Friday, 24 November 2017

milinda panha buddha vaggo 5. ಬುದ್ಧ ವಗ್ಗೊ 1. ಬುದ್ಧರ ಇರುವಿಕೆಯ ಬಗ್ಗೆ ಪ್ರಶ್ನೆ

5. ಬುದ್ಧ ವಗ್ಗೊ
1. ಬುದ್ಧರ ಇರುವಿಕೆಯ ಬಗ್ಗೆ ಪ್ರಶ್ನೆ

ರಾಜರು ಕೇಳಿದರು ಭಂತೆ ನಾಗಸೇನ, ನೀವು ಬುದ್ಧರನ್ನು ನೋಡಿರುವಿರಾ?(52)
ಇಲ್ಲ ಮಹಾರಾಜ.
ಹಾಗಾದರೆ ನಿಮ್ಮ ಗುರುಗಳು ಬುದ್ಧರನ್ನು ನೋಡಿದ್ದಾರೆಯೇ?
ಇಲ್ಲ ಮಹಾರಾಜ.
ಭಂತೆ ನಾಗಸೇನ, ಹಾಗಾದರೆ ಬುದ್ಧರೇ ಇಲ್ಲ (ಇರಲಿಲ್ಲ)!
ಆದರೆ ಮಹಾರಾಜ, ನೀವು ಹಿಮಾಲಯ ಪರ್ವತಗಳಲ್ಲಿರುವ ಊಹಾ ನದಿಯನ್ನು ನೋಡಿರುವಿರಾ?
ಇಲ್ಲ ಭಂತೆ.
ಅಥವಾ ನಿಮ್ಮ ತಂದೆಯವರು ನೋಡಿರಬಹುದಲ್ಲವೇ?
ಇಲ್ಲ ಭಂತೆ.
ಮಹಾರಾಜ, ಹಾಗಾದರೆ ಊಹಾ ನದಿಯೇ ಇಲ್ಲವೇ?
ಅದು ಇದೆ ಭಂತೆ, ನಾನು ಅಥವಾ ನಮ್ಮ ತಂದೆ ನೋಡಿಲ್ಲದಿರಬಹುದು, ಆದರೆ ಅದು ಇದೆ.
ಅದೇರೀತಿ ಮಹಾರಾಜ, ನಾನು ಅಥವಾ ನನ್ನ ಗುರುಗಳು ಬುದ್ಧ ಭಗವಾನರನ್ನು ನೋಡಿಲ್ಲದಿರಬಹುದು, ಆದರೆ ಖಂಡಿತವಾಗಿಯು ಬುದ್ಧಭಗವಾನರು ಇದ್ದರು.
ನೀವು ಉತ್ತರಿಸುವಲ್ಲಿ ಮಹಾ ಚತುರರು ನಾಗಸೇನ.

2. ಬುದ್ಧರ ಅನುತ್ತರತೆಯ ಬಗ್ಗೆ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಬುದ್ಧರು ಅನುತ್ತರರೇ? (53)
ಹೌದು ಮಹಾರಾಜ, ಭಗವಾನರು ಅನುತ್ತರರೇ ಆಗಿದ್ದರು.
ಆದರೆ ನೀವು ನೋಡದಿದ್ದಾಗಲು ಅವರನ್ನು ಅನುತ್ತರರು ಎಂದು ಹೇಗೆ ಹೇಳುತ್ತೀರಿ.
ಇದನ್ನು ನೀವು ಹೇಗೆ ಯೋಚಿಸುವಿರಿ ಮಹಾರಾಜ, ಯಾರು ಸಾಗರವನ್ನೇ ಕಂಡಿಲ್ಲವೋ ಅವರು ಅದನ್ನು ಆಳವಾದದ್ದು, ಆಳೆಯಲಾಗದ್ದು, ಅರ್ಥಕ್ಕೆ ನಿಲುಕದ್ದು ಈ ಮಹಾಸಾಗರವು. ಏಕೆಂದರೆ ಇದರಲ್ಲಿ ಪಂಚ ಮಹಾನದಿಗಳಾದಂತಹ ಗಂಗಾ, ಜಮುನ, ಅಚಿರವತಿ, ಸರಭೂ ಮತ್ತು ಮಾಹಿ ನದಿಗಳು ಸೇರಿದರೂ ಸಹಾ ಅದು ಹೆಚ್ಚಾಗಿಯು ಅಥವಾ ಕಡಿಮೆಯಾಗಿಯು ಕಾಣಿಸುವುದಿಲ್ಲ ಎನ್ನುತ್ತಾರೆ, ಇದು ಸರಿಯೇ?
ಹೌದು, ಅವರು ಅರಿಯಬಲ್ಲರು.
ಅದೇರೀತಿಯಲ್ಲಿ ಮಹಾರಾಜ, ನಾನು ಯಾರನ್ನು ಶ್ರೇಷ್ಠ ಗುರುಗಳೆಂದು ನೋಡಿದ್ದೇನೆಯೋ, ಭಾವಿಸುವೆನೋ ಅವರೆಲ್ಲರೂ ಸಹಾ ಕೇವಲ ಬುದ್ಧರ ಶಿಷ್ಯರಾಗಿದ್ದರು. ಆದ್ದರಿಂದ ಬುದ್ಧರನ್ನು ಅನುತ್ತರರು ಎನ್ನುವೆನು.
ಒಳ್ಳೆಯದು ನಾಗಸೇನ.


3. ಬುದ್ಧರ ಅನುತ್ತರತ್ವವನ್ನು ಅರಿಯುವ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ಪರರು ಸಹಾ ಬುದ್ಧರು ಅನುತ್ತರರು ಎಂದು ಅರಿಯಲು ಸಾಧ್ಯವೇ? (54)
ಹೌದು, ಅವರು ಅರಿಯಬಹುದು.
ಆದರೆ ಅವರು ಹೇಗೆ ಅರಿಯಬಲ್ಲರು?
ಬಹಳಕಾಲದ ಹಿಂದೆ ಓ ಮಹಾರಾಜ, ತಿಸ್ಸಾ ಎಂಬ ಥೇರರು ತಮ್ಮ ಲೇಖನಗಳಿಂದಾಗಿ ಜನಪ್ರಿಯರಾಗಿದ್ದರು. ಅವರು ಕಾಲವಾಗಿ ಬಹಳ ವರ್ಷಗಳು ಕಳೆದರೂ ಸಹ, ಹೇಗೆ ಜನರು ಅವರನ್ನು ಅರಿಯಬಲ್ಲರು?
ಅವರ ಬರವಣಿಗೆಗಳಿಂದ (ವಿದ್ವತ್ತಿನಿಂದ) ಭಂತೆ.
ಅದೇರೀತಿಯಲ್ಲಿ ಮಹಾರಾಜ, ಯಾರೆಲ್ಲರೂ ಬುದ್ಧರ ಬೋಧನೆಯನ್ನು (ನಾಲ್ಕು ಆರ್ಯಸತ್ಯಗಳನ್ನು/ಧಮ್ಮ) ಅರಿತಿರುವರೋ ಅವರು ಬುದ್ಧರನ್ನು ಅನುತ್ತರರೆಂದು ಅರಿಯುತ್ತಾರೆ.
ಚೆನ್ನಾಗಿ ನುಡಿದಿರಿ ನಾಗಸೇನ.


4. ಧಮ್ಮವನ್ನು ಅರಿಯುವ ಪ್ರಶ್ನೆ
ರಾಜರು ಕೇಳಿದರು ಭಂತೆ ನಾಗಸೇನ, ನೀವು ಧಮ್ಮವನ್ನು (ಬುದ್ಧರ ಬೋಧನಾ ಸತ್ಯಗಳನ್ನು) ಅರಿತಿರುವಿರಾ? (55)
ಬುದ್ಧರ ನೇತ್ರದ ಅಡಿಯಲ್ಲಿ ಮತ್ತು ಅವರಿಂದ ಘೋಷಿಸಲ್ಪಟ್ಟ ವಿನಯಗಳ (ನಿಯಮ) ಅಧೀನದಲ್ಲಿ ಅವರ ಶ್ರಾವಕರಿಂದ ನಾವು ಜೀವನ ಪರ್ಯಂತ ಧಮ್ಮ ಪಾಲಿಸುವೆವು.
ತುಂಬಾ ಒಳ್ಳೆಯದು ನಾಗಸೇನ.


5. ಅಸಜ್ಜಕಮನ ಪಟಿಸಂದಹನ ಪನ್ಹೊ
ರಾಜರು ಕೇಳಿದರು ಭಂತೆ ನಾಗಸೇನ, ಎಲ್ಲಿ ಮನಸ್ಸು ಅನ್ಯಕಾಯ ವಗರ್ಾವಣೆಯಾಗುವುದಿಲ್ಲವೋ ಅಲ್ಲಿ ಪುನರ್ಜನ್ಮ ಆಗುವುದೇ? (56)
ಹೌದು ಆಗುವುದು.
ಆದರೆ ಅದು ಹೇಗೆ ಆಗುವುದು, ಉಪಮೆಯಿಂದ ಸ್ಪಷ್ಟಪಡಿಸಿ.
ಓ ಮಹಾರಾಜ ಊಹಿಸಿ, ಒಂದು ದೀಪದಿಂದ ಇನ್ನೊಂದು ದೀಪ ಬೆಳಗಿಸುವೆವು. ಅಲ್ಲಿ ಆ ದೀಪದ ಜ್ವಾಲೆಯು ಇನ್ನೊಂದು ದೀಪಕ್ಕೆ ವಗರ್ಾವಣೆಯಾಯಿತೆ?
ಖಂಡಿತ ಇಲ್ಲ.
ಅದೇರೀತಿಯಲ್ಲಿ ಮಹಾರಾಜ, ಪುನರ್ಜನ್ಮವು ವಗರ್ಾವಣೆಯಿಲ್ಲದೆ ಆಗುವುದು.
ಇನ್ನೊಂದು ಉಪಮೆ ನೀಡಬಲ್ಲಿರಾ?
ಮಹಾರಾಜ, ನೆನಪಿಸಿಕೊಳ್ಳಿ. ನೀವು ಚಿಕ್ಕವರಾಗಿದ್ದಾಗ ನಿಮ್ಮ ಗುರುಗಳಿಂದ ಕಲಿತ ಗಾಥೆಯೊಂದನ್ನು ನೆನಪಿಸಿಕೊಳ್ಳಿ.
ನೆನೆಸಿಕೊಂಡೆನು.
ಸರಿ ಹಾಗಾದರೆ ಆ ಗಾಥೆಯು ನಿಮ್ಮ ಗುರುಗಳಿಂದ ನಿಮ್ಮಲ್ಲಿ ವಗರ್ಾವಣೆ ಆಯಿತೆ?
ಖಂಡಿತ ಇಲ್ಲ.
ಅದೇರೀತಿಯಲ್ಲಿ ಮಹಾರಾಜ, ಪುನರ್ಜನ್ಮವು ವಗರ್ಾವಣೆಯಿಲ್ಲದೆ ಆಗುವುದು.
ತುಂಬಾ ಚೆನ್ನಾಗಿ ವಿವರಿಸಿದಿರಿ.


6. ವೇದಗೂ ಪನ್ಹೋ (ಆತ್ಮದ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಆತ್ಮವೆಂಬುದು (ವೇದಗೂ)
ಇದೆಯೇ? (57)
ಓ ಮಹಾರಾಜ, ಪರಮಾರ್ಥದ ದೃಷ್ಟಿಕೋನಿಕವಾಗಿ ಅಂತಹದೇನೂ ಇಲ್ಲ.
ನೀವು ಉತ್ತರಿಸುವುದರಲ್ಲಿ ಚತುರರು ನಾಗಸೇನ.


7. ಅನ್ಯಕಾಯಸಜ್ಞಾಕಮನ ಪನ್ಹೋ (ಅನ್ಯಕಾಯ ವಗರ್ಾವಣೆಯ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಜೀವಿಯು ಇದ್ದುದೇ ಆದರೆ ಯಾರು ಈ ಶರೀರದಿಂದ ಇನ್ನೊಂದು ಶರೀರಕ್ಕೆ ವಗರ್ಾಯಿಸುತ್ತಾರೆ? (58)
ಯಾರು ಇಲ್ಲ ಮಹಾರಾಜ.
ಹಾಗಾದರೆ ಅದು ತನ್ನ ಪಾಪಕೃತ್ಯಗಳಿಂದ ಮುಕ್ತವಾಗದೆ?
ಪುನರ್ಜನ್ಮ ಪಡೆಯದೆ ಹೋದರೆ ಮುಕ್ತವಾಗುತ್ತದೆ. ಪುನರ್ಜನ್ಮ ಪಡೆದರೆ ಅದು ಪಾಪಕೃತ್ಯಗಳ ವಿಪಾಕದಿಂದ ಮುಕ್ತವಾಗದು.
ಉಪಮೆಯಿಂದ ಸ್ಪಷ್ಟಪಡಿಸುವಿರಾ?
ಊಹಿಸಿ ಮಹಾರಾಜ, ಒಬ್ಬ ಇನ್ನೊಬ್ಬನ ಮಾವುಗಳನ್ನು ಕದ್ದರೆ ಶಿಕ್ಷೆಗೆ ಅರ್ಹನಾಗುವನೆ?
ಹೌದು, ಆಗುತ್ತಾನೆ.
ಆದರೆ ಕಳ್ಳನು ಕದ್ದಿರುವುದು, ಆತನು ಭೂಮಿಯಲ್ಲಿ ನೆಟ್ಟ ಮಾವುಗಳು ಅಲ್ಲವಲ್ಲ, ಆತನೇಕೆ ಶಿಕ್ಷೆಗೆ ಗುರಿಯಾಗಬೇಕು?
ಏಕೆಂದರೆ ಕದ್ದ ಮಾವುಗಳು, ನೆಟ್ಟ ಮಾವುಗಳಿಂದಲೇ ಬಂದಿವೆ, ಅದಕ್ಕಾಗಿ ಅತನು ಶಿಕ್ಷೆಗೆ ಅರ್ಹ.
ಅದೇರೀತಿಯಾಗಿ ಮಹಾರಾಜ, ಈ ನಾಮರೂಪಗಳಿಂದ (ದೇಹ-ಮನಸ್ಸಿನಿಂದ) ಕುಶಲ ಅಕುಶಲ ಕಾರ್ಯಗಳು ಆಗುತ್ತವೆ ಮತ್ತು ಆ ಕರ್ಮದಿಂದಾಗಿ ಮತ್ತೊಂದು ನಾಮರೂಪವು ಪುನರ್ಜನ್ಮಿಸುತ್ತವೆ ಮತ್ತು ಹೀಗಾಗಿ ಆತನು ಪಾಪಕೃತ್ಯಗಳ ವಿಪಾಕದಿಂದ ಮುಕ್ತನಾಗಲಾರ.
ಚೆನ್ನಾಗಿ ವಿವರಿಸಿದಿರಿ ನಾಗಸೇನ.


8. ಕರ್ಮಫಲ ಅತ್ಥಿಭಾವ ಪನ್ಹೋ (ಕರ್ಮಫಲ ಇರುವಿಕೆಯ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಒಂದು ನಾಮರೂಪದಿಂದ ಕರ್ಮಗಳು ಮಾಡಲ್ಪಡುತ್ತದೆ. ನಂತರ ಆ ಕರ್ಮಗಳು ಏನಾಗುತ್ತವೆ? (59)
ಓ ರಾಜನೇ, ಎಂದಿಗೂ ಬಿಡದ ನೆರಳಿನಂತೆ, ಆ ಕರ್ಮಗಳು ನಾಮರೂಪಗಳನ್ನು ಹಿಂಬಾಲಿಸುತ್ತದೆ.
ಹಾಗಾದರೆ ಆ ಕರ್ಮಗಳನ್ನು ಇದೋ ಇಲ್ಲಿವೆ ಅಥವಾ ಅಲ್ಲಿವೆ ಎಂದು ಗುರುತಿಸಬಹುದೆ?
ಖಂಡಿತ ಇಲ್ಲ.
ಹಾಗೆಯೇ ಉಪಮೆಯಿಂದ ತೋರಿಸಬಲ್ಲಿರಾ?
ಓ ಮಹಾರಾಜ, ಇನ್ನೂ ಉತ್ಪತ್ತಿಯಾಗದ ಫಲಗಳನ್ನು ಮರಗಳಲ್ಲಿ ಫಲಗಳು ಇದೋ ಇಲ್ಲಿವೆ ಅಥವಾ ಅಲ್ಲಿವೆ ಎಂದು ಗುತರ್ಿಸಬಹುದೇ?
ಖಂಡಿತ ಇಲ್ಲ ಭಂತೆ.
ಹಾಗೆಯೇ ಮಹಾರಾಜ, ಎಲ್ಲಿಯವರೆಗೆ ಜೀವನದ ನಿರಂತರತೆ ಕತ್ತರಿಸಲ್ಪಡುವು ದಿಲ್ಲವೋ, ಅಲ್ಲಿಯವರೆಗೆ ಮಾಡಲ್ಪಟ್ಟಿರುವ ಕರ್ಮಗಳನ್ನು ಗುರುತಿಸಲಾರರು.
ಬಹಳ ಒಳ್ಳೆಯದು ನಾಗಸೇನ.


9. ಉಪ್ಪಜ್ಜತಿ ಜಾನನ ಪನ್ಹೊ (ಪುನರ್ಜನ್ಮದ ಅರಿವಿನ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಯಾರು ಜನ್ಮಿಸಲಿರುವನೋ ಆತನಿಗೆ ತಾನು ಜನ್ಮಿಸಲಿದ್ದೇನೆ ಎಂಬುದು ತಿಳಿಯುವುದೇ? (60)
ಹೌದು, ಆತನಿಗೆ ಗೊತ್ತಾಗುತ್ತದೆ ಓ ರಾಜ.
ಹೇಗೆಂದು ವಿವರಿಸುವಿರಾ?
ಊಹಿಸಿ, ಓ ಮಹಾರಾಜ ಒಬ್ಬ ರೈತನಿರುತ್ತಾನೆ. ಆತನು ನೆಲದಲ್ಲಿ ಬೀಜಗಳನ್ನು ಬಿತ್ತಿರುತ್ತಾನೆ. ಮಳೆಯು ಸಕಾಲದಲ್ಲಿ ಚೆನ್ನಾಗಿ ಬಿದ್ದಾಗ ಆತನಿಗೆ ಭಾರಿ ಫಸಲು ಉತ್ಪನ್ನವಾಗುತ್ತದೆ ಎಂದು ತಿಳಿದಿರುತ್ತದೆಯೇ?
ಹೌದು ರೈತನಿಗೆ ತಿಳಿದಿರುತ್ತದೆ.
ಅದೇರೀತಿಯಲ್ಲಿ ಮಹಾರಾಜ, ಜನ್ಮಿಸುವವನಿಗೆ ತಾನು ಜನ್ಮಿಸಲಿದ್ದೆನೆ ಎಂದು ತಿಳಿದಿರುತ್ತದೆ.
ಚೆನ್ನಗಿ ವಿವರಿಸಿದಿರಿ ನಾಗಸೇನ.


10. ಬುದ್ಧನಿದಸ್ಸ ಪನ್ಹೊ (ಬುದ್ಧರ ಇರುವಿಕೆಯ ಪ್ರಶ್ನೆ)
ರಾಜರು ಕೇಳಿದರು ಭಂತೆ ನಾಗಸೇನ, ಬುದ್ಧರು ಇದ್ದರೆ? (61)
ಹೌದು ಮಹಾರಾಜ, ಬುದ್ಧರು ಇದ್ದದ್ದು ಸತ್ಯ, ಅವರಿದ್ದರು.
ಹಾಗಾದರೆ ನಾಗಸೇನ ಅವರ ಅಸ್ತಿತ್ವ ಇಲ್ಲಿದೆ ಅಥವಾ ಅಲ್ಲಿದೆ ಎಂದು ಗುರುತಿಸಬಹುದೇ?
ಓ ಮಹಾರಾಜ, ಭಗವಾನರು ಪರಿನಿಬ್ಬಾಣವನ್ನು ಪಡೆದಿದ್ದಾರೆ (ನಿಶ್ಶೇಷ) ಅನುಪಾದಿಸೇಸ ನಿಬ್ಬಾಣ ಪಡೆದಿದ್ದಾರೆ. ಆದ್ದರಿಂದಾಗಿ ಅವರ ಅಸ್ತಿತ್ವ ಇಲ್ಲಿದೆ ಅಥವಾ ಅಲ್ಲಿದೆ ಎಂದು ಗುರುತಿಸಲಾಗದು, ಅದು ಅಸಾಧ್ಯ.
ಇದನ್ನು ಉಪಮೆಯಿಂದ ವಿವರಿಸಬಲ್ಲಿರಾ?
ಇದನ್ನು ಹೇಗೆ ಊಹಿಸುವಿರಿ ಮಹಾರಾಜ, ಒಂದು ದೊಡ್ಡ ಬೆಂಕಿಯು ಧಗಧಗನೆ ಉರಿಯುತ್ತಿದೆ. ಅದು ಆರಿ ಹೋದಾಗ ಆ ಜ್ವಾಲೆಯನ್ನು ಇಲ್ಲಿದೆ ಅಥವಾ ಅಲ್ಲಿದೆ ಎಂದು ಗುರುತಿಸಬಹುದೆ?
ಇಲ್ಲ ಭಂತೆ, ಜ್ವಾಲೆ ಆರಿಹೋಯಿತು, ಅದು ಮಾಯವಾಯಿತು.
ಅದೇರೀತಿಯಲ್ಲಿ ಮಹಾರಾಜ, ಭಗವಾನರು ಪರಿನಿಬ್ಬಾಣ ಪಡೆದಾಗ ಅವರ ಅಸ್ತಿತ್ವದ ಯಾವುದೂ ಶೇಷವಾಗಿ ಉಳಿದಿಲ್ಲ. ಅನುಪಾದಿಸೇನ ನಿಬ್ಬಾಣ ಪಡೆದರು. ಅವರನ್ನು ಇಲ್ಲಿದೆ ಅಥವಾ ಅಲ್ಲಿದೆ ಎಂದು ಗುರುತಿಸಲಾಗದು. ಆದರೆ ಅವರ ಧಮ್ಮಕಾಯವನ್ನು (ಬೋಧನೆ) ಗುರುತಿಸಬಹುದು, ಭಗವಾನರಿಂದ ಉಪದೇಶಿಸಲ್ಪಟ್ಟ ಬೋಧನೆಯನ್ನು (ಧಮ್ಮ)ವನ್ನು ಗುರುತಿಸಬಹುದು.
ನೀವು ಉತ್ತರಿಸುವದರಲ್ಲಿ ಚತುರರು ನಾಗಸೇನ.

ಐದನೆಯ ಬುದ್ಧವಗ್ಗ ಮುಗಿಯಿತು (ಇದರಲ್ಲಿ 10 ಪ್ರಶ್ನೆಗಳಿವೆ )