಳಾದ ರಾಹುಮುಖ, ಬೆಂಕಿಯ ಮಾಲೆ, ಹಸ್ತಕ್ಕೆ ಬೆಂಕಿ, ಸರ್ಪಪಟ್ಟಿಗಳ ಚರ್ಮ ಸುಲಿಯುವಿಕೆ, ಕಪ್ಪು ಬಟ್ಟೆ ಅಥವಾ ಮಚ್ಚೆಗಳಂತೆ ಚರ್ಮ ಸುಲಿಯುವುದು, ಚರ್ಮಕ್ಕೆ ಕೊಕ್ಕೆಗಳನ್ನು ಹಾಕುವುದು, ಶೂಲಕ್ಕೆ ಹಾಕುವುದು, ಬೆಂದ ಎಣ್ಣೆಯನ್ನು ಸುರಿಸುವುದು, ನಾಯಿಗಳಿಂದ ತಿನ್ನಿಸುವುದು, ಜೀವಂತವಾಗಿ ಚರ್ಮ ತೆಗೆಸುವುದು, ಶಿರಚ್ಛೇದನ ಇತ್ಯಾದಿ ನಾನಾರೀತಿಯ ಚಿತ್ರಹಿಂಸೆ ನೀಡುತ್ತಾರೆ ಮತ್ತು ಏಕೆ?

ಏಕೆಂದರೆ ಆತನು ಅನರ್ಹನಾಗಿದ್ದಾನೆ, ಅಸಮಂಜಸನಾಗಿದ್ದಾನೆ, ಅಯೋಗ್ಯ ನಾಗಿದ್ದಾನೆ, ತಕ್ಕನಲ್ಲದವನಾಗಿದ್ದಾನೆ ಆತನು ರಾಜತನಕ್ಕೆ ಯಾವರೀತಿಯಲ್ಲೂ ಹೊಂದದವನಾಗಿದ್ದಾನೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರೇ ಆಗಲಿ, ಪಾಪೀಚ್ಛೆಗಳನ್ನು ಹೊಂದಿದ್ದು, ಮೋಸಗಾರನಾಗಿ, ಲೋಭಿಯಾಗಿ, ಹೊಟ್ಟೆಗಾಗಿ, ಗುಲಾಮನಾಗಿ, ಭೌತಿಕ ಲಾಭದತ್ತ ಅಥವಾ ಕೀತರ್ಿಗಾಗಿ, ವ್ಯಾಮೋಹಕ್ಕಾಗಿ, ಅರಹಂತ ಲಾಂಛನವಾದ ಕಾಷಾಯ ವಸ್ತ್ರಧಾರಿಯಾಗಿ ಪಾಪಿಯಾದರೆ, ಯಾವುದೇ ಪ್ರಾಪ್ತಿ ಪಡೆದಿಲ್ಲವಾದರೆ, ದೂಷಿತ ಚಾರಿತ್ರ್ಯದವನಾದರೆ, ಅನರ್ಹನಾದರೆ ಯಾವುದೇ ರೀತಿಯಲ್ಲೂ ಆ ಶ್ರೇಷ್ಠತ್ವಕ್ಕೆ ತಕ್ಕನಲ್ಲವಾದರೆ, ಅಂತಹವನು ಧುತಾಂಗವನ್ನು ವ್ರತವನ್ನು ಕೈಗೊಂಡರೂ ಆತನಿಗೆ ಎರಡು ವಿಧದ ಶಿಕ್ಷೆಯಿದೆ. ಆತನಿಗೆ ಈಗಾಗಲೇ ಶೀಲವು ಭ್ರಷ್ಟವಾಗಿದೆ. ಹೀಗಾಗಿ ಲೋಕದಿಂದ ಅಪಮಾನ, ತಿರಸ್ಕಾರ, ನಿಂದೆ, ವ್ಯಂಗ, ಬಹಿಷ್ಕಾರ, ಸಂಪರ್ಕವಿಲ್ಲದಿರುವಿಕೆ, ತೊರೆಯುತ್ತಾರೆ ಮತ್ತು ಆತನಿಗೆ ನಂತರದ ಜೀವನದಲ್ಲಿ ಮಹಾ ಅವೀಚಿ ನರಕದಲ್ಲಿ ಹುಟ್ಟು ನೂರು ಯೋಜನ ಆಳವಿರುವ ಬೆಂಕಿಯಲ್ಲಿ, ಕೆಂಡಗಳಲ್ಲಿ, ಜ್ವಾಲೆಗಳಲ್ಲಿ, ಅಲ್ಲೇ ವಿಕೃತವಾಗಿ ಎಷ್ಟೋ ವರ್ಷಗಳು ಕಳೆಯುತ್ತಾನೆ. ಅಲ್ಲೇ ಮೇಲ್ಭಾಗ, ಕೆಳಭಾಗ, ಸುತ್ತಲು, ಪಕ್ಕದಲ್ಲಿ ಹೀಗೆಯೇ ಅಲ್ಲೇ ದುಃಖ, ನೋವು ಅನುಭವಿಸುತ್ತಾನೆ ಮತ್ತು ನಂತರ ಅಲ್ಲಿಂದ ಮುಕ್ತನಾಗಿಯು, ಪ್ರೇತನಾಗಿ ಹುಟ್ಟುತ್ತಾನೆ. ಆ ಜನ್ಮದಲ್ಲಿ ಬಾಹ್ಯವೇಶವು ಭಿಕ್ಷುವಿನದ್ದಾಗಿದ್ದರೂ ಸಹಾ ದೇಹವು ಸೊರಕಲಾಗಿ, ಕಪ್ಪಗೆ ದಹಿಸುತ್ತ ಇರುತ್ತದೆ. ತಲೆಯು ಊದಿ, ಕೊಳೆತು, ರಂಧ್ರಗಳಿಂದ ಕೂಡಿದ್ದು, ಹಸಿವು, ಬಾಯಾರಿಕೆಗಳಿಂದ ಕೂಡಿ, ವರ್ಣ ಮತ್ತು ಆಕಾರಗಳಿಂದ ಭೀಭತ್ಸನಾಗಿ, ಭಯಾನಕನಾಗಿ, ಕಿವಿಗಳು ವಿಕಾರಗೊಂಡು, ಕಣ್ಣುಗಳು ಸದಾ ಮಿಟುಕಿಸುತ್ತಾ, ಆಂಗಾಗಗಳು ಹುಣ್ಣುಗಳಿಂದ ಕೂಡಿ, ಇಡೀ ದೇಹವು ಕೀಟಗಳಿಂದ ಕೂಡಿ, ಹೊಟ್ಟೆಯು ದಹಿಸುತ್ತ ತಂಗಾಳಿಗೂ ಸುಡುತ್ತ, ಬಾಯಿಯು ಸೂಜಿ ಅಷ್ಟೇ ಚಿಕ್ಕದಾಗಿ ಆತನ ಬಾಯಾರಿಕೆ ಎಂದಿಗೂ ಹಿಂಗದೆ ಎಲ್ಲಿಯೂ ಪಾರಾಗಲೂ ತಾಣವಿಲ್ಲದೆ ಯಾವುದೇ ರಕ್ಷಕನಿಲ್ಲದೆ, ನರಳುತ್ತಾ, ಅಳುತ್ತಾ, ಪ್ರಲಾಪಿಸುತ್ತ ಕರುಣೆಗಾಗಿ ಕೂಗುತ್ತ ಇಡೀ ಭೂಮಿಯನ್ನು ಸುತ್ತುವನು.

ಆದರೆ ಓ ಮಹಾರಾಜ, ಯಾರೇ ಆಗಲಿ, ಅರ್ಹನಾಗಿದ್ದರೆ ಫಲಗಳನ್ನು ಪ್ರಾಪ್ತಿ ಮಾಡಿದ್ದರೆ, ಯಾರ ಚಾರಿತ್ರ್ಯವು ಸಂಘಕ್ಕೆ ಅನುಗುಣವಾಗಿ ಶುದ್ಧವಾಗಿದ್ದರೆ, ಅರ್ಹನಾಗಿದ್ದರೆ, ಅಲ್ಪೆಚ್ಛೆಗಳಿಂದ ಕೂಡಿದ್ದರೆ, ಸಂತುಷ್ಟನಾಗಿದ್ದರೆ, ಏಕಾಂತವಾಸಿಯಾಗಿದ್ದರೆ, ಸಮಾಜ ಸಂಘದಲ್ಲಿ ಆನಂದ ಪಡೆಯದಿದ್ದರೆ, ಉತ್ಸಾಹಿಯು, ಜಾಗರೂಕನು ಆಗಿದ್ದರೆ ದೃಢನಿಶ್ಚಯದವನಾಗಿದ್ದರೆ, ಮೋಸರಹಿತನು, ಮಾಯಾವಿ ಅಲ್ಲದವನು, ಹೊಟ್ಟೆಗೆ ಗುಲಾಮನಲ್ಲದವನು, ಪ್ರಾಪಂಚಿಕ ಲಾಭವನ್ನಾಗಲಿ ಅಥವಾ ಪ್ರಾಪಂಚಿಕ ವೈಭೋಗ, ಕೀತರ್ಿಗಳಾಗಲಿ ಬಯಸದವನು, ಶ್ರದ್ಧಾವಂತನು, ಜರಾಮರಣಗಳಿಂದ ಮುಕ್ತನಾಗಲು ಆಶಿಸುವವನು, ಅಂತಹವನು ಧುತಾಂಗಗಳನ್ನು ತೆಗೆದುಕೊಂಡಾಗ, ಆಗ ಆತನು ಎರಡು ವಿಧದಿಂದ ಗೌರವ ಪಡೆಯುತ್ತಾನೆ. ಒಂದು ಆತನು ದೇವತೆಗಳಿಂದಲೂ ಮತ್ತು ಮಾನವರಿಂದಲೂ ಪ್ರಿಯನಾಗಿ, ಹತ್ತಿರದವನಾಗಿ, ಗೌರವಿಸಲ್ಪಡುತ್ತಾನೆ. ಹೇಗೆಂದರೆ ಅನುರೂಪವಾದ ಮಲ್ಲಿಗೆ ಹೂಗಳಿಂದ ಮನುಷ್ಯನು ಸ್ನಾನ ಮಾಡುವಂತೆ, ಲೇಪಿಸುವಂತೆ ಅಥವಾ ಹಸಿದವನಿಗೆ ಸಿಹಿಯಾದ ಉತ್ತಮವಾದ ಆಹಾರ ಸಿಕ್ಕಿದಂತೆ, ಬಾಯಾರಿದವನಿಗೆ ಸ್ವಚ್ಛವಾದ, ಸಿಹಿಯಾದ, ಸೌಗಂಧಿತವಾದ, ತಂಪಾದ ನೀರು ಸಿಗುವಂತೆ, ವಿಷಕ್ಕೊಳಪಟ್ಟ ಮನುಷ್ಯನಿಗೆ ನಿರೋಧಕ ಔಷಧಿ ದೊರೆಯುವಂತೆ, ಆತುರವಾಗಿ ನಡಿಗೆಯಲ್ಲಿ ಹೊರಟಿರುವ ಪ್ರಯಾಣಿಕನಿಗೆ ಬೆಲೆಬಾಳುವ ರಥ ಸಿಗುವಂತೆ, ಲೋಭಿಗೆ ಮಣಿರತ್ನವು ದೊರೆಯುವಂತೆ, ಕಿರೀಟ ಆಕಾಂಕ್ಷೆಯುಳ್ಳವವನಿಗೆ ಚಕ್ರವತರ್ಿಯ ಶ್ವೇತಛತ್ರಿಯು ದೊರೆಯುವಂತೆ, ಅರಹಂತತ್ವ ಹುಡುಕುವವನಿಗೆ ಲೋಕೋತ್ತರ ಫಲಗಳು ಸಿಗುತ್ತದೆ. ಯಾರು ನಾಲ್ಕು ಸತಿಪಟ್ಠಾನಗಳಲ್ಲಿ ಸಿದ್ಧನೋ, ನಾಲ್ಕು ಸಮ್ಮಪದ್ಧಾನಗಳಲ್ಲಿ, ನಾಲ್ಕು ಇದ್ದಿಪಾದಗಳಲ್ಲಿ, ಪಂಚೇಂದ್ರಿಯಗಳಲ್ಲಿ, ಪಂಚಬಲಗಳಲ್ಲಿ, ಸಪ್ತಬೋಧಿ ಅಂಗಗಳಲ್ಲಿ ಮತ್ತು ಆರ್ಯ ಅಷ್ಠಾಂಗ ಮಾರ್ಗದಲ್ಲಿ ಶ್ರಮಿಸಿರುವನೋ, ಸಮಥ ಮತ್ತು ವಿಪಶ್ಶನದಲ್ಲಿ ಆಳವಾಗಿ ಹೋಗಿರುವನೋ, ಅಂತಹವನಿಗೆ ಪ್ರಾಪ್ತಿಯಾಗಲಿ, ಲೋಕೋತ್ತರದ ಫಲಗಳಾಗಲಿ, ನಾಲ್ಕು ಪಟಿಸಂಭಿದಾ ಜ್ಞಾನವಾಗಲಿ, ತ್ರಿವಿಧ ಜ್ಞಾನಗಳು (ಪೂರ್ವಜನ್ಮ ಜ್ಞಾನ, ಕರ್ಮಫಲ ಜ್ಞಾನ, ಅಸವ ಕ್ಷಯ ಜ್ಞಾನವು) ಸಮಣ ಧಮ್ಮವು ಆರು ಅಭಿಜ್ಞಾಗಳು (ಅತೀಂದ್ರಿಯ ಪವಾಡಗಳು) ಇವೆಲ್ಲವೂ ಸುಲಭವಾಗಿಯೇ ಪ್ರಾಪ್ತಿಯಾಗುತ್ತದೆ. ಹೇಗೆ ಅಭಿಷಕ್ತ ಮಹಾರಾಜನಂತೆ ಆತನ ಮೇಲೆ ವಿಮುಕ್ತಿ ವಿಮಲ ಶ್ವೇತ ಛತ್ರಿಯು ಸ್ಥಾಪಿತವಾಗುತ್ತದೆ.

ಓ ಮಹಾರಾಜ, ಹೇಗೆ ಎಲ್ಲಾ ನಾಗರಿಕರು, ದೇಶದ ಪ್ರಜೆಗಳು, ಸೈನಿಕರು ಮತ್ತು ದೂತರು ಕ್ಷತ್ರಿಯ ರಾಜನಿಗೆ ಸೇವೆ ಸಲ್ಲಿಸಲು ಸಿದ್ಧರಾಗಿರುತ್ತಾರೋ ಆ ಕ್ಷತ್ರಿಯ ರಾಜನು ಎರಡು ಕಡೆಯಿಂದಲೂ ಉತ್ತಮ ವಂಶಜರಾದ ಆತನಿಗೆ ಕ್ಷತ್ರಿಯ ಮಹೋತ್ಸವದಲ್ಲಿ ಪರಿಶುದ್ಧಗೊಳಿಸುವ ಸಮಾರಂಭದಲ್ಲಿ ಪಟ್ಟಾಭಿಷೇಕ ಮಾಡಿರುತ್ತಾರೆ. ಆಗ 38 ವಿಭಾಗಗಳ ಕ್ಷತ್ರಿಯರು, ನರ್ತಕರು, ದೊಂಬರಾಟದವರು, ಮಂಗಳಿಕರು, ಸ್ತುತಿಸುವವರು, ಸಮಣರು, ಬ್ರಾಹ್ಮಣರು ಮತ್ತು ಎಲ್ಲಾ ಪಂಗಡಗಳ ಹಿಂಬಾಲಕರು, ಸಭಾಸದರು, ಕೂಡಿ ಆತನಿಗೆ ಆಯ್ಕೆ ಮಾಡಿರುತ್ತಾರೆ. ಆಗ ಆತನು ಎಲ್ಲಾ ಬಂದರಿನ ಅಧಿಪತಿಯಾಗುತ್ತಾನೆ ಮತ್ತು ನಿಧಿಯ ಗಣಿಗಳ ನಗರದ ಮತ್ತು ಸುಂಕಸ್ಥಾನಗಳ ಸ್ವಾಮಿಯಾಗುತ್ತಾನೆ. ಎಲ್ಲಾ ವಿದೇಶಿಯರಿಗೆ ಮತ್ತು ಅಪರಾಧಿಗಳಿಗೆ ಶಾಸನ ನೀಡುವವನು ಆಗುತ್ತಾನೆ.

ಅದೇರೀತಿಯಲ್ಲಿ ಓ ಮಹಾರಾಜ, ಯಾರೆಲ್ಲರು ಯೋಗ್ಯರಾಗಿರುವರೋ, ಫಲಗಳನ್ನು ಪ್ರಾಪ್ತಿಮಾಡಿರುವರೋ ಯಾರ ಶೀಲವು ಶುದ್ಧವು ನಂಬಿಕೆಗೆ ಅರ್ಹವು ಅಗಿದೆಯೋ, ಯಾರನ್ನು ಸಂಘವು ಮೆಚ್ಚುವುದೋ, ಯಾರು ಅಲ್ಪೇಚ್ಛೆವುಳ್ಳವನೋ, ಸಂತೃಪ್ತನೋ, ಏಕಾಂತತೆಯಲ್ಲಿ ತೊಡಗುವನೋ, ಜನಗಳ ಸಂಗಗಳಲ್ಲಿ ಆನಂದಿಸುವುದಿಲ್ಲವೋ, ಉತ್ಸಾಹಿಯು, ಜಾಗರೂಕನೋ, ಹೃದಯದಲ್ಲಿ ದೃಢನೋ, ಕುಯುಕ್ತಿಗಳಿಲ್ಲದವನೋ, ಶ್ರದ್ಧೆಯಿಂದ ಸಂಘಕ್ಕೆ ಸೇರಿರುವನೋ, ಜರಾ-ಮರಣದಿಂದ ಮುಕ್ತನಾಗಲು ಇಚ್ಛುಕನೋ ಅಂತಹ ಸಮರ್ಥಶಾಲಿಯು ಎರಡು ವಿಧವಾದ ಗೌರವ ಪಡೆಯುತ್ತಾನೆ. ಆತನು ಮಾನವರಿಗೆ ಮತ್ತು ದೇವತೆಗಳಿಗೆ ಪ್ರಿಯನಾಗುತ್ತಾನೆ ಮತ್ತು ಹತ್ತಿರದವನಾಗುತ್ತಾನೆ. ಹೇಗೆಂದರೆ ಹೇಗೆ ಅನುರೂಪವಾದ ಮಲ್ಲಿಗೆ ಹೂಗಳು ಮಾನವನು ಲೇಪನಕ್ಕೆ ಮತ್ತು ಸ್ನಾನಕ್ಕೆ ಬೇಕಾಗಿದೆಯೋ ಹಾಗೆ, ಅಥವಾ ಹಸಿದವನಿಗೆ ಸಿಹಿಸಹಿತ ಮೃಷ್ಟಾನ್ನ ಭೋಜನವು ಪ್ರಿಯವಾದಂತೆ, ಹೇಗೆ ಬಾಯಾರಿದವನಿಗೆ ತಂಪಾದ, ಸ್ವಚ್ಛವಾದ, ಸುಗಂಧಿತ ಜಲವು ಇಚ್ಛಿಸುವಂತೆ, ವಿಷಸೊಂಕಿತ ಮಾನವರು ನಿವಾರಣ ಔಷಧಿ ಬಯಸುವಂತೆ, ಆತುರದ ಪ್ರಯಾಣಿಗನು ಉನ್ನತವಾದ ರಥಗಳನ್ನು ಬಯಸುವಂತೆ ಅಥವಾ ಲೋಭಿಯು ಮಣಿರತ್ನವನ್ನು ಬಯಸುವಂತೆ, ಕಿರೀಟದ ಇಚ್ಛುಕನಿಗೆ ಶ್ವೇತ ಛತ್ರಿಯನ್ನು ಬಯಸುವಂತೆ, ಪವಿತ್ರತೆ ಹುಡುಕಾಟದಲ್ಲಿರುವವ ಅರಹತ್ವವನ್ನು ಬಯಸಿದಂತೆ ಬಯಸುವರು. ಯಾರು ನಾಲ್ಕು ಸತಿಪಟ್ಠಾನಗಳನ್ನು ಪ್ರತಿಷ್ಠಾಪಿಸಿರುವರೋ ಮತ್ತು ಯಾರು ನಾಲ್ಕು ಸಮ್ಮಾ ಪ್ರಯತ್ನಗಳನ್ನು ಸ್ಥಾಪಿಸಿರುವರೋ, ಯಾರು ನಾಲ್ಕು ಇಂದ್ದಿ ಆಧಾರಗಳನ್ನು ಗಳಿಸಿರುವರೋ, ಯಾರು ಪಂಚೇಂದ್ರಿಯಗಳನ್ನು ಮತ್ತು ಪಂಚಬಲಗಳನ್ನು ಬಲಿಷ್ಠವಾಗಿ ಹೊಂದಿರುವರೋ, ಹಾಗೆಯೇ ಸಪ್ತಬೋಧಿ ಅಂಗಗಳನ್ನು ಮತ್ತು ಆರ್ಯ ಅಷ್ಠಾಂಗ ಮಾರ್ಗದಲ್ಲಿ ಕ್ರಮಿಸಿರುವರೋ ಅಂತಹ ಸಮಥ ಮತ್ತು ವಿಪಶ್ಶನ ಮಾರ್ಗಗಳಿಗೆ ನಾಲ್ಕು ಲೋಕೋತ್ತರಗಳ ಫಲಪಡೆಯುವುದು ಸುಲಭವಾಗಿದೆ. ಹಾಗೆಯೇ ಅವರು ನಾಲ್ಕು ಪಟಿಸಂಬಿದಾ ಜ್ಞಾನಗಳನ್ನು ತ್ರಿವಿದ್ಯೆಗಳನ್ನು, ಆರು ಅಭಿಜ್ಞಾಗಳನ್ನು ಸುಲಭವಾಗಿ ಪಡೆಯುತ್ತಾರೆ. ಅಂತಹವನಿಗೆ ಇಡೀ ಭಿಕ್ಖು ಸಮುದಾಯವು ತನ್ನದೆ ಆಗಿರುತ್ತದೆ, ಆತನು ಪಟ್ಟಾಭಿಶಕ್ತ ರಾಜನಂತೆ ಆತನ ಮೇಲೆ ವಿಮುಕ್ತಿಯ ಶ್ವೇತ ಛತ್ರಿಯು ರಾರಾಜಿಸುತ್ತದೆ.

ಓ ಮಹಾರಾಜ, ಯಾರು 13 ಧುತಾಂಗಗಳನ್ನು ಪರಿಶುದ್ಧನಾಗಿರುವವನೋ ಆತನು ನಿಬ್ಬಾಣದ ಬೃಹತ್ ನೀರಿನಲ್ಲಿ ಸ್ನಾನ ಮಾಡಿರುತ್ತಾನೆ ಮತ್ತು ಅವನು ಅಲ್ಲೇ ಆನಂದಿಸುತ್ತಾನೆ. ಒಬ್ಬನು ಹೇಗೆ ಅಲೆಗಳಲ್ಲಿ ಆನಂದಿಸುವನೋ ಹಾಗೆ ಆತನು ಧಮ್ಮದಲ್ಲಿ ಆನಂದಿಸುತ್ತಾನೆ. ಆತನು ಅಷ್ಟ ಸಮಾಪತ್ತಿಯಲ್ಲಿ ನಿರತನಾಗುತ್ತಾನೆ. ಆತನು ಇದ್ದಿಬಲಗಳನ್ನು ಪಡೆದು, ದಿವ್ಯಶ್ರೋತ, ಪಡೆದು ಮಾನವ ಮತ್ತು ದಿವ್ಯ ಶಬ್ದಗಳನ್ನು ಕೇಳುತ್ತಾನೆ. ಪರರಚಿತ್ತ ಓದುತ್ತಾನೆ. ಹಿಂದಿನ ಜನ್ಮಗಳನ್ನು ನೆನಪಿಸಿಕೊಳ್ಳುತ್ತಾನೆ. ಎಲ್ಲರ ಕರ್ಮಫಲ ಅರಿಯುತ್ತಾನೆ ಮತ್ತು ಆತನಿಗೆ ದುಃಖದ ನಿಜಸ್ವಭಾವ, ಅವರ ಉಗಮ, ನಿರೋಧ ಮತ್ತು ನಿರೋಧದ ಮಾರ್ಗವು ಸ್ಪಷ್ಟವಾಗಿ ಸಾಕ್ಷಾತ್ಕಾರವಾಗುತ್ತದೆ. ಹಾಗೆಯೇ ಆತನು ಲೋಭ, ಮೋಹ, ಆಲಸ್ಯ ಮತ್ತು ಜೀವನ ಕಲೆಗಳಿಂದ ಮುಕ್ತನಾಗುವನು.

ಮತ್ತು ಮಹಾರಾಜ, ಯಾವುದು ಆ 13 ಧುತಾಂಗಗಳು? ಅವೆಂದರೆ ಕಸದಿಂದ ತೆಗೆದ ಬಟ್ಟೆಯ ತುಂಡುಗಳಿಂದ ಸಿದ್ಧವಾದ ಚೀವರ ಧರಿಸುವುದು, ಕೇವಲ ಮೂರು ಚೀವರಗಳನ್ನೇ ಧರಿಸುವುದು, ಭಿಕ್ಷೆಯ ಆಹಾರದಿಂದಲೇ ಜೀವಿಸುವುದು, ಮನೆಯಿಂದ ಮನೆಗೆ ಹೋಗಿ ಭಿಕ್ಷೆ ಸ್ವೀಕರಿಸುವುದು, ಒಂದು ದಿನಕ್ಕೆ ಒಂದೇಸಲ ಆಹಾರ ಸೇವಿಸುವುದು, ಒಂದೇ ಪಾತ್ರೆಯಲ್ಲಿ ತೆಗೆದುಕೊಂಡು ಅತಿಹಾರ ತ್ಯಜಿಸುವುದು, ಕಾಡಿನಲ್ಲಿ ವಾಸಿಸುವುದು, ಮರದ ಬುಡದಲ್ಲಿ ವಾಸಿಸುವುದು, ತೆರೆದ ಗಾಳಿಯಲ್ಲಿ ವಾಸಿಸುವುದು, ಸ್ಮಶಾನದಲ್ಲಿ ವಾಸಿಸುವುದು, ಮಲಗುವ ಚಾಪೆ ಅಥವಾ ಚೀವರ ಬದಲಿಸದಿರುವುದು, ಕುಳಿತೇ ನಿದ್ರಿಸುವುದು, ಇವಿಷ್ಟು ಓ ಮಹಾರಾಜ, ಯಾರು ಹಿಂದಿನ ಜನ್ಮದಲ್ಲಿ ಇದನ್ನು ತೆಗೆದುಕೊಂಡು, ಸಾಧಿಸಿ, ಹಿಂಬಾಲಿಸಿ, ಸಿದ್ಧಿಸಿ, ವೀಕ್ಷಿಸಿ ಅದರಂತೆಯೇ ನಡೆದು ಈ 13 ಧುತಾಂಗಗಳನ್ನು ಪರಿಪೂರ್ಣ ಮಾಡಿದ್ದಾರೆ. ಹಾಗೆ ಮಾಡಿರುವವರೂ ಶಾಂತಿಯ ಆನಂದದ ಅನುಭವವನ್ನು ಈ ಜನ್ಮದಲ್ಲೇ ಪಡೆಯುವರು.

ಓ ಮಹಾರಾಜ, ಹೇಗೆ ನಾವಿಕದ ಒಡೆಯನು ನಿರಂತರ ತೆರಿಗೆ, ಬಾಡಿಗೆಗಳಿಂದ ಶ್ರೀಮಂತನಾಗಿರುವನೋ, ಆತನು ಸದಾ ಸಮುದ್ರಗಳನ್ನು ದಾಟುವನೋ ಉದಾಹರಿಸುವುದಾದರೆ ವಂಗ, ತಕ್ಕೊಲ ಅಥವಾ ಚೀನಾ, ಅಥವಾ ಸೊವಿರ ಅಥವಾ ಸೂರತ್ ಅಥವಾ ಅಲಸಂದಾ (ಅಲೆಗ್ಸಾಂಡ್ರಿಯ) ಅಥವಾ ಕರಾವಳಿ ತೀರಗಳು (ಕೋಲಪಟ್ಟನ) ಅಥವಾ ಸುವರ್ಣಭೂಮಿಗೆ ಹೋಗುವರೊ ಅಥವಾ ಇನ್ನಾವುದೇ ತೀರಕ್ಕೆ ಹೋಗುವರೋ ಅದೇರೀತಿಯಲ್ಲಿ ಓ ಮಹಾರಾಜ, ಯಾರು ಹಿಂದಿನ ಜನ್ಮಗಳಲ್ಲಿ ಈ 13 ಧುತಾಂಗಗಳನ್ನು ತೆಗೆದುಕೊಂಡು ಸಾಧಿಸಿ, ಪಾಲನೆಗೈದು, ಸಿದ್ಧಿಸಿರುವರೋ ಅವರು ಸಮಣ ಜೀವನದ ಎಲ್ಲಾ ಫಲಗಳನ್ನು ಪಡೆಯುತ್ತಾರೆ ಮತ್ತು ಸಂತ ಸುಖದ ಸಮಾಪತ್ತಿಯನ್ನು ಪಡೆಯುತ್ತಾರೆ.

ಮತ್ತೆ ಓ ಮಹಾರಾಜ ಹೇಗೆ ರೈತನು ಮೊದಲು ಮಣ್ಣಿನ ಎಲ್ಲಾ ದೋಷಗಳ ಕಳೆ, ಮುಳ್ಳು, ಕಲ್ಲುಗಳು ತೆಗೆದುಹಾಕುತ್ತಾನೆ. ನಂತರ ನೇಗಿಲು ಹೊಡೆಯುತ್ತಾನೆ. ನಂತರ ಬಿತ್ತುವಿಕೆ ಮತ್ತು ನೀರನ್ನು ಹಾಯಿಸುವಿಕೆ ಬೇಲಿ ಕಟ್ಟುವಿಕೆ ಮತ್ತು ಕಾವಲು ಕಾಯುವಿಕೆ, ಕುಯ್ಯುವಿದೆ ಮತ್ತು ಬೀಸುವಿಕೆ ಮಾಡುತ್ತಾನೆ. ಆನಂತರವೇ ಆತನು ಹಿಟ್ಟಿಗೆ ಒಡೆಯನಾಗುತ್ತಾನೆ ಮತ್ತು ಹೀಗೆ ಒಡೆಯನಾಗಿ ಬಡವರಿಗೆ, ದುಃಖಿತರಿಗೆ ನೀಡಿ ದಾತನಾಗಿ ಬಡತನ ಕ್ಷೀಣಿಸುತ್ತಾನೆ. ಅದೇರೀತಿ ಓ ಮಹಾರಾಜ, ಯಾರು ಹಿಂದಿನ ಜನ್ಮದಲ್ಲಿ ಈ 13 ಧುತಾಂಗಗಳು ತೆಗೆದುಕೊಂಡು, ಪಾಲಿಸಿ, ಸಾಧಿಸಿ ಪೂರೈಸಿ, ಸಮಣ ಜೀವನದ ಎಲ್ಲಾ ಫಲಗಳನ್ನು ಪಡೆಯುತ್ತಾನೆ ಮತ್ತು ಆತನು ಶಾಂತಸುಖದ ಸಮಾಪತ್ತಿಯನ್ನು ಪಡೆಯುತ್ತಾನೆ.
ಮತ್ತೆ ಓ ಮಹಾರಾಜ, ಹೇಗೆ ಕ್ಷತ್ರಿಯ ಅಭಿಷಕ್ತ ಚಕ್ರವತರ್ಿಯು ಇತರ ರಾಜರ ಮೇಲೆ ಹಿಡಿತ ಸಾಧಿಸುತ್ತಾನೊ, ಬಹಿಷ್ಕಾರದ ಅಧಿಕಾರವನ್ನು ಪಡೆದಿರುತ್ತಾನೋ, ಹಾಗಿದ್ದು ಸ್ವತಂತ್ರ ಆಡಳಿತಗಾರನಾಗಿ, ಪ್ರಭುವಾಗಿ, ತಾನು ಇಚ್ಛಿಸಿದ ಏನೆಲ್ಲವನ್ನು ಮಾಡುವನೋ ಮತ್ತು ಆಗ ಇಡೀ ವಿಸ್ತಾರವಾದ ಭೂಮಿಯು ಆತನಿಗೆ ಸೇರುವುದು ಹಾಗೆಯೇ ಓ ಮಹಾರಾಜ, ಯಾರೆಲ್ಲರೂ ಹಿಂದಿನ ಜನ್ಮದಲ್ಲಿ ಈ 13 ಧುತಾಂಗಗಳನ್ನು ತೆಗೆದುಕೊಂಡು ಪಾಲಿಸಿ, ಸಾಧಿಸಿರುವದೋ ಅವರು ಜಿನ ಧಮ್ಮದಲ್ಲಿ ಸಮಣತ್ವ ಎಲ್ಲಾ ಗುಣಗಳನ್ನು ಪಡೆದವರಾಗಿರುತ್ತಾರೆ.

ಮಹಾರಾಜ ಥೇರ ಉಪಸೇನರವರು, ವಂಗತ ಪುತ್ರ ಧುತಂಗದ ಎಲ್ಲಾ ನಿಯಮಗಳನ್ನು ಪಾಲಿಸಿ, ಶ್ರಾವಸ್ತಿಗೆ ತಮ್ಮ ಅನುಯಾಯಿಗಳೊಂದಿಗೆ ಬುದ್ಧರಲ್ಲಿಗೆ ಹೋಗಿ ವಂದಿಸಿ ಒಂದೆಡೆ ಕುಳಿತರು, ಆಗ ಭಗವಾನರು ಸುಶಿಕ್ಷಿತತೆ ಪಡೆದ ನಿಯಂತ್ರಿತರಾದ ಆತನ ಸಮೂಹ ಕಂಡು ಆನಂದಿತರಾಗಿ ಹೀಗೆ ಅವರನ್ನು ಶ್ಲéಾಘಿಸಿದರು:
ಅತ್ಯಂತ ರಮಣೀಯ ಉಪಸೇನ, ನಿನ್ನೊಂದಿಗೆ ಇರುವ ಸಮೂಹವು, ಹೇಗೆ ನೀವು ಇವರನ್ನು ತರಬೇತಿ ನೀಡದಿರಿ? ಮತ್ತು ಹೀಗೆ ಆತನು ಭಗವಾನರಿಂದ ಪ್ರಶ್ನಿಸಲ್ಪಟ್ಟಾಗ, ದೇವಾದಿದೇವರಿಂದ ಸರ್ವಜ್ಞ ಸಂಪನ್ನರಿಂದ ಪ್ರಶ್ನಿಸಲ್ಪಟ್ಟಾಗ ಅವನು ಭಗವಾನರಿಗೆ ನಿಜ ಕಾರಣವನ್ನು ಹೀಗೆ ಹೇಳಿದನು: ಭಗವಾನ್ ತನ್ನಲ್ಲಿಗೆ ಶಿಷ್ಯನಾಗಿ ಬಂದಂತಹ ಯಾರಿಗೆ ಆಗಲಿ ನಾನು ಹೀಗೆ ಹೇಳಿದೆನು: ನಾನು ಕಾಡಿನಲ್ಲಿ ವಾಸಿಸುವವನು, ಭಿಕ್ಷೆಯಲ್ಲಿ ಆಹಾರ ಸೇವಿಸುವವನು, ಚಿಂದಿ ಬಟ್ಟೆಯಲ್ಲೆ ಚೀವರ ಧರಿಸಿದವನು, ನೀವು ಸಹಾ ಹೀಗೆಯೇ ಮಾಡುವವರಾದರೆ ನಾನು ನಿಮಗೆ ಸೇರಿಸಿಕೊಳ್ಳುವೆನು. ಹಾಗು ನನ್ನ ಶಿಷ್ಯರನ್ನಾಗಿ, ಮಾಡಿಕೊಳ್ಳುವೆನು. ಇದನ್ನು ಆಲಿಸಿ, ಆತನು ಆನಂದದಿಂದ ಒಪ್ಪಿಕೊಂಡಾಗ ಮಾತ್ರ ಆತನಿಗೆ ಪ್ರವಜ್ಯನೀಡಿ ಶಿಷ್ಯರನ್ನಾಗಿಸುತ್ತಿದ್ದರು. ಹೀಗೆ ಭಗವಾನ್ ನಾನು ಅವರಿಗೆ ಶಿಕ್ಷಣ ನೀಡುತ್ತಿದ್ದೆನು.

ಮತ್ತು ಹೀಗೆ ಓ ಮಹಾರಾಜ, ಯಾರೆಲ್ಲರೂ ಧುತಾಂಗಗಳನ್ನು ತೆಗೆದುಕೊಂಡು ಪರಿಪಾಲಿಸುವವರಾಗಿರುವೋ ಅವರು ಪ್ರಭುತ್ವ ಪಡೆದವರಾಗಿ ಜಿನ ಶಾಸನದಲ್ಲಿ ಅಧಿಪತಿಗಳಾಗಿ ಶಾಂತ ಸುಖದ ಸಮಾಪತ್ತಿ ಪಡೆಯುತ್ತಾರೆ.

ಮತ್ತು ಓ ಮಹಾರಾಜ, ಹೇಗೆ ಪದ್ಮಪುಷ್ಟವು ಭವ್ಯವಾಗಿ, ಪರಿಶುದ್ಧತೆಯಿಂದ, ಉನ್ನತ ಪರಿಮಳದಿಂದ, ಉತ್ತಮ ಮೇರಗಿನಿಂದ, ಮೃದುತ್ವದಿಂದ ಮನಸೇಳುವುದು, ಬಯಸುವಂತೆ ಮಾಡುವುದು, ಶ್ಲಾಘಿಸುವಂತೆ ಮಾಡುವುದು, ಅದು ನೀರಿನಿಂದ ಅಂಟಿರುವುದಿಲ್ಲ, ಪುಟ್ಟ ದಳಗಳಿಂದ ಯುಕ್ತವಾಗಿ ತನ್ನ ಸೌಗಂಧ ಹಾಗು ಸೌಂದರ್ಯದಿಂದ ಹಲವಾರು ದುಂಬಿಗಳಿಗೆ ಆಶ್ರಯ ನೀಡುವುದು, ಅದು ತಂಪಾದ, ಸ್ವಚ್ಛವಾದ ಹೊಳೆಯ ಮಗುವಿನಂತೆ ಕಾಣುವುದು, ಹಾಗೆಯೇ ಆರ್ಯಶ್ರಾವಕನು, ಹಿಂದಿನ ಜನ್ಮದಲ್ಲಿ ಧುತಂಗಗಳನ್ನು ತೆಗೆದುಕೊಂಡು, ಪರಿಪಾಲಿಸಿ, ಸಿದ್ಧಿಸಿ 30 ಶೋಬೆಯನ್ನು ಪಡೆದಿರುತ್ತಾನೆ ಮತ್ತು ಯಾವುದವು 30 ಶೋಭೆಗಳು?

ಆತನ ಚಿತ್ತವು ಸ್ನೇಹದಿಂದ, ಮೃದುತನದಿಂದ ಮಾರ್ಧವತೆಯಿಂದ, ಮೈತ್ರಿಯುಕ್ತವಾಗಿ ಕೂಡಿರುತ್ತದೆ. ಆತನಲ್ಲಿ ಪಾಪವು ನಾಶವಾಗಿರುತ್ತದೆ, ಇಲ್ಲವಾಗಿರುತ್ತದೆ. ಅಹಂಕಾರವು ನಾಶವಾಗಿ, ಸ್ವ-ಋಜುತ್ವವು ಮುಕ್ತಿಯೆಡೆಗೆ ಬಂದಿರುತ್ತದೆ. ಆತನ ಶ್ರದ್ಧೆಯು ಬಲಿಷ್ಠವಾಗಿ ಸುಸ್ಥಾಪಿಸಲ್ಪಟ್ಟಿರುತ್ತದೆ. ಆತನು ಚಿತ್ತ ಸುಖದ ಆನಂದದಲ್ಲಿರುತ್ತಾನೆ. ಉನ್ನತವಾಗಿ ಸ್ತುತಿಸಲ್ಪಡುತ್ತಾನೆ. ಆನಂದದ, ಶಾಂತಿಯ ಸಮಾಪತ್ತಿ ಪಡೆಯುತ್ತಾನೆ, ಆತನ ಉಸಿರಾಟವು ಸಹಾ ಪರಮ ಸೂಕ್ಷ್ಮವು ಉನ್ನತವು ಆಗಿರುತ್ತದೆ. ಆತನ ಜೀವನವು ಅಸಮಾನ ಮಾಧುರ್ಯತೆಯಿಂದ ಕೂಡಿರುತ್ತದೆ. ದೇವತೆಗಳಿಗೆ ಮತ್ತು ಮಾನವರಿಗೆ ಪ್ರಿಯವಾಗಿರುತ್ತಾನೆ, ಅರಹಂತರ ಶ್ರೇಷ್ಠ ಅಗ್ರ ಜೀವಿಗಳಿಂದಲೂ ಶ್ಲಾಘಿಸಲ್ಪಡುತ್ತಾನೆ. ದೇವತೆಗಳು ಮತ್ತು ಮಾನವರು ಆತನಿಗೆ ಸೇವೆ ಸಲ್ಲಿಸಲು ಆನಂದಿಸುತ್ತಾರೆ. ಜ್ಞಾನಿಗಳು, ಪ್ರಾಜ್ಞರು ಮತ್ತು ಬಹುಶ್ರುತರು ಆತನಿಗೆ ಅನುಮೋದಿಸುತ್ತಾರೆ, ಸ್ತುತಿಸುತ್ತಾರೆ, ಪ್ರಶಂಸಿಸಿರುತ್ತಾರೆ. ಆತನು ಈ ಲೋಕದ ಅಥವಾ ಪರಲೋಕದ ಯಾವುದಕ್ಕೂ ಅಂಟುವುದಿಲ್ಲ. ತನು ಅಣುವಿನಷ್ಟು ತಪ್ಪಿಗೂ ಅಪಾಯ ಕಾಣುತ್ತಾನೆ. ಆತನು ಪರಮಶ್ರೇಷ್ಠ ಐಶ್ವರ್ಯಕ್ಕೆ ಶ್ರೀಮಂತನಾಗಿದ್ದಾನೆ. ಆ ಐಶ್ವರ್ಯವೇ ಮಾರ್ಗದ ಫಲ, ಶ್ರೇಷ್ಠವಾದ ಪ್ರಾಪ್ತಿಯು ಹುಡುಕಾಟದವರ ಐಶ್ವರ್ಯವಾಗಿದೆ. ಆತನು ನಾಲ್ಕು ಪರಿಕರಗಳಿಗೆ ಅರ್ಹನಾಗಿರುತ್ತಾನೆ. ಅನಿಕೇತನವಾಗಿ ತಪಕ್ಕೆ ಬದ್ಧನಾಗಿರುತ್ತಾನೆ. ಧ್ಯಾನವನ್ನು ಅವಲಂಬಿಸಿರುತ್ತಾನೆ. ಆತನು ಪಾಪದ ಜಾಲವನ್ನು ಬಿಡಿಸಲು ಸಮರ್ಥನಾಗಿರುತ್ತಾನೆ. ಆತನು ಮುಂದಿನ ಜನ್ಮಗಳ ಸಾಧ್ಯತೆಯನ್ನು ಮುರಿಯುತ್ತಾನೆ, ಸ್ಫೋಟಗೊಳಿಸುತ್ತಾನೆ. ಭವಿಷ್ಯದ ಜನ್ಮಗಳ ಐದು ಗತಿಗಳಲ್ಲಿ ಯಾವುದರಲ್ಲೂ ಜನ್ಮಸದಿರುವ ಹಾಗೆ ಸಾಧನೆ ಮಾಡುತ್ತಾನೆ. ಹಾಗೆಯೇ ಐದು ತಡೆಗಳಾದ ರಾಗ, ದ್ವೇಷ, ಜಡತ್ವ, ಅಹಂಕಾರ ಮತ್ತು ಸಂದೇಹವನ್ನು ಧ್ವಂಸಗೊಳಿಸುತ್ತಾನೆ, ಚಾರಿತ್ಯದಲ್ಲಿ ಕ್ಷೀಣಿಸದ, ಶೀಲದಲ್ಲಿ ಉತ್ಕೃಷ್ಟದವನಾಗಿ ಮತ್ತು ಪರಿಕರಗಳಲ್ಲೂ ಆಸೆ ತಾಳದೆ ನಿಯಮ ಉಲ್ಲಂಘಿಸುವುದಿಲ್ಲ, ಪುನರ್ಜನ್ಮಗಳಿಂದ ಸ್ವತಂತ್ರನಾಗುತ್ತಾನೆ, ದ್ವಂದ್ವತೆಯಿಂದ ಆಚೆ ಹೋಗುತ್ತಾನೆ. ಆತನ ಚಿತ್ತವು ಪೂರ್ಣವಾಗಿ ಮುಕ್ತವಾಗಿರುತ್ತದೆ. ಸತ್ಯವನ್ನು ಕಾಣುತ್ತಾನೆ, ಸಪ್ತ ಕ್ಲೇಶಗಳಾದ ರಾಗ, ದ್ವೇಷ, ಪಾಖಂಡತೆ, ಸಂದೇಹ, ಅಹಂಕಾರ, ಜನ್ಮ, ಬಯಕೆ, ಅಜ್ಞಾನಗಳಿಂದ ಮತ್ತು ಭಯಗಳಿಂದ ದೂರವಾಗಿ, ಶ್ರೇಷ್ಠ ಶರಣನ್ನು ಕ್ಷೇಮಕರ ಸ್ಥಾನವನ್ನು ಕಾಣುತ್ತಾನೆ. ಎಲ್ಲಾ ಆಸವಗಳನ್ನು ಕ್ಷಯಗೊಳಿಸಿ ಅಂತ್ಯಗೊಳಿಸಿ, ಪರಮಶಾಂತತೆಯನ್ನು, ಆನಂದವನ್ನು ಪಡೆಯುತ್ತಾನೆ. ಸಮಣನಿಗಿರಬೇಕಾದ ಎಲ್ಲಾ ಶೀಲಗಳನ್ನು ಹೊಂದಿರುತ್ತಾನೆ. ಇವೇ ಮಹಾರಾಜ,
30 ಶೋಭೆಗಳನ್ನು ಧುತಾಂಗಧಾರಿಯು ಹೊಂದಿರುತ್ತಾನೆ.

ಮತ್ತೆ ಓ ಮಹಾರಾಜ, ಧಮ್ಮ ಸೇನಾನಿಯಾದ ಸಾರಿಪುತ್ತರು ಇಡೀ ದಶಸಹಸ್ರ ಲೋಕವ್ಯವಸ್ಥೆಗೆ ಶ್ರೇಷ್ಠರಾಗಿದ್ದರು. ಆದರೆ ಅವರಿಗಿಂತ ಶ್ರೇಷ್ಠರು ದಶಬಲಧಾರಿಗಳಾದ ಬುದ್ಧರಾಗಿದ್ದರು. ಸಾರಿಪುತ್ರರು ಸಹಾ ಅಸಂಖ್ಯ ಕಲ್ಪದಿಂದ ಪುಣ್ಯದ ರಾಶಿಯನ್ನು ಒಗ್ಗೂಡಿಸಿದ್ದರು. ಮತ್ತು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದರು. ಅವರು ಸಹಾ ಇಂದ್ರೀಯ ಭೋಗದ ನಿಸ್ಸಾರತೆ ಅರಿತು, ಅಪಾರ ಐಶ್ವರ್ಯ ತೊರೆದು, ಬುದ್ಧ ಶಾಸನದಲ್ಲಿ ಪ್ರವೇಶಿಸಿದ್ದರು. ಅವರು ತಮ್ಮ ದೇಹ, ಮಾತು, ಮನಸ್ಸನ್ನು ಈ 13 ಧೂತಂಗಗಳ ಪಾಲನೆಯಿಂದಲೇ ಸಂಯಮಗೊಳಿಸಿದ್ದರು. ಇದರಿಂದಾಗಿಯೇ ಅವರು ಶ್ರೇಷ್ಠ ಶೀಲವಂತರಾಗಿ, ಬುದ್ಧರ ಬಳಿಗೆ ಎರಡನೆಯ ಶ್ರೇಷ್ಠ ವ್ಯಕ್ತಿಯಾಗಿ ಧಮ್ಮಚಕ್ರವನ್ನು ಪ್ರವತರ್ಿಸಿದ್ದರು. ಓ ಮಹಾರಾಜ, ಭಗವಾನರು ಅಂಗುತ್ತರ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ: ನನಗೆ ಗೊತ್ತಿದೆ ಓ ಭಿಕ್ಷುಗಳೆ, ಬೇರ್ಯಾವ ವ್ಯಕ್ತಿಯು ಸಾರಿಪುತ್ತನ ಹೊರತಾಗಿ ಧಮ್ಮಚಕ್ರವನ್ನು ಚೆನ್ನಾಗಿ ಪ್ರವರ್ತನೆ ಮಾಡುವುದಿಲ್ಲ, ನನ್ನ ಹೊರತಾಗಿ ದ್ವೀತಿಯನಾಗಿರುವ ಸಾರಿಪುತ್ತನೇ ಧಮ್ಮಚಕ್ರ ಪ್ರವತರ್ಿಸುವುದರಲ್ಲಿ ಶ್ರೇಷ್ಠನಾಗಿದ್ದಾನೆ.

ಸಾಧು ಭಂತೆ ನಾಗಸೇನ, ಇಡೀ ನವಾಂಗ ಬುದ್ಧಶಾಸನ, ಲೋಕೋತ್ತರ ಕ್ರಿಯೆಗಳು ಮತ್ತು ಉನ್ನತವಾದ, ಶ್ರೇಷ್ಠವಾದ ಯಾವ ಪ್ರಾಪ್ತಿಗಳು ಈ ಲೋಕದಲ್ಲಿವೆಯೋ ಅವೆಲ್ಲವೂ 13 ಧುತಾಂಗಗಳೊಂದಿಗೆ ಸುತ್ತಿವೆ, ಸೇರಿವೆ.
(ಐದನೆಯ ಅನುಮಾನವರ್ಗ ಮುಗಿಯಿತು)

(ಈ ವರ್ಗದಲ್ಲಿ ಎರಡು ಪ್ರಶ್ನೆಗಳಿವೆ )

No comments:

Post a Comment